ಸಂಬಳ

(Search results - 181)

04 top10 stories

News4, Aug 2020, 5:00 PM

ಕರ್ನಾಟಕದಲ್ಲಿ ಪೊಲೀಸ್ ಸರ್ಪಗಾವಲು, ವೇತನ ಸಿಗದೆ ಕ್ರಿಕೆಟಿಗರು ಕಂಗಾಲು; ಆ.4ರ ಟಾಪ್ 10 ಸುದ್ದಿ!

ಆಗಸ್ಟ್ 5 ರಂದು ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಪೊಲೀಸ್ ಸರ್ಪಗಾವಲು ಹಾಕಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಕಾರ್ಯಕ್ರಮಕ್ಕೆ ಎಲ್.ಕೆ ಅಡ್ವಾಣಿ, ಮರಳಿ ಮನೋಹರ್ ಜೋಶಿ ಆಗಮಿಸುತ್ತಿಲ್ಲ. ಕಳೆದ 10 ತಿಂಗಳಿನಿಂದ ಬಿಸಿಸಿಐ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳ ನೀಡಿಲ್ಲ. ದೀಪಿಕಾ ಪಡುಕೋಣೆ ಕುರಿತು ಸಿದ್ದಾರ್ಥ್ ಮಲ್ಯ ಮಾತು, ವ್ಯಾಟ್ಸಾಪ್ನಲ್ಲಿ 50 ಮಂದಿ ಜೊತೆ ವಿಡಿಯೋ ಕಾಲ್ ಸೇರಿದಂತೆ ಆಗಸ್ಟ್ 4ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ವಿವರ ಇಲ್ಲಿವೆ.

team India

Cricket4, Aug 2020, 12:36 PM

ಬಿಸಿಸಿಐ ಕಳೆದ 10 ತಿಂಗಳಿನಿಂದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಸಂಬಳವನ್ನೇ ನೀಡಿಲ್ಲ..!

ಕೊರೋನಾ ವೈರಸ್‌ನಿಂದಾಗಿ ಮಾರ್ಚ್‌ ತಿಂಗಳ ಎರಡನೇ ವಾರದಿಂದ ಇಲ್ಲಿಯವರೆಗೆ ದೇಶದಲ್ಲಿ ಯಾವುದೇ ಕ್ರೀಡಾಚಟುವಟಿಕೆಗಳು ನಡೆದಿಲ್ಲ. ಇದೀಗ ಬಿಸಿಸಿಐ ಯುನೈಟೈಡ್ ಅರಬ್ ಎಮಿರಾಟ್ಸ್‌ನಲ್ಲಿ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜಿಸಲು ಸಜ್ಜಾಗಿದೆ.

• Video Icon

Festivals3, Aug 2020, 3:01 PM

ಮನಸ್ಸನ್ನು ನಿಗ್ರಹಿಸಿಕೊಳ್ಳುವುದು ಹೇಗೆ? ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮಾತುಗಳಲ್ಲಿ ಕೇಳಿ

ನಮ್ಮ ಮನಸ್ಸಿನಲ್ಲಿ ತೃಪ್ತಿ ಅನ್ನುವುದೇ ಇಲ್ಲ. ಮನಸ್ಸಿನಲ್ಲಿ ಅತೃಪ್ತಿಯೊಂದು ಕಾಡುತ್ತಿರುತ್ತದೆ. ನಾನು ಹೇಗೋ ಇರಬೇಕಿತ್ತು, ಇನ್ಹೇಗೋ ಇದ್ದೇನೆ. ನಾನು ಆ ಕೆಲಸದಲ್ಲಿ ಇರಬೇಕಿತ್ತು, ಅಷ್ಟು ಸಂಬಳ ಬರಬೇಕಿತ್ತು ಅಂತೆಲ್ಲಾ ಯೋಚಿಸುತ್ತಿರುತ್ತೇವೆ. ಇದಕ್ಕೆ ಇಂದ್ರಿಯಗಳ ನಿಗ್ರಹ ಬಹಳ ಮುಖ್ಯ. ಮನಸ್ಸು ನಿಗ್ರಹದಲ್ಲಿದ್ದರೆ ನಾವು ಸರಿಯಾಗಿರುತ್ತೇವೆ. ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಬಹಳಷ್ಟು ಮಂದಿಗೆ ಬರುವುದಿಲ್ಲ. ಹಾಗಾದರೆ ಮನಸ್ಸನ್ನು ನಿಗ್ರಹದಲ್ಲಿಟ್ಟುಕೊಳ್ಳುವುದು ಹೇಗೆ?  ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿ...

• BBMP

state25, Jul 2020, 8:53 AM

'ಸಂಬಳ ಕೊಡದಿದ್ರೆ ಬಿಬಿಎಂಪಿ ಮುಂದೆ ಕಸ ಸುರಿತೇವೆ'

ಕಳೆದ 9 ತಿಂಗಳಿಂದ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಕಾಂಪ್ಯಾಕ್ಟರ್‌ ವಾಹನ ಚಾಲಕರು ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದು, ಮುಂದಿನ 24 ತಾಸಿನೊಳಗೆ ವೇತನ ಪಾವತಿಸದಿದ್ದರೆ, ಕಚೇರಿ ಎದರು ಕಸ ಸುರಿದು ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

• NWKRTC BUS

Karnataka Districts24, Jul 2020, 9:49 AM

ಸಾರಿಗೆ ನೌಕರರಿಗೆ ಇನ್ನೂ ಇಲ್ಲ ಜೂನ್‌ ತಿಂಗಳ ಸಂಬಳ..!

ಕೊನೆಗೂ ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ ಯೂ ತನ್ನ ನೌಕರರ ಸಂಬಳ ಕಡಿತ ಮಾಡಿದೆ!

KSRTC

Karnataka Districts23, Jul 2020, 2:45 PM

'ಸಂಬಳವಿಲ್ಲದೇ KSRTC ಸಿಬ್ಬಂದಿ ಪರದಾಟ'

ಸಾರಿಗೆ ಇಲಾಖೆಯಿಂದ 9.5 ಕೋಟಿ ರೂಪಾಯಿ ಸಿಎಂ ಪರಿಹಾರ ನಿಧಿಗೆ ನೀಡಿದ್ದರ ಫಲವಾಗಿ ಇಂದು ಸಾರಿಗೆ ಇಲಾಖೆಯ ನೌಕರರು ಸಂಬಳವಿಲ್ಲದೇ ಪರದಾಡುವಂತಾಗಿದೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

• Karnataka Districts22, Jul 2020, 10:33 AM

ದೇವರಿಗೂ ಕೊರೋನಾ ಕಾಟ: ನೌಕರರ ಸಂಬಳಕ್ಕೆ ಕಾಸಿಲ್ಲ!

ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ದೇವಾಲಯಗಳು ಬಂದ್‌ ಮಾಡಲಾಗಿತ್ತು. 100 ದಿನಗಳ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವಾಲಯಗಳನ್ನು ಓಪನ್‌ ಮಾಡಲು ಅವಕಾಶ ನೀಡಲಾಗಿತ್ತು. ದೇವಾಲಯಗಳನ್ನು ಶುಚಿಗೊಳಿಸಿ ಬಾಗಿಲು ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವಾಲಯಗಳಿಗೆ ಬರುವ ಭಕ್ತರ ಸಂಖ್ಯೆ ಇಳಿಮುಖವಾಗಿದೆ.

doctors day

Video Icon

state15, Jul 2020, 6:26 PM

ಸೇವಾ ಭದ್ರತೆ, ಸಂಬಳ ಹೆಚ್ಚಳವಿಲ್ಲ: ಆಯುಷ್ ವೈದ್ಯರ ಸಾಮೂಹಿಕ ರಾಜಿನಾಮೆ

ಸೇವಾ ಭದ್ರತೆ, ಸಂಬಳ ಹೆಚ್ಚಳ ಮಾಡದಿದ್ದಕ್ಕೆ ಬೇಸರದಿಂದ ಮಂಡ್ಯ ಜಿಲ್ಲೆ ಗುತ್ತಿಗೆ ಆಯುಷ್ ವೈದ್ಯರು ರಾಜಿನಾಮೆ ನೀಡಿದ್ದಾರೆ. 16 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರದ ಭರವಸೆ ಈಡೇರದೇ ಇದ್ದಿದ್ದರಿಂದ ಸಾಮೂಹಿಕ ರಾಜಿನಾಮೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಸರ್ಕಾರಿ ಆರೋಗ್ಯ ಕೇಂದ್ರಗಳ 58 ವೈದ್ಯರು ರಾಜಿನಾಮೆ ನೀಡಿದ್ದಾರೆ.

• India10, Jul 2020, 3:27 PM

ಕೊರೋನಾ ಸಂಕಷ್ಟದ ನಡುವೆ ಮೋದಿಯಿಂದ ಬಂಪರ್ ಗಿಫ್ಟ್; ನೌಕರರಿಗೆ ಕನಿಷ್ಠ ವೇತನ ನಿಗದಿ?

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕಾರ್ಮಿಕರ ನಿಯಮದಲ್ಲಿ ಮಹತ್ತರ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿಯಲ್ಲಿನ ಪ್ರಮುಖ ಅಂಶ ತಿಂಗಳ ಸಂಬಳ ಪಡೆಯುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

• Cine World6, Jul 2020, 6:08 PM

ಮಿನಿ ನವಾಬ್‌ ತೈಮೂರ್‌ ನ್ಯಾನಿ ಸಂಬಳ ಕೇಳಿದರೆ ದಂಗಾಗ್ತೀರಿ!

ಸೈಫೀನಾ ಮಗ ತೈಮೂರ್‌ನನ್ನು ಎತ್ತಿ ಕೊಳ್ಳುವ ಒಬ್ಬ ಕೇರ್ ಟೇಕರ್ ಫೋಟೋ ನೋಡಿರಬಹುದು ಅಲ್ವಾ? ಮೊದ ಮೊದಲಂತೂ ತೈಮೂರ್ ಕಂಡಲ್ಲೆಲ್ಲಾ ಈ ಮಧ್ಯ ವಯಸ್ಸು ದಾಟಿದ ತಾಯಿಯೂ ಇರುತ್ತಿದ್ದಳು. ತೈಮೂರ್ ನೋಡಿಕೊಳ್ಳಲು ಬಾಲಿವುಡ್ ನಟರಾದ ಸೈಫ್ ಆಲಿ ಖಾನ್ ಮತ್ತು ಕರೀನಾ ಕಪೂರ್ ಅಪಾಯಂಟ್ ಮಾಡಿಕೊಂಡ ನ್ಯಾನಿ ಇವರು. ಈ ಮಿನಿ ನವಾಬ್‌ನನ್ನು ನೋಡಿಕೊಳ್ಳಲು ಇರುವ ದಾದಿಯ ಸಂಬಳ ಕೇಳಿದರೆ ನೀವು ನಿಮ್ಮ ಕೆಲಸವನ್ನು ತ್ಯಜಿಸಲು ಬಯಸುವುದಂತೂ ಗ್ಯಾರಂಟಿ.

• Video Icon

state6, Jul 2020, 6:02 PM

ಕೈಲಿಲ್ಲ ಹಣ, ಬದುಕು ಭಾರವಾಯ್ತು, ಬೆಂಗ್ಳೂರು ಬೇಡವಾಯ್ತು; ಮುಂದುವರೆದ ಗುಳೆ ಪರ್ವ

ಕೊರೊನಾದಿಂದ ಬೆಂಗಳೂರಿನಲ್ಲಿ ಕೆಲಸ ಸಿಗುತ್ತಿಲ್ಲ, ಜೀವನ ಮಾಡೋಕೆ ಸಂಬಳ ಇಲ್ಲ, ಬದುಕು ಭಾರವಾಯ್ತು, ಬೆಂಗಳೂರು ಬೇಡವಾಯ್ತೆಂದು ಗಂಟು ಮೂಟೆ ಸಮೇತ ತಮ್ಮ ತಮ್ಮ ಊರುಗಳತ್ತ ಜನರು ಗುಳೆ ಹೊರಟಿದ್ದಾರೆ. ಬೆಂಗಳೂರು ಬಿಡಬೇಡಿ ಎಂದು ಸಿಎಂ ಕೇಳಿಕೊಂಡರೂ ಜನರಿಗೆ ಆತ್ಮಸ್ಥೈರ್ಯವೇ ಬರುತ್ತಿಲ್ಲ. ಸಾಕಾಪ್ಪ ಸಾಕು ಅಂತ ಊರುಗಳಿಗೆ ತೆರಳುತ್ತಿದ್ದಾರೆ.

• Video Icon

state29, Jun 2020, 5:06 PM

ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ

ಶಿಕ್ಷಕರು ಅಂದ್ರೆ‌ ಸಮಾಜದಲ್ಲಿ ಅಪಾರ ಗೌರವ,ಸೂಕ್ತ ಸ್ಥಾನಮಾನವಿರುತ್ತದೆ. ಅಲ್ಲದೇ ಶಿಕ್ಷಕರ ಬದುಕು ತುಂಭಾ ಸುಲಭವಾದದ್ದು, ನಿತ್ಯ ಶಾಲೆಯಲ್ಲಿ ಗಂಟೆ ಹೊಡೆಯಿರಿ, ಸಂಬಳ ತಗೋಳಿ ಎಂಬ ಹುಡುಗಾಟಿಕೆಯ ಮಾತುಗಳು ಸಾಮಾನ್ಯವಾಗಿದ್ದವು. ಆದ್ರೆ, ಕೊರೋನ ಹರಡದಂತೆ ಭಾರತ ಲಾಕ್ ಡೌನ್ ಆದಾಗಿನಿಂದ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿದೆ.

• Cine World19, Jun 2020, 12:53 PM

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನವೇ ಸಿಬ್ಬಂದಿಗೆ ಸಂಬಳ ನೀಡಿದ್ದ ಸುಶಾಂತ್ ಸಿಂಗ್!

ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಮೊದಲೇ  ನಿರ್ಧರಿಸಿದ್ದರೇ? ಸ್ನೇಹಿತರಿಗೆ ಕಾಲ್ ಮಾಡಿದ್ದು ನಿಜವೇ? ಮೂರು ದಿನಗಳ ಮುನ್ನವೇ ತನ್ನ ಸಿಬ್ಬಂದಿಗೆ ಸಂಬಳ ನೀಡಲು ನೀಡಲು ಕಾರಣವೇನು?

SN Salary

Video Icon

Education Jobs16, Jun 2020, 11:31 AM

ಶಿಕ್ಷಕರಿಗೆ ಸಂಬಳ ಕೊಡಲು ಹಣವಿಲ್ಲ, ಉಪನ್ಯಾಸಕರಿಗೆ ಲಕ್ಷ ಲಕ್ಷ ಹಣ ಬಿಡುಗಡೆ..!

ಸರ್ಕಾರದಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ ಲಾಬಿ ನಡೆದಿದೆ. ಶಿಕ್ಷಕರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ! ಆದರೆ ಉಪನ್ಯಾಸಕರಿಗೆ ಕೊಡಲು ಸರ್ಕಾರದ ಬಳಿ ಲಕ್ಷ ಲಕ್ಷ ಹಣ ಬಿಡುಗಡೆ ಮಾಡಿದೆ. ಪದವಿ ಉಪನ್ಯಾಸಕರ ಲಾಬಿಯಿಂದ ಬಾಕಿ ವೇತನ ಭತ್ಯೆ ಬಿಡುಗಡೆಯಾಗಿದೆ.

• Video Icon

state10, Jun 2020, 4:28 PM

'ಈ ಸಮಯದಲ್ಲಿ ಫೀಸ್ ಕಟ್ಟಲು ಅಪ್ಪನ ಬಳಿ ಹಣವಿಲ್ಲ' : ಕಣ್ಣೀರಿಟ್ಟ ಬಾಲಕಿ

ಕೊರೊನಾ ವೈರಸ್ ಲಾಕ್‌ಡೌನ್ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಕೆಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇನ್ನು ಕೆಲವರು ಅರ್ಧ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಬರುವ ಸಂಬಳದಲ್ಲಿ ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಈಗ ಶಾಲಾ- ಕಾಲೇಜುಗಳು ಶುರುವಾಗುವ ಸಮಯವಾಗಿದ್ದು, ಮಕ್ಕಳ ಫೀಸ್ ಕಟ್ಟುವ ಸಮಯ ಬಂದಿದೆ. ಕೆಲವು ಶಾಲೆಗಳು ಅಧಿಕ ಫೀಸ್ ವಸೂಲಿ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.