ಹುಲಿಗೆಮ್ಮ ದೇವಸ್ಥಾನ
(Search results - 7)Karnataka DistrictsDec 3, 2020, 9:44 AM IST
ಕೊಪ್ಪಳ: ಬ್ಯಾಂಕಲ್ಲಿ ಕೊಳೆಯುತ್ತಿದೆ ಹುಲಿಗೆಮ್ಮ ದೇಗುಲದ 46 ಕೋಟಿ
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಸ್ಥಾನ ಭಕ್ತಸಾಗರವನ್ನೇ ಹೊಂದಿದೆ. ಭಕ್ತರು ನೀಡಿದ ಕಾಣಿಕೆ ಮತ್ತು ದೇವಸ್ಥಾನಕ್ಕೆ ಬಂದಿರುವ ಆದಾಯಯದಿಂದ ಬರೋಬ್ಬರಿ 46 ಕೋಟಿ ಬ್ಯಾಂಕ್ನಲ್ಲಿ ಜಮೆಯಾಗಿದೆ. ಇದನ್ನು ಬಳಸಿ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಮಾಸ್ಟರ್ ಪ್ಲಾನ್ಗೆ ಸರ್ಕಾರ ಅಸ್ತು ಎನ್ನುತ್ತಲೇ ಇಲ್ಲ.
Karnataka DistrictsNov 6, 2020, 12:38 PM IST
ಕೊಪ್ಪಳ: ತೆರೆದ ಹುಲಿಗೆಮ್ಮ ದೇವಸ್ಥಾನದ ಬಾಗಿಲು, ಹರಿದು ಬಂದ ಭಕ್ತರು
ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಬರೋಬ್ಬರಿ 8 ತಿಂಗಳ ಕಾಲ ಬಾಗಿಲು ಮುಚ್ಚಿದ್ದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನದ ಬಾಗಿಲು ಗುರುವಾರ ತೆರೆದಿದ್ದು, ಭಕ್ತರು ದರ್ಶನಕ್ಕಾಗಿ ಹರದು ಬಂದಿದ್ದಾರೆ.
Karnataka DistrictsNov 4, 2020, 12:13 PM IST
ಕೊಪ್ಪಳ: ಬರೋಬ್ಬರಿ 7 ತಿಂಗಳ ಬಳಿಕ ಭಕ್ತರಿಗೆ ಹುಲಿಗೆಮ್ಮ ದೇವಿ ದರ್ಶನ ಭಾಗ್ಯ..!
ಕೊರೋನಾ ಸೋಂಕಿನ ಭೀತಿಯಿಂದಾಗಿ ಕಳೆದ ಏಳು ತಿಂಗಳುಗಳ ಕಾಲ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದ್ದ ಶ್ರೀ ಹುಲಿಗೆಮ್ಮ ದೇವಿಯ ದರ್ಶನಕ್ಕೆ ನ.5 ರಿಂದ ಅವಕಾಶ ಲಭಿಸಲಿದೆ. ಈ ವಿಷಯವನ್ನು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಮಪ್ಪ ಅವರು ‘ಕನ್ನಡಪ್ರಭ’, ಸುವರ್ಣ. ಕಾಂ ಗೆ ಖಚಿತಪಡಿಸಿದ್ದಾರೆ.
Karnataka DistrictsNov 2, 2020, 12:54 PM IST
ಕೊಪ್ಪಳ: ಹುಲಿಗೆಮ್ಮ ದೇವಸ್ಥಾನ ಬಳಿ ತುಂಗಭದ್ರಾ ನದಿ ಮಲಿನ
ಕೋವಿಡ್ನಿಂದಾಗಿ ಆದ ಲಾಕ್ಡೌನ್ನಿಂದ ದೇಶದ ಬಹುತೇಕ ನದಿ, ಕೊಳ್ಳಗಳು ಮಾಲಿನ್ಯಮುಕ್ತವಾಗಿವೆ. ಆದರೆ, ಹುಲಿಗೆಮ್ಮ ದೇವಸ್ಥಾನ ಬಳಿ ತುಂಗಭದ್ರಾ ನದಿಯುದ್ದಕ್ಕೂ ಈ ಕೋವಿಡ್ ಸಂಕಷ್ಟದಲ್ಲಿಯೂ ಕಸದ ರಾಶಿಯೇ ಬಿದ್ದಿದ್ದು, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Karnataka DistrictsOct 27, 2020, 11:32 AM IST
ಹುಲಿಗಿ, ಅಂಜನಾದ್ರಿಯಲ್ಲಿ ಸಹಸ್ರಾರು ಭಕ್ತರು: ಸಾಮಾಜಿಕ ಅಂತರವೂ ಇಲ್ಲ, ಮುನ್ನೆಚ್ಚರಿಕೆಯೂ ಇಲ್ಲ..!
ಸಾಲು ಸಾಲು ರಜೆಗಳು ಮತ್ತು ವಿಜಯದಶಮಿ ಪ್ರಯುಕ್ತ ಸುಪ್ರಸಿದ್ಧ ಹುಲಿಗೆಮ್ಮ ದೇವಸ್ಥಾನ ಹಾಗೂ ಅಂಜನಾದ್ರಿ ಬೆಟ್ಟದಲ್ಲಿ ಕಳೆದ ಮೂರು ದಿನಗಳಲ್ಲಿ ಸಹಸ್ರಾರು ಭಕ್ತರು ಆಗಮಿಸಿದ್ದರು. ಯಾವುದೇ ಸಾಮಾಜಿಕ ಅಂತರ, ಮುನ್ನೆಚ್ಚರಿಕೆ ವಹಿಸದಿರುವುದು ಕಂಡುಬಂತು.
Karnataka DistrictsSep 11, 2020, 11:58 AM IST
ಕೊಪ್ಪಳ: ಅನ್ಲಾಕ್ ಆದ್ರೂ ಭಕ್ತರಿಗೆ ದರ್ಶನ ನೀಡಿದ ಹುಲಿಗೆಮ್ಮ..!
ಉತ್ತರ ಕರ್ನಾಟಕ ಅಷ್ಟೇ ಅಲ್ಲ, ನಾನಾ ರಾಜ್ಯದಲ್ಲಿಯೂ ಅಪಾರ ಭಕ್ತರನ್ನು ಹೊಂದಿರುವ ಕೊಪ್ಪಳದ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನಕ್ಕೆ ಈಗಲೂ ಪ್ರವೇಶ ನಿಷಿದ್ಧ. ಅನ್ಲೈಕ್ 4 ಬಳಿಕವೇ ದೇವಸ್ಥಾನವನ್ನು ತೆರೆಯದಿರಲು ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ, ಭಕ್ತರು ಮಾತ್ರ ವಿವಿಧ ರೀತಿಯಲ್ಲಿ ಹುಲಿಗೆಮ್ಮ ದೇವಿಗೆ ಪೂಜಿಸುವುದನ್ನು ಪ್ರಾರಂಭಿಸಿದ್ದಾರೆ.
Karnataka DistrictsJun 7, 2020, 7:39 AM IST
ಕೊಪ್ಪಳ: ಜೂ.30ರ ವರೆಗೂ ಹುಲಿಗೆಮ್ಮ ದೇವಿಯ ದರ್ಶನ ಭಾಗ್ಯ ಇಲ್ಲ
ಜೂನ್ 8ರಿಂದ ರಾಜ್ಯಾದ್ಯಂತ ದೇವಸ್ಥಾನಗಳನ್ನು ತೆರೆಯಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನವನ್ನು ಜೂನ್ 30ರ ವರೆಗೂ ತೆರೆಯದಿರಲು ನಿರ್ಧರಿಸಲಾಗಿದೆ.