ಹಳ್ಳಿ  

(Search results - 184)
 • Anil Kumar

  Bengaluru-Urban16, Oct 2019, 8:15 AM IST

  'ತಿಂಗಳ ಒಳಗಾಗಿ ನೀರಿನ ಸಂಪರ್ಕ ಪಡೆದುಕೊಳ್ಳಿ'

  11 ಹಳ್ಳಿಗಳಲ್ಲಿ ರಸ್ತೆ ಡಾಂಬರಿಕರಣ ಕಾಮಗಾರಿಯನ್ನು ಮುಂದಿನ ತಿಂಗಳು ಆರಂಭಿಸಲಾಗುತ್ತಿದೆ. ಹಾಗಾಗಿ, 30 ದಿನಗಳೊಳಗಾಗಿ ಆ ಭಾಗದ ಜನರು ಕಾವೇರಿ ನೀರು ಸಂಪರ್ಕ ಪಡೆದುಕೊಳ್ಳಬೇಕು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ ಕುಮಾರ್‌ ಸೂಚಿಸಿದ್ದಾರೆ.
   

 • Video Icon

  Politics14, Oct 2019, 3:26 PM IST

  ಬಳ್ಳಾರಿ ಆಯ್ತು, ಈಗ ಮೈಸೂರು ವಿಭಜನೆಗೆ ಕೂಗು! ಹೊಸ ಜಿಲ್ಲೆಯಾಗುತ್ತಾ ‘ಹಕ್ಕಿ’ ಗೂಡು?

  ಅನರ್ಹ ಶಾಸಕ ಎಚ್. ವಿಶ್ವನಾಥ್ ಈಗ ಬಿಜೆಪಿ ಸರ್ಕಾರದ ಮುಂದೆ ಹೊಸದೊಂದು ಬೇಡಿಕೆಯನ್ನಿಟ್ಟಿದ್ದಾರೆ.  ‘ಹಳ್ಳಿಹಕ್ಕಿ’ ಇಟ್ಟಿರುವ ಹೊಸ ಬೇಡಿಕೆ ಕಮಲ ಪಾಳೆಯಕ್ಕೆ ತಲೆನೋವಾಗಿ ಪರಿಣಮಿಸುವುದು ಖಚಿತ! 

 • dalit protest 2

  Belagavi14, Oct 2019, 11:55 AM IST

  'ನ.1 ರೊಳಗೆ ಚಿಕ್ಕೋಡಿ ಜಿಲ್ಲೆ ಘೋಷಿಸದಿದ್ದರೆ ಉಗ್ರ ಚಳವಳಿ'

  ಅಭಿವೃದ್ಧಿ ದೃಷ್ಠಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಹೊಸ ಜಿಲ್ಲೆಯನ್ನಾಗಿ ಬರುವ ನ.1 ರೊಳಗಾಗಿ ಘೋಷಣೆ ಮಾಡಬೇಕು ಇಲ್ಲದಿದ್ದರೆ ಅಥಣಿ ತಾಲೂಕು ತೇಲಸಂಗದಿಂದ ಯಮಕನಮರಡಿ ಕೊನೆ ಹಳ್ಳಿಯವರಿಗೆ ಜಿಲ್ಲಾ ಹೋರಾಟ ಸಮಿತಿ ಪಾದಯಾತ್ರೆ ಕೈಗೊಂಡು ಜಿಲ್ಲೆಗೆ ಅಡ್ಡಗಾಲು ಹಾಕುವ ನಾಯಕರ ವಿರುದ್ಧ ಚಳವಳಿ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್‌.ಸಂಗಪ್ಪಗೋಳ ಅವರು ಹೇಳಿದ್ದಾರೆ. 
   

 • Ballari10, Oct 2019, 9:24 AM IST

  ಹಗರಿಬೊಮ್ಮನಹಳ್ಳಿಯಲ್ಲಿ ಎಲ್ಲಿ ನೋಡಿದ್ರೂ ಧೂಳೇ ಧೂಳು!

  ಪಟ್ಟಣದ ಹೆಸರೇ ಹೇಳುವಂತೆ ಇಂದಿಗೂ ಹಗರಿಬೊಮ್ಮನಹಳ್ಳಿ ಹಳ್ಳಿಗಿಂತ ಕಡೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ರಸ್ತೆಗಳು ಹೇಳುತ್ತವೆ. ಪಟ್ಟಣದ ಯಾವುದೇ ಓಣಿಗೆ ಕಾಲಿಟ್ಟರೂ ಧೂಳಿನ ಮಜ್ಜನ ಗ್ಯಾರಂಟಿ! 
   

 • tiger
  Video Icon

  Chamarajnagar9, Oct 2019, 2:26 PM IST

  ಆಪರೇಷನ್ ಟೈಗರ್: 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ

  ಹುಲಿಗೆ ಮತ್ತೊಬ್ಬ ರೈತ ಬಲಿ| ಗೋಪಾಲಸ್ವಾಮಿ ಬೆಟ್ಟದ ಕಾಡಂಚಿನಲ್ಲಿ ನಡೆದ ಘಟನೆ| ಚೌಡಹಳ್ಳಿಯಲ್ಲಿ ದನ ಮೇಯಿಸುತ್ತಿದ್ದಾಗ ರೈತನ ಮೇಲರಿಗದ ಹುಲಿ| ಸೆ.1ರಂದು ಇದೇ ಹಳ್ಳಿಯಲ್ಲಿ ಮತ್ತೊಬ್ಬ ರೈತ ಹುಲಿ ದಾಳಿಗೆ ಬಲಿಯಾಗಿದ್ದ| ಸ್ಥಳಿಯರ ಆಕ್ರೋಶ| 48 ಗಂಟೆಯೊಳಗೆ ಸೆರೆ, ಇಲ್ಲವೇ ಶೂಟೌಟ್ ಮಾಡುವ ಭರವಸೆ ನೀಡಿದ ಅರಣ್ಯಾಧಿಕಾರಿಗಳು| ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಯ್ತು ಅಧಿಕಾರಿಗಳ ಭರವಸೆ ಮಾತು

 • Belagavi9, Oct 2019, 10:06 AM IST

  ಎರಡು ದಶಕ ಕಳೆದರೂ ರಾಯಬಾಗ ಕಾಲುವೆಗೆ ನೀರೆ ಬರ್ತಿಲ್ಲ!

  ಬರಪೀಡಿತ ಹಳ್ಳಿ ಭಾಗದ ಜನರ ಪಾಲಿಗೆ ವರದಾನವಾಗಬೇಕಿದ್ದ ರಾಯಬಾಗ ಉನ್ನತ ಮಟ್ಟದ(ಆರ್‌ಎಚ್‌ಎಲ್‌ಡಿ) ಕಾಲುವೆಗೆ ಸರಿಸುಮಾರು ಕಳೆದ ಎರಡು ದಶಕಗಳಿಂದ ನೀರೇ ಹರಿದಿಲ್ಲ!
   

 • Video Icon

  Astrology8, Oct 2019, 8:40 PM IST

  ರಾಜಾಜಿನಗರ ರಾಮಮಂದಿರಕ್ಕೆ ಹೋಗೊಣ, ಪುರಾಣ ಸಾರುವ ಬೊಂಬೆ ಪ್ರದರ್ಶನ ನೋಡೊಣ


  ದಸರಾ ಎನ್ನುವುದು ಕರ್ನಾಟಕದ ಮಟ್ಟಿಗೆ ನಾಡಹಬ್ಬ. ಮೈಸೂರು ಮಾತ್ರವಲ್ಲದೇ ಪ್ರತಿ ನಗರ-ಹಳ್ಳಿಗಳಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯಗಳಿಮದ ಪೂಜೆ ಮಾಡುತ್ತಾರೆ. ಸರಸ್ವತಿ ದೇವಿಯನ್ನು ಆರಾಧನೆ ಮಾಡುತ್ತಾರೆ. ಇಂಥಹ ಗೊಂಬೆ ಪ್ರದರ್ಶನಗಳು ನಮ್ಮ ಜ್ಞಾನ ವೃದ್ಧಿ ಮಾಡುವುದರೊಂದಿಗೆ ಸಾಂಪ್ರದಾಯಿಕ ಕಲೆ ಕಾಪಾಡುವಲ್ಲಿಯೂ ನೆರವಾಗಬಲ್ಲದು. ರಾಜಾಜಿ ನಗರದ ರಾಮಮಂದಿರ ದೇವಾಲಯಕ್ಕೆ ಈ ಸಾರಿ ಭೇಟಿ ನೀಡಲು ಸಾಧ್ಯವಾಗದಿದ್ದರೆ ಮುಂದಿನ ದಸರಾಕ್ಕೆ ಖಂಡಿತ ವಿಸಿಟ್  ಹಾಕಿ.

 • anand mamani mla 1

  Karnataka Districts7, Oct 2019, 10:55 AM IST

  'ನೆರೆ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡುವಲ್ಲಿ ಸರಕಾರ ಯಶಸ್ವಿ'

  ಎಲ್ಲಮ್ಮ ಕ್ಷೇತ್ರದಲ್ಲಿ ಮಲಪ್ರಭಾ ನದಿಯಿಂದ ನೆರೆ ಹಾವಳಿಗೆ ಮುನವಳ್ಳಿ ಸೇರಿ ಹನ್ನೊಂದು ಹಳ್ಳಿಗಳು ತುತ್ತಾಗಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 28.56 ಕೋಟಿ ಹಣ ನೆರೆ ಹಾವಳಿ ಸಂದರ್ಭದಲ್ಲಿ ನಿಧನರಾದ ಕುಟುಂಬಗಳಿಗೆ ತಲಾ 10 ಲಕ್ಷ, ಸಂಪೂರ್ಣ ಮನೆ ಬಿದ್ದವರಿಗೆ 5 ಲಕ್ಷ ಹೀಗೆ 1 ಲಕ್ಷ, 25 ಸಾವಿರ, 10 ಸಾವಿರ ಹೀಗೆ ಹಾನಿಗೆ ತಕ್ಕಂತೆ ಪರಿಹಾರವನ್ನು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ನೀಡಲಾಗಿತ್ತಿದ್ದು, ನೆರೆ ಸಂತ್ರಸ್ತರ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿದೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.
   

 • Sorry
  Video Icon

  News3, Oct 2019, 12:54 PM IST

  ಕ್ಷಮಿಸು ಕಂದಾ!: ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡುತ್ತೆ ಈ ಕೇಸ್!

  ಲೈಂಗಿಕ ದೌರ್ಜನ್ಯದ ನೂರು ಪ್ರಕರಣಗಳಾದರೆ, ಕೇವಲ ಮೂರು ಪ್ರಕರಣದ ಆರೋಪಿಗಳಿಗಷ್ಟೇ ಶಿಕ್ಷೆ ಸಿಗುತ್ತದೆ. ಶೇ. 97ರಷ್ಟು ಪ್ರಕರಣದಲ್ಲಿ ಆರೋಪಿಗಳನ್ನು ನಿರಪರಾಧಿಗಳೆಂದು ಬಿಡುಗಡೆಗೊಳಿಸುತ್ತಾರೆ. ಪೊಲೀಸ್ ತನಿಖೆಯಲ್ಲಿ ನಡೆಯುತ್ತಿರುವ ಲೋಪ ದೋಷಗಳೇ ಇದಕ್ಕೆ ಪ್ರಮುಖ ಕಾರಣ. ಸದ್ಯ ತಾಯಿಯೊಬ್ಬಳು ತನ್ನ ಮಗಳ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ನ್ಯಾಯ ಕೊಡಿಸಿ ಎಂದು ಗೋಗರೆಯುತ್ತಿದ್ದಾಳೆ. ಮಗು ಕೇವಲ 7 ವರ್ಷವಿದ್ದಾಗ ಶಾಲೆಯಲ್ಲೇ ಆಕೆಯ ಮೇಲೆ ದೌರ್ಜನ್ಯ ನಡೆದಿದ್ದು, ಬೆಂಗಳೂರಿನ ಹೊರವಲಯದ ತಿರುಮಲಶೆಟ್ಟಿ ಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಆದರೀಗ ಸಾಕ್ಷ್ಯಾಧಾರ ಇ್ಲಲ ಎಂಬ ಕಾರಣ ನೀಡಿ ಆರೋಪಿಯನ್ನು ನಿರಪರಾಧಿ ಎಂದು ಘೋಷಿಸಲಾಗಿದೆ.

 • BSY - Siddaramaiah

  News30, Sep 2019, 5:18 PM IST

  ಅಯ್ಯೋ... ಪಾಪ... ಯಡಿಯೂರಪ್ಪ ಬೆನ್ನಿಗೆ ನಿಂತ ಸಿದ್ದರಾಮಯ್ಯ

  • ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮೋದಿಯವರ ಬಳಿ ಮಾತನಾಡುವ ಧೈರ್ಯವಿಲ್ಲ.
  • ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನು ಬಿಜೆಪಿ ಹೈಕಮಾಂಡ್ ಕತ್ತರಿಸಿ ಬಿಟ್ಟಿದೆ
  • ಹಳ್ಳಿಗಳಲ್ಲಿ ಮನೆ ಬಾಡಿಗೆಗೆ ಸಿಗುತ್ತದೆಯೇ? ಮನೆ ಕಳೆದುಕೊಂಡವರು ಮುಂದಿನ ಹತ್ತು ತಿಂಗಳು ಎಲ್ಲಿ ವಾಸಿಸಬೇಕು? 
  • ಆನಂದ್ ಸಿಂಗ್ ಅವರಿಗೆ ಅನುಕೂಲವಾಗಲಿ ಎಂದು ಬಳ್ಳಾರಿ ಜಿಲ್ಲೆಯ ವಿಭಜನೆ 
 • Swachh Bharat

  News30, Sep 2019, 4:43 PM IST

  ಮೋದಿ ಕನಸಿನ ಸ್ವಚ್ಛ ಭಾರತಕ್ಕೆ 5 ವರ್ಷ; ಸಾಧಕ- ಬಾಧಕಗಳೇನು?

  ಸ್ವಚ್ಛ ಭಾರತ ಅಭಿಯಾನ ನಾಡಿದ್ದು ಅಕ್ಟೋಬರ್‌ 2 ರಂದು 5 ವರ್ಷ ಪೂರೈಸಲಿದೆ. ಈ ಅಭಿಯಾನದ ಫಲವಾಗಿ ಭಾರತ ಇಂದು ಬಯಲು ಶೌಚದ ಪಿಡುಗಿನಿಂದ ಬಹುತೇಕ ಮುಕ್ತಿ ಪಡೆದಿದೆ. ಒಂದು ಕಾಲದಲ್ಲಿ ನೈರ್ಮಲ್ಯದ ಗಂಧಗಾಳಿಯೂ ಗೊತ್ತಿಲ್ಲದ ಹಳ್ಳಿಗಳ ಪ್ರತಿ ಮನೆಯಲ್ಲೂ ಈಗ ಶೌಚಾಲಯವಿದೆ.

 • Karnataka Districts29, Sep 2019, 12:42 PM IST

  ಮಂಡ್ಯ: ಹಳ್ಳಿಯಲ್ಲಿ ರೈತರ ಸೂಪರ್‌ ಮಾರ್ಕೆಟ್‌!

  ಮಾಲ್ ಸಂಸ್ಕೃತಿ ಹಳ್ಳಿಗಳಿಗೂ ವ್ಯಾಪಿಸ್ತಿದೆ. ಮಂಡ್ಯದಲ್ಲಿ ರೈತರದ್ದೇ ಆದ ಸೂಪರ್‌ ಮಾರುಕಟ್ಟೆ ದಶಕಗಳಷ್ಟು ಹಿಂದಿನಿಂದಲೇ ಸಹಕಾರ ಸಂಘದ ಅಡಿ 1200 ಷೇರುದಾರರ ನೆರವಿನಿಂದ ಬೆಳೆದು ಬರುತ್ತಿದೆ. ಅನೇಕ ಏಳು ಬೀಳುಗಳನ್ನು ಕಂಡು ಈಗ ಪ್ರಬುದ್ಧಮಾನಕ್ಕೆ ಬಂದಿದೆ.

 • Karnataka Districts28, Sep 2019, 2:58 PM IST

  ಜೀವ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಿದೆ ಇಲ್ಲಿನ ಮಕ್ಕಳು!

  ತಾಲೂಕಿನ ಹಟ್ಟಿ ಪಟ್ಟಣದ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳು ಖಾಸಗಿ ವ್ಯಾನ್‌ಗಳಿಗೆ ಜೋತು ಬಿದ್ದು ಬರುತ್ತಿದ್ದಾರೆ. ಯಲಗಟ್ಟಾ, ವಂದಲಿ, ಗೆಜ್ಜಲಗಟ್ಟಾ, ಗೌಡೂರು ವೀರಾಪೂರ, ನಿಲೋಗಲ್‌, ವಂದಲಿ ಹೊಸುರು, ಸೇರಿದಂತೆ ಪಟ್ಟಣದ ಸುತ್ತಲಿನ ಹಳ್ಳಿಗಳಿಂದ ಸುಮಾರು 3 ಸಾವಿರ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೆ. 
   

 • school flood karnataka

  Karnataka Districts26, Sep 2019, 10:51 AM IST

  ಹಂಚನಾಳ ಶಾಲೆಗೆ ಜಲದಿಗ್ಭಂದನ: ಚಿಣ್ಣರ ಕಲಿಕೆಗೆ ವಿಘ್ನಗಳು ನೂರಾರು

  ಮಳೆ ಬಂದರೆ ಇಡೀ ಶಾಲೆ ಜಲಾವೃತವಾಗುತ್ತದೆ. ಅಷ್ಟು ಮಾತ್ರವಲ್ಲ ಕೋಣೆಗಳ ಚಾವಣಿಯಿಂದ ನೀರು ನುಗ್ಗುತ್ತಿರುವುದರಿಂದ ಇರುವ 154 ಮಕ್ಕಳಿಗೆ ಒಂದು ಕೋಣೆಯಲ್ಲಿ ಕೂಡಿಹಾಕಿ ಬೋಧಿಸುವ ದುಸ್ಥಿತಿ ನಿರ್ಮಾಣವಾಗಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಗಡಿಭಾಗದ ಕೊನೆಯ ಹಳ್ಳಿ ಹಂಚನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 

 • KSRTC

  Karnataka Districts25, Sep 2019, 3:13 PM IST

  ಸಾರಿಗೆ ಬಸ್ ನಲ್ಲೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ

  ಮಹಿಳೆಯೊಬ್ಬರು ಬಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ರತ್ನಮ್ಮ ಎಂಬುವರೆ ಬಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ರತ್ನಮ್ಮ ಅವರು ಜಿ.ಎಲ್. ಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.