ಸಹೋದರಿ  

(Search results - 61)
 • Wedding

  India9, Dec 2019, 5:03 PM IST

  ಒಂದೇ ಮಂಟಪದಲ್ಲಿ ಅಕ್ಕ, ತಂಗಿಯನ್ನು ಮದುವೆಯಾದ: ಕೊಟ್ಟ ಕಾರಣ ಮಾತ್ರ ವಿಚಿತ್ರ!

  ಒಂದೇ ಮಂಟಪದಲ್ಲಿ ಇಬ್ಬರು ಸಹೋದರಿಯರನ್ನು ವರಿಸಿದ| ಮದುವೆ ಬೆನ್ನಲ್ಲೇ ಕಾರಣವನ್ನೂ ಬಹಿರಂಗಪಡಿಸಿದ ವಧು| ಪತ್ನಿಯೇ, ತಂಗಿಯನ್ನು ಮದುವೆಯಾಗಲು ಹೇಳಿದ್ದಂತೆ!

 • nawazuddin

  Cine World9, Dec 2019, 9:47 AM IST

  ಕ್ಯಾನ್ಸರ್‌ನಿಂದ ಖ್ಯಾತ ನಟನ 26 ವರ್ಷದ ಸಹೋದರಿ ನಿಧನ!

  ಬಾಲಿವುಡ್‌ ಖ್ಯಾತ ನಟ ನವಾಜುದ್ದೀನ್ ಸಿದ್ಧಿಕಿ ಸಹೋದರಿ ಶ್ಯಾಮಾ 8 ವರ್ಷದಿಂದ  ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಶನಿವಾರ ರಾತ್ರಿ ಕೊನೆ ಉಸಿರು ಎಳೆದಿದ್ದಾರೆ.

 • Public

  India7, Dec 2019, 1:45 PM IST

  ಕೇರಳ ಸಹೋದರಿಯರ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗಳ ಮೇಲೆ ಗುಂಪು ಥಳಿತ!

  ಹೈದರಾಬಾದ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬೆನ್ನಲ್ಲೇ, ಕೇರಳ ಅತ್ಯಾಚಾರ ಹಾಗೂ ಕೊಲೆ ಆರಪಿ ಮೇಲೆ ಗುಂಪು ಥಳಿತ| ಗಾಯಗೊಂಡ ಆರೋಪಿ ಆಸ್ಪತ್ರೆಗೆ ದಾಖಲು

 • Video Icon

  Woman5, Dec 2019, 4:41 PM IST

  ಏಡ್ಸ್ ಮಕ್ಕಳಿಗೆ ತಾಯಿಯ ಆರೈಕೆ: ತಬಸ್ಸುಮ್'ಗಿರಲಿ ನಿಮ್ಮೆಲರ ಹಾರೈಕೆ

  ಡಿಸೆಂಬರ್ 1 ವಿಶ್ವ ಏಡ್ಸ್ ದಿನ. ಏಡ್ಸ್ ಬಗ್ಗೆ ಜಾಗೃತಿಗೊಳ್ಳಲು ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಸರಕಾರ ಹಲವು ಕ್ರಮಗಳನ್ನು ಕೈಗೊಂಡು ಅದರ ನಿರ್ಮೂಲನೆಗೆ ಯೋಜನೆ ಹಾಕಿದೆ. ಆದರೆ ಇಲ್ಲಿ ವಿವರಿಸುವ ಸ್ನೇಹದೀಪದ ಕಥೆ ವಿಶ್ವ ಏಡ್ಸ್ ದಿನವನ್ನು ಅಣಕಿಸುತ್ತಿದೆ.
  ಹೌದು... ತಬಸ್ಸುಮ್ ಮಂಗಳೂರು ಸಮೀಪದ ಕೋಣಾಜೆಯ ಮಧ್ಯಮ ಕುಟುಂಬದ 34ರ ಹರೆಯದ ಪ್ರತಿಭಾವಂತ ಪದವೀಧರ ಮುಸ್ಲಿಂ ಮಹಿಳೆ. ಗಂಡ, ಇಬ್ಬರು ಮಕ್ಕಳಿದ್ದಾರೆ. ತಂದೆ, ತಾಯಿ, ಸಹೋದರ, ಸಹೋದರಿಯರೂ ಇದ್ದಾರೆ. ಆಕೆಗೆ ಮನೆ-ಮಕ್ಕಳು ಅಂತ ಗೃಹಿಣಿಯಾಗಿ ಸಂಸಾರ ನೋಡಿಕೊಳ್ಳುತ್ತಾ ಬದುಕಬಹುದಿತ್ತು. ಅಥವಾ ಒಂದೊಳ್ಳೆಯ ವೃತ್ತಿ ಅರಸಿ ಸಂಪಾದನೆಯ ಮಾರ್ಗ ಹಿಡಿಯಬಹುದಿತ್ತು. ಆದರೆ ಆಕೆಯ ದೃಷ್ಟಿಕೋನವೇ ಬೇರೆ. ಆಕೆ ಕೆಲವು ವರ್ಷಗಳ ಹಿಂದೆ ತೆಗೆದುಕೊಂಡ ಒಂದು ಮಹತ್ತರ ನಿರ್ಧಾರದಿಂದಾಗಿ ಇಂದು ಬೀದಿಪಾಲಾಗಿ ಮಾರಕರೋಗದಿಂದ ಸಾವಿನ ಕದತಟ್ಟಿರುವ 25 ಹೆಣ್ಮಕ್ಕಳು ಸಂತೋಷದಿಂದ ಜೀವನ ಸಾಗಿಸುವಂತಾಗಿದೆ. ಯಾವುದೇ ಚಿಂತೆಯಿಲ್ಲದೆ ನಲಿದಾಡುತ್ತಿದ್ದಾರೆ.
  ಹಾಗಾದರೆ ಏನ್ ಆ ಸ್ಟೋರಿ..ನಾವು ಹೇಳ ಹೊರಟಿರುವುದು ಯಾರರಬಗ್ಗೆ ನೋಡೋಣ  ಈ ವೀಡಿಯೋದಲ್ಲಿ.
   

 • hanging

  News5, Dec 2019, 3:45 PM IST

  ದಿಶಾ ಕೇಸ್‌: ಈವರೆಗೆ ಎಷ್ಟು ರಾಕ್ಷಸರನ್ನು ಗಲ್ಲಿಗೇರಿಸಿದ್ದೇವೆ?

  ನಿರ್ಭಯಾ ಮತ್ತು ಪ್ರಿಯಾಂಕಾ ರೆಡ್ಡಿ ನಡುವೆ, ಅದೆಷ್ಟು ಸಹೋದರಿಯರು ತಮ್ಮ ಗಂಡ, ಮಾವ, ಬಂಧು ಬಳಗ, ಕುಟುಂಬದ ಸ್ನೇಹಿತರಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದಾರೋ. ದಟ್ಟತಲೆಗೂದಲಿನಲ್ಲೇ ಮಾನ ಮುಚ್ಚಿಕೊಂಡ ಅಕ್ಕಮಹಾದೇವಿಯ ನಾಗರಿಕತೆ ಅಲ್ಲವೇ ನಮ್ಮದು? ಏನಾಯಿತು ನಮಗೆ? 2001ರ ಚಾಮರಾಜನಗರ ಪ್ರಕರಣದ ರೇಪಿಸ್ಟುಗಳು ಇನ್ನೂ ನೇಣುಗಂಬವೇರಿಲ್ಲ!

 • supriya

  India28, Nov 2019, 5:17 PM IST

  ಉದ್ಧವ್ ಠಾಕ್ರೆ ಸೋದರತ್ತೆ ಸುಪ್ರಿಯಾ ಸುಳೆ ಅತ್ತೆ: ಫ್ಯಾಮಿಲಿ ಒಂದಾಗಲ್ವೆ ಮತ್ತೆ?

  ರಾಜಕೀಯವಾಗಿ ವಿರೋಧಿಗಳಾಗಿದ್ದರೂ ಠಾಕ್ರೆ ಹಾಗೂ ಪವಾರ್ ಕುಟುಂಬ ವೈಯಕ್ತಿಕವಾಗಿ ಸುಮಧುರ ಬಾಂಧವ್ಯವನ್ನು ಹೊಂದಿವೆ. ಇದಕ್ಕೆ ಕಾರಣ ಸುಪ್ರಿಯಾ ಸುಳೆ ಅವರ ಪತಿ ಸದಾನಂದ್ ಸುಳೆ ಎಂದರೆ ನಿಮಗೆ ಅಚ್ಚರಿಯಾದೀತು. ಹೌದು, ಸುಪ್ರಿಯಾ ಪತಿ ಸದಾನಂದ್ ಸುಳೆ ಬಾಳಾಸಾಹೇಬ್ ಠಾಕ್ರೆ ಅವರ ಸ್ವಂತ ಸಹೋದರಿಯ ಪುತ್ರ.

 • CM Lakshman Savadi

  Karnataka Districts24, Nov 2019, 10:38 AM IST

  ಲಕ್ಷ್ಮಿ ಹೆಬ್ಬಾಳಕರ ಬಿಜೆಪಿಗೆ ಬಂದರೆ ಸ್ವಾಗತ: ಡಿಸಿಎಂ ಲಕ್ಷ್ಮಣ ಸವದಿ

  ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನನ್ನ ಸಹೋದರಿ ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ.ಅವರು ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ದೃವೀಕರಣ ಹಿನ್ನೆಲೆ ಅವರು ಕಾಂಗ್ರೆಸ್ ಪಕ್ಷ್ ಬಿಟ್ಟು ಬಿಜೆಪಿಗೆ  ಬರಬಹುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 
   

 • Lakshmi Hebbalkar

  Karnataka Districts21, Nov 2019, 1:17 PM IST

  ಜಾರಕಿಹೊಳಿ ಸಹೋದರಿಗೆ ಹೆದರಿದ್ರಾ ಲಕ್ಷ್ಮೀ ಹೆಬ್ಬಾಳಕರ್?

  ರೆಬರ್ ಬ್ರದರ್ಸ್ ಗೆ(ಜಾರಕಿಹೊಳಿ) ಹೆದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಉಸ್ತುವಾರಿ ಬದಲಿಸಿಕೊಂಡಿದ್ದಾರಾ ಎಂಬ ಮಾತುಗಳು ಕೇಳಬರಲಾರಂಭಿಸಿವೆ. ಇದಕ್ಕೆ ಇಂಬು ನೀಡುವಂತೆ ಲಕ್ಷ್ಮೀ ಹೆಬ್ಬಾಳಕರ್ ಗೋಕಾಕ್ ಉಪಚುನಾವಣೆಯ ಉಸ್ತುವಾರಿ ಬದಲಿಸಿಕೊಂಡಿದ್ದಾರೆ. 

 • 16 top10 stories

  News16, Nov 2019, 4:41 PM IST

  ಬಾಂಗ್ಲಾ ಮಣಿಸಿದ ಟೀಂ ಇಂಡಿಯಾ, ಬಿಜೆಪಿಯಲ್ಲಿ ಬಂಡಾಯ; ನ.16ರ ಟಾಪ್ 10 ಸುದ್ದಿ!

  ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮೂರೇ ದಿನಕ್ಕೆ ಪಂದ್ಯ ಮುಗಿಸಿದ ಕೊಹ್ಲಿ ಸೈನ್ಯ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಉಪಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಪ್ರಮುಖ 4 ಕ್ಷೇತ್ರಗಳಲ್ಲಿ ಸೋಲಿನ ಭೀತಿ ಎದುರಾಗಿದೆ. ಗಿರ್ಮಿಟ್ ನಿರ್ದೇಶಕನ ಕಣ್ಣೀರು, ಟೀಂ ಇಂಡಿಯಾ ಕ್ರಿಕೆಟಿಗನ ಸಹೋದರಿಗೆ ಬಾಲಿವುಡ್‌ನಲ್ಲಿ ಬಹುಬೇಡಿಕೆ ಸೇರಿದಂತೆ ನವೆಂಬರ್ 16ರ ಟಾಪ್ 10 ಸುದ್ದಿ ಇಲ್ಲಿವೆ.
   

 • rajkumar

  News15, Nov 2019, 10:12 AM IST

  ರಾಜ್ ಸಹೋದರಿ ನಾಗಮ್ಮ ಅಸ್ವಸ್ಥ; ಆಸ್ಪತ್ರೆಗೆ ದಾಖಲು

  ವರನಟ ಡಾ.ರಾಜಕುಮಾರ್ ಸಹೋದರಿ ನಾಗಮ್ಮ  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಗರದ ಜೆಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 

 • News6, Nov 2019, 7:28 PM IST

  ಸಹೋದರಿ ಆಯ್ತು, ಇದೀಗ ಬಾಗ್ದಾದಿ ಪತ್ನಿ ಅರೆಸ್ಟ್!

  ಹತ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಸಹೋದರಿ ಬಂಧನದ ಬೆನ್ನಲ್ಲೇ, ಟರ್ಕಿ ಪಡೆಗಳು ಇದೀಗ ಬಾಗ್ದಾದಿ ಪತ್ನಿಯನ್ನು ಬಂಧಿಸಿವೆ. ಈ ಕುರಿತು ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಮಾಹಿತಿ ನೀಡಿದ್ದಾರೆ.

 • Rasmiya

  News5, Nov 2019, 12:41 PM IST

  ಎಲ್ಲಿ ಓಡ್ತಿಯಾ?: ಟರ್ಕಿ ಪಡೆಗಳಿಗೆ ಸೆರೆಸಿಕ್ಕ ಬಾಗ್ದಾದಿ ತಂಗಿ ರಸ್ಮಿಯಾ!

  ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಬಾಗ್ದಾದಿ ಸಹೋದರಿ ರಸ್ಮಿಯಾ ಅವಾದ್ ಇದೀಗ ತಮ್ಮ ವಶದಲ್ಲಿದ್ದಾಳೆ ಎಂದು ಟರ್ಕಿ ಸೇನೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

 • Lifestyle Raksha Bandhan English
  Video Icon

  Special29, Oct 2019, 7:48 PM IST

  ಕರ್ತವ್ಯ ನೆನಪಿಸುವ ಯಮ ದ್ವಿತೀಯ: ಸಹೋದರ-ಸಹೋದರಿಯ ಪ್ರೀತಿಯ ಸಂಕೇತ!

  ಸಹೋದರಿ ಅಣ್ಣ ಅಥವಾ ತಮ್ಮನನ್ನು ಕರೆದು ಪೂಜಿಸುವ ದಿನವೇ ಸಹೋದರ ಬಿದಿಗೆ. ಹಿಂದೂ ಪಂಚಾಂಗದ ಕಾರ್ತಿಕ ಮಾಸದ ಶುಕ್ಲ ಪಕ್ಷದ ಬಿದಿಗೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಈ ಹಬ್ಬವನ್ನು ಯಮ ದ್ವಿತೀಯ ಎಂದೇ ಕರೆಯಲಾಗುತ್ತದೆ.

  ಈ ಹಬ್ಬದಂದು ಸಹೋದರಿ ತನ್ನ ಸಹೋದರರನ್ನು ಊಟಕ್ಕೆ ಕರೆದು ಅವರಿಷ್ಟವಾದ ಖಾದ್ಯ ತಯಾರಿಸಿ ಬಡಿಸುತ್ತಾಳೆ. ಸಹೋದರನಿಗೆ ಆರತಿ ಎತ್ತಿ, ಹಣೆಗೆ ತಿಲಕವಿಟ್ಟು ಪೂಜಿಸುತ್ತಾಳೆ. ಸಹೋದರಿಯನ್ನು ಸಹೋದರ ರಕ್ಷಿಸುವ ಕರ್ತವ್ಯವನ್ನು ಈ ಹಬ್ಬ ನೆನಪಿಸುತ್ತದೆ. ಅಲ್ಲದೇ ಸಹೋದರಿಯ ಆಶೀರ್ವಾದವೂ ಸಿಗುತ್ತೆ. ಈ ಹಬ್ಬದ ಮಹತ್ವವೇನು? ಹೇಗೆ ಆಚರಿಸುತ್ತಾರೆ? ಇಲ್ಲಿದೆ ಮತ್ತಷ್ಟು ಕುತೂಹಲಕಾರಿ ಮಾಹಿತಿ...

 • child rape

  INDIA28, Oct 2019, 1:44 PM IST

  ಬಾಲಕಿಯರ ರೇಪ್, ಆತ್ಮಹತ್ಯೆ ಪ್ರಕರಣ: ಸ್ಮೃತಿ ಮಧ್ಯಪ್ರವೇಶಕ್ಕೆ ಸಂಸದ ರಾಜೀವ್ ಆಗ್ರಹ

  • ಕೇರಳವನ್ನು ಬೆಚ್ಚಿಬೀಳಿಸಿದ್ದ ಸಹೋದರಿಯರಿಬ್ಬರ ರೇಪ್, ಆತ್ಮಹತ್ಯೆ ಪ್ರಕರಣ
  • ಆಡಳಿತರೂಢ ಎಡರಂಗದ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಆರೋಪಿಗಳು
  • ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿ ಕೋರ್ಟ್ ಆದೇಶ; ರಾಜ್ಯಾದ್ಯಂತ ಜನಾಕ್ರೋಶ 
 • Karnataka Districts24, Sep 2019, 1:17 PM IST

  ಅಕ್ರಮ ಗಣಿಗಾರಿಕೆ: ಡಾ. ರಾಜ್ ತಂಗಿ ನಾಗಮ್ಮ ಆರೋಪ

  ಡಾ.ರಾಜ್ ಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಕುಟುಂಬದ ಎಲ್ಲ ಸದಸ್ಯರು ದೀಕ್ಷೆ ಪಡೆದು ಪೂಜೆ ಸಲ್ಲಿಸುತ್ತಿದ್ದ ಮಠಕ್ಕೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಾ.ರಾಜ್ ಸಹೋದರಿ ನಾಗಮ್ಮ ಅವರು ಆರೋಪಿಸಿದ್ದಾರೆ. 200 ವರ್ಷ ಇತಿಹಾಸ ವಿರುವ ಬಿಳಿಗುಡ್ಡೆ ಮಠದ ಮುಂಭಾಗ ಕೆರೆಯ ಪಕ್ಕದ ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ ಅನುಮತಿ ಪಡೆದು ಪಟ್ಟಾ ಭೂಮಿ ಯಲ್ಲದೆ ಮಠದ ಸರ್ವೆ ನಂ.730ರ 1.10 ಎಕರೆ ಜಾಗವನ್ನು ಆಕ್ರಮಿಸಿಕೊಂಡು ಕರಿಕಲ್ಲು ಗಣಿಗಾರಿಕೆ  ನಡೆಸಲಾಗುತ್ತಿದೆ ಎಂದಿದ್ದಾರೆ.