ಹುಲಿ  

(Search results - 125)
 • MTB
  Video Icon

  Politics16, Oct 2019, 8:48 PM IST

  ಹೊಸಕೋಟೆಯ ಹುಲಿ-ಸಿಂಹ ಮುಖಾಮುಖಿ: ಮುಂದೇನಾಯ್ತು ಅಂತ ವಿಡಿಯೋ ನೋಡಿ..!

  ಆಕಾಂಕ್ಷಿಯಾಗಿರುವ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತ್ತು ಶರತ್ ಬಚ್ಚೇಗೌಡ ನಡುವೆ  ಹೊಸಕೋಟೆ ಉಪಚುನಾವಣೆಯ ಬಿಜೆಪಿ ಟಿಕೆಟ್ ಗೆ ಬಿಗ್ ಫೈಟ್ ನಡೆಯುತ್ತಿದೆ. 

  ಇದರಿಂದ ಇಬ್ಬರ ನಡುವೆ ಟಾಕ್ ವಾರ್ ನಡೆದಿದ್ದು, ಉಪಚುನಾವಣೆಗೂ ಮುನ್ನವೇ ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆ.

  ಇದರ ನಡುವೆ ಇಂದು [ಬುಧವಾರ] ದೇವರ ಹಬ್ಬದಲ್ಲಿ ರಾಜಕೀಯ ಶತ್ರುಗಳಾದ ಎಂಬಿಟಿ ಹಾಗೂ ಶರತ್ ಮುಖಾಮುಖಿಯಾದರು. ಮುಂದೇನಾಯ್ತು ಎನ್ನುವುದನ್ನು ವಿಡಿಯೋನಲ್ಲಿ ನೀವೇ ನೋಡ್ಕೊಳ್ಳಿ.

 • Tiger

  Mandya16, Oct 2019, 2:45 PM IST

  ಮಂಡ್ಯ: ಮನೆಗೆ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ

  ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನರಹಂತಕ ಹುಲಿಯನ್ನು ಸೆರೆ ಹಿಡಿದಿರುವ ಬೆನ್ನಲ್ಲೇ ಇದೀಗ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಚಿರತೆ ಕಾಟ ಆರಂಭವಾಗಿದೆ. ಮನೆಯಂಗಳಕ್ಕೇ ಬಂದು ಚಿರತೆ ನಾಯಿಯನ್ನು ಹೊತ್ತೊಯ್ದಿರುವ ಘಟನೆ ಜನರನ್ನು ಆತಂಕಕ್ಕೊಳಪಡಿಸಿದೆ.

 • Bengal Tiger

  Belagavi16, Oct 2019, 11:16 AM IST

  ಖಾನಾಪುರದಲ್ಲಿ ಕುರಿಗಳ ಮೇಲೆ ಹುಲಿ ದಾಳಿ : ಆತಂಕದಲ್ಲಿ ಜನತೆ

  ಹುಲಿಯೊಂದು ತನ್ನ ಪುಟ್ಟಮರಿಯ ಜೊತೆಯಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಮೂರು ಕುರಿಗಳನ್ನು ಕೊಂದು ಹಾಕಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಹೊರವಲಯದಲ್ಲಿ ರೈತ ದೇಮಣ್ಣ ಖನಗಾಂವಿ ಅವರ ತೋಟದ ಮನೆ ಸಮೀಪ ಮಂಗಳವಾರ ನಡೆದಿದೆ.

 • Soliga Tribe

  Chamarajnagar16, Oct 2019, 11:15 AM IST

  ಆಪರೇಷನ್ ಟೈಗರ್: ಮರಹತ್ತಿ ಕುಳಿತು ಹುಲಿಯ ಜಾಡು ಹಿಡಿದ ಕಾಡಿನ ಮಕ್ಕಳು..!

  ಗುಂಡ್ಲುಪೇಟೆಯಲ್ಲಿ ನಡೆದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಹುಲಿಯ ಜಾಡನ್ನು ಪತ್ತೆ ಹಚ್ಚಿದವರು ಕಾಡಿನ ಮಕ್ಕಳು. ಹುಲಿ ಹಿಡಿಯಲು ಸೋಲಿಗರ ಮೊರೆ ಹೋದ ಅರಣ್ಯ ಇಲಾಖೆ ಹಾಗೂ ಗ್ರಾಮಸ್ಥರಿಗೆ ಕಾಡಿನ ಮಕ್ಕಳು ತಮ್ಮಿಂದಾದ ನೆರವು ನೀಡಿ ಹುಲಿಯ ಜಾಡು ಪತ್ತೆ ಹಚ್ಚಿದ್ದಾರೆ.

 • Maligemma

  Chamarajnagar16, Oct 2019, 10:47 AM IST

  ಆಪರೇಷನ್ ಟೈಗರ್ ಸಕ್ಸಸ್ ಹಿಂದೆ ಮಾಳಿಗಮ್ಮನ ಮಹಿಮೆ..!

  ನರಹಂತಹ ಹುಲಿಯನ್ನು ಹಿಡಿಯುವ ಆಪರೇಷನ್ ಟೈಗರ್ ಸಕ್ಸಸ್‌ ಆಗೋದಿಕ್ಕೆ ಕಬ್ಬೇಪುರ ಗ್ರಾಮದ ಬಳಿಯ ಮಾಳಿಗಮ್ಮನ ಅನುಗ್ರಹವೇ ಕಾರಣ ಎಂಬ ಮಾತು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕೇಳಿ ಬಂದಿದೆ. ಸತತ ಪ್ರಯತ್ನದ ನಂತರವೂ ಹುಲಿ ಸೆರೆಯಾಗದಿದ್ದಾಗ ಅಧಿಕಾರಿಗಳು ಜನರ ಒತ್ತಾಯಕ್ಕೆ ಮಣಿದು ಹರಕೆ ಹೊತ್ತಿದ್ದರು.

 • security
  Video Icon

  Bengaluru-Urban15, Oct 2019, 5:47 PM IST

  ಬಡ ಸೆಕ್ಯೂರಿಟಿ ಗಾರ್ಡ್‌ಗೆ ‘ಹುಲಿ’ಯಂತೆ ಥಳಿಸಿ ‘ಇಲಿ’ಯಂತೆ ಬಿಲ ಸೇರಿದ ಮಾಲೀಕ!

  ಬಡ ಸೆಕ್ಯೂರಿಟಿ ಗಾರ್ಡ್‌ಗಳಿಗೆ ರಾಕ್ಷಸೀಯ ರೀತಿಯಲ್ಲಿ ಥಳಿಸಿದ ವಿಡಿಯೋ ಒಂದು ವೈರಲ್ ಆಗಿದ್ದನ್ನು ನಾವು ವರದಿ ಮಾಡಿದ್ದೆವು. ಪ್ರಕರಣಕ್ಕೆ ಸಂಬಂಧಿಸಿ Bangalore Security Force (BSF) ಎಂಬ ಸೆಕ್ಯೂರಿಟಿ ಸಂಸ್ಥೆ ಮಾಲೀಕ ಸಲೀಂ ಖಾನ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.

 • Chamarajnagar15, Oct 2019, 2:35 PM IST

  ಹುಲಿ ಸೆರೆಗೆ ಹರಕೆ ಹೊತ್ತಿತ್ತಾ ಅರಣ್ಯ ಇಲಾಖೆ..?

  ಗುಂಡ್ಲುಪೇಟೆಯಲ್ಲಿ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹರಕೆ ಹೊತ್ತಿದ್ರು ಅನ್ನೋ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಅಧಿಕಾರಿ ಹರಕೆ ಹೊತ್ತ ಕಾರಣದಿಂದಲೇ ನರಹಂತಕ ಹುಲಿ ಸೆರೆಯಾಗಿದೆ ಎಂಬ ಮಾತು ಈಗ ಗುಂಡ್ಲುಪೇಟೆಯಲ್ಲಿ ಕೇಳಿ ಬರ್ತಿದೆ.

 • সৌরভ গঙ্গোপাধ্যায়ের প্রতিক্রিয়া

  Cricket15, Oct 2019, 11:19 AM IST

  BCCI ಅಧ್ಯಕ್ಷ ಹುದ್ದೆ: ದಾದಾಗೆ ಸಾಥ್ ಕೊಟ್ಟ ಹಳೆ ಹುಲಿಗಳು

  ಸೋಮ​ವಾ​ರ ಬಿಸಿ​ಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮ​ಪತ್ರ ಸಲ್ಲಿ​ಸಿದ ಗಂಗೂಲಿ, ಅಕ್ಟೋ​ಬರ್‌ 23ರಂದು ನಡೆ​ಯ​ಲಿ​ರುವ ವಾರ್ಷಿಕ ಸಾಮಾನ್ಯ ಸಭೆ ವೇಳೆ ಅಧಿ​ಕೃತವಾಗಿ ಅಧ್ಯಕ್ಷಗಾದಿ​ಗೇ​ರ​ಲಿ​ದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿ​ಸಿದ ಏಕೈಕ ಅಭ್ಯರ್ಥಿ ಗಂಗೂ​ಲಿ​ಯಾ​ಗಿ​ರುವ ಕಾರಣ, ಅವರು ಅವಿ​ರೋ​ಧ​ವಾಗಿ ಆಯ್ಕೆಯಾಗ​ಲಿ​ದ್ದಾರೆ.

 • Top 10

  News13, Oct 2019, 5:27 PM IST

  ಬಿಗ್ ಬಾಸ್ ಮನೆಯಲ್ಲಿ ಬೆಳಗೆರೆ, ಪ್ರತಾಪ, ಸರಣಿ ಗೆದ್ದ ಭಾರತ; ಇಲ್ಲಿವೆ ಅ.13ರ ಟಾಪ್ 10 ಸುದ್ದಿ!

  ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಇತ್ತ ಸೌತ್ ಆಫ್ರಿಕಾ ವಿರುದ್ದ ಟೀಂ ಇಂಡಿಯಾ 2ನೇ ಟೆಸ್ಟ್ ಗೆದ್ದು ಸರಣಿ ವಶಪಡಿಸಿಕೊಂಡಿದೆ. ಪ್ರಧಾನಿ ಮೋದಿ ದಿಢೀರ್ ತಮ್ಮ ಪ್ಲಾನ್ ಚೇಂಜ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ. ನರಭಕ್ಷಕ ಹುಲಿ ಕೊನೆಗೂ ವಶಕ್ಕೆ, ಸ್ವಚ್ಚ ಭಾರತ ಅಭಿಯಾನದಲ್ಲಿ ಬಿಜೆಪಿ ಬಿನ್ನಮತ ಸೇರಿದಂತೆ ಭಾನುವಾರ(ಅ.13) ಸುದ್ದಿ ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.
   

 • Tiger
  Video Icon

  Chamarajnagar13, Oct 2019, 3:56 PM IST

  Video: 5ನೇ ದಿನದ ಆಪರೇಷನ್ ಸಕ್ಸಸ್, ನರಭಕ್ಷಕ ಹುಲಿ ಕೊನೆಗೂ ಅರೆಸ್ಟ್..!

  ಜಿಲ್ಲೆಯ ಗುಂಡ್ಲುಪೇಟೆ ರೈತರ ಮೇಲೆ ದಾಳಿ ನಡೆಸಿ ನಾಪತ್ತೆಯಾಗಿದ್ದ ನರಭಕ್ಷಕ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹುಂಡೀಪುರದಲ್ಲಿ ವಾರದ ಹಿಂದೆ ಹುಲಿ ರೈತನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನರಭಕ್ಷಕ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ  ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

 • Bengal Tiger

  Karnataka Districts13, Oct 2019, 2:48 PM IST

  ಹುಂಡಿಪುರ, ಚೌಡಹಳ್ಳಿ ಸುತ್ತಲು ನಿಷೇಧಾಜ್ಞೆ

  ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹುಲಿ ಹಿಡಿಯಲು ಕಾರ್ಯಾಚರಣೆ ನಡೆಯುತ್ತಿರುವ ಕಾರಣ ಹುಂಡಿಪುರ ಮತ್ತು ಚೌಡಹಳ್ಳಿ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೂಬಿಂಗ್‌ ಕಾರ್ಯಾಚರಣೆ ಮುಕ್ತಾಯಗೊಳುವವರೆಗೆ ಸದರಿ ಗ್ರಾಮಗಳ ಸುತ್ತಲೂ ನಿಷೇಧಾಜ್ಞೆ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 • CC Patil

  state13, Oct 2019, 9:05 AM IST

  ನರಹಂತಕ ಹುಲಿ ಹಿಡಿಯಲು 120 ಸಿಬ್ಬಂದಿ, 200 ಕ್ಯಾಮೆರಾ!

  ನರಹಂತಕ ಹುಲಿ ಹಿಡಿಯಲು 120 ಸಿಬ್ಬಂದಿ, 200 ಕ್ಯಾಮೆರಾ!| ಡ್ರೋನ್‌ ಕ್ಯಾಮೆರಾ ಕೂಡ ಬಳಸಿ ಶೋಧ: ಸಚಿವ ಪಾಟೀಲ್‌| ಮೃತ ಇಬ್ಬರ ಕುಟುಂಬಕ್ಕೆ 5 ಲಕ್ಷ ಬದಲು 10 ಲಕ್ಷ ರು. ಪರಿಹಾರ

 • Operation Tiger

  Chamarajnagar12, Oct 2019, 2:18 PM IST

  ಚಾಮರಾಜನಗರ: ಹುಲಿ ಹಿಡಿಯಲು ಸೋಲಿಗರ ಮೊರೆ

  ಹುಲಿ ಸೆರೆ ಹಿಡಿಯಲು ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಈವರೆಗೆ ಯಾವುದೇ ಫಲ ನೀಡಿಲ್ಲ. ಹುಲಿಯ ಸುಳಿವೂ ಸಿಕ್ಕಿರದ ಕಾರಣ ಸೋಲಿಗರ ಮೊರೆ ಹೋಗಲು ಅರಣ್ಯ ಇಲಾಖೆ ನಿರ್ಧರಿಸಿದೆ.

 • Drone Camera

  Chamarajnagar12, Oct 2019, 2:01 PM IST

  ಡ್ರೋನ್ ಕ್ಯಾಮೆರಾ ಕಣ್ಣಿಂದಲೂ ತಪ್ಪಿಸಿಕೊಂಡ ಹುಲಿ..!

  ಗುಂಡ್ಲುಪೇಟೆಯಲ್ಲಿ ಕಾರ್ಯಾಚಣೆ ನಡೆಯುತ್ತಿದ್ದು ಇಲ್ಲಿಯವರೆಗೂ ಹುಲಿಯ ಸುಳಿವು ಸಿಕ್ಕಿಲ್ಲ. ಪಕ್ಷಿ ನೋಟ ಕೊಡುವ ಡ್ರೋನ್ ಕ್ಯಾಮೆರಾಗಳನ್ನು ಬಳಸಿದರೂ ಹುಲಿ ಇರುವಿಕೆಯ ಬಗ್ಗೆ ಸಣ್ಣ ಸುಳಿವೂ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.

 • Chamarajnagar12, Oct 2019, 1:10 PM IST

  ಚಾಮರಾಜನಗರ: ಹುಲಿ ದರ್ಶನವೂ ಇಲ್ಲ, ಕುರುಹೂ ಇಲ್ಲ..!

  ಆಪರೇಷನ್ ಟೈಗರ್‌ ಕಾರ್ಯಾಚರಣೆಯ ಮೂರನೇ ದಿನವೂ ಸಿಬ್ಬಂದಿ ನಿರಾಶರಾಗಿದ್ದಾರೆ. ಹುಲಿ ಹಿಡಿಯುವುದು ಬಿಟ್ಟು, ಕಣ್ಣಿಗೂ ಕಾಣಿಸಿಕೊಂಡಿಲ್ಲ. ಹುಲಿ ಓಡಾಡಿರುವ ಕುರುಹುಗಳೂ ಅಧಿಕಾರಿಗಳಿಗೆ ಲಭ್ಯವಾಗಿಲ್ಲ.