Search results - 45 Results
 • NEWS31, Oct 2018, 6:48 PM IST

  ಅಂದು ರೇವಣ್ಣ ಬಿಸ್ಕತ್​ ಎಸೆದಂತೆ, ಇಂದು ದೇಶಪಾಂಡೆ ಎಸೆದಿದ್ದೇನು ಗೊತ್ತಾ?

  ಸಚಿವ ಆರ್​.ವ್ಹಿ ದೇಶಪಾಂಡೆ, ಕ್ರೀಡಾಪಟುಗಳಿಗೆ ಕ್ರೀಡಾ ಸಾಮಗ್ರಿಗಳನ್ನು ಎಸೆದು ದರ್ಪ ಮೆರೆದಿದ್ದಾರೆ.

 • Hampi chariot

  NEWS11, Oct 2018, 11:52 AM IST

  ಅಕ್ಕಸಾಲಿಗನ ಕೈಚಳಕ: ಚಿನ್ನದಲ್ಲಿ ಅರಳಿದ ಹಂಪಿ ರಥ

  ಕಡವಾಡದ ಅಕ್ಕಸಾಲಿಗ ಮಿಲಿಂದ ಅಣ್ವೇಕರ್‌ ಪ್ರತಿವರ್ಷವೂ ಒಂದಿಲ್ಲೊಂದು ಕಲಾಕೃತಿ ಸೃಷ್ಟಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಈ ಬಾರಿ .36 ಸಾವಿರ ಮೌಲ್ಯದ 12 ಗ್ರಾಂ ಬಂಗಾರದಿಂದ 1 ಇಂಚು ಎತ್ತರದ ಹಂಪಿ ರಥವನ್ನು ತಯಾರಿಸಿದ್ದಾರೆ. 

 • Manu Baligar

  Uttara Kannada8, Sep 2018, 9:18 PM IST

  ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು: ಮನು ಬಳಿಗಾರ ವಿರುದ್ದ ಆಕ್ರೋಶ!

  ಗೋವಾದಲ್ಲಿ ಕನಬ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಗೆ ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಮನು ಬಳಿಗಾರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಗೋವಾ ರಾಜ್ಯದಲ್ಲಿರುವ ಕನ್ನಡ ಪರ ಸಂಘಟನೆಯ ಜೊತೆ ಮಾತುಕತೆ ನಡೆಸಿರುವ ಮನು ಬಳಿಗಾರ, ನಾಳೆ ಗೋವಾದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಉದ್ಘಾಟನೆಗೆ ಮುಂದಾಗಿದ್ದಾರೆ.

 • Mother

  Uttara Kannada5, Sep 2018, 6:49 PM IST

  ಬೆಚ್ಚಿ ಬೀಳಿಸೋ ವಿಡಿಯೋ: ಹೆತ್ತ ಮಗಳ ಮೇಲೆ ತಾಯಿಯ ಕ್ರೌರ್ಯ!

  ಹೆತ್ತವರಿಗೆ ಹೆಗ್ಗನ ಮುದ್ದು ಅನ್ನು ಮಾತಿಗೆ ಇಲ್ಲೊಬ್ಬ ಮಹಾತಾಯಿ ವಿರುದ್ಧ  ಅನ್ನುವಂತೆದಿದ್ದಾಳೆ , ಜನ್ಮ ಕೊಟ್ಟ ಮಗಳನ್ನು ಮನಸೋ ಇಚ್ಛೆ ಥಳಿಸಿದ ರಾಕ್ಷಸಿ ರೂಪದ ತಾಯಿ,ಕಾರವಾರದ ಕಾಜುಭಾಗ್ ಪಿಂಗೆ ನಿವಾಸಿ ರೇಣುಕಾ  ತನ್ನ ಮಗಳನ್ನು ಕುಡಿದ ಅಮಲಿನಲ್ಲಿ  ಅಟ್ಟಾಡಿಸಿ, ನೆಲಕ್ಕೆ ಕೆಡವಿ, ಹೊಡೆದು ಚಿತ್ರಹಿಂಸೆ ನೀಡಿದ್ದಾಳೆ.

 • Uttara Kannada28, Aug 2018, 7:48 PM IST

  ಲಂಡನ್ ಬ್ರಿಡ್ಜ್‌ದಿಂದ ಆರ್‌ಟಿಒ ಕಚೇರಿವರೆಗೆ ಫ್ಲೈ ಓವರ್

  ಸುದೀರ್ಘ ಹಗ್ಗ- ಜಗ್ಗಾಟದ ತರುವಾಯ ಕಾರವಾರದಲ್ಲಿ ಚತುಷ್ಪಥದಲ್ಲಿ  ಫ್ಲೈ ಓವರ್ ನಿರ್ಮಾಣ ಖಚಿತವಾಗಿದೆ. ಲಂಡನ್ ಸೇತುವೆಯಿಂದ ಆರ್‌ಟಿಒ ಕಚೇರಿ ತನಕ ಫ್ಲೈಒವರ್ ಕಾಮಗಾರಿ ಸದ್ಯದಲ್ಲೆ ಆರಂಭವಾಗಲಿದೆ.

 • Uttara Kannada8, Aug 2018, 6:07 PM IST

  ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು

  ಮದುವೆಯಾದರೂ ಹೆಂಡತಿ ಜತೆಗೆ ಇರುತ್ತಾಳೆ ಎಂಬ ಭರವಸೆ ಇಲ್ಲದ ಕಾಲ ನಿರ್ಮಾಣವಾಗಿದೆ. ಅದು ನೋಂದಣಿ ಮಾಡಿಸಿಕೊಂಡಿದ್ದರೂ ಹೆಂಡತಿ ಇನ್ನೊಬ್ಬನ ಜತೆ ಹೋಗಬಹುದು ಎಂಬುದಕ್ಕೆ ಕಾರವಾರದ ಈ ಘಟನೆ ಸಾಕ್ಷಿಯಾಗಿದೆ.

   

  ಕಾರವಾರ[ಆ.8]  ಪ್ರೇಮ ವಿವಾಹವಾಗಿ ನೋಂದಣಿಯಾಗಿದ್ದ ಹುಡುಗಿಗೆ ಮತ್ತೊಮ್ಮೆ ವಿವಾಹ ಮಾಡಿ ನೋಂದಣಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.

  ವಧು ಒಬ್ಬಳೇ ಆಗಿದ್ದು, ವರ ಬೇರೆ ಬೇರೆಯಾಗಿದ್ದಾರೆ. ನ್ಯಾಯ ಒದಗಿಸುವಂತೆ ಮೊದಲ ಪತಿ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರ ತಾಲೂಕಿನ ದೇಹಳ್ಳಿಯ ಗಣಪತಿ ಭಟ್ ಅದೇ ತಾಲೂಕಿನ ಕಂಪ್ಲಿಯ ಆಶಾ ಹೆಗಡೆ ಅವರನ್ನು 2014ರ ಫೆ. 7ರಂದು ಕಾರವಾರದ ಉಪನೋಂದಣಾಧಿಕಾರಿ ಕಾರ್ಯಾಲಯದಲ್ಲಿ ವಿವಾಹ ಆಗಿದ್ದರು. ನಂತರ ಆಶಾ ಅವರ ಪಾಲಕರ ಒಪ್ಪಿಗೆ
  ಪಡೆದು ವಿವಾಹವಾಗುವ ಉದ್ದೇಶದಿಂದ ಅವರನ್ನು ತಾಯಿ ಮನೆಗೆ ಬಿಟ್ಟು ಬಂದಿದ್ದರು.

  ಆಶಾ ಮನೆಯಲ್ಲಿ ಮಳೆಗಾಲದ ನಂತರ ವಿವಾಹ ಮಾಡಿಕೊಡುವುದಾಗಿ ತಿಳಿಸಿದ್ದರು. ಗಣಪತಿ ಭಟ್ ಬೆಂಗಳೂರಿನಲ್ಲಿ  ವೈದಿಕರಾಗಿದ್ದು, ಆಗಾಗ ಕರೆ ಮಾಡಿ ಆಶಾ ಅವರ ಬಳಿ ಮಾತನಾಡುತ್ತಿದ್ದರು. ಆಶಾ ಅವರ ತಾಯಿ ಮಮತಾ ಹೆಗಡೆ ದಿನ
  ಕಳೆದಂತೆ ಅವರ ಕರೆ ಬಂದರೆ ಮಗಳಿಗೆ ನೀಡುತ್ತಿರಲಿಲ್ಲ. ಹೊರಗಡೆ ತೆರಳಿದ್ದಾಳೆ ಎಂದು ಸಬೂಬು ಹೇಳುತ್ತಿದ್ದರು.

  ಬೆಂಗಳೂರಿನಿಂದ ಯಲ್ಲಾಪುರಕ್ಕೆ ವಾಪಸ್ ಬಂದು ಆಶಾಳ ತವರು ಮನೆಗೆ ಹೋದರೆ ನೀನು ಬರಬೇಡ. ಅವಳನ್ನು ಮರೆತು ಬಿಡು.
  ಪದೇ ಪದೇ ಬಂದರೆ ಪೊಲೀಸ್ ದೂರು ನೀಡುತ್ತೇವೆ ಎಂದು ಮಮತಾ ಗಣಪತಿಯವರಿಗೆ ಬೆದರಿಕೆ ಹಾಕಿದ್ದರು.

  ಎರಡು ಕಡೆ ನೋಂದಣಿ: ಆಶಾ ಹಾಗೂ ಗಣಪತಿ ಅವರದ್ದು ಪ್ರೇಮವಿವಾಹ ಆದ್ದರಿಂದ 2014ರ ಫೆ.7ರಂದು ಕಾರವಾರದಲ್ಲಿ ನೋಂದಣಿ ಮಾಡಿಸಿದ್ದರು. ಇದಾದ ಬಳಿಕ ಆಶಾ ತಾಯಿ ಮಮತಾ ರಾಜೇಶ ಎಂಬವರ ಜತೆ ಆಶಾರನ್ನು ಮತ್ತೆ ವಿವಾಹ ಮಾಡಿಸಿದ್ದಾರೆ. ಅಲ್ಲದೇ ಯಲ್ಲಾಪುರ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ 2018ರ ಜು. 31 ರಂದು ಮತ್ತೆ ನೋಂದಣಿ ಮಾಡಿದ್ದರು.

  ಗಣಪತಿಯವರಿಗೆ ಆಶಾ ದೂರದ ಸಂಬಂಧಿ. ಸಮಾರಂಭಗಳಲ್ಲಿ ಭೇಟಿಯಾಗಿ ಮಾತನಾಡಿದ್ದು, ಪ್ರೇಮಾಂಕುರವಾಗಿತ್ತು.
  ಪರಸ್ಪರ ಪ್ರೇಮ ನಿವೇದನೆ ಬಳಿಕ ವಿವಾಹ ಮಾಡಿಕೊಂಡಿದ್ದರು. ಪಾಲಕರನ್ನು ಒಪ್ಪಿಸಿ ವಿವಾಹವಾಗಲು ಸಿದಟಛಿತೆ ನಡೆದಿತ್ತು.
  ಆದರೆ ಆಶಾ ತಾಯಿ ಬೇರೊಬ್ಬರ ಜತೆ ವಿವಾಹ ಮಾಡಿಸಿದ್ದಾರೆ.

   

   

  ಅಚ್ಚರಿಯ ಸಂಗತಿ
  ಒಂದು ಹುಡುಗಿಗೆ 2ಕಡೆ ನೋಂದಣಿಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಎರಡೂ ಕಡೆಗಳಲ್ಲೂ ಹುಡುಗಿಯ ಹೆಸರನ್ನು ಆಶಾ ಧನಂಜಯ ಹೆಗಡೆ ಎಂದೇ ನಮೂದಿಸಲಾಗಿದೆ. ಹೀಗಿದ್ದಾಗ್ಯೂ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ ಈ ಬಗ್ಗೆ
  ಪರಿಶೀಲಿಸದಿರುವುದು ಅಥವಾ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಆಶ್ಚರ್ಯದ ಸಂಗತಿ.

  ಪೊಲೀಸರ ಮೊರೆ
  ಮೊದಲು ವಿವಾಹವಾಗಿದ್ದ ಗಣಪತಿ ಭಟ್ ಅವರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಿ ತಮ್ಮ ವಿವಾಹದ ನೋಂದಣಿ ಪತ್ರಗಳನ್ನು ನೀಡಿ ನ್ಯಾಯ ದೊರಕಿಸುವಂತೆ ಕೇಳಿಕೊಂಡರು.

   

   

  ಮದುವೆಯಾದರೂ ಹೆಂಡತಿ ಜತೆಗೆ ಇರುತ್ತಾಳೆ ಎಂಬ ಭರವಸೆ ಇಲ್ಲದ ಕಾಲ ನಿರ್ಮಾಣವಾಗಿದೆ. ಅದು ನೋಂದಣಿ ಮಾಡಿಸಿಕೊಂಡಿದ್ದರೂ ಹೆಂಡತಿ ಇನ್ನೊಬ್ಬನ ಜತೆ ಹೋಗಬಹುದು ಎಂಬುದಕ್ಕೆ ಕಾರವಾರದ ಈ ಘಟನೆ ಸಾಕ್ಷಿಯಾಗಿದೆ.

  ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು

  Woman marries two men in Karwar

  ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು

 • Karwar

  Uttara Kannada31, Jul 2018, 9:29 PM IST

  ಕೆರೆ ಮಧ್ಯೆ ವಿದ್ಯುತ್ ಕಂಬ, ಎಚ್ಚರ ತಪ್ಪಿದರೆ ಪ್ರಾಣಹಾನಿ ಖಚಿತ!

  ಇದು ಕಾರವಾರದ ಸ್ಟೋರಿ.. ಇದೊಂದು ಡೇಂಜರಸ್ ಸುದ್ದಿ.. ತುಂಬಿದ ಕರೆಯ ನಡುವೆಯೇ ಇವೆ ವಿದ್ಯುತ್ ಕಂಬಗಳಿಗೆ.. ಯಾವಾಗ ಯಾರ ಜೀವ ಕಸಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕಾರವಾರದ ಈ ಕತೆಯ ಹಿಂದೆ ಬಿದ್ದ ಬಿಗ್ 3.

 • Karwar Accident

  NEWS7, Jul 2018, 9:14 PM IST

  ಕಾರವಾರದಲ್ಲಿ ಭೀಕರ ಅಪಘಾತ: 3 ಸಾವು, 15 ಮಂದಿಗೆ ಗಾಯ

  •  ಉತ್ತರಕನ್ನಡ  ಜಿಲ್ಲೆಯ ಕುಮಟ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಘಟನೆ
  • ಅಸುರಕ್ಷಿತವಾಗಿ ಕಬ್ಬಿಣದ ಕಂಬಿ ಹೊತ್ತೊಯ್ಯುತ್ತಿದ್ದ ಲಾರಿ ಡಿಕ್ಕಿ
 • BIG3

  NEWS29, Jun 2018, 8:59 PM IST

  ಬಿಗ್ 3 | ಕಾರವಾರ: 98 ಲಕ್ಷ ಖರ್ಚು ಮಾಡಿ ಕಟ್ಟಿದ ಹಾಸ್ಟೆಲ್‌ಗೆ 2 ವರ್ಷಗಳಿಂದ ಬೀಗ!

  ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತೆ 98 ಲಕ್ಷ ರು. ಖರ್ಚು ಮಾಡಿ ಕಟ್ಟಿದ ಹಾಸ್ಟೆಲ್ ಉದ್ಘಾಟನೆ ಭಾಗ್ಯವಿಲ್ಲದೇ ಕಳೆದ 2 ವರ್ಷಗಳಿಂದ ಪಾಳು ಬಿದ್ದಿದೆ. ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲ. ಕಟ್ಟಡ ರೆಡಿ ಇದ್ರೂ ಉದ್ಘಾಟನೆ ಮಾಡಲು ಏನು ಅಡ್ಡಿ? ಬೇಜವಾಬ್ದಾರಿ ಅಧಿಕಾರಿಗಳ ಬೆನ್ನತ್ತಿದೆ ಬಿಗ್ 3. 

 • kaiga

  NEWS22, Jun 2018, 11:05 AM IST

  ಕೈಗಾ ಅಣು ಸ್ಥಾವರದ ವಿಕಿರಣದಿಂದಲೇ ಹರಡುತ್ತಿದೆಯಾ ಕ್ಯಾನ್ಸರ್?

  ಕೈಗಾ ಅಣು ಸ್ಥಾವರ ಸ್ಥಳೀಯ ಜನರ ಆರೋಗ್ಯಕ್ಕೆ ಕಂಟವಾಗಿದೆ.  ಈ ಹಿಂದೆಯೂ ಕೂಡ ಈ ಅನುಮಾನ ವ್ಯಕ್ತವಾಗಿತ್ತು. ಏಕೆಂದರೆ ಅಣು ಸ್ಥಾವರದ ವಿಕಿರಣದಿಂದಲೇ ಕ್ಯಾನ್ಸರ್ ಹರಡುತ್ತಿದೆ ಎಂಬ ವಿಷಯ ಈ ಮೊದಲೇ ಬಯಲಾಗಿತ್ತು.  

 • 29, May 2018, 5:48 PM IST

  ಮುಂಗಾರು ಅಬ್ಬರ: ಬೋಟ್ ಮುಳುಗಡೆ; ಇಬ್ಬರು ಮೀನುಗಾರರು ನಾಪತ್ತೆ

  ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಅಬ್ಬರ ಶುರುವಾಗಿದೆ.  ಹೊನ್ನಾವರದ ಬಳಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿ 6 ಮೀನುಗಾರರಿದ್ದರು, ಅವರ ಪೈಕಿ ಇಬ್ಬರನ್ನು ರಕ್ಷಿಸಲಾಗಿದೆ. ನಾಪತ್ತೆಯಾಗಿರುವ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.  

 • Vote new

  14, May 2018, 1:22 PM IST

  ನೌಕಾದಳ ಅಧಿಕಾರಿಗಳಿರುವ ಈ ಮತಗಟ್ಟೆಯಲ್ಲಿ ಚಲಾವಣೆಯಾಗಿದ್ದು 2 ಮತಗಳು ಮಾತ್ರ!

  ಐಎನ್‌ಎಸ್ ಕದಂಬ ನೇವಲ್ ಬೇಸ್ ಮತಗಟ್ಟೆಯಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡು ಮತ ಚಲಾವಣೆಯಾಗಿದೆ. ನೇವಲ್ ಬೇಸ್ ಮತಗಟ್ಟೆಯಲ್ಲಿ ಒಟ್ಟು 661 ಮತಗಳಲ್ಲಿ ಕೇವಲ ಎರಡು ಮತಗಳು ಮಾತ್ರ ಚಲಾವಣೆಯಾಗಿದೆ.  ರಾಜ್ಯ ವಿಧಾನಸಭಾ ಚುನಾವಣೆಗೂ ತಮಗೂ ಸಂಬಂಧ ಇಲ್ಲದಿರುವಂತೆ ರಕ್ಷಣಾ ಇಲಾಖೆಯ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ.