South Africa Cricket

(Search results - 54)

Andrew Balbirnie

CricketJul 14, 2021, 2:05 PM IST

ದಕ್ಷಿಣ ಆಫ್ರಿಕಾಗೆ ಶಾಕ್‌ ಕೊಟ್ಟು ಚೊಚ್ಚಲ ಗೆಲುವು ದಾಖಲಿಸಿದ ಐರ್ಲೆಂಡ್

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಐರ್ಲೆಂಡ್ ತಂಡಕ್ಕೆ ನಾಯಕ ಆ್ಯಂಡಿ ಬಲ್ಬ್ರೀನ್‌ ಆಸರೆಯಾದರು. 117 ಎಸೆತಗಳನ್ನು ಎದುರಿಸಿದ ಬಲ್ಬ್ರೀನ್‌ 10 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 102 ರನ್‌ ಬಾರಿಸಿದರು.

South Africa Cricket

CricketJul 5, 2021, 11:28 AM IST

ವಿಂಡೀಸ್ ಎದುರು ಟಿ20 ಸರಣಿ ಗೆದ್ದ ಹರಿಣಗಳು

ಮೊದಲ 4 ಟಿ20 ಪಂದ್ಯಗಳಲ್ಲಿ ತಲಾ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದ್ದ ಉಭಯ ತಂಡಗಳು ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ತನ್ನ ಖಾತೆ ತೆರೆಯುವ ಮುನ್ನವೇ ನಾಯಕ ತೆಂಬ ಬವುಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

Kieron Pollard

CricketJul 2, 2021, 12:35 PM IST

ಪೊಲ್ಲಾರ್ಡ್‌-ಬ್ರಾವೋ ಮಿಂಚಿನಾಟಕ್ಕೆ ತಲೆಬಾಗಿದ ಹರಿಣಗಳು

ಮೊದಲ ಬ್ಯಾಟ್‌ ಮಾಡಿದ್ದ ವೆಸ್ಟ್ ಇಂಡೀಸ್‌ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ ಲಿಂಡ್ಲ್‌ ಸಿಮನ್ಸ್‌(47) ಸ್ಪೋಟಕ ಬ್ಯಾಟಿಂಗ್ ನಡೆಸಿದರಾದರು ಕೇವಲ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಲೆವಿಸ್‌, ಗೇಲ್ ಹಾಗೂ ಹೆಟ್ಮೇಯರ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದಾಗ ಕೆರಿಬಿಯನ್‌ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

Keshav Maharaj

CricketJun 22, 2021, 9:11 AM IST

ವಿಂಡೀಸ್ ಎದುರು ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ ಕೇಶವ್ ಮಹಾರಾಜ್

ಸೋಮವಾರ ನಡೆದ ಪಂದ್ಯದ 4ನೇ ದಿನದಾಟದಲ್ಲಿ ಮಹಾರಾಜ್‌, ವಿಂಡೀಸ್‌ 2ನೇ ಇನ್ನಿಂಗ್ಸ್‌ನ 37ನೇ ಓವರಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ವಿಂಡೀಸ್‌ನ ಕೀರನ್‌ ಪೋವೆಲ್‌, ಜೇಸನ್‌ ಹೋಲ್ಡರ್‌ ಹಾಗೂ ಜೋಶ್ವಾ ಡಾ ಸಿಲ್ವಾರನ್ನು ಸತತ 3 ಎಸೆತಗಳಲ್ಲಿ ಔಟ್‌ ಮಾಡಿ, ಮಹಾರಾಜ್‌ ಹ್ಯಾಟ್ರಿಕ್‌ ಸಾಧಿಸಿದರು.

Kagiso Rabada

CricketJun 14, 2021, 11:36 AM IST

ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾ ಎದುರು ವಿಂಡೀಸ್‌ಗೆ ಹೀನಾಯ ಸೋಲು..!

ಮೊದಲ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ತಂಡವು ಕೇವಲ 97 ರನ್‌ಗೆ ಆಲೌಟ್‌ ಆಗಿತ್ತು. ಲುಂಗಿ ಎಂಗಿಡಿ ಟೆಸ್ಟ್‌ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ 5 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ನೊಕಿಯೆ 4 ವಿಕೆಟ್ ಕಬಳಿಸಿ ವಿಂಡೀಸ್ ತಂಡವನ್ನು ಮೂರಂಕಿ ಮೊತ್ತದೊಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

quinton de kock

CricketJun 12, 2021, 3:31 PM IST

ಅಜೇಯ 141 ಚಚ್ಚಿದ ಕ್ವಿಂಟನ್ ಡಿ ಕಾಕ್; ಹರಿಣಗಳ ಹಿಡಿತದಲ್ಲಿ ವಿಂಡೀಸ್

ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 128 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ದಿನದಾಟದಲ್ಲಿ ಡಿ ಕಾಕ್ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್ 170 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ ಅಜೇಯ 141 ರನ್ ಚಚ್ಚಿದರು.

Lungi Ngidi

CricketJun 11, 2021, 1:20 PM IST

ಮೊದಲ ಟೆಸ್ಟ್: ಎಂಗಿಡಿ ಮಾರಕ ದಾಳಿಗೆ ವಿಂಡೀಸ್‌ 97ಕ್ಕೆ ಆಲೌಟ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್‌ ತಂಡಕ್ಕೆ ಎಂಗಿಡಿ ತಮ್ಮ ಮಾರಕ ದಾಳಿಯ ಮೂಲಕ ಶಾಕ್ ನೀಡಿದರು.2018ರಲ್ಲಿ ಭಾರತ ವಿರುದ್ದ ಪಾದಾರ್ಪಣೆ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದ್ದ ಎಂಗಿಡಿ, ಇದೀಗ ಎರಡನೇ ಬಾರಿಗೆ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಎಂಗಿಡಿಗೆ ದಕ್ಷಿಣ ಆಫ್ರಿಕಾದ ಮತ್ತೋರ್ವ ವೇಗಿ ನೊಕಿಯೆ ಉತ್ತಮ ಸಾಥ್ ನೀಡಿದ ಪರಿಣಾಮ ವೆಸ್ಟ್ ಇಂಡೀಸ್‌ ಕೇವಲ 40.5 ಓವರ್‌ಗಳಲ್ಲಿ ಸರ್ವಪತನ ಕಂಡಿತು.

West Indies Cricket

CricketJun 9, 2021, 1:46 PM IST

ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ

2020ರ ಅಂಡರ್ 19 ವಿಶ್ವಕಪ್‌ ತಂಡದ ಆಟಗಾರನಾಗಿದ್ದ ಜೇಡನ್ ಸೇಲ್ಸ್, ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದು ಟ್ರಿನಿಡ್ಯಾಡ್ & ಟೊಬ್ಯಾಗೋ ತಂಡದ ಮಾರಕ ವೇಗಿಗೆ ಮಣೆ ಹಾಕಲಾಗಿದೆ. ಇದಷ್ಟೇ ಅಲ್ಲದೇ ಅಗ್ರಕ್ರಮಾಂಕದ ಅನುಭವಿ ಬ್ಯಾಟ್ಸ್‌ಮನ್‌ ಶಾಯ್ ಹೋಪ್ ಹಾಗೂ ಕೀರನ್ ಪೋವೆಲ್‌ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.

Ab De Villiers

CricketMay 19, 2021, 3:51 PM IST

ಎಬಿ ಡಿವಿಲಿಯರ್ಸ್‌ ಮೇಲೆ ಬೇಸರ ಹೊರಹಾಕಿದ ಮಾರ್ಕ್ ಬೌಷರ್..!

ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ 2018ರಲ್ಲಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರೊಂದಿಗೆ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿತ್ತು. 2018ರ ಮಾರ್ಚ್‌ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದ್ದರು. ಆಸೀಸ್‌ ವಿರುದ್ದದ ಟೆಸ್ಟ್‌ ಸರಣಿ ಮುಗಿಯುತ್ತಿದ್ದಂತೆಯೇ ತಮ್ಮ 34ನೇ ವಯಸ್ಸಿನಲ್ಲಿಯೇ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿ ಎಲ್ಲರನ್ನು ಅಚ್ಚರಿಗೆ ನೂಕಿದ್ದರು.

Ab de Villiers

CricketMay 18, 2021, 6:11 PM IST

ಎಬಿಡಿ ಅಭಿಮಾನಿಗಳಿಗೆ ಶಾಕ್‌; ಇನ್ ಯಾವತ್ತೂ ಆಫ್ರಿಕಾ ಪರ ಕ್ರಿಕೆಟ್ ಆಡೊಲ್ಲ ಮಿಸ್ಟರ್ 360..!

'' ಎಬಿ ಡಿವಿಲಿಯರ್ಸ್‌ ಜತೆ ಮಾತುಕತೆ ಮುಕ್ತಾಯವಾಗಿದೆ. ಎಬಿಡಿ ತಾವು ಈಗಾಗಲೇ ತೆಗೆದುಕೊಂಡಿರುವ ನಿವೃತ್ತಿ ತೀರ್ಮಾನವೇ ಅಂತಿಮ ಎಂದು ಖಚಿತ ಪಡಿಸಿದ್ದಾರೆ'' ಎಂದು ಕ್ರಿಕೆಟ್ ಸೌತ್ ಆಫ್ರಿಕಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Ab De Villiers

CricketMay 7, 2021, 5:29 PM IST

ವಿಂಡೀಸ್‌ ಎದುರಿನ ಸರಣಿಗೆ ಎಬಿ ಡಿವಿಲಿಯರ್ಸ್‌ ಆಫ್ರಿಕಾ ತಂಡಕ್ಕೆ ಎಂಟ್ರಿ..?

2018ರಲ್ಲಿ ತಮ್ಮ 34ನೇ ವಯಸ್ಸಿನಲ್ಲೇ ಎಬಿ ಡಿವಿಲಿಯರ್ಸ್‌ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದರು. ಇದರೊಂದಿಗೆ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪೂರ್ಣವಿರಾಮ ಹಾಕಿದ್ದರು. ಬಳಿಕ ಟಿ20 ಲೀಗ್‌ಗಳಲ್ಲಿ ಎಬಿಡಿ ತಮ್ಮ ಝಲಕ್ ಮುಂದುವರೆಸಿದ್ದರು.

Pakistan Cricket

CricketApr 17, 2021, 11:26 AM IST

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಜಯಿಸಿದ ಪಾಕಿಸ್ತಾನ

ದಕ್ಷಿಣ ಆಫ್ರಿಕಾ ನೀಡಿದ್ದ 145 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಫಖರ್‌ ಜಮಾನ್‌(60) ಆಸರೆಯಾದರು. ನಾಯಕ ಬಾಬರ್‌(24) ಉತ್ತಮ ಬೆಂಬಲ ನೀಡಿದರು. ಒಂದು ಹಂತದಲ್ಲಿ 10 ಓವರ್‌ ಮುಕ್ತಾಯದ ವೇಳೆಗೆ ಕೇವಲ ಒಂದು ವಿಕೆಟ್‌ ಕಳೆದುಕೊಂಡು 92 ರನ್‌ ಬಾರಿಸಿದ್ದ ಪಾಕಿಸ್ತಾನ ಆ ಬಳಿಕ ನಾಟಕೀಯ ಕುಸಿತ ಕಂಡಿತು.

Ab de Villiers

CricketApr 16, 2021, 5:45 PM IST

ದಕ್ಷಿಣ ಆಫ್ರಿಕಾ ತಂಡ ಕೂಡಿಕೊಳ್ಳಲು ಎಬಿಡಿಗೆ ಬಾಗಿಲು ತೆರೆದಿದೆ: ಮಾರ್ಕ್‌ ಬೌಷರ್

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನವೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್ ಆಟಗಾರ ಎಬಿಡಿ ಜತೆ ಚರ್ಚೆ ನಡೆಸಿರುವುದಾಗಿ ದಕ್ಷಿಣ ಆಫ್ರಿಕಾ ಮಾಜಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಬೌಷರ್ ತಿಳಿಸಿದ್ದಾರೆ.

Babar Azam

CricketApr 15, 2021, 9:35 AM IST

ಬಾಬರ್‌ ಅಜಂ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಪಾಕ್‌ಗೆ ಭರ್ಜರಿ ಜಯ

ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ, ಜನ್ನೆಮಾನ್‌ ಮಲಾನ್‌(55) ಹಾಗೂ ಏಡೆನ್‌ ಮಾರ್ಕ್ರಮ್‌(63) ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು.

Pak vs SA

CricketApr 13, 2021, 8:57 AM IST

ಟಿ20 ಸರಣಿ: ಆಫ್ರಿಕಾಗೆ ಸುಲಭ ತುತ್ತಾದ ಪಾಕಿಸ್ತಾನ

ಸೋಮವಾರ(ಏ.12) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 20 ಓವರಲ್ಲಿ 9 ವಿಕೆಟ್‌ ನಷ್ಟಕ್ಕೆ 140 ರನ್‌ ಗಳಿಸಿತು. ನಾಯಕ ಬಾಬರ್‌ ಆಜಂ(50) ಅರ್ಧಶತಕ ಬಾರಿಸಿದರು. ಬಾಬರ್‌ ಅಜಂ ಹೊರತುಪಡಿಸಿ ಉಳಿದ್ಯಾವ ಪಾಕಿಸ್ತಾನ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.