ಹೊಸ ಟ್ರಾಫಿಕ್ ನಿಯಮ  

(Search results - 12)
 • Automobile2, Oct 2019, 7:58 PM IST

  ಹೊಸ ಟ್ರಾಫಿಕ್ ನಿಯಮ; ಹೊರಬಿತ್ತು ಕುತೂಹಲಕಾರಿ ಮಾಹಿತಿ!

  ಹೊಸ ಟ್ರಾಫಿಕ್ ನಿಯಮಕ್ಕೆ ಪರ ವಿರೋಧಗಳಿವೆ. ಕೆಲವರು ದುಬಾರಿ ದಂಡ ಸರಿಯಲ್ಲ ಎಂದು ವಾದಿಸಿದ್ದಾರೆ. ಹಲವರು ಉತ್ತಮ ನಿರ್ಧಾರ ಎಂದು ಪ್ರಶಂಸಿದ್ದಾರೆ. ಇದೀಗ ಹೊಸ ಟ್ರಾಫಿಕ್ ನಿಯಮದಿಂದ ಉಲ್ಲಂಘನೆ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.

 • Shane warne

  AUTOMOBILE24, Sep 2019, 8:56 PM IST

  ಟ್ರಾಫಿಕ್ ನಿಯಮ ಉಲ್ಲಂಘಿಸಿದ ಶೇನ್ ವಾರ್ನ್; 1.6 ಲಕ್ಷ ರೂ ದಂಡ, ಡ್ರೈವಿಂಗ್ ನಿಷೇಧ!

  ಭಾರತದಲ್ಲಿ ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬೆನ್ನಲ್ಲೇ ಹಲವರು ಲಕ್ಷ ಲಕ್ಷ ರೂಪಾಯಿ ದಂಡ ಪಾವತಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಸ್ಪಿನ್ ದಿಗ್ಗಜ ಶೇನ್ ವಾರ್ನ್ ಬರೋಬ್ಬರಿ 1.6 ಲಕ್ಷ ರೂಪಾಯಿ ದಂಡ ಕಟ್ಟಿದ್ದಾರೆ. ಇಷ್ಟೇ ಅಲ್ಲ ಒಂದು ವರ್ಷ ಡ್ರೈವಿಂಗ್ ನಿಷೇಧದ ಶಿಕ್ಷೆಯನ್ನು ಪಡೆದಿದ್ದಾರೆ.

 • NEWS24, Sep 2019, 8:20 AM IST

  ವಾಹನ ಸವಾರರಿಗೆ ಕೇಂದ್ರದಿಂದ ಮತ್ತೊಂದು ಶಾಕ್‌!

  ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಭಾರೀ ದಂಡ ವಿಧಿಸುವ ಕಾಯ್ದೆಯನ್ನು ಇತ್ತೀಚೆಗೆ ಜಾರಿ ಮಾಡಿದ್ದ ಕೇಂದ್ರ ಸರ್ಕಾರ, ವಾಹನಗಳ ಮಾಲೀಕರಿಗೆ ಮತ್ತೊಂದು ಶಾಕ್‌ ನೀಡುವ ಸಾಧ್ಯತೆಯಿದೆ.

 • Traffic Police Bangalore
  Video Icon

  AUTOMOBILE21, Sep 2019, 8:27 PM IST

  ಟ್ರಾಫಿಕ್ ಪೊಲೀಸರ ವಿರುದ್ದ ಬೆಂಗಳೂರಿಗರ ಪ್ರತಿಭಟನೆ; ಕಿಡಿಗೇಡಿಗಳು ವಶಕ್ಕೆ!

  ಬೆಂಗಳೂರು(ಸೆ.21): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ಪೊಲೀಸರ ವಿರುದ್ದ ಆಕ್ರೋಶಗಳು ಹೆಚ್ಚಾಗುತ್ತಿದೆ. ಇದೀಗ  ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕುಡಿದು ವಾಹನ ಟೋವಿಂಗ್ ಮಾಡಿದ್ದಾರೆ ಅನ್ನೋ ವದಂತಿಯಿಂದ  ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದ ಘಟನೆ ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿ ನಡೆದಿದೆ. ಹೀಗಾಗಿ ಸಾರ್ವಜನಿಕರ ಸಮ್ಮುಖದಲ್ಲೇ ಆಲ್ಕೋಹಾಲ್ ಚೆಕ್ ಮಾಡಲಾಯಿತು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ ನೋಡಿ.

 • RTo Office

  AUTOMOBILE13, Sep 2019, 8:49 PM IST

  ಹೊಸ ಟ್ರಾಫಿಕ್ ನಿಯಮ; ಕಲಬುರಗಿ RTO ಕಚೇರಿ ಮುಂದೆ ಫುಲ್ ಕ್ಯೂ!

  ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ RTO ಕಚೇರಿ, ಎಮಿಶನ್ ಟೆಸ್ಟ್, ಇನ್ಶೂರೆನ್ಸ್ ನವೀಕರಣ ಸೇರಿದಂತೆ ಹಲವು ಕಚೇರಿಗಳು ಜನರಿಂದ ತುಂಬಿ ತುಳುಕುತ್ತಿದೆ. ಸಂಜೆ ಕಚೇರಿ ಬಾಗಿಲು ಹಾಕಿದರೂ ಜನರು ಕ್ಯೂ ಮುಗಿಯುತ್ತಿಲ್ಲ. 

 • motorcycle rider

  AUTOMOBILE10, Sep 2019, 1:11 PM IST

  ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

  ಹೊಸ ನಿಯಮ ಜಾರಿಯಾದ ಬಳಿಕ ವಾಹನ ಹತ್ತೊ ಮೊದಲು ಸವಾರರು ಎರಡೆರಡು ಬಾರಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರಣ ದುಬಾರಿ ದಂಡಕ್ಕಿಂತ ನಿಯಮ ಪಾಲನೆ ಲೇಸು ಅನ್ನೋ ಅಭಿಪ್ರಾಯ ಮೂಡುತ್ತಿದೆ. ಇದೀಗ ದಾಖಲೆ, ಸಿಗ್ನಲ್ ಜಂಪ್ ಮಾತ್ರವಲ್ಲ ನೀವು ಧರಿಸೋ ಚಪ್ಪಲ್‌ನಿಂದಲೂ ನಿಮಗೆ ದಂಡದ ಹೊರೆ ಬೀಳಲಿದೆ

 • traffic police

  AUTOMOBILE7, Sep 2019, 9:05 PM IST

  ಹೊಸ ಟ್ರಾಫಿಕ್ ರೂಲ್ಸ್ ಜಾರಿ; 51 ಪೊಲೀಸರಿಂದ ನಿಯಮ ಉಲ್ಲಂಘನೆ!

  ದೇಶದಲ್ಲಿ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಹೀಗಾಗಿ ಎಚ್ಚರವಹಿಸವುದು ಅಗತ್ಯ. ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿರುವ ಬೆನ್ನಲ್ಲೇ ನಿಯಮ ಪಾಲಿಸಬೇಕಾದ ಪೊಲೀಸರೇ ನಿಯಮ ಉಲ್ಲಂಘಿಸಿದ್ದಾರೆ. 

 • 07 top10 stories

  NEWS7, Sep 2019, 4:36 PM IST

  ISRO ಬೆನ್ನಿಗೆ ನಿಂತ ಭಾರತ, ಶಾರೂಕ್ ಮಗಳಿಗೆ ಟ್ರೋಲ್ ಕಾಟ; ಇಲ್ಲಿವೆ ಸೆ.07ರ ಟಾಪ್ 10 ಸುದ್ದಿ!

  ಚಂದ್ರಯಾನ 2 ಅಂತಿಮ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡ ಕಾರಣ ISRO ಮಹತ್ವಾಕಾಂಕ್ಷೆಯ ಯೋಜನೆಗೆ ಸಣ್ಣ ತೊಡಕಾಗಿದೆ. ಆದರೆ ಇಸ್ರೋ ವಿಜ್ಞಾನಿಗಳ ಪರಿಶ್ರಮ ಹಾಗೂ ಪ್ರಯತ್ನವನ್ನು ಪ್ರಧಾನಿ ಮೋದಿ ಸೇರಿದಂತೆ ಇಡೀ ಭಾರತವೇ ಕೊಂಡಾಡಿದೆ. ಇಸ್ರೋ ವಿಜ್ಞಾನಿಗಳಿಗೆ ಧರ್ಯ ತುಂಬಿದ ಮೋದಿಯನ್ನು ತಬ್ಬಿ ಹಿಡಿದ ಇಸ್ರೋ ಅಧ್ಯಕ್ಷ ಕೆ ಶಿವನ್ ಬಿಕ್ಕಿ ಬಿಕ್ಕಿ ಅತ್ತರು. ದೇಶವೆ ಚಂದ್ರಯಾನ2 ಸಾಧನೆಯ ಗುಂಗಿನಲ್ಲಿದ್ದರೆ, ಇತ್ತ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರಿ ಸುಹಾನ್ ಖಾನ್‌ಗೆ ಟ್ರೋಲಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಹೊಸ ಟ್ರಾಫಿಕ್ ನಿಯಮ ಜಾರಿಯಾಗಿ 7 ದಿನಗಳಾದರೂ ದಂಡದ ಅಬ್ಬರ ಮತ್ತೆ ಸದ್ದು ಮಾಡುತ್ತಿದೆ.  ಸೆ.07 ರಂದು ಸಂಚಲನ ಮೂಡಿಸಿದ ಹಲವು ಸುದ್ದಿಗಳಲ್ಲಿ ಟಾಪ್ 10 ಸುದ್ದಿ ಇಲ್ಲಿವೆ. 
   

 • motor vehicle act
  Video Icon

  AUTOMOBILE6, Sep 2019, 6:23 PM IST

  ಹೊಸ ಟ್ರಾಫಿಕ್ ರೂಲ್ಸ್; ಚನ್ನರಾಯಪಟ್ಟಣದ ಸ್ವಾಮಿಗೆ 10 ಸಾವಿರ ರೂ ದಂಡ!

  ಚನ್ನರಾಯಪಟ್ಟಣ(ಸೆ.06): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ವಾಹನ ಸವಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.  ನಿಯಮ ಗಂಭೀರವಾಗಿ ಪರಿಗಣಿಸದ ಹಲವರು ದುಬಾರಿ ದಂಡ ಕಟ್ಟಿ ಸಾಕಪ್ಪ ಸಹವಾಸ ಎನ್ನುತ್ತಿದ್ದಾರೆ. ಇದೀಗ ಚನ್ನರಾಯಪಟ್ಟಣದ ತಾ.ಕೋಡಿಹಳ್ಳಿಯ ಸ್ವಾಮಿಗೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲಾಗಿದೆ. ಸ್ವಾಮಿ ನಿಯಮ ಉಲ್ಲಂಘನೆ ಹಾಗೂ ದಂಡದ ಮಾಹಿತಿ ಇಲ್ಲಿದೆ.

 • yeddyurappa

  ENTERTAINMENT6, Sep 2019, 4:29 PM IST

  ರಸ್ತೆ ಗುಂಡಿಗಳಿಗೆ ನಾವೆಷ್ಟು ಫೈನ್ ಹಾಕಬೇಕು? ಸಿಎಂಗೆ ಸೋನು ಗೌಡ ಚಾಲೆಂಜ್!

  ದೇಶದೆಲ್ಲೆಡೆ ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಜಾರಿಯಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲೂ ಕಟ್ಟು ನಿಟ್ಟಾಗಿ ಹೊಸ ನಿಯಮದನ್ವಯ ದಂಡ ವಸೂಲಿ ಮಾಡಲಾಗುತ್ತಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ನೂತನ ನಿಯಮ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇಷ್ಟಾದರೂ ನಿಯಮ ಉಲ್ಲಂಘಿಸಿ ಹಲವು ಕಡೆ ಭಾರಿ ಮೊತ್ತದ ದಂಡ ಕಟ್ಟಿದ ಘಟನೆ ವರದಿಯಾಗುತ್ತಿದೆ.

 • Nitin Gadkari

  AUTOMOBILE4, Sep 2019, 9:46 PM IST

  ಹೊಸ ಟ್ರಾಫಿಕ್ ನಿಯಮ; ಟ್ರೋಲ್ ಆಯ್ತು ಸಾರಿಗೆ ಸಚಿವರ ಹೆಲ್ಮೆಟ್ ರಹಿತ ಪ್ರಯಾಣ!

  ಹೊಸ ಟ್ರಾಫಿಕ್ ನಿಯಮ ವಾಹನ ಚಾಲಕರು, ಸವಾರರನ್ನು ಹೈರಾಣಾಗಿಸಿದೆ. ತಮ್ಮ ವಾಹನದ ಬೆಲೆಗಿಂತೆ ಹೆಚ್ಚು ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರ ಬೆನ್ನಲ್ಲೇ ನಿಯಮ ಜಾರಿಗೊಳಿಸಿದ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಲ್ಮೆಟ್ ರಹಿತ ಸ್ಕೂಟಿ ಚಲಾಯಿಸಿ ಟ್ರೋಲ್ ಆಗಿದ್ದಾರೆ. ಸಾಮಾನ್ಯರಿಗೆ ದಂಡ ವಿಧಿಸುವ ಪೊಲೀಸರು ಸಾರಿಗೆ ಸಚಿವರಿಗೆ ದಂಡ ಯಾಕೆ ವಿಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. 

 • kolkata Police

  AUTOMOBILE29, Aug 2019, 7:34 PM IST

  ದೇಶದೆಲ್ಲಡೆ ಹೊಸ ಟ್ರಾಫಿಕ್ ನಿಯಮ; ಪ.ಬಂಗಾಳಕ್ಕೆ ಅನ್ವಯವಾಗಲ್ಲ!

  ಸೆಪ್ಟೆಂಬರ್ 1 ರಿಂದ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ 10 ಪಟ್ಟು ಹೆಚ್ಚು ದಂಡ ಪಾವತಿಸಬೇಕು. ಹೊಸ ಟ್ರಾಫಿಕ್ ನಿಯಮ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ರಾಜ್ಯದ ಎಲ್ಲಾ ಪೊಲೀಸ್ ಇಲಾಖೆ ಸಜ್ಜಾಗಿದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರ ಮಾತ್ರ ಈ ನಿಯಮ ಜಾರಿಗೊಳಿಸುತ್ತಿಲ್ಲ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.