Search results - 75 Results
 • modi

  NEWS28, Oct 2018, 7:26 PM IST

  ಶಾಂತಿ ಎಂದರೆ ಯುದ್ಧ ಇಲ್ಲ ಅಂತಲ್ಲ: ಮೋದಿ ಗುಡುಗು!

  ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಒಗ್ಗಟ್ಟಿನ ಅಗತ್ಯತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಶಾಂತಿ ಬಯಸುವುದು ಎಂದರೆ ಯುದ್ಧ ಇಲ್ಲ ಎಂದಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಅತ್ಯಂತ ಬಡವರ ಅಭಿವೃದ್ಧಿಯೂ ಸಹ ಶಾಂತಿಯ ಸಂಕೇತವೇ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

 • Mehmood Qureshi

  NEWS30, Sep 2018, 12:55 PM IST

  ಖುರೇಷಿ ಸಾಹೇಬ್ರು ಹೇಳ್ತಾರ್ವೆ ಪಾಕ್ ಶಾಲೆ ದಾಳಿಗೆ ಭಾರತದ ಕುಮ್ಮಕ್ಕು!

  ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಷಣದಿಂದ ಪಾಕ್ ಅಕ್ಷರಶಃ ನಲುಗಿದೆ. ತನ್ನ ಹುಳುಕೆಲ್ಲಾ ಜಗತ್ತಿನ ಮುಂದೆ ಅನಾವರಣಗೊಂಡಿತಲ್ಲ ಎಂಬ ಚಿಂತೆ ಅದಕ್ಕೆ. ಆದರೆ ಭಾರತದ ಮೇಲೆ ಸುಳ್ಳು ಆರೋಪ ಹೊರಿಸುವ ತನ್ನ ಹಳೆಯ ಚಾಳಿ ಬಿಡದ ಪಾಕ್, ಪೇಶಾವರದ ಸೈನಿಕ ಶಾಲೆ ಮೇಲಿನ ದಾಳಿಯಲ್ಲಿ ಭಾರತದ ಕೈವಾಡ ಇದೆ ಎಂದು ಸುಳ್ಳು ಆರೋಪ ಮಾಡಿದೆ. 

 • NATIONAL29, Sep 2018, 9:10 PM IST

  ಪಾಕಿಸ್ತಾನ ವಿರುದ್ಧ ಸುಷ್ಮಾ ಸ್ವರಾಜ್ ಸರ್ಜಿಕಲ್ ಸ್ಟ್ರೈಕ್

  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ವಿಶ್ವಸಂಸ್ಥೆ ಸಮ್ಮೇಳನದಲ್ಲಿ ವೀರಾವೇಶದ ಭಾಷಣ ಮಾಡಿದ್ದು, ಪಾಕಿಸ್ತಾನದ ಅಸಲಿ ಮುಖವಾಡದ ವಾಸ್ತವಾಂಶಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 • Modi-Imran

  NEWS21, Sep 2018, 7:36 PM IST

  ಹೂಂ ಹೂಂ ಬರಲೇಬೇಡಿ: ಮಾತುಕತೆ ರದ್ದುಗೊಳಿಸಿದ ಭಾರತ!

  ಭಾರತ-ಪಾಕ್ ನಡುವೆ ಮಾತುಕತೆಗೆ ಪರಿಸ್ಥಿತಿ ಅನುಕೂಲಕರವಾಗಿದ್ದು, ಕೂಡಲೇ ಮಾತುಕತೆಯನ್ನು ಪುನರಾರಂಭಿಸಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿನ್ನೆಯಷ್ಟೇ ಮನವಿ ಮಾಡಿದ್ದರು. ಈ ಮನವಿಯನ್ನು ಭಾರತ ಕೂಡ ಪುರಸ್ಕರಿಸಿತ್ತು. ಆದರೆ ಇಂದು ಕಣಿವೆಯಲ್ಲಿ ಉಗ್ರರು ಪೊಲೀಸರನ್ನು ಅಪಹರಿಸಿ ಕೊಲೆ ಮಾಡಿರುವ ಬೆಳವಣಿಗೆ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಭಾರತ ಪಾಕ್ ಮನವಿ ತಿರಸ್ಕರಿಸಿದ್ದು, ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದೆ. 

 • NEWS8, Sep 2018, 7:34 AM IST

  ಕೆಂಪು ಕೋಟೆಯ ಬಳಿ ಶಂಕಿತ ಐಸಿಸ್ ಉಗ್ರರ ಅರೆಸ್ಟ್

  ಐಸಿಸ್ ನ ಜಮ್ಮು-ಕಾಶ್ಮೀರ ಘಟಕದ ಜತೆ ನಂಟು ಹೊಂದಿದ್ದ ಇಬ್ಬರು ಯುವಕರನ್ನು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಬಳಿ ಬಂಧಿಸಲಾಗಿದೆ. ಕಾಶ್ಮೀರಕ್ಕೆ ಮರಳುವ ಸಲುವಾಗಿ ಈ ಇಬ್ಬರೂ ಬಸ್ ಹತ್ತುತ್ತಿದ್ದಾಗ ಕೆಂಪುಕೋಟೆ ಸಮೀಪದ ಜಾಮಾ ಮಸೀದಿ ನಿಲ್ದಾಣದಲ್ಲಿ ಗುರುವಾರ ರಾತ್ರಿ  ಇವರನ್ನು ಬಂಧಿಸಲಾಗಿದೆ. 

 • Ganesha chuturthi

  NEWS3, Sep 2018, 4:11 PM IST

  ಗಣೇಶ ಹಬ್ಬದ ವೇಳೆ ಕೋಮು ಗಲಭೆಗೆ ಸ್ಕೆಚ್ ಹಾಕಿದ್ದವರ ಬಂಧನ

  ಗಣೇಶ ಹಬ್ಬದ ವೇಳೆ ಕೋಮು ಗಲಭೆ ಉಂಟುಮಾಡಲು ಸ್ಕೆಚ್ ಹಾಕಿದ್ದ ಐವರನ್ನು ಬಂಧಿಸಲಾಗಿದೆ. ಉಗ್ರರೊಂದಿಗೂ ನಂಟು ಇಟ್ಟುಕೊಂಡಿದ್ದ ಇವರು ದಕ್ಷಿಣ ಭಾರತದಲ್ಲಿ ಕೋಮು ಗಲಭೆ ಹುಟ್ಟು ಹಾಕಲು ಯತ್ನಿಸುತ್ತಿದ್ದ ಆತಂಕಕಾರಿ ಅಂಶ ಬಹಿರಂಗವಾಗಿದೆ.

 • USA Pakistan

  INTERNATIONAL2, Sep 2018, 5:48 PM IST

  ಉಗ್ರತಾಣ ಪಾಕ್‌ಗೆ ಅಮೆರಿಕದಿಂದ ಎಂಥಾ ಏಟು!

  ಉಗ್ರವಾದ ತಡೆಯಲು ನಿರಂತರವಾಗಿ ವಿಫಲವಾಗುತ್ತಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಭದ್ರತಾ ಆರ್ಥಿಕ ನೆರವಿಗೆ ಅಮೆರಿಕ ಕತ್ತರಿ ಹಾಕಿದೆ.

 • Gyan Dev Ahuja

  NEWS1, Aug 2018, 12:32 PM IST

  ಗೋಹತ್ಯೆ ಉಗ್ರವಾದಕ್ಕಿಂತ ದೊಡ್ಡ ಅಪರಾಧ: ಬಿಜೆಪಿ ಶಾಸಕ!

  ‘ನೀವ್ಯಾಕೆ ಹೊಡೆದು ಕೈ ನೋವು ಮಾಡಿಕೊಳ್ತಿರಿ?. ಗೋಮಾತೆಯನ್ನು ಸಾಯಿಸುವ ಪಾಪಿಯನ್ನು ಮರಕ್ಕೆ ಕಟ್ಟಿ ಪೊಲೀಸರಿಗೆ ಕರೆ ಮಾಡಿ ಸಾಕು..’ ಇದು ಗೋಹತ್ಯೆ ಕುರಿತು ರಾಜಸ್ಥಾನ ಬಿಜೆಪಿ ಶಾಸಕ ಜ್ಞಾನದೇವ್ ಅಹುಜಾ ಅವರ ಮಾತುಗಳು. ಗೋಹತ್ಯೆ ಭಯೋತ್ಪಾದನೆಗಿಂತ ದೊಡ್ಡ ಅಪರಾಧ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

 • NEWS27, Jul 2018, 9:28 PM IST

  ಆಧಾರ್ ಕಡ್ಡಾಯ ಉಗ್ರರ ಕಟ್ಟಿ ಹಾಕಿತೆ? ಮಮತಾ ಪ್ರಶ್ನೆ

  ಕೇಂದ್ರ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ  ಮಾಡಿರುವ ಮಮತಾ ಬ್ಯಾನರ್ಜಿ ಆಧಾರ್ ವಿಚಾರದಲ್ಲಿ ಮಾತನಾಡಿದ್ದಾರೆ.

 • Pandey

  NEWS27, Jul 2018, 8:02 PM IST

  ಅತ್ಯಾಚಾರ ಹೆಚ್ಚಲು ಮುಸ್ಲಿಮರೇ ಕಾರಣ: ಬಿಜೆಪಿ ಸಂಸದ!

  ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ದೇಶ ತಲೆ ಕೆಡಿಸಿಕೊಂಡಿದ್ದರೆ, ಅತ್ಯಾಚಾರ ಹೆಚ್ಚಾಗಲು ಮುಸ್ಲಿಮರೇ ಕಾರಣ ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಹೊಸ ವಿವಾದ ಸೃಷ್ಟಿಸಿದ್ದಾರೆ. ಹೆಚ್ಚುತ್ತಿರುವ ಮುಸ್ಲಿಂ ಜನಸಂಖ್ಯೆಯೇ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣ ಎಂದು ಸಂಸದ ಹರಿ ಓಂ ಪಾಂಡೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ.   

 • NEWS23, Jun 2018, 7:32 AM IST

  ಜಮ್ಮುವಿನಲ್ಲಿ ರಾಜ್ಯಪಾಲರ ಆಡಳಿತ ಜಾರಿಯಾಗುತ್ತಿದ್ದಂತೆ ಮಹತ್ವದ ಬದಲಾವಣೆ

  ರಾಜ್ಯಪಾಲರ ಆಳ್ವಿಕೆ ಜಾರಿ ಆಗುತ್ತಿದ್ದಂತೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ವಿರುದ್ಧದ  ಕಾರ್ಯಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಅನಂತನಾಗ್ ಜಿಲ್ಲೆಯಲ್ಲಿ ಶುಕ್ರವಾರ ಐಸಿಸ್ ಸಂಘಟನೆಯ ಜಮ್ಮು-ಕಾಶ್ಮೀರ ಘಟಕದ ಮುಖ್ಯಸ್ಥ ಸೇರಿ ನಾಲ್ಕು ಉಗ್ರಗಾಮಿಗಳನ್ನು ಕೊಂದು ಹಾಕಿವೆ. 

 • 7, Jun 2018, 9:00 AM IST

  ಬೆಂಗಳೂರಿಗೂ ಉಗ್ರವಾದ ಶಾಕ್

  ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ನಗರಗಳು ‘ಉಗ್ರವಾದದಿಂದ ಆರ್ಥಿಕತೆಗೆ ಭೀತಿ’ ಜಾಗತಿಕ ಪಟ್ಟಿಯ ಟಾಪ್‌-10 ನಗರಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ದಿಲ್ಲಿ, ಮುಂಬೈ ಹಾಗೂ ಬೆಂಗಳೂರು ಕ್ರಮವಾಗಿ 5, 6 ಹಾಗೂ 7ನೇ ಸ್ಥಾನ ಪಡೆದುಕೊಂಡಿವೆ. 

 • 11, May 2018, 10:24 AM IST

  ಕಾಶ್ಮೀರದಲ್ಲಿ ಹಿಂಸೆ ತ್ಯಜಿಸಿ ಕುಟುಂಬಕ್ಕೆ ಮರಳಿ : ಉಗ್ರನ ಮನವಿ

  ಇತ್ತೀಚೆಗಷ್ಟೇ ಬಂಧಿತನಾದ ಕಾಶ್ಮೀರ ಉಗ್ರನೊಬ್ಬ, ಹಿಂಸಾತ್ಮಕ ಕೃತ್ಯಗಳಿಂದ ದೂರ ಉಳಿಯುವಂತೆ ತನ್ನ ಸಹಚರರಿಗೆ ಮನವಿ ಮಾಡಿಕೊಂಡಿದ್ದಾನೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.