Search results - 90 Results
 • ManeMaga

  state18, Dec 2018, 5:17 PM IST

  ಥ್ಯಾಂಕ್ಸ್ ಸುವರ್ಣ: ಮಗ ಸಿಕ್ಕ ಖುಷಿಯಲ್ಲಿ ಪಾಲಕರ ಗುಣಗಾನ!

  ಅದೊಂದು ಬಡತನದ ಕುಟುಂಬ, ನಿತ್ಯ ದುಡಿದು ಬಂದು ಜೀವನ ಸಾಗಿಸೋದೆ ದುಸ್ತರವಾಗಿತ್ತು. ಈ ಮಧ್ಯೆ ಮಾನಸಿಕ ಅಸ್ವಸ್ಥನಾಗಿದ್ದ ಮಗ ಏಕಾಏಕಿ ಮನೆಯಿಂದ ಕಣ್ಮರೆಯಾಗಿದ್ದ. ಮನೆಮಂದಿ ದೂರ ದೂರದ ಊರಿಗೆ ಅಲೆದಾಡಿ ಹುಡುಕಿದ್ರು ಪ್ರಯೋಜನವಾಗಿಲಿಲ್ಲ. ಕೊನೆಗೆ ಸುವರ್ಣನ್ಯೂಸ್ ಬಾಲಕನ ಕುರಿತು ವರದಿ ಮಾಡಿದ್ದೇ ತಡ ಪಾಲಕರು ಗುರುತಿಸಿ ಓಡೋಡಿ ಬಂದಿದ್ದು, ವರದಿ ಫಲಶೃತಿಯಾಗಿ ಕಳೆದು ಹೋಗಿದ್ದ ಮನೆ ಮಗ ಇದೀಗ ಹೆತ್ತವರ ಮಡಿಲು ಸೇರಿದ್ದಾನೆ.

 • Bagalkot

  Bagalkot16, Dec 2018, 2:10 PM IST

  ಬಿಜೆಪಿ ಶಾಸಕ ನಿರಾಣಿ ಒಡೆತನದ ಫ್ಯಾಕ್ಟರಿಯಲ್ಲಿ ಸ್ಫೋಟ: 6 ಜನ ಸಾವು

  ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಬಳಿ ಇರುವ ಡಿಸ್ಟಿಲರಿ ಫ್ಯಾಕ್ಟರಿಯ ಬಾಯ್ಲರ್ ಬ್ಲಾಸ್ಟ್​ ಆಗಿ ನಾಲ್ವರು ಕಾರ್ಮಿಕರು ದುರ್ಮರಣ ಹೊಂದಿದ್ದಾರೆ. 

 • Gangubai Mankar

  Bagalkot15, Dec 2018, 10:10 PM IST

  ಬಾಗಲಕೋಟೆ ಸಿಇಒ ಸರ್ಜಿಕಲ್ ಸ್ಟ್ರೈಕ್: ಮೂರೇ ದಿನದಲ್ಲಿ 14 ಶಿಕ್ಷಕರ ಸಸ್ಪೆಂಡ್

  ಕೆಲಸಕ್ಕೆ ಕರೀಬೇಡಿ ಊಟಕ್ಕೆ ಮರೀಬೇಡಿ ಅಂದ್ರೆ ಕೆಲಸ ಕೇಳಬೇಡಿ ಸಂಬಳ ಮಾತ್ರ ಬರಲಿ ಅಂತ ಇದ್ದ ಶಿಕ್ಷಕರಿಗೆ ಬಾಗಲಕೋಟೆ ಖಡಕ್ ಸಿಇಒ ಬಿಸಿ ಮುಟ್ಟಿಸಿದ್ದಾರೆ.

 • Cable Operators

  state15, Dec 2018, 6:27 PM IST

  ಟ್ರಾಯ್ ಕಾಯ್ದೆಗೆ ವಿರೋಧ: ಸಿಡಿದೆದ್ದ ಕೇಬಲ್ ಆಪರೇಟರ್‌ಗಳು!

  ಕೇಂದ್ರ ಸರ್ಕಾರದ ನೂತನ ಟ್ರಾಯ್ ಕಾಯ್ದೆಯ ನೀತಿಯನ್ನು ವಿರೋಧಿಸಿ ಬಾಗಲಕೋಟೆಯಲ್ಲಿ ಜಿಲ್ಲಾ ಕೇಬಲ್ ಆಪರೇಟರ್ ಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಜಿಲ್ಲೆಯ ಬಾದಾಮಿ, ಬಾಗಲಕೋಟೆ, ಹುನಗುಂದ, ಬೀಳಗಿ, ಮುಧೋಳ, ಜಮಖಂಡಿ ತಾಲೂಕಿನ ಭಾಗದಿಂದ ಕೇಬಲ್ ಆಪರೇಟರ್‌ಗಳು ಆಗಮಿಸಿದ್ದರು.

 • BGK-Dairy

  state14, Dec 2018, 7:25 PM IST

  ತಾವೇ ಕೊಟ್ಟು ಕಸಿದುಕೊಂಡಿದ್ದ ಅನುದಾನ ತರ್ತಾರಾ ಸಿದ್ದು?

  ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲಿ ಹಾಲು ಒಕ್ಕೂಟದಿಂದ ಹೈಟೆಕ್ ಡೇರಿಯೊಂದನ್ನ ನಿರ್ಮಿಸಬೇಕು ಅಂತ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ಅನುದಾನ ಬಿಡುಗಡೆಯಾಗಿತ್ತು,  ಆದರೆ ಅಂದಿನ ಸಹಕಾರ ಸಚಿವರ ಧೋರಣೆಯಿಂದ ನೀಡಿದ್ದ ಅನುದಾನವನ್ನೇ ಸಿದ್ದರಾಮಯ್ಯ ತಮ್ಮ ಮೈಸೂರು-ಚಾಮರಾಜನಗರಕ್ಕೆ ಶಿಪ್ಟ್ ಆಗುವಂತೆ ನೋಡಿಕೊಂಡಿದ್ದರು. ಹೀಗಾಗಿ ಆ ಕಾಮಗಾರಿ ಇಂದಿಗೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತು ಹೋಗಿದೆ. ಆದರೆ ಇದೀಗ ಮೈಸೂರು ಭಾಗದಲ್ಲಿ ಸೋತು ಉತ್ತರ ಕರ್ನಾಟಕದಲ್ಲಿ ತಾವು ಆಯ್ಕೆಯಾದ ಸ್ವಜಿಲ್ಲೆಗೆ ಸಿದ್ದರಾಮಯ್ಯ ಮತ್ತೇ ಈಗಲಾದರೂ ಅನುದಾನ ನೀಡಿಸಲಿ ಎಂಬ ಬೇಡಿಕೆ ಮುನ್ನೆಲೆಗೆ ಬಂದಿದೆ. 

 • Suicide

  NEWS10, Dec 2018, 9:03 AM IST

  ಋತುಚಕ್ರದ ನೋವು ತಾಳಲಾರದೆ ಆತ್ಮಹತ್ಯೆ

  ಋತುಚಕ್ರದ ನೋವನ್ನು ತಾಳಲಾರದೆ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

 • Siddaramaiah

  Bagalkot6, Dec 2018, 6:48 PM IST

  ಸಿದ್ದರಾಮಯ್ಯಗೆ ಟ್ವೀಟ್ ಮಾಡಿ ಕಷ್ಟ ಹೇಳಿಕೊಂಡ ಬಾದಾಮಿ ರೈತ..!

  ಬಾದಾಮಿ ಜಿಲ್ಲೆಯ ರೈತನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮಾಡುವ ಮೂಲಕ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. 

 • Siddaramaiah

  Bagalkot2, Dec 2018, 6:02 PM IST

  ಬಾಗಲಕೋಟೆಯಲ್ಲಿ ಸಿದ್ದರಾಮಯ್ಯ ಫುಲ್ ಹವಾ: ಹೋದಲ್ಲೆಲ್ಲಾ ಸೆಲ್ಫಿ ಕ್ರೇಜ್

  ಸ್ವಕ್ಷೇತ್ರ ಬಾದಾಮಿ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಹೋದ ಕಡೆಯೆಲ್ಲಾ ಜನರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. 

 • Police

  Bagalkot1, Dec 2018, 6:11 PM IST

  ಬಾಗಲಕೋಟೆ ಎಸ್‌ಪಿ ಕಚೇರಿ ಎದುರೆ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ

  ಎಸ್ ಪಿ ನಿವಾಸದ ಮುಂದೆಯೇ  ತಲೆಗೆ ಗುಂಡು ಹಾರಿಸಿಕೊಂಡು ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಎಸ್ ಪಿ ಮನೆ ಮುಂದೆ ಮಂಜು ಹರಿಜನ(28)ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ತವ್ಯಕ್ಕಾಗಿ ನೀಡಲಾಗಿದ್ದ ರೈಫಲ್‌ನಿಂದಲೇ ಶೂಟ್ ಮಾಡಿಕೊಂಡಿದ್ದಾರೆ.

 • FIR

  state30, Nov 2018, 9:17 PM IST

  ಅಸಲಿ ನಕಲಿ ಆಟದಲ್ಲಿ ಇಲ್ಲೊಂದು ಕ್ರೈಂ ಕಾಮಿಡಿ!

  ಕೊಟ್ಟವನು ಕೋಡಂಗಿ, ಇಸ್ಕೊಂಡವನು ವೀರಭದ್ರ. ಊರಿನವರಿಗೆಲ್ಲಾ ನಾಮ ಹಾಕಲು ಕಳ್ಳರು ಮುಂದಾಗಿದ್ರು. ಆದರೆ ಕಳ್ಳರೇ ಕಳ್ಳರಿಗೆ ಮೋಸ ಮಾಡಿ ಬಿಟ್ಟಿದ್ರು. ಲಕ್ಷ ಕೊಟ್ಟು ಕೋಟಿ ಗಳಿಸಲು ರೆಡಿಯಾಗಿದ್ರು. ಆದ್ರೆ ಅಸಲಿ ನಕಲಿ ಆಟದಲ್ಲಿ ಎಲ್ಲಾ ತಲೆಕೆಳಗಾಗಿತ್ತು. ಕ್ರೈಂನಲ್ಲೂ ಕಾಮಿಡಿ ಇರೋ ವಿಶೇಷ ಕಥೆ ಇದು.

 • Saaligram

  state29, Nov 2018, 2:15 PM IST

  ರಾಯರ ದಿವ್ಯ ಪವಾಡ: ಸಾಲಿಗ್ರಾಮವಾದ ಪ್ರಸಾದ!

  ಮಂತ್ರಾಲಯದಲ್ಲಿ ರಾಯರನ್ನು ಪೂಜಿಸಿ ತಂದಿದ್ದ ಪ್ರಸಾದ, ಸಾಲಿಗ್ರಾಮವಾಗಿ ಪರಿವರ್ತನೆಯಾದ ಘಟನೆ, ಬಾಗಲಕೋಟೆಯಲ್ಲಿ ನಡೆದಿದೆ. ನಗರದ ವಿದ್ಯಾಗಿರಿಯ ಪ್ರಹ್ಲಾದ್ ಸೀಮಿಕೇರಿ ಕುಟುಂಬ ವಾರದ ಹಿಂದೆ ರಾಯರ ಪ್ರಸಾದ ತಂದಿದ್ದರು.

 • Jayashree

  state27, Nov 2018, 1:14 PM IST

  ವಿಧಾನಸೌಧ ಬೀಗ ಒಡೆದ ದೇವೇಗೌಡರು ಗೂಂಡಾ ಅಲ್ವೇ?: ಜಯಶ್ರೀ ಸವಾಲ್!

  ಕಬ್ಬಿಗೆ ಬೆಂಬಲ ಬೆಲೆ ನಿಗದಿಗಾಗಿ ಆಗ್ರಹಿಸಿ ನಡೆದಿದ್ದ ರೈತ ಪ್ರತಿಭಟನೆ ವೇಳೆ, ರೈತರನ್ನು ದರೋಡೆಕೋರರು ಎಂದು ಜರೆದಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ರೈತ ಮಹಿಳೆ ಜಯಶ್ರೀ ಗುರನ್ನವರ್ ಟಾಂಗ್ ನೀಡಿದ್ದಾರೆ.

 • Youth Congress

  state23, Nov 2018, 7:25 PM IST

  ಲೋಕ ಸಮರಕ್ಕೆ ಕಾಂಗ್ರೆಸ್ ಯೂಥ್ ಘಟಕದ ಹೊಸ ಸ್ಟ್ರ್ಯಾಟಜಿ!

  ದೇಶದಲ್ಲಿ  ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇತ್ತ ರಾಜ್ಯದಲ್ಲಿ ಈ ಬಾರಿ ಹೆಚ್ಚು ಲೋಕಸಭಾ ಕ್ಷೇತ್ರ ಗೆಲ್ಲಲು ಕೈ ಪಾಳಯ ಇನ್ನಿಲ್ಲದ ಕಸರತ್ತು ಶುರು ಮಾಡಿದೆ.  ಕಳೆದ ಬಾರಿ ಲೋಕ ಸಮರದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೂಥ್ ಐಕಾನ್ ಮೋಡಿ ಮಾಡಿ, ಯುವಕರಿಗೆ ಹಲವು ಭರವಸನ್ನೇ ಕೊಟ್ಟಿದ್ದರು. 

 • bagalkot Farmer

  state22, Nov 2018, 11:50 AM IST

  ಪ್ರಧಾನಿ ಮೋದಿಗೆ ಬಾಗಲಕೋಟೆಯ ರೈತನ ಟ್ವೀಟ್ ಏಟು..!

  ಈರುಳ್ಳಿ ಬೆಲೆ ಕುಸಿತದ ಬಗ್ಗೆ ಗಮನಹರಿಸಿ ಎಂದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮದ ಪ್ರಶಾಂತ್​ ಎನ್ನುವರು ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಮಾಡಿದ್ದಾರೆ. ​

 • AVM machine

  Bagalkot22, Nov 2018, 9:54 AM IST

  ಜಮಖಂಡಿ ಉಪಚುನಾವಣೆ: 'ಮತ ಎಣಿಕೆ ವೇಳೆ ಇವಿಎಂ ಬದಲು’

  ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಚುನಾವಣಾ ನಿಯಮ ಉಲ್ಲಂಘನೆಯಾಗಿದೆ ಎಂದು ಪಕ್ಷೇತರ ಪರಾಜಿತ ಅಭ್ಯರ್ಥಿ ರವಿ ಶಿವಪ್ಪ ಪಡಸಲಗಿ ಆರೋಪಿಸಿದ್ದಾರೆ.