ಸಾಮಾಜಿಕ ಅಂತರ  

(Search results - 199)
 • India6, Jul 2020, 10:52 AM

  ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ!

  ಕೇರಳದಲ್ಲಿ ಮಾಸ್ಕ್‌, ಸಾಮಾಜಿಕ ಅಂತರ ಇನ್ನೂ 1 ವರ್ಷ ಕಡ್ಡಾಯ| ವಿವಾಹಕ್ಕೆ 50 ಜನರ ಮಿತಿಯೂ ವಿಸ್ತರಣೆ

 • <p>ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಹಾಗೂ ರೆಸಾರ್ಟ್‌ಗಳು ಮುಚ್ಚಿರುವ ಕಾರಣ ಆಲದ ಮರವೊಂದರ ಕೆಳಗೆ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು.</p>
  Video Icon

  state5, Jul 2020, 2:54 PM

  ಜವಾಬ್ದಾರಿ ಮರೆತ ಯುವಕರು; ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ

  ಇಂದು ರಾಜ್ಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದುವೆ ಸಂಭ್ರಮದಲ್ಲಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಹಾಕಿಕೊಂಡಿಲ್ಲ. ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಯುವತಿಯರು ಮೆಹಂದಿ ಪಾರ್ಟಿ ಮಾಡಿದರೆ ಯುವಕರು ಡಿಜೆ ಹಾಕಿ ಸಖತ್ ಸ್ಟೆಪ್ ಹಾಕಿದ್ದಾರೆ. ಪುತ್ತೂರಿನ ಬಂಟ್ವಾಳದ ಅಮ್ಮುಂಜೆಯಲ್ಲಿ ಈ ಪಾರ್ಟಿ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

 • Karnataka Districts4, Jul 2020, 9:56 AM

  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಪ್ರಶ್ನೆಯೇ ಇಲ್ಲ: ಡಿಸಿಎಂ

  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಪ್ರಶ್ನೆಯೇ ಇಲ್ಲವಾಗಿದ್ದು, ಸಾರ್ವಜನಿಕರು ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸುವುದು ಮತ್ತು ಸ್ವಚ್ಛತೆ ಕಾಪಾಡುವ ಮೂಲಕ ಕೊರೋನಾವನ್ನು ಹಿಮ್ಮೆಟ್ಟಿಸುವುದೇ ಲಾಕ್‌ಡೌನ್‌ಗಿಂತ ಪರಿಣಾಮಕಾರಿ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

 • Karnataka Districts2, Jul 2020, 2:31 PM

  ಕೊರೋನಾ ಭೀತಿ: ಅನಾಥಾಶ್ರಮದಲ್ಲಿ ರೌಡಿಶೀಟರ್‌ ಪ್ರದೀಪ್ ಎಂಟಮಾನ್ ಬರ್ತಡೇ, ಮಕ್ಕಳ ಎದೆಯಲ್ಲಿ ಢವ..ಢವ...!

  ವಿಜಯಪುರ(ಜು.02): ಮಹಾಮಾರಿ ಕೊರೋನಾ ಆತಂಕದ ಮಧ್ಯೆ, ಸಾಮಾಜಿಕ ಅಂತರ ಉಲ್ಲಂಘಿಸಿ ಮಾಜಿ ಪ.ಪಂ ಸದಸ್ಯ, ಭೀಮಾತೀರದ ರೌಡಿ ಶೀಟರ್‌ ಪ್ರದೀಪ್ ಎಂಟಮಾನ್ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಿನ್ನೆ(ಬುಧವಾರ) ನಡೆದಿದೆ. 

 • Video Icon

  state1, Jul 2020, 10:19 AM

  ಜವಾಬ್ದಾರಿ ಮರೆತ ಜಮೀರ್; ಕೊರೊನಾ ಟೆನ್ಷನ್ ನಡುವೆ ಪಾದಪೂಜೆ ಬೇಕಿತ್ತಾ ಜಮೀರ್ ಸಾಹೇಬ್ರೆ?

  ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಬುದ್ದಿ ಕಲಿಯುವಂತೆ ಕಾಣಿಸುತ್ತಿಲ್ಲ. ಪದೇ ಪದೇ ವಿವಾದವನ್ನು ಸೃಷ್ಟಿಸುತ್ತಿದ್ದಾರೆ. ಜನಪ್ರತಿನಿಧಿಯಾಗಿ ಜಮೀರ್‌ ಜವಾಬ್ದಾರಿಯನ್ನು ಮರೆತಿದ್ದಾರೆ. ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ, ಸಾಮಾಜಿಕ ಅಂತರವನ್ನು ಮರೆತು ಅಂಧಾಭಿಮಾನಿಗಳು ಜಮೀರ್‌ಗೆ ಪಾದಪೂಜೆ ಮಾಡಿದ್ದಾರೆ. ಕಾಲು ತೊಳೆದು, ಹೂವು ಹಾಕಿ ಬೆಂಬಲಿಗರು ಪಾದಪೂಜೆ ಮಾಡಿದ್ದಾರೆ. ಬಂಗಾರದ ಮನುಷ್ಯ ಜಮೀರಣ್ಣ ಅಂತ ಕಟೌಟ್ ಬೇರೆ ಬಿಡುಗಡೆ ಮಾಡಿದ್ದಾರೆ. 

 • <p>করোনা আক্রান্ত অবস্থাতেই খুনের হুমকি পেলেন নোভাক জোকোভিচ<br />
 </p>

  OTHER SPORTS30, Jun 2020, 6:35 PM

  ಜೊಕೋವಿಚ್ ಟೀಕಿಸಬೇಡಿ, ಇದು ನನ್ನ ತಪ್ಪು ಎಂದ ಸರ್ಬಿಯಾ ಪ್ರಧಾನ ಮಂತ್ರಿ!

  ಟೆನಿಸ್ ಪ್ರದರ್ಶನಾ ಟೂರ್ನಮೆಂಟ್ ಆಯೋಜಿಸಿ ಕೊರೋನಾ ವೈರಸ್‌ಗೆ ತಗುಲಿಸಿಕೊಂಡಿರುವ ವಿಶ್ವ ನಂ.1 ಟೆನಿಸ್ ಪ್ಲೇಯರ್ ನೋವಾಕ್ ಜೊಕೋವಿಚ್ ವಿರುದ್ದ ಟೀಕೆಗಳು ಕೇಳಿ ಬರುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ, ನಿಯಮ ಪಾಲಿಸಿಲ್ಲ ಸೇರಿದಂತೆ ಹಲವು ಆರೋಪಗಳು ಜೊಕೋವಿಚ್ ಮೇಲಿದೆ. ಇದೀಗ ಈ ಎಲ್ಲಾ ಆರೋಪಗಳಿಗೆ ನಾನು ಹೊಣೆ  ಎಂದಿರುವ ಸರ್ಬಿಯಾ ಪ್ರಧಾನಿ ಜೊಕೋವಿಚ್ ನಿಂದಿಸಬೇಡಿ ಎಂದಿದ್ದಾರೆ. 

 • <p>Mullayyan Giri </p>
  Video Icon

  state28, Jun 2020, 4:45 PM

  ರಾಜ್ಯಕ್ಕೆ ಕೊರೊನಾ ಚಿಂತೆಯಾದ್ರೆ ಇವರಿಗೆ ಮೋಜು ಮಸ್ತಿಯ ಚಿಂತೆ..!

  ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿರರುವ ಚಿಂತೆಯಾದರೆ ಇವರಿಗೆ ಮೋಜು- ಮಸ್ತಿಯ ಚಿಂತೆ..! ಕಾಫಿ ನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಪ್ರವಾಸಿಗರನ್ನು ಕಂಡು ಅಲ್ಲಿನ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಸಾಮಾಜಿಕ ಅಂತರವೂ ಇಲ್ಲ, ಮಾಸ್ಕ್ ಇಲ್ಲ. ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.  ಕೊರೊನಾ ಹೆಚ್ಚಾಗುತ್ತಿದೆ. ಮನೆಯಲ್ಲೇ ಇರಿ ಎಂದು ಸರ್ಕಾರ ಎಷ್ಟೇ ಮನವಿ ಮಾಡಿಕೊಂಡರೂ ಇವರು ಮಾತ್ರ ವೀಕೆಂಡ್ ಮೋಜು ಮಸ್ತಿಯಲ್ಲಿದ್ದಾರೆ. ಈ ದೃಶ್ಯಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತೆ..!

 • Video Icon

  Karnataka Districts28, Jun 2020, 4:27 PM

  ಸಾಹುಕಾರರಿಗಿಲ್ಲ ಸಾಮಾಜಿಕ ಅಂತರ ನಿಯಮ, ಕೊರೋನಾ ಟಚ್ಚೇ ಮಾಡಲ್ಲ!

  ಕೊರೋನಾ ಅಬ್ಬರ ಮುಂದುವರಿದೇ ಇದ್ದರೂ ಸಾಮಾಜಿಕ ಅಂತರ ಈ ಕಾರ್ಯಕ್ರಮದಲ್ಲಿ ಇಲ್ಲ. ಸಾಮಾಜಿಕ ಅಂತರ ಮರೆತು ಸಚಿವ ರಮೇಶ್ ಜಾರಕಿಹೊಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

 • Video Icon

  News27, Jun 2020, 5:27 PM

  RT ನಗರದಲ್ಲಿ ಮಾಸ್ಕ್ ಜಾಗೃತಿ ಮೂಡಿಸಿದ DCP ಶಶಿಕುಮಾರ್

  ಬಿಟಿಎಂ ಲೇಔಟ್‌ನಲ್ಲೂ ಮಾಸ್ಕ್ ಧರಿಸದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಮಾಸ್ಕ್ ಧರಿಸದವರಿಗೆ ಪೊಲೀಸರು ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಕೊರೋನಾ ತಡೆಯುವ ನಿಟ್ಟಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ಖಾಕಿ ಪಡೆ ಫುಲ್ ಅಲರ್ಟ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
   

 • Education Jobs27, Jun 2020, 11:36 AM

  ಸಾಮಾಜಿಕ ಅಂತರ ಕಾಪಾಡುವಲ್ಲಿ PUC ವಿದ್ಯಾರ್ಥಿಗಳನ್ನು ಮೀರಿಸಿದ SSLC ಮಕ್ಕಳು!

  ಕೊರೋನಾ ಸೋಂಕು ಹರಡುವ ಆತಂಕ, ಭೀತಿಯ ನಡುವೆ ಗುರುವಾರದಿಂದ ಆರಂಭವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನಿರೀಕ್ಷೆಗೂ ಮೀರಿ ಶೇ.98.3ರಷ್ಟುವಿದ್ಯಾರ್ಥಿಗಳು ಹಾಜರಾಗಿದ್ದು, ಮಾಸ್ಕ್‌ ಧರಿಸುವಿಕೆಯ ಸಣ್ಣ ಕಿರಿ-ಕಿರಿಯ ನಡುವೆ ವಿದ್ಯಾರ್ಥಿಗಳು ರಾಜ್ಯಾದ್ಯಂತ ಸುಸೂತ್ರವಾಗಿ ಪರೀಕ್ಷೆ ಬರೆದಿದ್ದಾರೆ. 

 • NWKRTC BUS

  Karnataka Districts27, Jun 2020, 8:37 AM

  ಹಿರೇಕೆರೂರು: ಕೊರೋನಾ ಭೀತಿ, ಬಸ್‌ಗಳಲ್ಲಿ ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌

  ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಸರ್ಕಾರದ ನಿಯಮಗಳನ್ನು ಪಾಲಿಸದೇ ಅಧಿಕಾರಿಗಳು ಬಸ್‌ನಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅವಕಾಶ ನೀಡುತ್ತಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
   

 • Automobile26, Jun 2020, 9:03 PM

  ಕೊರೋನಾ ವೈರಸ್ ದೃಢಪಟ್ಟ ಬೆನ್ನಲ್ಲೇ 17 ಮಾರುತಿ ಸುಜುಕಿ ನೌಕರರು ನಾಪತ್ತೆ!

  ಸಾಕಷ್ಟು ಮುತುವರ್ಜಿ ವಹಿಸಿದ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಮಂದಿಗೆ ಕೊರೋನಾ ವೈರಸ್ ಕಾಡುತ್ತಿದೆ. ಮಾರುತಿ ಸುಜುಕಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ನೌಕರರಿಗೆ ಕೊರೋನಾ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ 17 ಮಂದಿಯೂ ನಾಪತ್ತೆಯಾಗಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

 • Video Icon

  state25, Jun 2020, 12:31 PM

  ಬೆಂಗ್ಳೂರು ಸೀಲ್‌ಡೌನ್ ಆಗ್ಬಾರ್ದು ಅಂದ್ರೆ ಹೀಗೆ ಮಾಡಿ; ಸಾರ್ವಜನಿಕರಿಗೆ ಸಿಎಂ ಕರೆ

  ಬೆಂಗಳೂರು ಮತ್ತೊಮ್ಮೆ ಸೀಲ್‌ಡೌನ್ ಆಗಬಾರದು ಅಂದ್ರೆ ಸರ್ಕಾರದ ನಿರ್ಧಾರಗಳಿಗೆ ಜನ ಸಹಕರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

 • Video Icon

  Karnataka Districts25, Jun 2020, 10:36 AM

  SSLC ಪರೀಕ್ಷೆ: ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌ ಎಂದ ವಿದ್ಯಾರ್ಥಿಗಳು..!

  ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದೆ. ಆದರೆ, ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿರುವ ಘಟನೆ ನಗರದಲ್ಲಿ ಇಂದು(ಗುರುವಾರ) ನಡೆದಿದೆ. ಪದೇ ಪದೆ ಎಚ್ಚರಿಸಿದ್ರೂ ಕೂಡ ವಿದ್ಯಾರ್ಥಿಗಳು ಸಾಮಾಜಿಕ ಅಂತರಕ್ಕೆ ಡೋಂಟ್‌ ಕೇರ್‌ ಅಂದಿದ್ದಾರೆ. 

 • Video Icon

  state23, Jun 2020, 12:28 PM

  ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತ ಬಿಬಿಎಂಪಿ ಅಧಿಕಾರಿಗಳು: ಕಲಾಸಿಪಾಳ್ಯ ಸೀಲ್‌ಡೌನ್

  ನಗರದ ಜನಸಾಂದ್ರತೆ ಇರುವ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಿಗ್ಗೆ ಮಾರ್ಕೆಟ್‌ನಲ್ಲಿ ಜನವೋ ಜನ. ಸಾಮಾಜಿಕ ಅಂತರವನ್ನು ಕೇಳಲೇಬೇಡಿ ಎನ್ನುವಂತಿತ್ತು. ಜನ ಯಾವುದಕ್ಕೂ ಕ್ಯಾರೆ ಅಂತಿರಲಿಲ್ಲ. ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಕಲಾಸಿಪಾಳ್ಯವನ್ನು ಸೀಲ್‌ಡೌನ್ ಮಾಡಿದೆ. ಮಾರ್ಕೆಟ್‌ ಹೊರಭಾಗವನ್ನು ಬಂದ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!