Search results - 17 Results
 • NEWS8, Apr 2019, 8:38 AM IST

  ಭಾರೀ ಸಂಕಷ್ಟದಲ್ಲಿದೆ ಬಿಎಂಟಿಸಿ

  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.  ಇತ್ತೀಚೆಗಷ್ಟೇ ನೌಕರರಿಗೆ ಆರೋಗ್ಯ ಸೇವೆ ನೀಡಿದ ಆಸ್ಪತ್ರೆಗಳಿಗೆ ಬಿಎಂಟಿಸಿ ತನ್ನ ಪಾಲಿನ ಹಣ ಪಾವತಿಸಿರಲಿಲ್ಲ. ಈಗ ನೌಕರರ ಸಹಕಾರ ಸಂಘಗಳಲ್ಲಿ ನೌಕರರು ಪಡೆದಿರುವ ಸಾಲದ ಕಂತಿನ ಹಣ ಬಾಕಿ ಉಳಿಸಿಕೊಂಡಿರುವುದು ಬಹಿರಂಗಗೊಂಡಿದೆ. 

 • Sushma Swaraj

  NEWS1, Mar 2019, 4:30 PM IST

  ಒಐಸಿ ಸಭೆಯಲ್ಲಿ ಸುಷ್ಮಾ ಸ್ವರಾಜ್: ಭಯೋತ್ಪಾದನೆ ವಿರುದ್ಧ ಗುಡುಗು!

  ಭಯೋತ್ಪಾದನೆಯಿಂದ ಹಿಂಸಾಚಾರ ಹೆಚ್ಚಾಗಿದ್ದು, ಭಯೋತ್ಪಾದನೆ ವಿರುದ್ಧ ಜಗತ್ತಿನ ದೇಶಗಳೆಲ್ಲಾ ಒಟ್ಟಾಗಿ ಹೋರಾಡಬೇಕಿದೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ) ಸಮಾವೇಶದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

 • NEWS23, Feb 2019, 7:17 PM IST

  ಸುಷ್ಮಾ ಸ್ವರಾಜ್‌ಗೆ ಇಸ್ಲಾಮಿಕ್ ಸಹಕಾರ ಸಂಘಟನೆ ಆಹ್ವಾನ!

  ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವರ ಸಭೆಗೆ ಇದೇ ಮೊದಲ ಬಾರಿಗೆ, ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನ ನೀಡಿದೆ. ಉದ್ಘಾಟನಾ ಭಾಷಣ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಲಾಗಿದೆ.

 • NEWS19, Dec 2018, 11:49 AM IST

  ಇದಕ್ಕೂ ಶುರುವಾಯ್ತು ಮೀಸಲಾತಿ..!

  ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇಲ್ಲದಿರುವ ಹಿನ್ನೆಲೆಯಲ್ಲಿ ಸಹಕಾರ ಕಾನೂನಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿಯೇ ಮೀಸಲಾತಿ ನೀಡಬೇಕು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಶಿಫಾರಸು ಮಾಡಿದೆ.

 • state3, Dec 2018, 8:54 AM IST

  ಸಾಲದ ಸುಳಿಯಲ್ಲಿ ಬಿಎಂಟಿಸಿ, ನೌಕರರ ಭತ್ಯೆಗೂ ಹಣವಿಲ್ಲ!

  ಕಳೆದ ನಾಲ್ಕೈದು ವರ್ಷಗಳಿಂದ ನಷ್ಟದ ಹಳಿಯಲ್ಲಿ ತೆವಳುತ್ತಿರುವ ಬಿಎಂಟಿಸಿ ಪ್ರಸ್ತುತ 1 ಸಾವಿರ ಕೋಟಿ ರೂಪಯಿ ಸಾಲ ಹೊಂದಿದೆ. ಇದರ ಜತೆಗೆ ನೌಕರರ ಗ್ರ್ಯಾಚ್ಯುಯಿಟಿ, ರಜೆ ನಗದೀಕರಣ, ಬೋನಸ್‌, ಸಹಕಾರ ಸಂಘದ ವಿಮಾ ಕಂತು ಸೇರಿದಂತೆ ವಿವಿಧ ಭತ್ಯೆಗಳ ಸುಮಾರು 200 ಕೋಟಿ ಬಾಕಿ ಉಳಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ನಿಗಮದ ನೆರವಿಗೆ ಧಾವಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

 • Mysuru5, Sep 2018, 9:37 PM IST

  ಜೆಡಿಎಸ್ ಬೆಂಬಲಿತರು ಅವಿರೋಧ ಆಯ್ಕೆ

  ಧರ್ಮಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ನಾಗಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಧರ್ಮಾಪುರದ ರಾಮಚಂದ್ರ ಅವಿರೋಧ ಆಯ್ಕೆ

 • JDS New

  Mysuru30, Aug 2018, 3:59 PM IST

  ತೆನೆ ಪಕ್ಷಕ್ಕೆ ಭರ್ಜರಿ ಜಯ

  • ಕೆಲ್ಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜೆಡಿಎಸ್‌ನ 9 ಹಾಗೂ ಕಾಂಗ್ರೆಸ್‌ನ 3 ಬೆಂಬಲಿತರಿಗೆ ಜಯ
  • ರಾವಂದೂರಿನಲ್ಲಿ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಒಂದು ಸ್ಥಾನ ಜಯ 
 • Mysuru29, Aug 2018, 5:49 PM IST

  ಮೈಸೂರಿನಲ್ಲಿ ಜೆಡಿಎಸ್ ಬೆಂಬಲಿತರ ಜಯಭೇರಿ

  • ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆ
  • ಪಂಚವಳ್ಳಿ, ಕಂಪಲಾಪುರದಲ್ಲಿ 24 ಅಭ್ಯರ್ಥಿಗಳು ಜಯ 
 • NEWS5, Aug 2018, 9:25 AM IST

  ಭಾರತೀಯ ಸೇನೆಗೆ ಹೋಗುತ್ತಾ ಹಾಸನದ ಹಾಲು..?

  ಕೋಲಾರ-ಚಿಕ್ಕಬಳ್ಳಾಪುರ  ಹಾಲು ಉತ್ಪಾದಕ ಸಹಕಾರ ಸಂಘಗಳ ಒಕ್ಕೂಟದಿಂದ (ಕೋಚಿಮುಲ್) ಭಾರತೀಯ ಸೇನೆಗೆ ಸರಬರಾಜು ಮಾಡಲಾಗುತ್ತಿರುವ  ಹಾಲಿನ ಪ್ರಮಾಣವನ್ನು ಕಡಿತಗೊಳಿಸದೆ ಮುಂದುವರಿಸಬೇಕು ವೀರಪ್ಪ ಮೋಯ್ಲಿ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದೆ. 

 • Hulagola

  NEWS4, Jul 2018, 3:40 PM IST

  ನಾಡಿಗೇ ಮಾದರಿ ಹುಳಗೋಳ ಸಹಕಾರ ಸಂಘ

  ಹುಳಗೋಳ ಸಹಕಾರಿ ಸಂಘದಲ್ಲಿ  ರೈತರ ಕೃಷಿ-ತೋಟಗಾರಿಕಾ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆಗೆ  ಸಂಪರ್ಕ, ಕೃಷಿಗೆ ಬೇಕಾದ ಎಲ್ಲ ಸಲಕರಣೆ, ಗೊಬ್ಬರ, ಕಿರಾಣಿ ಸೌಲಭ್ಯ, ಸಹಕಾರಿ ಡೈರಿ, ಪಶು ಆಹಾರ, ಎಲ್ಲ ರೀತಿಯ ಕೃಷಿ ಸಾಲ, ಸಾಂಬಾರು ಬೆಳೆಗಳ ಸಂಸ್ಕರಣೆ, ಸಾಂಬಾರು ಗಿಡಗಳು ಇದೆಲ್ಲಾ ಸೇರಿದಂತೆ ರೈತರಿಗೆ ಅನುಕೂಲವಾಗುವಂತಹ ಎಲ್ಲಾ ಸೌಲಭ್ಯಗಳೂ ಇಲ್ಲಿವೆ. ಇದರ ಜೊತೆಗೆ ಕಳೆದ 25 ವರ್ಷಗಳಿಂದ ಇಲ್ಲಿ ಕ್ಯಾಶ್‌ಲೆಸ್ ವ್ಯವಹಾರ ನಡೆಯುತ್ತಿರುವುದು ದೊಡ್ಡ ಹೆಮ್ಮೆ.

 • 13, Jun 2018, 8:28 AM IST

  ಬಡವರ ಮನೆ ಅಡಿಪಾಯಕ್ಕೂ ಸರ್ಕಾರದಿಂದ ಹಣ: ಖಾದರ್‌

  ಮನೆಯ ಅಡಿಪಾಯ ನಿರ್ಮಾಣ ಮಾಡುವ ಚೈತನ್ಯವನ್ನು ಹೊಂದಿಲ್ಲದ ಬಡವರಿಗೆ ಸಹಕಾರ ಸಂಘಗಳ ಮೂಲಕ ಹಣಕಾಸಿನ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ.  ಈಗಿರುವ ನಿಯಮದ ಪ್ರಕಾರ ಫಲಾನುಭವಿ ಮನೆಯ ಅಡಿಪಾಯ ಹಾಕಿಕೊಂಡ ನಂತರವೇ ಮನೆ ಕಟ್ಟಲು ಸರ್ಕಾರ ಹಣ ಬಿಡುಗಡೆ ಮಾಡುತ್ತದೆ. ಆದರೆ ಅನೇಕ ಬಡವರಿಗೆ ಅಡಿಪಾಯ ಹಾಕುವಷ್ಟುಸಾಮರ್ಥ್ಯ ಇಲ್ಲದಿರುವ ಹಿನ್ನೆಲೆಯಲ್ಲಿ ನೆರವಾಗುವ ಚಿಂತನೆಯನ್ನು ಸರ್ಕಾರ ಹೊಂದಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಯು.ಟಿ. ಖಾದರ್‌ ತಿಳಿಸಿದರು.

 • Narendra Modi

  10, Jun 2018, 2:13 PM IST

  ಪಾಕ್ ಅಧ್ಯಕ್ಷರ ಕೈ ಕುಲುಕಿದ ಪ್ರಧಾನಿ ಮೋದಿ

  ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಮಾಮ್ನೂನ್ ಹುಸೇನ್ ಪರಸ್ಪರ ಕೈ  ಕುಲುಕಿದ್ದಾರೆ.  ಹೌದು ಈ ಹಸ್ತಲಾಘವಕ್ಕೆ ಸಾಕ್ಷಿಯಾಗಿದ್ದು  ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ. ಉಭಯ ರಾಷ್ಟ್ರದ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಈ ಮುಖಾಮುಖಿಯಾಗಿದೆ.  ಶೃಂಗಸಭೆಯಲ್ಲಿ ವಿವಿಧ ರಾಷ್ಟ್ರಗಳ ನಾಯಕರೊಂದಿಗೆ ಮೋದಿ ಮಾತುಕತೆ ನಡೆಸಿದರು. ಆದರೆ ಭಾರತ ಮತ್ತು ಪಾಕಿಸ್ತಾನದ ನಾಯಕರ ನಡುವೆ ಯಾವುದೇ ದ್ವಿಪಕ್ಷೀಯ ಮಾತುಕತೆ ನಡೆಯಲಿಲ್ಲ.

 • Modi-Xi

  9, Jun 2018, 9:52 PM IST

  ಬ್ರಹ್ಮಪುತ್ರ ದತ್ತಾಂಶ ಹಂಚಿಕೆಗೆ ಮೋದಿ-ಕ್ಸಿ ಅಸ್ತು..!

  ಬ್ರಹ್ಮಪುತ್ರ ನದಿಯಲ್ಲಿ ಹರಿಯುವ ನೀರಿನ ಪ್ರಮಾಣದ ಬಗ್ಗೆ ದತ್ತಾಂಶ ಹಂಚಿಕೊಳ್ಳುವ ಒಪ್ಪಂದ ಸೇರಿದಂತೆ ಎರಡು ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಚೀನಾ ಸಹಿ ಹಾಕಿವೆ. ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ(ಎಸ್ ಸಿಒ)ಯಲ್ಲಿ ಪಾಲ್ಗೊಳ್ಳಲು ಚೀನಾದ ಕ್ವಿಂಗ್ಡಾವೋಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

 • Modi China visit

  9, Jun 2018, 5:00 PM IST

  ಎಸ್ ಸಿ ಒ ಶೃಂಗಸಭೆಗಾಗಿ ಚೀನಾಗೆ ಬಂದಿಳಿದ ಪ್ರಧಾನಿ ಮೋದಿ

  ಎರಡು ದಿನಗಳ 18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾದ ಕ್ವಿಂಗ್ಡಾವೊಗೆ ಬಂದಿಳಿದಿದ್ದಾರೆ. ಶೃಂಗಸಭೆಯ ಭಾಗವಾಗಿ ನರೇಂದ್ರಮೋದಿ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಲಿದ್ದಾರೆ.

 • 29, May 2018, 7:39 AM IST

  ‘ಕೈ’ಗೆ ಮತ ಹಾಕುವಂತೆ ನಂಬಿಸಿ ಹಾಕಿದರು ‘ಬಾಂಡ್‌’ ಟೋಪಿ

  ಚುನಾವಣೆವೇಳೆ ಮತದಾರ ಪ್ರಭುವಿಗೆ ಹಣ, ಮದ್ಯ, ಬಾಡೂಟ ಇತ್ಯಾದಿ ಹತ್ತಿಪ್ಪತ್ತು ಆಮಿಷಗಳನ್ನೊಡ್ಡುವುದೇ ಕೇಳಿದ್ದೇವೆ. ಆದರೆ ಇತ್ತೀಚಿಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಸಹಕಾರ ಸಂಘವೊಂದು ಏಕಾಏಕಿ ಉಚಿತ ಬಾಂಡ್‌ಗಳನ್ನೇ ನೀಡಿ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.