ಹೇಮಾವತಿ  

(Search results - 33)
 • <p>Dead </p>

  Karnataka Districts2, May 2020, 9:06 AM

  ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸೈನಿಕ ಸಹಿತ ಇಬ್ಬರ ಸಾವು

  ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಕಟ್ಟೆಪುರ ಹೇಮಾವತಿ ನದಿ ಹಿನ್ನೀರಿನಲ್ಲಿ ಈಜಲು ಹೋದ ಸೈನಿಕ ಹಾಗೂ ಆತನ ಸಂಬಂಧಿ ಸೇರಿದಂತೆ ಇಬ್ಬರು ನೀರುಪಾಲಾದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

 • Karnataka Districts1, May 2020, 4:27 PM

  'ಹೆಚ್ಚು ಕಡಿಮೆ ಆದ್ರೆ ನಾವ್ ಜವಾಬ್ದಾರರಲ್ಲ'  ರೇವಣ್ಣ ಖಡಕ್ ಎಚ್ಚರಿಕೆ

  ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಎಚ್‌.ಡಿ..ರೇವಣ್ಣ  ಹೇಮಾವತಿ ನೀರಿನ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತುಮಕೂರಿಗೆ ನೀರು ಬಿಡಲು ಅಡ್ಡಿ ಮಾಡುತ್ತಿದ್ದಾರೆ ಎಂದು ಕೆಲವರು ನಮ್ಮ ಕುಟುಂಬದ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ.  ಸರ್ಕಾರ ಮೂರು ಜಿಲ್ಲೆಯ ರೈತರ ಹಿತ ಕಾಪಾಡಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ.

 • paddy field

  Karnataka Districts12, Dec 2019, 2:20 PM

  ಮಂಡ್ಯ: ಪ್ರತಿ ಕ್ವಿಂಟಲ್‌ ಭತ್ತಕ್ಕೆ ಕನಿಷ್ಠ ದರ 1,815..!

  ಕೃಷ್ಣರಾಜಸಾಗರ ಮತ್ತು ಹೇಮಾವತಿ ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ಹಾಗೂ ಮದ್ದೂರಿನ ಕೆಲ ಭಾಗಗಳಲ್ಲಿ ರೈತರು ಭತ್ತ ಬೆಳೆದು ಕಟಾವು ಮತ್ತು ಒಕ್ಕಣೆ ಕಾರ್ಯ ಆರಂಭಿಸಿದ್ದಾರೆ. ಖರೀದಿ ಕೇಂದ್ರಗಳನ್ನು ಆರಂಭಿಸಲು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

 • Road

  Tumakuru23, Oct 2019, 10:21 AM

  ತುಮಕೂರು: ಧಾರಾಕಾರ ಮಳೆಗೆ ಹೆದ್ದಾರಿ ಬಿರುಕು

  ಗುಬ್ಬಿ ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ನಿಟ್ಟೂರು ಬಳಿ ಹೇಮಾವತಿ ನಾಲೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಬಿರುಕು ಬಿಟ್ಟಿದೆ. ತುಮಕೂರಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ರಸ್ತೆ ಬಿರುಕು ಬಿಟ್ಟಿದ್ದರಿಂದ ರಸ್ತೆಯಲ್ಲಿ ಕೆಲಕಾಲ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ತೀವ್ರ ಸಂಚಾರದ ಸಮಸ್ಯೆ ಉಂಟಾಯಿತು.

 • Canal

  Karnataka Districts1, Oct 2019, 2:38 PM

  ತುಮಕೂರು: ಹೇಮಾವತಿ ನಾಲಾ ಕಚೇರಿಗೆ ರೈತರಿಂದ ಬೀಗ

  ತುಮಕೂರಿನ ಹೇಮಾವತಿ ಕಾನಲ್‌ ಕಚೇರಿಗೆ ರೈತರು ಬೀಗ ಜಡಿದಿದ್ದಾರೆ. ಕಾನಲ್‌ ಮಾಡುವ ನಿಟ್ಟಿನಲ್ಲಿ ಏಕಾಏಕಿ ರೈತರ ಜಮೀನಿಗೆ ಪ್ರವೇಶ ಮಾಡಿ ಯಾವುದೇ ನೋಟಿಸ್‌ ನೀಡದೆ, ಪರಿಹಾರ ನೀಡದೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಹೇಮಾವತಿ ಇಲಾಖಾ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

 • GS Basavaraj

  Karnataka Districts22, Sep 2019, 7:38 AM

  ಕೆರೆಗಳ ಭರ್ತಿಗೆ ಮೊದಲ ಆದ್ಯತೆ: ಸಂಸದ ಬಸವರಾಜು

  ಹೇಮಾವತಿ ನೀರನ್ನು ನಾಲೆಯ ಕೊನೆಯ ಭಾಗದ ಪ್ರದೇಶದಲ್ಲಿರುವ ಕೆರೆಗಳನ್ನು ಭರ್ತಿ ಮಾಡಲು ಮೊದಲ ಆದ್ಯತೆ ನೀಡಬೇಕೆಂದು ಸಂಸದ ಜಿ.ಎಸ್‌.ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಾಲೆಯ ನೀರನ್ನು ನಾಲೆಗೆ ಸಂಪರ್ಕವಿರುವ ಎಲ್ಲಾ ಕೆರೆಗಳನ್ನು ತುಂಬಿಸಿಕೊಂಡರೆ ಮುಂದಿನ ಬೇಸಿಗೆಗೆ ನೀರಿನ ಬವಣೆ ತಲೆದೋರುವುದಿಲ್ಲ ಎಂದು ಹೇಳಿದರು.  

 • Bhadra

  Karnataka Districts29, Aug 2019, 12:33 PM

  ತುಮಕೂರು : ಭದ್ರಾ ನಾಲೆಯ ಮಾರ್ಗ ಬದಲಾವಣೆ ?

  ಭದ್ರಾ ನಾಲೆಯ ನೀರು ಶಿರಾ ತಾಲೂಕಿಗೆ ಹರಿಯಲು ನಾಲೆಯ ತಾಂತ್ರಿಕತೆ ಬದಲಿಸುವುವ ಚಿಂತನೆಯೊಂದು ನಡೆದಿದ್ದು, ಈ ಸಂಬಂಧ ಭೌಗೋಳಿಕ ನಕ್ಷೆಯನ್ನು ತಯಾರಿಸಿದ್ದಾಗಿ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

 • hassan

  Karnataka Districts28, Aug 2019, 1:33 PM

  ಹಾಸನ: ಮುಳುಗಿದ ರೋಮನ್ ಕ್ಯಾಥೋಲಿಕ್ ಚರ್ಚ್

  ಹಾಸನ ಜಿಲ್ಲೆಯ ಶೆಟ್ಟಿಹಳ್ಳಿ ರೋಮನ್ ಚರ್ಚ್ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿದೆ. ವಾರದ ಹಿಂದೆಯೇ ಮುಕ್ಕಾಲು ಭಾಗದಷ್ಟು ಮುಳುಗಿದ್ದ ಚರ್ಚ್‌ ಈಗ ಸಂಪೂರ್ಣ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ಜಲಾಶಯದ ನೀರು ಕಡಿಮೆಯಾದರೆ ಚರ್ಚ್ ಬಳಿ ಹೋಗಬಹುದು.

 • Hema

  NEWS26, Aug 2019, 7:45 AM

  ಬಲವಂತವಾಗಿ ಗೇಟ್ ತೆರೆದು ನೀರು ಹರಿಸಿದ ಮಾಜಿ ಶಾಸಕ ಕೃಷ್ಣಪ್ಪ!

  ನಾಲಾ ಗೇಟ್‌ ತೆರೆದು ಕೆರೆಗೆ ನೀರು ಹರಿಸಿದ ಕೃಷ್ಣಪ್ಪ| ಶಾಸಕರು, ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ| ಸುಮಾರು ಒಂದು ಅಡಿ ಎತ್ತರಕ್ಕೆ ಗೇಟ್‌ ಓಪನ್‌

 • Karnataka Districts11, Aug 2019, 2:05 PM

  ಕಾಫಿ ನಾಡಿಗೂ ಮಾಫಿ ನೀಡಲಿಲ್ಲ ಮಳೆರಾಯ!

  ಕೊಡಗಿನಲ್ಲಿ ಕಳೆದ ನಲವತ್ತೈದು ವರ್ಷಗಳಲ್ಲಿ ಆರು ದಿನದ ಅವಧಿಯಲ್ಲಿ ಸುಮಾರು ಮುವ್ವತ್ತರಿಂದ ಎಂಬತ್ತು ಇಂಚು ಮಳೆಯಾಗಿರುವುದು ಇದೇ ಮೊದಲ ಬಾರಿ. ಹವಾಮಾನ ಇಲಾಖೆಯನ್ನು ಹೊರತುಪಡಿಸಿದರೆ ಕಾಫಿ ಬೆಳೆಗಾರರು ಕಳೆದ ನೂರು ವರ್ಷಗಳ ದಿನವಾರು ಮಳೆಯ ದಾಖಲೆಯನ್ನು ಇಟ್ಟಿರುವುದನ್ನು ಪರಿಶೀಲಿಸಿದಾಗಲೂ ಇಂತಹ ಘಟನೆ ಹಿಂದೆ ಆಗಿಲ್ಲ. ಸಕಲೇಶಪುರದಲ್ಲಿ ಹರಿಯುವ ಜೀವನದಿ ಹೇಮಾವತಿ ನಾಲ್ಕು ದಿನಗಳಲ್ಲಿ ತನ್ನ ಮಟ್ಟ ಏರಿಸಿಕೊಂಡ ಬಗೆಯಂತೂ ಪ್ರಕೃತಿಯ ರೌದ್ರತೆಗೆ ಸಾಕ್ಷಿ.

 • cauvery flood

  Karnataka Districts11, Aug 2019, 9:59 AM

  ಮಂಡ್ಯ: ಮನೆ, ಜಮೀನಿಗೆ ನುಗ್ಗಿದಳು ಹೇಮೆ

  ಕಿಕ್ಕೇರಿಯಲ್ಲಿ ಹೇಮಾವತಿ ನದಿಗೆ ಲಕ್ಷಗಟ್ಟಲೆ ಕ್ಯುಸೆಕ್‌ ನೀರು ಬಿಟ್ಟಿರುವ ಪರಿಣಾಮ ಸಮೀಪದ ಮಂದಗೆರೆ ಸೇರಿ ಆಸು-ಪಾಸಿನ ಗ್ರಾಮಗಳ ಮನೆ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಬೇವಿನಹಳ್ಳಿ ಗ್ರಾಮದಲ್ಲಿ ಅಂಕನಾಥೇಶ್ವರ ದೇವಾಲಯ ಮುಳುಗಡೆಯಾಗಿದೆ. ಮಂದಗೆರೆಯಲ್ಲಿರುವ ಅಕ್ಕಿಹೆಬ್ಬಾಳು, ಹೊಳೆನರಸೀಪುರ ಮೊದಲಾದ ಹತ್ತಾರು ಗ್ರಾಮಗಳಿಗೆ ಸಂಪರ್ಕಿಸುತ್ತಿದ್ದ ಸೇತುವೆ ಮೇಲೆ ನಿರು ಹರಿಯುತ್ತಿದೆ. ಇದರಿಂದ ಸಾರ್ವಜನಿಕ ಸಂಪರ್ಕ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

 • Karnataka Districts11, Aug 2019, 8:33 AM

  ಹೇಮೆ ಒಡಲಿಗೆ 1ಲಕ್ಷ ಕ್ಯುಸೆಕ್‌ ನೀರು: ತಗ್ಗು ಪ್ರದೇಶ ಜಲಾವೃತ

  ಕೆ.ಆರ್‌.ಪೇಟೆಯಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ನದಿಗೆ ಸುಮಾರು 1 ಲಕ್ಷ ಕ್ಯುಸೆಕ್‌ ನೀರು ಬಿಟ್ಟಿರುವ ಕಾರಣ ತಾಲೂಕಿನ ಅನೇಕ ಹಳ್ಳಿಗಳ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ನೀರು ನುಗ್ಗಿರುವುದರಿಂದ ಕೋಟ್ಯಂತರ ರು. ಬೆಳೆ ನಷ್ಟವಾಗಿದೆ.

 • Chikkamagalur
  Video Icon

  Karnataka Districts8, Aug 2019, 7:16 PM

  ಪ್ರವಾಹದಿಂದ ಹೇಮಾವತಿ ನದಿಯಲ್ಲಿ ಕೊಚ್ಚಿಹೋದ ಯುವಕ

  ರಾಜ್ಯದ ಹಲವು ಜೆಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಚಿಕ್ಕಮಗಳೂರಿನಲ್ಲಿ ಯುವಕನೊಬ್ಬ ಹೇಮಾವತಿ ನದಿಯಲ್ಲಿ ಕೊಚ್ಚಿಹೋಗಿದ್ದಾನೆ. 

 • Hemavathi River

  Karnataka Districts8, Aug 2019, 3:33 PM

  ತುಮಕೂರು: ಹೇಮಾವತಿಯಿಂದ ಹಾಲ್ಕುರಿಕೆ ಕೆರೆಗೆ ನೀರು

  ಹಾಲ್ಕುರಿಕೆ ಕೆರೆ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಜೀವನಾಡಿಯಾಗಿದ್ದು, ಮುಂದಿನ ಒಂದು ವರ್ಷದೊಳಗೆ ಹಾಲ್ಕುರಿಕೆ ಕೆರೆಗೆ ಹೇಮಾವತಿ ನೀರನ್ನು ಹರಿಸಲಾಗುವುದು ಎಂದು ಶಾಸಕ ಬಿ.ಸಿ. ನಾಗೇಶ್‌ ತಿಳಿಸಿದರು. ಈ ಹಿಂದೆ ಕುಡಿವ ನೀರಿನ ಯೋಜನೆ ವ್ಯಾಪ್ತಿಯಲ್ಲಿ ಹಾಲ್ಕುರಿಕೆ ಮೂಲಕ ಹೇಮೆ ನಾಲೆಯಿಂದ ಕೆರೆ ತುಂಬಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಈ ಯೋಜನೆ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು.

 • ಮಡಿಕೇರಿ-ಸೋಮವಾರಪೇಟೆ ರಾಜ್ಯ ಹೆದ್ದಾರಿ

  NEWS7, Aug 2019, 7:58 AM

  ಮಲೆನಾಡಲ್ಲಿ ಮಳೆ ಅಬ್ಬರಕ್ಕೆ ಜನಜೀವನ ತತ್ತರ

   ರಾಜ್ಯದ ಮಲೆನಾಡು ಜಿಲ್ಲೆಗಳಾದ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ವ್ಯಾಪ್ತಿಯಲ್ಲಿ ಆಶ್ಲೇಷ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಪ್ರಮುಖ ಜೀವನದಿಗಳಾದ ಕಾವೇರಿ, ಹೇಮಾವತಿ, ಭದ್ರಾ ಸೇರಿದಂತೆ ಅನೇಕ ನದಿತೊರೆಗಳು ಅಪಾಯ ಮಟ್ಟಮೀರಿ ಹರಿಯುತ್ತಿದ್ದು ಕಾವೇರಿ ಸಂಗಮಕ್ಷೇತ್ರ ಕೊಡಗು ಜಿಲ್ಲೆಯ ಭಾಗಮಂಡಲ ಪ್ರದೇಶ ಈ ಮಳೆಗಾಲದಲ್ಲಿ ಇದೇ ಪ್ರಥಮ ಬಾರಿ ಮುಳುಗಡೆಯಾಗಿದೆ.