Search results - 45 Results
 • Sanju Samson announces marriage with collegemate Charu

  SPORTS10, Sep 2018, 2:07 PM IST

  ಕಾಲೇಜ್ ಗೆಳತಿಯನ್ನು ಕೈಹಿಡಿಯಲಿದ್ದಾರೆ ಸಂಜು ಸ್ಯಾಮ್ಸನ್

  ಚಾರು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರೆ, ಸಂಜು ಸ್ಯಾಮ್ಸನ್ ಈ ಬಾರಿಯ ಐಪಿಎಲ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಸಂಜು 2015ರಲ್ಲಿ ಜಿಂಬಾಬ್ವೆ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 

 • Rohit Sharma clears Yo-Yo test set to travel for Ireland and England tours

  SPORTS20, Jun 2018, 8:49 PM IST

  ಯೋ ಯೋ ಟೆಸ್ಟ್ ರಿಸಲ್ಟ್ ಔಟ್: ರೋಹಿತ್ ಫಲಿತಾಂಶವೇನು..?

  ಇಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಯಲ್ಲಿ ನಡೆದ ಫಿಟ್ನೆಸ್ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಯೋ ಯೋ ಟೆಸ್ಟ್ ಪಾಸ್ ಮಾಡಿದ್ದಾರೆ. ಕಳೆದ ವಾರವಷ್ಟೇ ಟೀಂ ಇಂಡಿಯಾ ಕ್ರಿಕೆಟಿಗರು ಯೋ ಯೋ ಟೆಸ್ಟ್’ನಲ್ಲಿ ಪಾಲ್ಗೊಂಡಿದ್ದರು. ಆಟಗಾರರ ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎಲ್ಲಾ ಆಟಗಾರರಿಗೂ ಯೋ ಯೋ ಟೆಸ್ಟ್‌ನ್ನು ಕಡ್ಡಾಯಗೊಳಿಸಿದೆ.

 • Sanju Samson Failing Fitness Test Another Blow in Controversy

  12, Jun 2018, 1:16 PM IST

  ಸಂಜು ಫಿಟ್ನೆಸ್ ಪರೀಕ್ಷೆ ಫೇಲಾಗಲು ಕಾರಣವೇನು? ಅಷ್ಟಕ್ಕೂ ಯೋ ಯೋ ಟೆಸ್ಟ್ ಅಂದ್ರೇನು..?

  ಇನ್ನು ಸಂಜು ಗಾಯಗೊಂಡಿರುವ ಅಂಶ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದ ಅಧಿಕಾರಿಗಳಿಗೂ ತಿಳಿದಿತ್ತು, ಬಿಸಿಸಿಐ ಗಮನಕ್ಕೂ ಬಂದಿತ್ತು. ಆದಾಗ್ಯೂ ಸಂಜು, ಟೆಸ್ಟ್‌ನಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಇದರೊಂದಿಗೆ ಯೋ-ಯೋ ಟೆಸ್ಟ್ ಎಷ್ಟು ಗಂಭೀರ ಮಾನದಂಡವಾಗಿದೆ ಎಂದು ಆಟಗಾರರಿಗೆ ಬಿಸಿಸಿಐ ನೇರವಾಗಿ ತಿಳಿಸಿದೆ.

 • 5 Indian players who have failed the Fitness Test

  11, Jun 2018, 11:02 PM IST

  ಯೋ ಯೋ ಟೆಸ್ಟ್ ಫೇಲ್ ಆದ ಟೀಂ ಇಂಡಿಯಾದ ಐವರು ಆಟಗಾರರಿವರು..!

  ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಭಾರತ ತಂಡ ಕೂಡಾ ಈಗಿನಿಂದಲೇ ರೆಡಿಯಾಗುತ್ತಿದೆ. 2019ರ ವಿಶ್ವಕಪ್’ಗೆ ಬಿಸಿಸಿಐ ಬಲಿಷ್ಠ ತಂಡವನ್ನು ಕಟ್ಟಲು ಮುಂದಾಗಿದ್ದು, ಆಟಗಾರರಿಗೆ ಯೋ ಯೋ ಎಂಬ ಫಿಟ್ನೆಸ್ ಪರೀಕ್ಷೆ ಪಾಸಾಗುವ ಸವಾಲು ನೀಡುತ್ತಾ ಬಂದಿದೆ.

 • IPL 2018 RR captain Ajinkya Rahane says team can't make excuses for batting failure against KKR

  25, May 2018, 3:51 PM IST

  IPL 2018: ಬ್ಯಾಟ್ಸ್’ಮನ್’ಗಳೇ ಸೋಲಿಗೆ ಕಾರಣ: ರಹಾನೆ

  ‘ನಾವು ಯಾವುದೇ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಬ್ಯಾಟಿಂಗ್ ವಿಭಾಗ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿತು. ಕೊನೆ ಕೆಲ ಓವರ್‌ಗಳಲ್ಲಿ ಅಗತ್ಯವಿದ್ದಷ್ಟು ಬೌಂಡರಿಗಳನ್ನು ಬಾರಿಸಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಈ ತಪ್ಪುಗಳು ಆಗದಂತೆ ಎಚ್ಚೆತ್ತುಕೊಳ್ಳಬೇಕು’ ಎಂದು ರಹಾನೆ ಹೇಳಿದರು.

 • IPL 2018 Tripathi Klaasen Help Rajasthan Post 164 for 5 vs Bangalore

  19, May 2018, 5:56 PM IST

  ರಾಜಸ್ಥಾನದ ಸವಾಲನ್ನು ಮೆಟ್ಟಿ ನಿಲ್ಲುತ್ತಾ ಆರ್’ಸಿಬಿ..? ಗೆಲ್ಲಲು 165 ಟಾರ್ಗೆಟ್

  ಇಲ್ಲಿನ ಸವಾಯಿ ಮಾನ್’ಸಿಂಗ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಜಸ್ಥಾನ ರಾಯಲ್ಸ್ ಎರಡನೇ ಓವರ್’ನಲ್ಲೇ ವಿಕೆಟ್ ಕಳೆದುಕೊಂಡಿತು. ಆರಂಭಿಕನಾಗಿ ಬಡ್ತಿ ಪಡೆದು ಕಣಕ್ಕಿಳಿದಿದ್ದ ಜೋಪ್ರಾ ಆರ್ಚರ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 

 • IPL 2018 Bangalore Rajasthan lock horns in do-or-die clash

  19, May 2018, 3:11 PM IST

  ಆರ್’ಸಿಬಿಗಿಂದು ಅಗ್ನಿ ಪರೀಕ್ಷೆ; ಸೋತರೂ ಇದೆ ಅವಕಾಶ..!

  ಒಂದೊಮ್ಮೆ ಈ ಪಂದ್ಯವನ್ನು ಸೋತರೂ ಆರ್‌ಸಿಬಿ ಪ್ಲೇ-ಆಫ್ ರೇಸ್‌ನಿಂದ ಸಂಪೂರ್ಣವಾಗಿ ಹೊರಬೀಳುವುದಿಲ್ಲ. ಉಳಿದ ಪಂದ್ಯಗಳ ಫಲಿತಾಂಶಗಳು ಆರ್‌ಸಿಬಿ ಭವಿಷ್ಯವನ್ನು ನಿರ್ಧರಿಸಲಿವೆ. ಸದ್ಯ ಆರ್‌ಸಿಬಿ 13 ಪಂದ್ಯಗಳಲ್ಲಿ 12 ಅಂಕ ಪಡೆದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್‌ರೇಟ್ +0.264 ಇದ್ದು, ಮುಂಬೈಗಿಂತ ಹಿಂದಿದೆ. ಅಂತಿಮ ಪಂದ್ಯದಲ್ಲಿ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲ್ಲಬೇಕು. ಮುಂಬೈ ವಿರುದ್ಧ ಡೆಲ್ಲಿ, ಪಂಜಾಬ್ ವಿರುದ್ಧ ಚೆನ್ನೈ ಗೆದ್ದರೆ ಆರ್’ಸಿಬಿ ಹಾದಿ ಸುಗಮಗೊಳ್ಳಲಿದೆ.

 • MI v/s RR preview, prediction, dream11- Rajasthan Royals, Mumbai Indians clash in must win match

  13, May 2018, 7:10 PM IST

  ಮುಂಬೈ, ರಾಯಲ್ಸ್ ಹೊರಗೋಗೊರ್ಯಾರು : 2 ತಂಡಕ್ಕೂ ನಿರ್ಣಾಯಕ

  ದಿಢೀರನೆ ಲಯಕ್ಕೆ ಮರಳಿರುವ ಮುಂ ಬೈ, ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 102 ರನ್'ಗಳ ಭರ್ಜರಿ ಗೆಲುವು ಸಾಧಿಸಿ  ರನ್ ರೇಟ್ ಸುಧಾರಿಸುವಂತೆ ಮಾಡಿಕೊಂಡಿತ್ತು. ತಂಡದ ಬ್ಯಾಟ್ಸ್'ಮೆನ್'ಗಳು ಉತ್ತಮ ಲಯದಲ್ಲಿದ್ದರೆ, ಬೌಲರ್'ಗಳು ಸಹ ಮಿಂಚಿನ ಪ್ರದರ್ಶನ ತೋರುತ್ತಿದಾರೆ. ಮತ್ತೊಂದೆಡೆ ಜೋಸ್ ಬಟ್ಲರ್ ಸ್ಫೋಟಕ ಲಯದಲ್ಲಿರುವು ದು ರಾಜಸ್ಥಾನ ಪ್ಲೇ-ಆಫ್ ರೇಸ್'ನಲ್ಲಿ ಉಳಿಯಲು ನೆರವಾಗಿದೆ. 

 • Rajasthan to face mighty Chennai in must-win tie today

  11, May 2018, 4:26 PM IST

  IPL 2018 ರಾಜಸ್ಥಾನಕ್ಕಿಂದು ಬಲಿಷ್ಠ ಚೆನ್ನೈ ಸವಾಲು

  ಇಂದಿನ ಪಂದ್ಯ ಜೈಪುರದಲ್ಲಿ ನಡೆಯಲಿರುವುದರಿಂದ ರಾಯಲ್ಸ್ ಆತ್ಮವಿಶ್ವಾಸ ಹೆಚ್ಚಿದೆ. ಕಾರಣ ಇಲ್ಲಿ ಆಡಿರುವ 5 ಪಂದ್ಯಗಳಲ್ಲಿ ತಂಡ 3ರಲ್ಲಿ ಗೆದ್ದಿದೆ. ನಿರ್ಣಾಯಕ ಹಂತದಲ್ಲಿ ಹೆಚ್ಚು ಪಂದ್ಯಗಳನ್ನು ತವರಿನಲ್ಲೇ ಆಡುವುದರಿಂದ ರಾಯಲ್ಸ್‌ಗೆ ಅನುಕೂಲವಾಗಲಿದೆ.

 • Out or Not out You decide

  7, May 2018, 5:13 PM IST

  ಇದು ಔಟ್/ನಾಟೌಟ್ ನೀವೇ ನಿರ್ಧರಿಸಿ...

  ಜಯದೇವ್ ಉನಾದ್ಕತ್ ಬೌಲಿಂಗ್’ನಲ್ಲಿ ಕೆ.ಎಲ್ ರಾಹುಲ್ ಬಾರಿಸಿದ ಚೆಂಡು ಸಂಜು ಸ್ಯಾಮ್ಸನ್ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾದರು. ಮೇಲ್ನೋಟಕ್ಕೆ ಔಟ್ ಎಂಬಂತೆ ಕಂಡು ಬಂದರೂ ರೀಪ್ಲೆ ನೋಡಿದಾಗ ನಾಟೌಟ್ ಎಂದು ಥರ್ಡ್ ಅಂಪೈರ್ ತೀರ್ಪು ನೀಡಿದರು. 

 • Sunrisers Hyderabad tame Rajasthan Royals climb to top of points table

  29, Apr 2018, 9:38 PM IST

  ರಾಜಸ್ಥಾನ ಮಣಿಸಿ ಅಗ್ರಸ್ಥಾನಕ್ಕೇರಿದ ಸನ್’ರೖಸರ್ಸ್

  ಸನ್’ರೈಸರ್ಸ್ ನೀಡಿದ 152 ರನ್’ಗಳ ಗುರಿ ಬೆನ್ನತ್ತಿದ ರಾಜಸ್ಥಾನ ಕೇವಲ 140 ರನ್’ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ನಾಯಕ ಅಜಿಂಕ್ಯ ರಹಾನೆ[65*] ಹಾಗೂ ಸಂಜು ಸ್ಯಾಮ್ಸನ್[40] ಹೊರತಾಗಿಯೂ ಉಳಿದ ಬ್ಯಾಟ್ಸ್’ಮನ್’ಗಳು ವೈಫಲ್ಯ ಅನುಭವಿಸಿದ್ದರಿಂದ ರಾಜಸ್ಥಾನ ನಿರಾಸೆ ಅನುಭವಿಸಬೇಕಾಯಿತು.

 • Rajasthan Royals won by 3 Wickets

  23, Apr 2018, 12:07 AM IST

  ರಾಜಸ್ಥಾನಕ್ಕೆ ರೋಚಕ ಗೆಲುವು ತಂದುಕೊಟ್ಟ ಕನ್ನಡಿಗನ ಆಟ..!

  ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಕೊನೆಗೂ ರಾಜಸ್ಥಾನ ರಾಯಲ್ಸ್ 3 ವಿಕೆಟ್'ಗಳ ರೋಚಕ ಜಯ ಸಾಧಿಸಿದೆ. ಕೇವಲ 11 ಎಸೆತಗಳಲ್ಲಿ 33 ರನ್ ಸಿಡಿಸಿದ ಕನ್ನಡಿಗ ಕೆ. ಗೌತಮ್ ಗೆಲುವಿನ ರೂವಾರಿ ಎನಿಸಿದರು.

 • Resurgent Mumbai look to dent Royals at home

  22, Apr 2018, 4:34 PM IST

  ಗೆಲುವಿನ ಹಳಿಗೆ ಮರುಳುತ್ತಾ ರಾಜಸ್ಥಾನ ರಾಯಲ್ಸ್..?

  ಸತತ ಸೋಲಿನಿಂದ ಕುಗ್ಗಿರುವ ರಾಜಸ್ಥಾನ ರಾಯಲ್ಸ್ ಮೇಲೆ ಸವಾರಿ ಮಾಡಲು ರೋಹಿತ್ ಪಡೆ ಕಾತರಿಸುತ್ತಿದೆ. ರಾಜಸ್ಥಾನ ಪಾಲಿಗೆ ಭದ್ರಕೋಟೆ ಎನಿಸಿದ್ದ ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ತಂಡ ಸೋಲಿನ ಮೇಲೆ ಸೋಲುಕಾಣುತ್ತಿದೆ. ದೊಡ್ಡ ಮೊತ್ತ ನೀಡಿ ಖರೀದಿಸಿದ ಆಟಗಾರರೆಲ್ಲರೂ ವೈಫಲ್ಯ ಮುಂದುವರಿಸಿರುವುದು ರಾಯಲ್ಸ್ ತಲೆನೋವು ಹೆಚ್ಚಿಸಿದೆ.

 • Rajasthan Royals won by 10 runs

  12, Apr 2018, 12:43 AM IST

  ಮಳೆಯಾಟದಲ್ಲಿ ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್

  ಮಳೆಯ ಕಾರಣದಿಂದಾಗಿ ಡೆಲ್ಲಿಗೆ ಗೆಲ್ಲಲು ಡೆಕ್ವರ್ಥ್ ಲೂಯಿಸ್ ನಿಯಮದಂತೆ 6 ಓವರ್'ಗಳಿಗೆ 71 ರನ್'ಗಳ ಗುರಿ ನಿಗದಿ ಮಾಡಲಾಗಿತ್ತು. ಆದರೆ ಡೆಲ್ಲಿ ಕೇವಲ 60 ರನ್'ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಡೆಲ್ಲಿ ಪರ ರಿಶಭ್ ಪಂಥ್ 20 ಮ್ಯಾಕ್ಸ್'ವೆಲ್ 17 ಹಾಗೂ ಕ್ರಿಸ್ ಮೋರಿಸ್ 17* ರನ್ ಬಾರಿಸಿದರು.

 • IPL 2018 Delhi Daredevils Rajasthan Royals look to get back to winning ways after faulty starts

  11, Apr 2018, 6:11 PM IST

  5 ವರ್ಷಗಳ ಬಳಿಕ ತವರಿನಲ್ಲಿಂದು ರಾಯಲ್ಸ್; ಇಂದು ಸೋತವರ ನಡುವಿನ ಕದನ

  5 ವರ್ಷಗಳ ಬಳಿಕ ತಂಡ ತವರು ಅಭಿಮಾನಿಗಳ ಮುಂದೆ ಕಣಕ್ಕಿಳಿಯಲಿದೆ. ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣ ದಲ್ಲಿ ತಂಡ 2 ವರ್ಷ ನಿಷೇಧಕ್ಕೆ ಗುರಿಯಾಗಿತ್ತು. ಅದಕ್ಕೂ ಮುನ್ನ ರಾಜಸ್ಥಾನ ಕ್ರಿಕೆಟ್ ಸಮಿತಿಯನ್ನು ಆಳುತ್ತಿದ್ದ ಲಲಿತ್ ಮೋದಿ ಹಾಗೂ ಬಿಸಿಸಿಐ ನಡು ವಿನ ತಿಕ್ಕಾಟದಿಂದಾಗಿ ಜೈಪುರದಲ್ಲಿ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರಾಕರಿಸಿತ್ತು.