Search results - 45 Results
 • NEWS10, Sep 2018, 11:54 AM IST

  ಮೋದಿ ಗೆಲ್ಲಿಸಿದ್ದ 'ಪಿಕೆ' ಸೇರ್ತಾರಾ ನಿತೀಶ್ ಕ್ಯಾಂಪ್?: "ಚುನಾವಣಾ ಚಾಣಕ್ಯ' ಆರ್ ಯೂ ಓಕೆ?

  ರಾಜಕೀಯ ಪಕ್ಷ, ವ್ಯಕ್ತಿಯ ಪರ ಚುನಾವಣಾ ನೀತಿ ನಿರೂಪಣೆಯಲ್ಲಿ ಖ್ಯಾತಿ ಗಳಿಸಿರುವ ಐಪ್ಯಾಕ್ ಮುಖ್ಯಸ್ಥ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2014 ರಲ್ಲಿ ಪ್ರಧಾನಿ ಮೋದಿ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್ ಕಿಶೋರ್, ಈ ಬಾರಿ ತಾವೇ ಖುದ್ದಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಪ್ರಶಾಂತ್ ಕಿಶೋರ್, 2019 ರಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಪರ ಕ್ಯಾಂಪೇನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 • Rahul Gandhi

  NEWS2, Sep 2018, 7:42 AM IST

  2019ಕ್ಕೆ ರಾಹುಲ್‌ಗೆ ಹೊಸ ಕೋಚ್‌?

  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ವಿವಿಧ ಪಕ್ಷಗಳು ತಯಾರಿಯಲ್ಲಿ ತೊಡಗಿಕೊಂಡಿದ್ದು ಗೆಲುವಿಗಾಗಿ ಹರಸಾಹಸ ಪಡುತ್ತಿವೆ. ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾರ್ವರ್ಡ್ ವಿವಿ ಪ್ರೊಫೆಸರ್ ಓರ್ವರನ್ನು ತಮ್ಮ ಕೋಚ್ ಆಯ್ಕೆ ಮಾಡಿಕೊಂಡಿದ್ದಾರೆ. 

 • 10, May 2018, 7:14 AM IST

  ಲಾಸ್ಟ್ ಡೇ - ಲಾಸ್ಟ್ ಶೋ : ಬಹಿರಂಗ ಪ್ರಚಾರ ಅಂತ್ಯ

  ಇನ್ನು ಎರಡು ದಿನಗಳಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ. ಇದರೊಂದಿಗೆ ಗದ್ದಲದ  ರ್ಯಾಲಿಗಳು, ರೋಡ್‌ಶೋಗಳು, ಅಬ್ಬರದ ಪ್ರಚಾರಗಳು, ಬಹಿರಂಗ ಬೈದಾಟಗಳು ಇಂದು ಸಂಜೆಯ ಹೊತ್ತಿಗೆ ಮುಕ್ತಾಯವಾಗಿ ಸದ್ದಿಲ್ಲದ ಎರಡು ದಿನದ ಮನೆ ಮನೆ ಪ್ರಚಾರ ಆರಂಭವಾಗಲಿದೆ. 

 • Kiccha Sudeep

  9, May 2018, 10:53 AM IST

  ಇನ್ನು ಚುನಾವಣಾ ಪ್ರಚಾರ ಮಾಡಲ್ಲ: ಸುದೀಪ್

  ಕಳೆದ ಮೂರು ದಿನಗಳಿಂದ ರಾಜಕೀಯ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ ಸುದೀಪ್, ದಿಢೀರನೇ ತಮ್ಮ ನಿರ್ಧಾರ ಬದಲಾಯಿಸಿದ್ದಾರೆ. ಇನ್ನುಮುಂದೆ ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಮಂಗಳವಾರ ಅವರು ಪ್ರಕಟಿಸಿದ್ದಾರೆ. ಹೀಗಾಗಿ ಬುಧವಾರ (ಇಂದು) ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಸುದೀಪ್ ಹೋಗುತ್ತಿಲ್ಲ.

 • 8, May 2018, 7:25 PM IST

  ’ನರೇಂದ್ರ ಮೋದಿಗೆ ನೀಡಿದ ಪ್ರತಿ ಓಟು ನನಗೆ ಕೊಟ್ಟಂತೆ’ ಸಿದ್ದರಾಮಯ್ಯ ಎಡವಟ್ಟು!

  ಮಳವಳ್ಳಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ. ನರೇಂದ್ರ ಸ್ವಾಮಿ ಪರ ಚುನಾವಣಾ ಪ್ರಚಾರ ಕೈಗೊಂಡ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ.  ನರೇಂದ್ರ ಮೋದಿಗೆ ನೀಡಿದ ಪ್ರತಿ ಓಟು ನನಗೆ ನೀಡಿದಂತೆ ಎಂದು  ಹೇಳುವ ಮೂಲಕ ಸಿದ್ದರಾಮಯ್ಯ ಜನರಿಗೆ ಅಚ್ಚರಿಯನ್ನುಂಟುಮಾಡಿದ್ದಾರೆ

 • 8, May 2018, 7:08 PM IST

  ಇನ್ನು ಮುಂದೆ ಚುನಾವಣಾ ಪ್ರಚಾರಕ್ಕೆ ಹೋಗಲ್ಲ: ಕಿಚ್ಚ ಸುದೀಪ್

  ಸ್ಯಾಂಡಲ‌್‌ವುಡ್ ನಟರಾದ ಕಿಚ್ಚ ಸುದೀಪ್, ದರ್ಶನ್ ಹಾಗೂ ಯಶ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷಗಳಿಗೂ ಸೇರದೇ, ತಮ್ಮ ಆಪ್ತರ ಪರ ಮತಯಾಚಿಸುತ್ತಿದ್ದಾರೆ. ಆಪ್ತರು, ಗೆಳೆಯರ ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಈಗಾಗಲೇ ಈ ನಟರು ಸ್ಪಷ್ಟಪಡಿಸಿದ್ದಾರೆ.

 • Congress Party

  8, May 2018, 1:59 PM IST

  ಪ್ರಚಾರಕ್ಕೆ ಕೈ ಎತ್ತಿದ ಕ್ಯಾಬಿನೆಟ್ ಕಲಿಗಳು : ಕಾಡುತ್ತಿದೆಯಾ ಸೋಲುವ ಭೀತಿ..?

  ಕರ್ನಾಟಕದಲ್ಲಿ ಚುನಾವಣಾ ಅಬ್ಬರ ಜೋರಾಗಿದೆ. ಚುನಾವಣಾ ಪ್ರಚಾರ ಕಾರ್ಯಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಉಳಿದಿದೆ. ಆದರೆ  ಕೆಲವು ಕಾಂಗ್ರೆಸ್ ಮುಖಂಡರು ಮಾತ್ರ ತಮ್ಮ ಕ್ಷೇತ್ರ ಬಿಟ್ಟು ಹೊರಕ್ಕೆ ಬರುತ್ತಿಲ್ಲ. ಅವರು ಕೇವಲ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದಾರೆ. 

 • 5, May 2018, 7:34 AM IST

  ಇಂದು ಸಿದ್ದರಾಮಯ್ಯ ಪರ ನಟ ದರ್ಶನ್ ಪ್ರಚಾರ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇಂದು ಹಾಗೂ ಚಿತ್ರ ನಿರ್ಮಾಪಕ ಹಾಗೂ ಶಾಸಕ ಮುನಿರತ್ನ ಪರ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಪ್ರಚಾರ ನಡೆಸಲಿದ್ದಾರೆ. 

 • Sudeep and Siddadamaiah

  4, May 2018, 11:43 AM IST

  ಸಿದ್ದರಾಮಯ್ಯ ಪರ ಸುದೀಪ್ ಚುನಾವಣಾ ಪ್ರಚಾರ

  ಸ್ಯಾಂಡಲ್ ವುಡ್ ನಟ  ಕಿಚ್ಚ ಸುದೀಪ್ ಅವರು ಸಿಎಂ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಮಾಡಲಿದ್ದಾರೆ.   ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ  ಸುದೀಪ್ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಹೊರತು, ಇದು  ಶ್ರೀ ರಾಮುಲು ವಿರುದ್ಧದ ಪ್ರಚಾರ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.  

 • 3, May 2018, 1:05 PM IST

  ಜೆಡಿಎಸ್, ಬಿಜೆಪಿ ಪರ ಪ್ರಚಾರ: ಯಶ್ ಸ್ಪಷ್ಟನೆ ಏನು?

  ಪಕ್ಷಾತೀತವಾಗಿ ಸ್ಯಾಂಡಲ್‌ವುಡ್ ನಟ ಯಶ್ ರಾಜ್ಯದ ವಿವಿಧೆಡೆ ಪ್ರಚಾರ ನಡೆಸುತ್ತಿದ್ದಾರೆ. ಯಾವುದೇ ಪಕ್ಷದ ಪರ ಪ್ರಚಾರ ನಡೆಸದೇ, ಒಳ್ಳೆಯ ಅಭ್ಯರ್ಥಿಗಳಿಗೆ ಮತ ಹಾಕಲು ಮೈಸೂರಿನ ಕೆಲವೆಡೆ ಪ್ರಚಾರ ನಡೆಸಿದ ಯಶ್, ಇಂದು ಹಾಸನದ ವಿವಿಧೆಡೆ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದೇನು?

 • Karnataka Election

  3, May 2018, 9:26 AM IST

  ನೆಚ್ಚಿನ ಅಭ್ಯರ್ಥಿಗಳ ಪರ ಪ್ರಚಾರಕ್ಕಿಳಿದ ತಾರೆಗಳು

   ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿರುವಂತೆಯೇ ಚಲನಚಿತ್ರ ಕಲಾವಿದರೂ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿದ್ದಾರೆ. 

 • 2, May 2018, 12:23 PM IST

  ಪರಮೇಶ್ವರ್, ಸಿದ್ದರಾಮಯ್ಯನಿಗೆ ಬೇಡವಾದ್ರಾ ರಮ್ಯಾ?

  ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ, ಸಕ್ರಿಯಾಗಿರುವ ರಮ್ಯಾ ತಮ್ಮ ಕರ್ತವ್ಯವನ್ನು ಸಮರ್ಥವಾಗಿಯೇ ನಿರ್ವಹಿಸುತ್ತಿದ್ದಾರೆ. ಆದರೆ, ಪ್ರಚಾರದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಟಿಕೆಟ್ ಸಹ ಸಿಗದ ರಮ್ಯಾ, ಸ್ಟಾರ್ ಪ್ರಚಾರಕಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರೂ, ರಾಜ್ಯಕ್ಕೆ ಕಾಲಿಟ್ಟಿಲ್ಲವೇಕೆ?

 • 2, May 2018, 8:52 AM IST

  ಆಪ್ತರ ಪರ ಯಶ್ ಚುನಾವಣಾ ಪ್ರಚಾರ

  ಮೇ 12ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ತಮಗೆ ಆಪ್ತರಾಗಿರುವ ಕೆಲವರ ಪರವಾಗಿ ಪ್ರಚಾರ ಮಾಡುವುದಕ್ಕೆ ಖ್ಯಾತ ಚಿತ್ರ ನಟ ಯಶ್ ಮುಂದಾಗಿದ್ದಾರೆ. 

 • 1, May 2018, 8:49 PM IST

  ಎಚ್.ಡಿ.ಕುಮಾರಸ್ವಾಮಿ, ರೇವಣ್ಣ ಕೊಕ್ಕರೆ ಇದ್ದ ಹಾಗೆ...

  ಮಾಜಿ‌ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಎಚ್.ಎಂ. ರೇವಣ್ಣ ಕೊಕ್ಕರೆ ಇದ್ದ ಹಾಗೆ. ನೀರು ಇರುವ ಕೆರೆಗೆ ಕೊಕ್ಕರೆ ಬರುತ್ತೆ, ನೀರು ಖಾಲಿಯಾದ್ರೆ ಹಾರಿ ಹೋಗುತ್ತೆ. ಕೊಕ್ಕರೆ ಜಾತಿಗೆ ಸೇರಿದ ಅವರು ನಾನು ತುಂಬಿಸಿದ ಕೆರೆಗೆ ನೀರು ಕುಡಿಯಲು ಬಂದಿದ್ದಾರೆ.ನೀರು ಖಾಲಿಯಾದ ಹಾಗೆ ಅವರು ಚನ್ನಪಟ್ಟಣ ಬಿಟ್ಟು ಹೋಗುತ್ತಾರೆಂದು ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.

 • Modi in Karnataka

  1, May 2018, 8:23 PM IST

  ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡದ್ದಕ್ಕೆ ಕಾರಣ ಬಹಿರಂಗ

  ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಉಡುಪಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಕೃಷ್ಣ ಮಠಕ್ಕೆ ಭೇಟಿ ನೀಡುವ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಮಠಕ್ಕೆ ಮೋದಿ ಭೇಟಿ ನೀಡದ ಕಾರಣವೇನೆಂಬುದನ್ನು ಪೇಜಾವರ ಶ್ರೀಗಳು ತಿಳಿಸಿದ್ದಾರೆ.