Search results - 1800 Results
 • Ananth Kumar

  NEWS14, Nov 2018, 4:55 PM IST

  ಪಶ್ಚಿಮವಾಹಿನಿಯಲ್ಲಿ ಅನಂತ್ ಚಿತಾ ಭಸ್ಮ ವಿಸರ್ಜನೆ

  ಕಳೆದ ನ.12ರಂದು ನಿಧನರಾದ ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಚಿತಾಭಸ್ಮವನ್ನು ಬುಧವಾರ ಪಶ್ಚಿಮವಾಹಿನಿಯಲ್ಲಿ ವಿಸರ್ಜಿಸಲಾಯಿತು. ಅನಂತ್ ಚಿತಾಭಸ್ಮ ಹೊತ್ತು ತಂದ ಅವರ ಸಹೋದರ ಹಾಗೂ ಕುಟುಂಬಸ್ಥರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರೂ ಭಾಗಿಯಾಗಿದ್ದರು.

 • Hassan14, Nov 2018, 4:42 PM IST

  ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಂದ ಹಿಂದೇಟು?

  ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ಅವಧಿ ಮುಗಿದರೂ, ಹಾಸನ ನಗರಪಾಲಿಕೆ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ನಗರಸಭೆ ಆಡಳಿತ ಮೌನವಾಯ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ. ಏನಿದು ಪ್ರಕರಣ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್... 

 • NEWS14, Nov 2018, 4:24 PM IST

  ದೆಹಲಿಗೆ ಡಿಸಿಎಂ ದೌಡು, ಸಂಪುಟ ವಿಸ್ತರಣೆ ಪಕ್ಕಾ, ಯಾರಿಗೆ ಅದೃಷ್ಟ?

  ಅಂತೂ-ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮಯ ಕೂಡಿ ಬಂದಿದೆಯೇ? ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಆಕಾಂಕ್ಷಿಗಳಿಗೆ ಈ ಬಾರಿ ಹಬ್ಬ ಮುಗಿದ ಮೇಲೆಯೇ ಶುಭ ಸುದ್ದಿ ಸಿಗುವುದು ಬಹುತೇಕ ಖಚಿತವಾಗಿದೆ.

 • Janardhan reddy

  state14, Nov 2018, 9:20 AM IST

  ಅಬ್ಬಾ ! ಜನಾರ್ದನ ರೆಡ್ಡಿ ಬಳಿ ಇರುವ ಒಟ್ಟು ಆಸ್ತಿ ಎಷ್ಟು..?

  ಆ್ಯಂಬಿಡೆಂಟ್ ಅವ್ಯವಹಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಚಿವ ಗಣಿ ದಣಿ ಜನಾರ್ದನ ರೆಡ್ಡಿ ಬಳಿ ಕೋಟಿ ಕೋಟಿ ಮೌಲ್ಯದ ಆಸ್ತಿ ಇದ್ದು ಇದನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದು ಎಸ್ ಆರ್ ಹಿರೇಮಠ್ ಹೇಳಿದ್ದಾರೆ. 

 • Janardhan Reddy

  state14, Nov 2018, 9:07 AM IST

  ರೆಡ್ಡಿ ಬಗ್ಗೆ ಇರುವ ಮಹತ್ವದ ಸಾಕ್ಷ್ಯ ಯಾವುದು ..?

  ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಬಂಧಿಸಿದ ಸಿಸಿಬಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಒಂದನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೆಡ್ಡಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದು, ವಿಚಾರಣೆ ಬಳಿಕ  ಜೈಲಾ ಬೇಲಾ ಎನ್ನುವುದು ನಿರ್ಧಾರವಾಗಲಿದೆ.

 • Modi

  NEWS13, Nov 2018, 8:03 PM IST

  ಅನಂತ್‌ ಬಳಿ ಇದ್ದ ರಾಸಾಯನಿಕ ಗೊಬ್ಬರ ಖಾತೆ ಮತ್ತೆ ಕರ್ನಾಟಕಕ್ಕೆ ನೀಡಿದ ಮೋದಿ

  ಕೇಂದ್ರ ಸಚಿವ ಅನಂತ್ ಕುಮಾರ್ ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ಅವರ ಬಳಿ ಇದ್ದ ಖಾತೆಯನ್ನು ಪ್ರಧಾನಿ ಮೋದಿ ಬೇರೆಯವರಿಗೆ ಹಂಚಿಕೆ ಮಾಡಿದ್ದಾರೆ.

 • Ananth Kumar

  state13, Nov 2018, 2:59 PM IST

  ಅದಮ್ಯದೆಡೆಗೆ ಪಯಣಿಸಿದ 'ಅನಂತ' ಚೇತನ

  ಹಿಂದು ಸ್ಮಾರ್ಥ ಬ್ರಾಹ್ಮಣ ಪಂಗಡಕ್ಕೆ ಸೇರಿರುವ ಅನಂತ್ ಕುಮಾರ್ ಅವರ ಶವ ಸಂಸ್ಕಾರವನ್ನು ಇದೇ ಪದ್ಧತಿಯನುಸಾರ ನಡೆಸಲಾಗಿದೆ. ಮೃತದೇಹಕ್ಕೆ ಅಗ್ನಿಸ್ಪರ್ಶ ನಡೆಸುವುದಕ್ಕೂ ಮೊದಲು ಪುರೋಹಿತರು ವಿಷ್ಣು ಸಹಸ್ರನಾಮ ಪಠಿಸಿ. ಮಂತ್ರಘೋಷಗಳೊಂದಿಗೆ ಅನಂತ್ ಕುಮಾರ್ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

 • Ananth Kumar

  state13, Nov 2018, 11:08 AM IST

  ಅನಂತ್‌ ನೆಚ್ಚಿನ ಮೈದಾನದಲ್ಲಿ ಅಂತಿಮ ದರ್ಶನ

  ಅನಂತಕುಮಾರ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಮಲ್ಲೇಶ್ವರದ ಬಿಜೆಪಿ ಕಚೇರಿಗೆ ಕೊಂಡೊಯ್ದು ಬಳಿಕ ನ್ಯಾಷನಲ್‌ ಕಾಲೇಜು ಮೈದಾನಕ್ಕೆ ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಸಕಲ ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರದ ವಿಧಿವಿಧಾನದ ಪ್ರಕಾರ ನಡೆಯಲಿದೆ. 

 • Ravi Hegde and Ananth Kumar

  state13, Nov 2018, 10:44 AM IST

  ಅನ್ನ ಸಾಂಬಾರ್‌ ವಿತ್‌ ಅನಂತ್ ಕುಮಾರ್‌

  ರಾಮಕೃಷ್ಣ ಹೆಗಡೆ, ಮೋದಿಗೆ ಒಲಿದಂಥ ಅದೃಷ್ಟಅನಂತ್‌ಗೆ ಯಾಕೆ ಒಲಿಯಲಿಲ್ಲವೋ! ಇವರಿಗಿರುವ ಸಾಮರ್ಥ್ಯ ಅನಂತ್ ಕುಮಾರ್‌ಗೆ ಇರಲಿಲ್ಲ ಎಂದಲ್ಲ. ಅತಿ ಚಿಕ್ಕ ವಯಸ್ಸಿನಲ್ಲೇ ಕೇಂದ್ರ ಸಚಿವರಾದದ್ದು ಸಣ್ಣ ಸಾಧನೆಯಲ್ಲ.

 • ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮೂಲಕ ಗುರುತಿಸಿಕೊಂಡಿದ್ದರು.

  INDIA13, Nov 2018, 10:36 AM IST

  ಗಳಸ್ಯ ಕಂಠಸ್ಯರಾಗಿದ್ದ ಅನಂತ್-ಯಡಿಯೂರಪ್ಪ

  ದಿಲ್ಲಿಯಲ್ಲಿ ಕನ್ನಡಿಗರ ಧ್ವನಿಯಾಗಿದ್ದ ಅನಂತ್ ಕುಮಾರ್ ಬಗ್ಗೆ ಹೇಳಿಕೊಂಡಷ್ಟೂ ಮುಗಿಯದು. ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ ಪ್ರಶಾಂತ್ ನಾಥು ಅನಂತ್ ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿದ್ದು ಹೀಗೆ...

 • Siddaramaiah

  state13, Nov 2018, 8:57 AM IST

  ನಮ್ಮ ನಡುವೆ ಸ್ನೇಹ-ಪ್ರೀತಿಯ ಕೊರತೆ ಇರಲಿಲ್ಲ: ಸಿದ್ದರಾಮಯ್ಯ

  ಸ್ನೇಹ ಜೀವಿಯಾಗಿದ್ದ ಅನಂತಕುಮಾರ್‌ ಅವರು ಹಾಗೂ ನಾವು ಬೇರೆ ಬೇರೆ ಪಕ್ಷದಲ್ಲಿದ್ದರೂ ಸ್ನೇಹ ಹಾಗೂ ಪ್ರೀತಿ ಕೊರತೆ ಇರಲಿಲ್ಲ. ನಮ್ಮ ಹಾಗೂ ಅವರ ಸ್ನೇಹ ಚೆನ್ನಾಗಿತ್ತು. ಪಕ್ಷ ಮತ್ತು ರಾಜಕಾರಣ ಬೇರೆ. ಮನುಷ್ಯ ಸಂಬಂಧಗಳೇ ಬೇರೆ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ- ಮಾಜಿ ಸಿಎಂ ಸಿದ್ದರಾಮಯ್ಯ

 • Ananth Kumar

  state13, Nov 2018, 8:36 AM IST

  59ನೇ ವರ್ಷಕ್ಕೆ ಕಂಟಕ: ಅಪ್ಪನೇ ನುಡಿದಿದ್ದರು ಸಾವಿನ ಭವಿಷ್ಯ!

  ‘ಒಮ್ಮೆ ನನ್ನ ತಂದೆ ನಾರಾಯಣ ಶಾಸ್ತ್ರಿಗಳು ಮಗನೇ ನಿನಗೆ ರಾಜಯೋಗವಿದೆ ಎಂದು ಹೇಳಿದ್ದರು. ಆದರೆ, 59ನೇ ವರ್ಷಕ್ಕೆ ಒಂದು ಕಂಟಕವಿದೆ. ಅದರಿಂದ ಪಾರಾದರೆ ಮಾತ್ರ ಬಹುಕಾಲ ಬದುಕುತ್ತೀಯಾ ಎಂದು ಹೇಳಿದ್ದರು’ ಎಂದು ಸ್ವತಃ ಅನಂತಕುಮಾರ್‌ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.

 • Bommai Ananth Kumar

  state13, Nov 2018, 7:32 AM IST

  ನಾನು, ಅನಂತ್‌ ಕಾಲೇಜಿನಲ್ಲಿ ಬೆಂಚ್‌ಮೇಟ್‌

  ಅವರಿಲ್ಲದಿದ್ದರೆ ಕೃಷ್ಣಾ, ಕಾವೇರಿ ವಿವಾದದಲ್ಲಿ ರಾಜ್ಯಕ್ಕೆ ಈಗ ದೊರಕಿರುವಷ್ಟು ನ್ಯಾಯ ಸಿಗುತ್ತಿರಲಿಲ್ಲ

 • Narendra Modi

  NEWS12, Nov 2018, 9:29 PM IST

  ಅನಂತ್‌ಕುಮಾರ್ ಅಂತಿಮ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ

  ಕೇಂದ್ರ ಸಚಿವ ಅನಂತ್ ಕುಮಾರ್ ಅಂತಿಮ ದರ್ಶನ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಸಿಎಂ ಕುಮಾರಸ್ವಾಮಿ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಬರಮಾಡಿಕೊಂಡರು.

 • Mangaluru

  NEWS12, Nov 2018, 7:47 PM IST

  ದಿಢೀರ್ ರಜೆ, ಬೆಂಗಳೂರಿಗೆ ಬಂದ ಮಂಗಳೂರಿಗನ ಆಕ್ರೋಶದ ಪರಿ ವೈರಲ್

  ನಾಯಕರು, ರಾಜಕಾರಣಿಗಳು ಅಥವಾ ಸಚಿವ ಸ್ಥಾನದಲ್ಲಿ ಇರುವವರು ನಿಧನರಾದಾಗ ಸಾರ್ವತ್ರಿಕ ರಜೆ ನೀಡಬೇಕೆ? ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಸರಕಾರ ಒಂದಿಷ್ಟು ರಜೆಗಳನ್ನು ಕಾಯ್ದಿರಿಸಿಯೂ ಇರುತ್ತದೆ. ಆದರೆ ಜನರು ಈ ದಿಢೀರ್ ರಜೆಗಳಿಂದ ತೊಂದರೆಗೆ ಗುರಿಯಾಗುತ್ತಾರೆ. ಅದೆ ರೀತಿ ತೊಂದರೆಗೆ ಗುರಿಯಾದವರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿರುವ ಪರಿ ನೋಡಿಕೊಂಡು ಬನ್ನಿ....