Search results - 1305 Results
 • Janardhan Reddy

  NEWS9, Nov 2018, 7:25 AM IST

  ರೆಡ್ಡಿ ಡೀಲ್‌ ಹಣ ಎಲೆಕ್ಷನ್‌ಗೆ ಬಳಕೆ?

  ಆ್ಯಂಬಿಡೆಂಟ್‌ ಕಂಪನಿ ಮಾಲೀಕ ಸಯ್ಯದ್‌ ಫರೀದ್‌ನಿಂದ ಪಡೆದಿದ್ದಾರೆ ಎನ್ನಲಾದ 57 ಕೆ.ಜಿ.ಚಿನ್ನವನ್ನು ಜನಾರ್ದನ ರೆಡ್ಡಿ ಅವರು ಕಳೆದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಗೂ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಬಳಸಿಕೊಂಡಿರಬಹುದು ಎಂಬ ಗುಮಾನಿಯನ್ನು ಬೆಂಗಳೂರಿನ ನಗರ ಅಪರಾಧ ವಿಭಾಗ (ಸಿಸಿಬಿ) ವ್ಯಕ್ತಪಡಿಸಿದೆ.
   

 • NEWS24, Oct 2018, 9:37 PM IST

  ಬಳ್ಳಾರಿ ಅಖಾಡದಲ್ಲಿ ನೀನಾ..? ನಾನಾ..? ಸಿದ್ದು ಸಿಡಿಗುಂಡು ರಣ ರಣ ರಾಮುಲು

  ಮಾಜಿ ಸಿಎಂ ಸಿದ್ದರಾಮಯ್ಯ ಇದ್ದ ಕಡೆ ಮಾತಿನ ಝಲಕ್ ಜೋರಾಗಿಯೇ ಇರುತ್ತದೆ. ಸಿದ್ದು ಸವಾಲಿಗೆ ಶ್ರೀರಾಮುಲು ರೊಚ್ಚಿಗೆದ್ದರೆ ಅದರ ಖದರ್ ಬೇರೆಯದ್ದೇ ಆಗಿರುತ್ತದೆ. ಈಗ ಬಳ್ಳಾರಿಯಲ್ಲಿ ನಡೆಯುತ್ತಿರುವುದು ಅದೇನೆ.
  ಕಾಂಗ್ರೆಸ್’ನ ಸಮರಸೇನಾನಿ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಕದನ ಕಲಿ ಶ್ರೀರಾಮುಲು ಮಧ್ಯೆ ಕುರುಕ್ಷೇತ್ರವೇ ನಡೆಯುತ್ತಿದೆ. ಬಳ್ಳಾರಿ ಬೈ ಎಲೆಕ್ಷನ್’ನಲ್ಲಿ ಸಿದ್ದು-ಶ್ರೀರಾಮುಲು ಟಾಕ್ ಫೈಟ್ ಹೇಗಿತ್ತು ಎನ್ನೋದನ್ನು ನೀವೊಮ್ಮೆ ನೋಡಿ..
   

 • telengana chandra sekara rao

  NEWS17, Oct 2018, 7:13 AM IST

  ಐದು ಕ್ಷೇತ್ರಗಳ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳೆಷ್ಟು?

  ಕರ್ನಾಟಕದ ಒಟ್ಟು 5 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಲೋಕಸಭೆ ಹಾಗೂ ವಿಧಾನಸಭೆಯ ಈ ಕ್ಷೇತ್ರಗಳಿಗೆ ನವೆಂಬರ್ 3ರಂದು ಚುನಾವಣೆ ನಡೆಯಲಿದ್ದು ಒಟ್ಟು 40 ಮಂದಿ ಕಣದಲ್ಲಿದ್ದಾರೆ. 

 • Voter

  NEWS11, Oct 2018, 1:38 PM IST

  ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ವಾ? ಈಗ ಸೇರಿಸಿ

  2019ರ ಜನವರಿ 3ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅವಕಾಶ ನೀಡಲಾಗಿದೆ. ಈಗಿರುವ ಮತದಾರರ ಪಟ್ಟಿಯಲ್ಲಿನ ಹೆಸರು ತಿದ್ದುಪಡಿಗೆ ಅಕ್ಟೋಬರ್ 10ರಿಂದ ನವೆಂಬರ್ 10ರವರೆಗೆ ಅರ್ಜಿ ಸಲ್ಲಿಸಬಹುದು.

 • NEWS8, Oct 2018, 3:45 PM IST

  ಲೋಕಸಭಾ ಉಪ ಚುನಾವಣೆಗೆ ಬೀಳುತ್ತಾ ಬ್ರೇಕ್?

  ಈಗಾಗಲೇ ರಾಜ್ಯದಲ್ಲಿ ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿದ್ದು,ಈ ಬಗ್ಗೆ ಇದೀಗ ಅಪಸ್ವರ ಎದ್ದಿದೆ. 

 • NEWS7, Oct 2018, 10:37 AM IST

  ಮತಪಟ್ಟಿಗೆ ಹೆಸರು ಸೇರಿಸಲು ಮೂರು ದಿನವಷ್ಟೇ ಅವಕಾಶ

  ರಾಜ್ಯದ 3 ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಚುನಾವಣಾ ಆಯೋಗವು ಅ. 9 ರವರೆಗೆ ಕಾಲಾವಕಾಶ ನೀಡಿದೆ.

 • JDS Congress

  NEWS25, Sep 2018, 6:15 PM IST

  ಕಾಂಗ್ರೆಸ್-ಜೆಡಿಎಸ್ ವಿಧಾನ ಪರಿಷತ್ ಅಭ್ಯರ್ಥಿಗಳ ಆಸ್ತಿ ಎಷ್ಟು ಗೊತ್ತಾ?

  ಒಟ್ಟು ಮೂರು ಸ್ಥಾನಗಳ ಪೈಕಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿದೆ.  ಕಾಂಗ್ರೆಸ್ ನಿಂದ ವೇಣುಗೋಪಾಲ್ ಮತ್ತು ನಜೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದರೆ, ಜೆಡಿಎಸ್ ನಿಂದ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದಾರೆ.  ಈ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಇವರು ನಾಮಪತ್ರದಲ್ಲಿ ಘೋಷಿಸಿಕೊಂಡಿರುವ ಆಸ್ತಿ ಮೌಲ್ಯ ಎಷ್ಟಿದೆ ಎನ್ನುವುದನ್ನು ಮುಂದೆ ಓದಿ.

 • DH Shankaramurthy

  Shivamogga12, Sep 2018, 3:45 PM IST

  ಚುನಾವಣಾ ಆಯೋಗದ ವಿರುದ್ಧ ಮಾಜಿ ಸಭಾಪತಿ ಕೆಂಡಾಮಂಡಲ

  ಪ್ರತ್ಯೇಕವಾಗಿ ಚುನಾವಣೆ ನಡೆಸುವುದರಿಂದ ಪರಿಷತ್ ನ 3 ಸ್ಥಾನಗಳು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪಾಲಾಗುತ್ತವೆ. ಬಿಜೆಪಿಗೆ ಒಂದು ಸ್ಥಾನ ಸಿಕ್ಕೊಲ್ಲ. ವಿಧಾನಸಭೆಯ ಸದಸ್ಯರಿಂದ ಪರಿಷತ್ತಿಗೆ ಆಯ್ಕೆಯಾಗುವ  ಈ ಸ್ಥಾನಗಳು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಯಬೇಕು. ಹಾಗಾಗಿ ತಕ್ಷಣವೇ ತಪ್ಪನ್ನ ಸರಿ ಪಡಿಸುವಂತೆ ಚುನಾವಣಾ ಆಯೋಗಕ್ಕೆ ಶಂಕರ ಮೂರ್ತಿ ಆಗ್ರಹಿಸಿದರು. 

 • NEWS7, Sep 2018, 10:59 AM IST

  ಗೌಡರ ಕುಟುಂಬದ ಇವರೇ ರಾಮನಗರ ಚುನಾವಣೆ ಅಭ್ಯರ್ಥಿ..?

  ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗೌಡರ ಕುಟುಂಬದ ಇವರೇ ಸ್ಪರ್ಧೆ ಮಾಡುತ್ತಾರೆ ಎನ್ನುವು ಸುಳಿವು ನೀಡಲಾಗಿದೆ. ಅನಿತಾ ಕುಮಾರಸ್ವಾಮಿ ಚುನಾವಣಾ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. 

 • தேவகவுடா

  NEWS3, Sep 2018, 8:08 PM IST

  ನಗರಸಭೆ,ಪುರಸಭೆಯಲ್ಲೂ ಬಿಜೆಪಿ ದೂರ ಇಡಲು ಕಾಂಗ್ರೆಸ್ ಜೊತೆ ಮೈತ್ರಿ: ದೇವೇಗೌಡ

  ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇ ಗೌಡ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

 • தேவகவுடா

  NEWS3, Sep 2018, 8:07 PM IST

  ಪುರಸಭೆ, ನಗರಸಭೆಯಲ್ಲೂ ಬಿಜೆಪಿ ದೂರ ಇಡಲು ಕಾಂಗ್ರೆಸ್ ಜೊತೆ ಮೈತ್ರಿ: ದೇವೇಗೌಡ

  ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇ ಗೌಡ ಫಲಿತಾಂಶದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. 

 • Malavalli MLA Annadani

  Mandya28, Aug 2018, 1:15 PM IST

  ಚುನಾವಣೆ ಭಯ: ವೋಟ್ ಬ್ಯಾಂಕ್‌ಗೆ ಜೆಡಿಎಸ್ ಶಾಸಕ ತಂತ್ರ

  'ಗ್ರಾಮ ವಾಸ್ತವ್ಯ'ದ ಮೂಲಕ ಎಚ್.ಡಿ.ಕುಮಾರಸ್ವಾಮಿಯವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಜನರನ್ನು ತಲುಪಿದ್ದರು. ಯಾವುದೋ ಮೂಲೆಯೊಂದರ ಹಳ್ಳಿಯಲ್ಲಿ ರಾತ್ರಿ ಕಳೆದು, ಜನರೊಂದಿಗೆ ನೇರ ಸಂಪರ್ಕದಲ್ಲಿರಲು ಯತ್ನಿಸಿದ್ದರು. ಇದೀಗ ಮಳವಳ್ಳಿ ಶಾಸಕರು ಎಚ್ಡಿಕೆ ದಾರಿಯಲ್ಲಿಯೇ ನಡೆಯುತ್ತಿದ್ದು, ಆಗಾಗ ಗ್ರಾಮ ವಾಸ್ತವ್ಯ ನಡೆಸುತ್ತಿದ್ದಾರೆ.

 • Gali Janardhan Reddy

  POLITICS26, Jul 2018, 10:05 PM IST

  ‘ಬಿಜೆಪಿ ಸೋಲಲು ಜನಾರ್ಧನ ರೆಡ್ಡಿ ದೂರವಿಟ್ಟಿದ್ದೇ ಕಾರಣ’

  ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗದಿರಲು ಕಾರಣವೇನು? ಎಂಬುವುದನ್ನು ವಿಶ್ಲೇಷಿಸಿರುವ ಅದೇ ಪಕ್ಷದ ನಾಯಕ, ಶಾಸಕ ಸೋಮಶೇಖರ ರೆಡ್ಡಿ, ಜನಾರ್ಧನ ರೆಡ್ಡಿಯನ್ನು ದೂರವಿಟ್ಟಿರುವುದೇ ಕಾರಣವೆಂದು ವ್ಯಾಖ್ಯಾನಿಸಿದ್ದಾರೆ.

   

 • NEWS22, Jul 2018, 9:45 AM IST

  ಸಿದ್ದು ನ್ಯಾಮಗೌಡ ಪುತ್ರನಿಗೆ ಕೈ ಟಿಕೆಟ್

  ಜಮಖಂಡಿಯ ಹಾಲಿ ಶಾಸಕ ಸಿದ್ದು ನ್ಯಾಮಗೌಡ ಅವರ ಮರಣದಿಂದಾಗಿ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸಿದ್ದು ನ್ಯಾಮಗೌಡರ ಪುತ್ರ ಆನಂದ್ ಸಿದ್ದು ನ್ಯಾಮಗೌಡ ಅವರನ್ನು ಕಣಕ್ಕಿಳಿಸಲು ರಾಜ್ಯ ಕಾಂಗ್ರೆಸ್ ನಿರ್ಧಾರ ಮಾಡಿದೆ. 

 • NEWS17, Jul 2018, 3:31 PM IST

  ಕರ್ನಾಟಕ ಎಲೆಕ್ಷನ್'ಗೆ ಆದ ಖರ್ಚೆಷ್ಟು?

  ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಒಂದು ಅಂದಾಜಿನ ಪ್ರಕಾರ 5500ರಿಂದ 6000 ಕೋಟಿವರೆಗೆ ಖರ್ಚಾಗಿದೆಯಂತೆ. ಎರಡು ರಾಷ್ಟ್ರೀಯ ಪಕ್ಷಗಳು ತಲಾ 700ರಿಂದ 800 ಕೋಟಿವರೆಗೆ ಪ್ರಚಾರ, ಪಾರ್ಟಿ ಫಂಡ್‌ಗಾಗಿ ಖರ್ಚು ಮಾಡಿದ್ದು, ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ 200ರಿಂದ 300 ಕೋಟಿವರೆಗೆ ಖರ್ಚು ಮಾಡಿರುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಬಿಟ್ಟು ಅಭ್ಯರ್ಥಿಗಳು 3000 ಕೋಟಿವರೆಗೆ ಹಣ ಖರ್ಚು ಮಾಡಿರುವ ಬಗ್ಗೆ ಅಂದಾಜಿದೆ.