Search results - 30 Results
  • BUSINESS9, Nov 2018, 3:26 PM IST

    ಡಾಲರ್ ಎದುರು ರೂಪಾಯಿ ಏರಿಕೆ: ಟ್ರಂಪ್ ಕನಸಲ್ಲೂ ಮೋದಿ ಕನವರಿಕೆ!

    ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ. ಡಾಲರ್ ಎದುರು ಇಂದು ರೂಪಾಯಿ ಮೌಲ್ಯದಲ್ಲಿ 35 ಪೈಸೆಯಷ್ಟು ಏರಿಕೆ ಕಂಡುಬಂದಿದೆ.

  • India-Iran

    BUSINESS4, Nov 2018, 6:00 PM IST

    ಇರಾನ್‌ಗೆ ನಮ್ಮ ರೂಪಾಯಿ: ಮೋದಿಯಿಂದ ಟ್ರಂಪ್ ಬಡಪಾಯಿ!

    ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇರಾನ್ ಮೇಲಿನ ಅಮೆರಿಕದ ನಿರ್ಬಂಧ ಜಾರಿಯದ ಬೆನ್ನಲ್ಲೇ, ಉಭಯ ರಾಷ್ಟ್ರಗಳು ಪ್ರತ್ಯೇಕವಾಗಿ ರೂಪಾಯಿ ಮೂಲಕವೇ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಂಡಿವೆ.

  • BUSINESS26, Oct 2018, 12:55 PM IST

    ಇದಪ್ಪಾ ಅಸಲಿ ನವರಾತ್ರಿ:9ನೇ ದಿನವೂ ಇಳಿದ ಪೆಟ್ರೋಲ್ ದರ!

    ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆ ಮತ್ತು ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಚೇತರಿಕೆ ಕಂಡು ಬಂದ ಪರಿಣಾಮ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

  • Tips

    NEWS23, Oct 2018, 12:05 PM IST

    ಎಲ್ಲಾದ್ರೂ ಸಿಕ್ತಾನಾ ನೋಡಿ: ನೀರಿಗಾಗಿ 10 ಸಾವಿರ ಟಿಪ್ ಕೊಡ್ತಾನೆ ಈ ಮೂಡಿ!

    ಇಂತಹ ಘಟನೆಗಳು ಅಮೆರಿಕದಲ್ಲಿ ಮಾತ್ರ ನಡೆಯಲು ಸಾಧ್ಯವೇನೋ?. ರೆಸ್ಟೋರೆಂಟ್ ವೊಂದರಲ್ಲಿ ಮಿನರಲ್ ವಾಟರ್ ಆರ್ಡರ್ ಮಾಡಿದ್ದ ಗ್ರಾಹಕನೋರ್ವ, ನೀರು ನೀಡಿದ ಮಹಿಳಾ ವೇಟರ್ ಗೆ ಬರೋಬ್ಬರಿ 10 ಸಾವಿರ ಯುಎಸ್ ಡಾಲರ್ ಟಿಪ್ ನೀಡಿದ್ದಾನೆ. ಅಲ್ಲದೇ ನೀರು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂತಾ ಸಣ್ಣದೊಂದು ನೋಟ್ ಕೂಡ ಬಿಟ್ಟು ಹೋಗಿದ್ದಾನೆ.

  • Sensex

    BUSINESS11, Oct 2018, 8:26 PM IST

    5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

    ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್‌ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ. 

  • BUSINESS10, Oct 2018, 2:23 PM IST

    ಇನ್ವೆಸ್ಟ್ ಮಾಡಿರೋರು, ಮಾಡೋರು ಇಬ್ಬರಿಗೂ ಸಿಹಿ ಸುದ್ದಿ: ವಸಿ ಓದಿ ಬುದ್ದಿ!

    ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.

  • Sensex

    BUSINESS9, Oct 2018, 3:06 PM IST

    ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!

    ಭಾರತದ ಆರ್ಥಿಕ ಕ್ಷೇತ್ರದಲ್ಲಿ ಇಂದು ಕೆಲವು ಸಿಹಿ ಸುದ್ದಿಗಳಿಗೆ ಪ್ರಾಶಸ್ತ್ಯ ದೊರೆತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ, ಷೇರು ಮಾರುಕಟ್ಟೆ ಕುಸಿತ ಇವೇ ಮುಂತಾದ ಕಹಿ ಸುದ್ದಿಗಳನ್ನು ಕೇಳುತ್ತಿದ್ದ ಗ್ರಾಹಕ, ಇಂದು ಈ ಕ್ಷೇತ್ರಗಳಲ್ಲಿ ಸಿಹಿ ಸುದ್ದಿಗಳನ್ನು ಕೇಳುವಂತಾಗಿದೆ. ಬ್ಯಾಂಕ್ ಮತ್ತು ರಫ್ತುದಾರರು ಅಮೆರಿಕದ ಕರೆನ್ಸಿಯ ಮಾರಾಟದಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73.88 ರೂ. ಆಗಿದೆ.

     

     

  • BUSINESS7, Oct 2018, 2:52 PM IST

    ನಮ್ ರೂಪಾಯಿ ಸದೃಢ: ಊರ್ಜಿತ್ ಹೇಳೊದು ನಿಜಾನಾ?

    ಇತರ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಅತ್ಯಂತ ಸದೃಢವಾಗಿದೆ ಎಂದು ಆರ್​ಬಿಐ ಗವರ್ನರ್​ ಊರ್ಜಿತ್​ ಪಟೇಲ್​ ಸಮರ್ಥಿಸಿಕೊಂಡಿದ್ದಾರೆ. ಇತರ ಉದ್ಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ ಸದೃಢವಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.   

  • BUSINESS5, Oct 2018, 4:15 PM IST

    ರೆಪೋ ದರ ಏರಿಸದ ಆರ್​ಬಿಐ: ಡಾಲರ್ ಎದುರು ರೂಪಾಯಿ ಮೌಲ್ಯ 74.13 ರೂ ಆಗೋಯ್ತು!

    ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ನಿರ್ಧರಿಸಿದೆ. ರೆಪೋ ದರಗಳನ್ನು ಶೇ. 6.50ರ ದರದಲ್ಲಿ ಮತ್ತು ರಿವರ್ಸ್ ರೆಪೋ ದರವನ್ನು ಶೇ.6.25ರ ದರದಲ್ಲಿಯೇ ಮುಂದುವರೆಸಲು ಆರ್​ಬಿಐ ತೀರ್ಮಾನಿಸಿದೆ.

  • BUSINESS5, Oct 2018, 10:40 AM IST

    ಅಂಗಡಿ ಚಿನ್ನ ಮುಟ್ಟಕ್ಕಾಗ್ತಿಲ್ಲ: ಮನೆಯ 'ಚಿನ್ನಾ' ಮುತ್ತಿಡಕ್ಕೆ ಬಿಡ್ತಿಲ್ಲ!

    ಕೆಲ ದಿನಗಳಿಂದ ಕುಸಿತದ ಹಾದಿ ಹಿಡಿದಿದ್ದ ಬಂಗಾರದ ಬೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದೆ.  10 ಗ್ರಾಂ ಶುದ್ಧ ಚಿನ್ನಕ್ಕೆ 555 ರೂ ಏರಿಕೆ ಕಾಣುವ ಮೂಲಕ 32,030 ರೂ.ಗೆ ತಲುಪಿದೆ.

  • dollar vs rupee

    BUSINESS3, Oct 2018, 11:09 AM IST

    ಪಾತಾಳಕ್ಕೆ ಕುಸಿದ ರೂಪಾಯಿ ಮೌಲ್ಯ

    ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ 73ರ ಗಡಿ ದಾಟಿದ್ದು, ಸದ್ಯ ೊಂದು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 73.34ಕ್ಕೆ ಕುಸಿದಿದೆ.

  • BUSINESS25, Sep 2018, 12:34 PM IST

    ಮತ್ತೆ ರೂಪಾಯಿ ಬಿತ್ತು: ನಿಮ್ಮ ಜೇಬಿಗೂ ಬಂತು ಕುತ್ತು!

    ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ. ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತಗೊಂಡಿದೆ.

  • BUSINESS24, Sep 2018, 9:32 AM IST

    ಇನ್ಮೇಲೆ ಈ ವಸ್ತುಗಳ ಆಮದು ಆಗದು: ಕಾರಣ ರೂಪಾಯಿ ಮೌಲ್ಯ!

    ರೂಪಾಯಿ ಕುಸಿತ ತಡೆಯಲು ಸದ್ಯದಲ್ಲಿಯೇ ಎರಡನೇ ಹಂತದ ಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ. ಅನಗತ್ಯ ವಸ್ತುಗಳ ಆಮದು ತಡೆಯುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುವುದರಿಂದ ರೂಪಾಯಿ ದರವನ್ನು ಮತ್ತೆ 68ರಿಂದ 70ರ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್‌ ಚಂದ್ರ ಗಾರ್ಗ್‌ ಹೇಳಿದ್ದಾರೆ. 

  • Oil Import

    BUSINESS21, Sep 2018, 2:17 PM IST

    ಇರಾನ್‌ಗೆ ಇನ್ಮುಂದೆ ನಮ್ದೇ ರೊಕ್ಕಾ: ಭಾರತದ ಬದಲಾದ ಲೆಕ್ಕಾ!

    ಇರಾನ್‌ನಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಒಪ್ಪಂದದಲ್ಲಿ ಭಾರತ ಮಹತ್ವದ ಬದಲಾವಾಣೆ ಮಾಡಿದೆ. ಇನ್ನು ಮುಂದೆ ಇರಾನ್‌ಗೆ ಕಚ್ಚಾ ತೈಲ ಆಮದಿನ ಹಣವನ್ನು ರೂಪಾಯಿಯಲ್ಲೇ ಪಾವತಿ ಮಾಡುವುದಾಗಿ ಭಾರತ ಘೋಷಿಸಿದೆ.

  • BUSINESS20, Sep 2018, 6:32 PM IST

    ರೂಪಾಯಿ ಮೌಲ್ಯ: ಎಲ್ರೂ ಒಂದ್ ಹೇಳಿದ್ರೆ ಇವ್ರು ಹೇಳೊದೇ ಬೇರೆ!

    ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಹಲವರನ್ನು ಚಿಂತೆಗೀಡು ಮಾಡಿದೆ. ಸ್ವತಃ ಸರ್ಕಾರ ಕೂಡ ರೂಪಾಯಿ ಮೌಲ್ಯ ಕುಸಿತ ತಡೆಗೆ ಕ್ರಮ ಕೈಗೊಳ್ಳುತ್ತಿದೆ. ಈ ಮಧ್ಯೆ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ ರೂಪಾಯಿ ಮೌಲ್ಯ ಕುಸಿತದ ಬೇರೊಂದು ಆಯಾಮವನ್ನು ಜನರ ಮುಂದಿರಿಸಿದ್ದಾರೆ. ರೂಪಾಯಿ ಮೌಲ್ಯ ಕುಸಿತದ ಸಕಾರಾತ್ಮಕ ಪರಿಣಾಮಗಳ ಕುರಿತು ಪನಗಾರಿಯಾ ಇಲ್ಲಿ ವಿವರಿಸಿದ್ದಾರೆ.