ಸೀರೆಗಳು  

(Search results - 7)
 • <p>Saree</p>

  Karnataka DistrictsOct 13, 2020, 2:55 PM IST

  ಮಹಿಳೆಯರಿಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್ : ಕೈಗೆಟುಕುವ ದರದಲ್ಲಿ ಪರಿಶುದ್ಧ ರೇಷ್ಮೆ ಸೀರೆ

  ಮಹಿಳೆಯರಿಗೆ ಇಲ್ಲಿದೆ ಬಂಪರ್ ಆಫರ್. ನಿಮಗೆ ಕೈಗೆಟುಕುವ ದರದಲ್ಲಿ ಸಿಗಲಿವೆ ಪರಿಶುದ್ಧ ರೇಷ್ಮೆ ಸೀರೆಗಳು

 • anupama parameswaran saree

  FashionJan 16, 2020, 9:37 AM IST

  2020 ಗೆ ಈ ಸೀರೆಗಳು ನಿಮ್ಮ ವಾರ್ಡ್‌ರೋಬ್‌ ತುಂಬಲಿ!

  ‘ಈ ಹುಡುಗೀರ ಆಡೋದು ಕಂಡ್ರೆ ತಲೆ ಕೆಟ್ಟೋಗುತ್ತೆ ಕಣೋ, ವಾರದ ಮುಂಚೆ ಥೂ, ನಾನ್‌ ಸೀರೆ ಉಟ್ಕೊಳ್ಳಲ್ಲಾ, ಆಂಟಿ ಥರಾ ಅಂತಿದ್ಲು ನನ್ನ ಹುಡುಗಿ. ಈಗ ನೋಡಿದ್ರೆ, ಇಷ್ಟೆಲ್ಲ ಹಬ್ಬ ಬಂದು ಹೋಯ್ತು, ನೀನು ನಂಗೊಂದೂ ಸೀರೇನೇ ಕೊಡಿಸಿಲ್ಲ ಅಂತ ಕಂಪ್ಲೇಂಟ್‌ ಮಾಡ್ತಿದ್ದಾಳೆ. ಇವ್ಳ ಜೊತೆ ಏಗೋದು ಕಷ್ಟಇದೆ ಕಣೋ..’ ಅಂತ ಫ್ರೆಂಡ್‌ ಒಬ್ಬ ಒದ್ದಾಡ್ತಿದ್ದ. ಅವನ ಸಮಸ್ಯೆ ಹೆಚ್ಚಿನೆಲ್ಲ ಸಂಸಾರಿಗಳ ಕಂ ಬಾವೀ ಸಂಸಾರಿಗಳ ಸಮಸ್ಯೆಯೂ ಆಗಿರುವ ಕಾರಣ ಆ ಕ್ಷಣಕ್ಕೆ ನಗು ಬಂದರೂ ನಮ್‌ ಪರಿಸ್ಥಿತಿ ಗಂಭೀರ ಇದೆ ಅಂತ ಅರ್ಥ ಆಯ್ತು. ಅಷ್ಟೊತ್ತಿಗೆ ಸರಿಯಾಗಿ ಸೋನಂ ಕಪೂರ್‌ ಚೆಂದದೊಂದು ಸೀರೆಯಲ್ಲಿ ಕಣ್ಣಿಗೆ ಬೀಳ್ಬೇಕಾ! ನನ್ನ ಫ್ರೆಂಡೂ ಸೇರಿದಂತೆ, ಇಂಡಿಯಾ ದೇಶದ ಅಮಾಯಕ ಗಂಡ್‌ ಹೈಕ್ಳಿಗೆ ಹಾಗೂ ಚಾಲೂಕಿನ ಹೆಣ್‌ ಹುಡುಗೀರಿಗಾಗಿ ಈ ಲೇಖನ.

 • Mysuru Silk
  Video Icon

  Bengaluru-UrbanOct 16, 2019, 10:32 PM IST

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

 • CM Kumaraswamy

  NEWSMar 6, 2019, 9:08 AM IST

  ಕಂಚಿಯಲ್ಲಿ 500 ಕ್ಕೆ ಸಿಗುವ ಸೀರೆ ನಮ್ಮಲ್ಲೇಕಿಲ್ಲ? ಸಿಎಂ

  ನಮ್ಮ ಮೈಸೂರು ಸಿಲ್ಕ್ ಸೀರೆಗಳು ಸಾಮಾನ್ಯ ಜನರ ಕೈಗೆಟಕುತ್ತಿಲ್ಲ. ಆದರೆ, ತಮಿಳುನಾಡಿನ ಕಂಚಿಗೆ ಹೋದರೆ ಸಾವಿರಾರು ರು. ಬೆಲೆಯ ಸೀರೆ ಬರೀ ಐನೂರು ರು.ಗೆ ಸಿಗುತ್ತದೆ. ನಮ್ಮಲ್ಲಿ ಏಕೆ ಇದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಮ್ಮ ಅಧಿಕಾರಿಗಳು ಒಮ್ಮೆ ಕಂಚಿಗೆ ಹೋಗಿಬರುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

 • brocade sarees

  WomanSep 23, 2018, 4:25 PM IST

  ದುಬಾರಿ ಸೀರೆಗಳನ್ನು ನಾಜೂಕಾಗಿ ತೆಗೆದಿಡುವುದು ಹೇಗೆ?

  ಸೀರೆಗಳೆಂದರೆ ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಅವರ ವಾರ್ಡ್ ರೋಬ್ ಗಳಲ್ಲಿ ಸೀರೆಗಳಿಲ್ಲ ಅಂದರೆ ಅದಕ್ಕೆ ಶೋಭೆಯೇ ಇರುವುದಿಲ್ಲ. ದುಬಾರಿ ಸೀರೆಗಳನ್ನು ಸರಿಯಾಗಿ ನಿರ್ವಹಿಸದಿದ್ದರೆ ಅದು ಹಾಳಾಗುವುದು ಗ್ಯಾರಂಟಿ. ಸೀರೆಗಳು ಹಾಳಾಗದಂತೆ ನಿರ್ವಹಿಸುವುದು ಹೇಗೆ? ಇಲ್ಲಿದೆ ಟಿಪ್ಸ್ ಗಳು.

 • Mysore Silk

  Karnataka DistrictsJul 11, 2018, 4:07 PM IST

  ಯಾರಿಗುಂಟು..ಯಾರಿಗಿಲ್ಲ 4500ಕ್ಕೆ ಮೈಸೂರು ಸಿಲ್ಕ್!

  ಕಡಿಮೆ ಬೆಲೆಗೆ ಮೈಸೂರು ರೇಷ್ಮೆ ಸೀರೆ ನೀಡುವ ರಾಜ್ಯ ಸರ್ಕಾರದ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿದೆ. ಅಂದರೆ ರೇಷ್ಮೆ ತವರು ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಸೀರೆ ತಯಾರಿಕೆ ಆರಂಭವಾಗಿದೆ.

 • silk

  LIFESTYLEJul 3, 2018, 3:49 PM IST

  ರೇಷ್ಮೆ: ಸೆರೆಯಿಂದ ಸೀರೆಯ ತನಕ

  ರೇಷ್ಮೆ ಕೃಷಿ ಬಹಳ ನಾಜೂಕಿನದು. ರೇಷ್ಮೆ ಹುಳುಗಳನ್ನು ಮಕ್ಕಳು ಸಾಕಿದಷ್ಟೇ ಜತನದಿಂದ ನೋಡಿಕೊಳ್ಳಬೇಕು. ಇಲ್ಲವಾದರೆ ಹಾಕಿದ ಬಂಡವಾಳವೆಲ್ಲಾ ನಷ್ಟವಾಗುವುದು ಗ್ಯಾರಂಟಿ. ಚೀನಾ ರೇಷ್ಮೆಯ ದಾಳಿ, ಬೆಲೆಯಲ್ಲಿ ಏರುಪೇರು, ರೋಗಬಾಧೆ ಇದೆಲ್ಲದರ ನಡುವಲ್ಲೂ ರಾಜ್ಯದಲ್ಲಿ ರೇಷ್ಮೆ ಕೃಷಿ ಸಾಗುತ್ತಲೇ ಬಂದಿದೆ. ಅಲ್ಲದೇ ಕೈ ಮಗ್ಗದಿಂದ ಹಿಡಿದು ದೊಡ್ಡ ದೊಡ್ಡ ಆಧುನಿಕ ಯಂತ್ರಾಧಾರಿತ ರೇಷ್ಮೆ ಬಟ್ಟೆ ಉತ್ಪಾದನೆಯಾಗುವುದೂ ಇಲ್ಲಿಂದಲೇ. ಆ ಲೆಕ್ಕದಲ್ಲಿ ನಮ್ಮದು ರೇಷ್ಮೆಯ ತವರು ನಾಡು. ಇಲ್ಲಿ ರೈತ ಬೆಳೆವ ರೇಷ್ಮೆ ಗೂಡಿನಿಂದ ಮೊದಲುಗೊಂಡು ಅದು ಸೀರೆ, ಬಟ್ಟೆಯಾಗಿ ಅಂಗಡಿಗೆ ಬರುವುದು, ಅಲ್ಲಿಂದ ನಾವು ಕೊಂಡು ಬಳಸುವುದು ಎಲ್ಲದರ ಸುತ್ತ ಒಂದು ರೌಂಡ್ ಅಪ್.