Search results - 30 Results
 • BUSINESS2, Nov 2018, 1:18 PM IST

  ಕಚ್ಚಾ ತೈಲ ದರ ಇಳಿಕೆ: ಇನ್ಮೇಲೆ ಸೆನ್ಸೆಕ್ಸ್ ಲಾಭ ಫಿಕ್ಸ್!

  ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ, ಇಂದು ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 ಅಂಶ ಏರಿಕೆ ಕಂಡು 34,845 ಅಂಕಗಳನ್ನು ತಲುಪಿದೆ.

 • BUSINESS13, Oct 2018, 12:54 PM IST

  ಷೇರು ಮಾರುಕಟ್ಟೆ ಅಯೋಮಯ: ಮ್ಯೂಚುವಲ್ ಫಂಡ್ಸ್ ಗತಿ ಏನಯ್ಯಾ?

  ಸೆನ್ಸೆಕ್ಸ್ ನ ಅತಂತ್ರ ಸ್ಥಿತಿಯಲಲ್ಲಿ ಮ್ಯೂಚುವಲ್ ಫಂಡ್ಸ್ ಗಳಲ್ಲಿ ಹಣ ಹೂಡಿಕೆ ಮಾಡಿರುವವರ ಗತಿಯೇನು ಎಂಬುದು ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಸದ್ಯ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆಶಾಭಾವ ಪರಿಸ್ಥಿತಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

 • Sensex

  BUSINESS11, Oct 2018, 8:26 PM IST

  5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!

  ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್‌ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ. 

 • BUSINESS10, Oct 2018, 2:23 PM IST

  ಇನ್ವೆಸ್ಟ್ ಮಾಡಿರೋರು, ಮಾಡೋರು ಇಬ್ಬರಿಗೂ ಸಿಹಿ ಸುದ್ದಿ: ವಸಿ ಓದಿ ಬುದ್ದಿ!

  ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.

 • Sensex

  BUSINESS5, Oct 2018, 12:10 PM IST

  ಎಲ್ಲಾ ಹೋಯ್ತು: ಷೇರು ಮಾರುಕಟ್ಟೆ ಬಿದ್ದೋಯ್ತು!

  ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 806 ಅಂಕ ಕುಸಿತಕ್ಕೀಡಾಗಿದ್ದು, ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಇಳಿಕೆ ದಾಖಲಿಸಿದೆ. ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸೆನ್ಸೆಕ್ಸ್‌ 35,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಇದೇ ರೀತಿ ನಿಫ್ಟಿ 10,600 ಅಂಕಗಳ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿತು. ಏಷ್ಯಾ ಮತ್ತು ಯುರೋಪ್‌ನಲ್ಲೂ ಷೇರು ಮಾರುಕಟ್ಟೆಗಳು ಮುಗ್ಗರಿಸಿವೆ.

 • Sensex

  BUSINESS25, Sep 2018, 11:41 AM IST

  ಬರೋಬ್ಬರಿ 8.47 ಲಕ್ಷ ಕೋಟಿ ರೂ ನಷ್ಟ: ಹೂಡಿಕೆ ಬಲು ಕಷ್ಟ!

  ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೋ ಬಿಡುವುದೋ ಎಂಬ ಗೊಂದಲದಲ್ಲಿ ಹೂಡಿಕೆದಾರ ಇದ್ದಾನೆ. ಕಾರಣ ಮುಂಬೈ ಷೇರು ಮಾರುಕಟ್ಟೆಯ ಕರಡಿ ಕುಣಿತದಲ್ಲಿ ನಿರಂತರ ಪಲ್ಲಟಗಳಾಗುತ್ತಿದ್ದು, ಹೂಡಿಕೆದಾರ ಆತಂಕದಲ್ಲಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

 • Sensex

  BUSINESS21, Sep 2018, 6:10 PM IST

  ಮಕಾಡೆ ಮಲಗಿದ ಸೆನ್ಸೆಕ್ಸ್: ನಿಮಗೂ ಕಾದಿದೆ ಶಾಕ್!

  ಷೇರು ಮಾರುಕಟ್ಟೆ ವ್ಯವಹಾರ ಮತ್ತೆ ದಾಖಲೆಯ ಕುಸಿತ ಕಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಒಂದು ಹಂತದಲ್ಲಿ 1100 ಅಂಕಗಳ ಕುಸಿತ ಕಂಡು, ಸೆನ್ಸೆಕ್ಸ್​ 35,993 ಅಂಶಗಳಿಗೆ ಇಳಿಕೆ ಕಂಡಿತ್ತು. ಬಳಿಕ 600 ಅಂಕ ಚೇತರಿಸಿಕೊಂಡು 36600 ಕ್ಕೆ ಬಂದು ತಲುಪಿತು.  

 • Sensex

  BUSINESS19, Sep 2018, 2:33 PM IST

  ಷೇರು ಮಾರುಕಟ್ಟೆಗೆ ಕಷ್ಟ: ಒಂದೇ ದಿನ ಎಷ್ಟೊಂದು ನಷ್ಟ?

  ಯಾವ ಕಾರಣಗಳಿಗೆ ಷೇರು ಮಾರುಕಟ್ಟೆ ಏರಿಕೆಯ ಹಾದಿ ಹಿಡಿಯಬೇಕಿತ್ತೋ, ಅದೇ ವಿಚಾರಗಳಿಗೆ ಕುಸಿತದ ಪ್ರಪಾತಕ್ಕೆ ಬೀಳುತ್ತಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಕಚ್ಚಾ ತೈಲದರ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಇವೇ ಮುಂತಾದ ಕಾರಣಗಳಿಂದ ಮುಂಬೈ ಷೇರುವ ಮಾರುಕಟ್ಟೆ ಸತತ ಎರಡನೇಯ ದಿನವೂ ಭಾರೀ ಕುಸಿತ ಕಂಡಿದೆ.

 • Rupee

  BUSINESS14, Sep 2018, 1:15 PM IST

  ಎರಡೆರಡು ಸಂತಸದ ಸುದ್ದಿ: ರೂಪಾಯಿ, ಸೆನ್ಸೆಕ್ಸ್ ಒಟ್ಟಿಗೆ ವೃದ್ಧಿ!

  ಕಳೆದ ಕೆಲವು ದಿನಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ಸೆನ್ಸೆಕ್ಸ್ ಅಂಕ ಇಳಿಕೆ, ತೈಲದರ ಏರಿಕೆ ಇಂತದ್ದೇ ಸುದ್ದಿ ಕೇಳುತ್ತಿದ್ದ ಜನತೆಗೆ ಇಂದು ಎರಡೆರಡು ಸಂತಸದ ಸುದ್ದಿಗಳು ಎದುರಾಗಿವೆ. ಡಾಲರ್ ಎದುರು ರೂಪಾಯಿ ಮೌಲ್ಯ ತುಸು ಚೇತರಿಕೆ ಕಂಡಿದ್ದು, ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಕೂಡ ಚೇತರಿಕೆಯ ಹಾದಿ ಹಿಡಿದಿದೆ. 

 • Dollar VS Rupee

  BUSINESS12, Sep 2018, 12:22 PM IST

  ಡೀಸೆಲ್ ಬೆಲೆ, ಡಾಲರ್ ಬೆಲೆ ಎರಡೂ ಒಂದೇ: ಏನಾಗತ್ತೋ ಇನ್ಮುಂದೆ?

  ದಿನ ಬೆಳಗಾದರೆ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಮಕಾಡೆ ಮಲಗುತ್ತಿದೆ. ಅತ್ತ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ತನ್ನ ಪ್ರಾಬಲ್ಯ ಮುಂದುವರೆಸಿದ್ದರೆ, ಇತ್ತ ಭಾರತ ರೂಪಾಯಿ ಮೌಲ್ಯ ಏಷ್ಯಾದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. 

 • BUSINESS10, Sep 2018, 1:03 PM IST

  ಸೆನ್ಸೆಕ್ಸ್'ನ್ನೂ ಪಾತಾಳಕ್ಕೆ ಎಳೆದೊಯ್ದ ರೂಪಾಯಿ ಮೌಲ್ಯ ಕುಸಿತ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡಿದ್ದು, ಈ ಹಿಂದೆಂದಿಗಿಂತಲೂ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು ವಾರದ ವಹಿವಾಟು ಆರಂಭವಾಗುತ್ತಿದ್ದಂತೆಯೇ ರೂಪಾಯಿ ಮೌಲ್ಯದಲ್ಲಿ ಬರೊಬ್ಬರಿ 45 ಪೈಸೆಗಳಷ್ಟು ಕುಸಿತ ಕಂಡಿದೆ. ಆ ಮೂಲಕ ರೂಪಾಯಿ ಮೌಲ್ಯ ಪ್ರತೀ ಡಾಲರ್ ಗೆ 72.18 ರೂಗಳಿಗೇರಿದೆ.

 • sensex

  BUSINESS20, Aug 2018, 1:32 PM IST

  ಮೋದಿ ‘ಫ್ರೀಡಂ ಸ್ಪೀಚ್ ಎಫೆಕ್ಟ್: ಸೆನ್ಸೆಕ್ಸ್ ಪರ್ಫೆಕ್ಟ್!

  ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಮಾಡಿದ ಭಾಷಣ ದೇಶದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಜನರ ಜೀವನಮಟ್ಟ ಮೇಲ್ದರ್ಜೆಗೇರಿಸಲು ಸರ್ಕಾರ ಬದ್ಧ ಎಂಬ ಮೋದಿ ಮಾತಿನಿಂದ ಮಾರುಕಟ್ಟೆಗೆ ಚೈತನ್ಯ ದೊರೆತಿದೆ. ಅದರಂತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಕಂಡಿದೆ.

 • Sensex

  BUSINESS9, Aug 2018, 12:17 PM IST

  ಸೆನ್ಸೆಕ್ಸ್ ನಾಗಾಲೋಟ: ಮೋದಿ ಭಾರತದ ಕಣ್ಣೋಟ!

  ಅವಕಾಶ ಸಿಕ್ಕಾಗಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಹೂಡಿಕೆಯ ಮಹತ್ವವನ್ನು ಜನತೆಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ. ಇಂದು ಮಾಡುವ ಹೂಡಿಕೆ ನಾಳೆಗೆ ಖಂಡಿತ ಪ್ರಯೋಜನಕ್ಕೆ ಬರುತ್ತದೆ ಅಂತಾ ಅರ್ಥಶಾಸ್ತ್ರ ಪ್ರಾಧ್ಯಾಪಕರಂತೆ ಪ್ರಧಾನಿ ಜನತೆಗೆ ಪಾಠ ಮಾಡುತ್ತಿರುತ್ತಾರೆ. ಮೋದಿ ಹೇಳುವುದು ಸತ್ಯ ಅಂತಾ ಭಾರತೀಯ ಷೇರು ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಪದೇ ಪದೇ ಸಾಬೀತು ಮಾಡುತ್ತಿದೆ. 

 • sensex

  BUSINESS27, Jul 2018, 2:37 PM IST

  ಹೂಡಿಕೆ ಮಾಡಿ ಅಂತಾ ಮೋದಿ ಹೇಳೊದು ಇದ್ಕೆನಾ?: ಸೆನ್ಸೆಕ್ಸ್ ಝೇಂಕರಿಸುತ್ತಿದೆ!

  ಹೂಡಿಕೆಯ ಮಹತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವಕಾಶ ಸಿಕ್ಕಾಗಲೆಲ್ಲಾ ದೇಶಕ್ಕೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ. ಮಾರುಕಟ್ಟೆ ಎಂಬ ಹಾವು ಏಣಿ ಆಟದಲ್ಲಿ ಭಾಗವಹಿಸಿ ನೋಡಿ ಅಂತಾ ಮೋದಿ ಸಲಹೆ ನೀಡುತ್ತಲೇ ಇರುತ್ತಾರೆ. ಅದರಂತೆ ಭಾರತದ ಷೇರು ಮಾರುಕಟ್ಟೆ ಕಳೆದ ಐದು ದಿನಗಳಿಂದ ಸತತವಾಗಿ ಏರುಗತಿಯಲ್ಲಿ ಸಾಗುತ್ತಲೇ ಇದ್ದು, ಹೂಡಿಕೆದಾರರು ಫುಲ್ ಖುಷಿ ಮೂಡ್ ನಲ್ಲಿದ್ದಾರೆ.

 • BUSINESS26, Jul 2018, 4:00 PM IST

  ಇತಿಹಾಸ ಸೃಷ್ಟಿಸುವತ್ತ ಷೇರು ಮಾರುಕಟ್ಟೆ: ಸಾರ್ವಕಾಲಿಕ ದಾಖಲೆ!

  ಭಾರತೀಯ ಷೇರು ಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುವತ್ತ ಹೆಜ್ಜೆ ಇಟ್ಟಿದೆ. ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಬಿಎಸ್‌ಇ ಸೆನ್ಸೆಕ್ಸ್, ಇದೇ ಮೊದಲ ಬಾರಿಗೆ 37 ಸಾವಿರ ಗಡಿ ದಾಟಿದೆ.