Search results - 300 Results
 • DK Shivakumar Slams BJP Leaders

  NEWS12, Sep 2018, 9:51 AM IST

  ನಮ್ಮ ಸಂಪರ್ಕದಲ್ಲಿರೋ ಬಿಜೆಪಿಗರ ಹೆಸರು ಹೇಳಿದರೆ ಗಾಬರಿಯಾಗ್ತೀರಿ : ಡಿಕೆಶಿ

  ಬಿಜೆಪಿಯವರು ಕಾಂಗ್ರೆಸ್‌ನ ಕೆಲ ಶಾಸಕರನ್ನು ಸೆಳೆಯುತ್ತಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಮ್ಮ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರು ಹೇಳಿದರೆ ಗಾಬರಿಯಾಗುತ್ತೀರಿ. ನಾನು ಈಗಾಗಲೇ ಹೇಳಿದ್ದೇನೆ. ನಾನು ಚೆಸ್‌ ಆಡುವವನು. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. 

 • Satish Jarkiholi Warning To DK Shivakumar

  NEWS12, Sep 2018, 9:09 AM IST

  ಡಿಕೆಶಿಗೆ ಮತ್ತೆ ಸತೀಶ್‌ ಪರೋಕ್ಷ ಎಚ್ಚರಿಕೆ

  ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಬೇರೆಯವರು ಮೂಗು ತೂರಿಸುವುದು ಬೇಡ. ನಮ್ಮ ಜಿಲ್ಲೆಯಲ್ಲಿ ಹೇಗೆ ರಾಜಕಾರಣ ಮಾಡಬೇಕೆಂಬುದು ನಮಗೆ ಗೊತ್ತಿದೆ. ಇದನ್ನೇ ಈ ಹಿಂದೆಯೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ’ ಎಂದೂ ಅವರು ಪರೋಕ್ಷವಾಗಿ  ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸತೀಶ್ ಜಾರಕಿಹೊಳಿ ಎಚ್ಚರಿಕೆಯನ್ನೂ ನೀಡಿದ್ದಾರೆ.

 • Belagavi Congress Leaders Over DK Shivakumar

  NEWS12, Sep 2018, 7:56 AM IST

  ಡಿಕೆಶಿ ವಿರುದ್ಧವೀಗ ಬಂಡಾಯ

  ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಅವರಿಂದಾಗಿ ಜಿಲ್ಲೆಯಲ್ಲಿ ಪಕ್ಷದ ಇತರ ಶಾಸಕರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಅಲ್ಲಿನ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
   

 • Minister DK Shivakumar reacts about Operation kamala

  NEWS11, Sep 2018, 8:55 PM IST

  ಅವರು ಒಂದು ಪಾನ್ ಜರುಗಿಸಲಿ, ಆಮೇಲೆ ಮುಂದೈತೆ...

  ಬಿಜೆಪಿಗೆ ತಿರುಮಂತ್ರ ನೀಡುವ ನಿಟ್ಟಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್  ನಾವು ಕೂಡ ಪ್ರತಿತಂತ್ರ ನೀಡಲು ಸಿದ್ಧ ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ

 • Ballari Congress MLAs Unhappy With DK Shivakumar

  NEWS11, Sep 2018, 7:08 PM IST

  ಡಿಕೆಶಿ ವಿರುದ್ಧ ತಿರುಗಿ ಬಿದ್ದ ಇನ್ನಷ್ಟು ಕಾಂಗ್ರೆಸ್ ಶಾಸಕರು?

  ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಇನ್ನಷ್ಟು ಕಾಂಗ್ರೆಸ್ ಶಾಸಕರು ತಿರುಗಿ ಬಿದ್ದಿದ್ದಾರೆ.  ಡಿಕೆಶಿ ಬಳ್ಳಾರಿಯ ಉಸ್ತುವಾರಿ ಹೊತ್ತ ಬಳಿಕ ನಮಗೆ ಉಸಿರಾಡಲು ಆಗ್ತಿಲ್ಲ ಎಂದು ಶಾಸಕರು ಅವಲತ್ತುಕೊಂಡಿದ್ದಾರೆ. ಮಂತ್ರಿ ಸ್ಥಾನದ ವಿಚಾರವಾಗಿ ಶಾಸಕ ಆನಂದ್ ಸಿಂಗ್ ಕೂಡಾ ಡಿಕೆಶಿ ವಿರುದ್ಧ ಅಮಾಧಾನ ತೋಡಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

 • Anand Singh Unhappy With DK Shivakumar Over Ministerial Berth

  NEWS11, Sep 2018, 4:18 PM IST

  ಡಿಕೆಶಿ ಮೇಲೆ ಆನಂದ್ ಸಿಂಗ್ ಸಿಟ್ಟು? ಶೀಘ್ರದಲ್ಲೇ ಕೈಗೆ ಗುಡ್‌ಬೈ?

  ಜಾರಕಿಹೊಳಿ ಬ್ರದರ್ಸ್- ಲಕ್ಷ್ಮೀ ಜಾರಕಿಹೊಳಿ ಜಗಳದೊಂದಿಗೆ ಆರಂಭವಾದ ಕಾಂಗ್ರೆಸ್‌ ಒಳಜಗಳ ಇದೀಗ ಕ್ಷಣಕ್ಷಣಕ್ಕೆ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. ಈ ನಡುವೆ ಡಿ.ಕೆ.ಶಿವಕುಮಾರ್ ಜೊತೆ ಅಸಮಾಧಾನ ಹೊಂದಿರುವ ಆನಂದ್ ಸಿಂಗ್ ಕಾಂಗ್ರೆಸ್‌ ತೊರೆಯುತ್ತಿದ್ದಾರೆ, ಅದಕ್ಕಾಗಿ ಬಿಜೆಪಿಯ ಗ್ರೀನ್ ಸಿಗ್ನಲ್‌ಗಾಗಿ ಕಾಯುತ್ತಿದ್ದಾರೆನ್ನಲಾಗಿದೆ.   

 • I know what to do if arrest warrant issued says DK Shivakumar

  state11, Sep 2018, 8:04 AM IST

  ಬಿಜೆಪಿ ಸ್ನೇಹಿತರೇ ನನಗೆ ಮಾಹಿತಿದಾರರು: ಡಿಕೆಶಿ

  ಡಿಕೆಶಿ ಹಾಗೂ ಸಂಬಂಧಿಸದವರ ಮೇಲೆ ಈಗಾಗಲೇ ಸಾಕಷ್ಟು ಬಾರಿ ಐಟಿ ದಾಳ ನಡೆದಿದ್ದು, ಅವರನ್ನು ಬಂಧಿಸುವ ವದಂತಿ ಇತ್ತು. ಆದರೆ, ಸದಾ ಸ್ಥಿತಪ್ರಜ್ಞರಂತೆ ಕಾಣಿಸುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಮಾಹಿತಿಗಳೂ ಮೊದಲೇ ಸಿಕ್ಕಿರುತ್ತೆ. ಕೊಡುವವರು ಬಿಜೆಪಿಯವರೇ?

 • DCM G Parameswar Cancels US Trip

  NEWS10, Sep 2018, 7:44 PM IST

  ಕ್ಷಿಪ್ರ ರಾಜಕೀಯ ಕ್ರಾಂತಿಯ ಸಾಧ್ಯತೆ : ಡಿಸಿಎಂ ವಿದೇಶಿ ಪ್ರವಾಸ ರದ್ದು

  ಪ್ರಸ್ತುತ ರಾಜಕೀಯ ವಿದ್ಯಮಾನಗಳು ಪಕ್ಷಕ್ಕೆ ಮಾರಕವಾಗಿರೋ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದೇಶ ಪ್ರವಾಸ ಮಾಡದಂತೆ ಪರಮೇಶ್ವರ್ ಗೆ ಹೈಕಮಾಂಡ್ ಸೂಚನೆ ನೀಡಿದೆ

 • DK Shivakumar To Meet PM Narendra Modi

  NEWS10, Sep 2018, 9:35 AM IST

  ಮೋದಿ ಭೇಟಿ ಮಾಡ್ತಾರೆ ಡಿಕೆಶಿ : ಕಾರಣವೇನು..?

  ಜಾರಿ ನಿರ್ದೇಶನಾ ಲಯದಿಂದ ಎಫ್‌ಐಆರ್ ದಾಖಲಾಗುವ ಭೀತಿ ಎದುರಿಸುತ್ತಿರುವ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ರಾಜ್ಯ ಸರ್ಕಾರದ ನಿಯೋಗದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. 

 • Minister Puttaranga Shetty Lashes out BJP Leaders

  NEWS9, Sep 2018, 9:46 PM IST

  'ಬಿಜೆಪಿಯಲ್ಲಿ ಡಿಕೆಶಿಗಿಂತಲೂ ಭ್ರಷ್ಟರಿದ್ದಾರೆ'

  ಬಿಜೆಪಿ ಪಕ್ಷದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗಿಂತಲೂ ಭ್ರಷ್ಟರಿದ್ದಾರೆ. ಇಡಿ, ಸಿಬಿಐ ಬಳಸಿಕೊಂಡು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಹಪಹಪಿಸುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಆರೋಪಿಸಿದ್ದಾರೆ

 • Minister D K Shivakumar defends himself about IT raid

  NEWS9, Sep 2018, 12:51 PM IST

  ನಾನು ತಪ್ಪು ಮಾಡಿಲ್ಲ; ಕ್ರಿಮಿನಲ್ ಅಲ್ಲ: ಡಿಕೆಶಿ

  ನಾನು ತಪ್ಪು ಮಾಡಿಲ್ಲ. ನಾನು ಕ್ರಿಮಿನಲ್ ಅಲ್ಲ. ರಾಜಕೀಯದಲ್ಲಿ ಯಾರ ಪ್ರಭಾವ ಜಾಸ್ತಿ ಇರುತ್ತೋ ಅವರೇ ಟಾರ್ಗೆಟ್ ಆಗುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ. ನಾನು ರಾಜಕಾರಣ ಮಾಡಲು ಬಂದಿದ್ದೇನೆ. ಕಿವಿಯಲ್ಲಿ ಹೂವಿಟ್ಟುಕೊಂಡು ಬಂದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. 

 • Mekedatu Dam Project More HelpFul For Tamilnadu

  NEWS9, Sep 2018, 8:01 AM IST

  ಮೇಕೆದಾಟಿನಲ್ಲಿ ಡ್ಯಾಂ : ತಮಿಳು ನಾಡಿಗೆ ಹೆಚ್ಚು ಅನುಕೂಲ

  ತಮಿಳುನಾಡು ಸರ್ಕಾರದೊಂದಿಗೆ ಮೇಕೆದಾಟಿನಲ್ಲಿ ಡ್ಯಾಂ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಿ ಯೋಜನೆ ಜಾರಿ ಮಾಡುವುದು ನನ್ನ ಮಹತ್ವಾಕಾಂಕ್ಷೆಯ ಗುರಿಯಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅಲ್ಲದೇ ಇದರಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ. 

 • ED Likely To Arrest DK Shivakumar Tomorrow

  NEWS9, Sep 2018, 7:38 AM IST

  ಇ.ಡಿ.ಯಿಂದ ಡಿಕೆಶಿ ಬಂಧನವಾಗುತ್ತಾ..?

  ಮೂಲಗಳ ಪ್ರಕಾರವಾಗಿ ಸೋಮವಾರ ದೆಹಲಿಯ ಇಡಿ ಅಧಿಕಾರಿಗಳು ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಅದೇ ದಿನ ಡಿ.ಕೆ. ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. 

 • KCC 2018 HD kumaraswamy inaugurated of Karnataka Chalanachitra Cup

  SPORTS8, Sep 2018, 8:48 PM IST

  ಚಲನ ಚಿತ್ರ ಕಪ್ 2018: ಉದ್ಘಾಟನಾ ಸಮಾರಂಭದ ಕಲರವ

  2018ರ ಕರ್ನಾಟಕ ಚಲನ ಚಿತ್ರ ಕಪ್ ಟೂರ್ನಿಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಜೊತೆಗೆ ಮಾಜಿ ಕ್ರಿಕೆಟಿಗರಾದ ವೀರೇಂದ್ರೆ ಸೆಹ್ವಾಗ್, ಹರ್ಷಲ್ ಗಿಬ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಮಾಗಮ. ಈ ಅದ್ಧೂರಿ ಟೂರ್ನಿಯನ್ನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್  ಉದ್ಘಾಟಿಸಿದರು.ಇಲ್ಲಿದೆ ಕೆಸಿಸಿ ಉದ್ಘಾಟನಾ ಸಮಾರಂಭದ ಕಲರವ.

 • JDS Calls Legislative Party Meeting To Discuss On DK Shivakumar's IT Case

  NEWS8, Sep 2018, 5:51 PM IST

  ಡಿಕೆಶಿ ಬಂಧನ ಭೀತಿ : ದಿಢೀರ್ ಶಾಸಕಾಂಗ ಸಭೆ ಕರೆದ ಜೆಡಿಎಸ್

  ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ  ಜಾರಿ ನಿರ್ದೇಶನಾಲಯದಿಂದ ಬಂಧನ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ  ಸಮ್ಮಿಶ್ರ ಸರ್ಕಾರದ ಅಂಗ ಪಕ್ಷ ಜೆಡಿಎಸ್ ದಿಢೀರ್ ಶಾಸಕಾಂಗ ಪಕ್ಷ ಕರೆದಿದೆ.  ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.