BUSINESS30, Jan 2019, 12:02 PM IST
ಡಿಹೆಚ್ಎಲ್ಎಫ್ ಹಗರಣ: ಷೇರು ಮೌಲ್ಯ ಕಂಪನ!
ಕರ್ನಾಟಕ ಹಾಗೂ ಗುಜರಾತ್ ವಿಧಾನಸಭೆ ಚುನಾವಣೆಗೂ ಮುನ್ನ, ವಿವಿಧ ಯೋಜನೆಗಳ ನೆಪದಲ್ಲಿ ಹಲವು ಕಂಪನಿಗಳಿಗೆ ಡಿಎಚ್ಎಫ್ಎಲ್ ಸಾವಿರಾರೂ ಕೋಟಿಯಷ್ಟು ಸಾಲ ನೀಡಿತ್ತು ಎಂಬ ಕೋಬ್ರಾ ಪೋಸ್ಟ್ ವರದಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
BUSINESS21, Dec 2018, 6:10 PM IST
ಏನಾಯ್ತೋ ಏನೋ: SENSEX ನಲ್ಲಿ ದಿಢೀರ್ ಬ್ಲಡ್ ಬಾತ್!
ರಿಯಾಲಿಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳಲ್ಲಿ ಭಾರೀ ಇಳಿಕೆಯಾಗಿದೆ.
BUSINESS20, Dec 2018, 3:23 PM IST
ತೈಲ ಬೆಲೆ ಭಾರೀ ಕುಸಿತ: ದಂಗಾದರು ಕಂಡು ಸೆನ್ಸೆಕ್ಸ್ ಜಿಗಿತ!
ಡಾಲರ್ ಎದುರು ರೂಪಾಯಿ ಮೌಲ್ಯ ವರ್ಧನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಕುಸಿತದ ಹಿನ್ನೆಲೆಯಲ್ಲಿ, ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕದಲ್ಲಿ ಏರಿಕೆ ದಾಖಲಾಗಿದೆ. ಬುಧವಾರದ ವಹಿವಟಿನಲ್ಲಿ ಸೆನ್ಸೆಕ್ಸ್ 137.25 ಅಂಕಗಳ ಏರಿಕೆ ದಾಖಲಿಸಿದೆ.
BUSINESS11, Dec 2018, 11:26 AM IST
ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಮತ್ತು ಆರ್ ಬಿಐ ಗರ್ವನರ್ ಊರ್ಜಿತ್ ಪಟೇಲ್ ರಾಜೀನಾಮೆ ಪರಿಣಾಮ ಭಾರತೀಯ ಷೇರುಮಾರುಕಟ್ಟೆಯ ಮೇಲೂ ಆಗಿದೆ. ಇಂದು ವಹಿವಾಟು ಆರಂಭಿಸುತ್ತಿದ್ದಂತೇ ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಬರೊಬ್ಬರಿ 500 ಅಂಕಗಳ ಕುಸಿತ ಕಂಡಿದೆ.
BUSINESS2, Nov 2018, 1:18 PM IST
ಕಚ್ಚಾ ತೈಲ ದರ ಇಳಿಕೆ: ಇನ್ಮೇಲೆ ಸೆನ್ಸೆಕ್ಸ್ ಲಾಭ ಫಿಕ್ಸ್!
ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ, ಇಂದು ಮುಂಬೈ ಷೇರು ಸೂಚ್ಯಂಕದ (ಬಿಎಸ್ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 ಅಂಶ ಏರಿಕೆ ಕಂಡು 34,845 ಅಂಕಗಳನ್ನು ತಲುಪಿದೆ.
NEWS31, Oct 2018, 10:31 AM IST
3 ಲಕ್ಷ ಕೋಟಿ ಕಳೆದುಕೊಂಡ ಅಮೆಜಾನ್ ಬಾಸ್
ಅಮೆರಿಕದ ಅಮೆಜಾನ್ ಕಂಪನಿ ಅಧ್ಯಕ್ಷ ಜೆಫ್ ಬೆಜೋಸ್ ಕಳೆದ 2 ದಿನಗಳಲ್ಲಿ 1.50 ಲಕ್ಷ ಕೋಟಿ ರು. ಸಂಪತ್ತು ಕಳೆದು ಕೊಂಡಿದ್ದಾರೆ. ಷೇರು ಮಾರುಕಟ್ಟೆ ಮೇಲೆ ಕರಾಳ ಛಾಯೆ ಬೀರಿದ ಪರಿಣಾಮ ಈ ನಷ್ಟ ಎದುರಾಗಿದೆ.
BUSINESS28, Oct 2018, 11:03 AM IST
ಷೇರು ಮಾರುಕಟ್ಟೆಯಲ್ಲಿ ಕೊಚ್ಚಿ ಹೋಯ್ತು 40 ಲಕ್ಷ ರೂ!
ಷೇರು ಮಾರುಕಟ್ಟೆ ಭಾರತದಲ್ಲೊಂದೇ ಅಲ್ಲ, ಚೀನಾ ಸೇರಿದಂತೆ ಹಲವಾರು ದೇಶಗಳಲ್ಲಿ ಕುಸಿಯುತ್ತಿದೆ. ಕಳೆದ 10 ತಿಂಗಳಿನಲ್ಲಿ ಚೀನಾ ಷೇರು ಮಾರುಕಟ್ಟೆ ಬಂಡವಾಳ ಶೇ.30 ರಷ್ಟು, ಅಂದರೆ ಸುಮಾರು 167 ಲಕ್ಷ ಕೋಟಿ ರು. ಕುಸಿದಿದೆ. ದಕ್ಷಿಣ ಕೊರಿಯಾ, ಇಂಡೋನೇಷ್ಯಾ, ಜರ್ಮನಿ, ಸ್ವಿಜರ್ಲೆಂಡ್, ಬ್ರಿಟನ್, ಹಾಂಗ್ಕಾಂಗ್ ಮುಂತಾದ ದೇಶಗಳಲ್ಲೂ ಷೇರು ಮಾರುಕಟ್ಟೆ ಸಂಕಷ್ಟದಲ್ಲಿದೆ. ಭಾರತದಲ್ಲಿ ರುಪಾಯಿ ಮೌಲ್ಯ ಕುಸಿತ ದಿಂದಾಗಿ ಇದರ ಪರಿಣಾಮ ತೀವ್ರವಾಗಿದೆ.
share market lost 40 lakh crore within 10 months
BUSINESS17, Oct 2018, 9:06 PM IST
ನೆಟ್ಫ್ಲಿಕ್ಸ್ ನೋಡ್ತಿರಾ?: ಎಷ್ಟು ಲಾಭ ಮಾಡ್ಕೊಂಡೈತೆ ನೋಡಿ!
ನೆಟ್ಫ್ಲಿಕ್ಸ್ ನ ಬಳಕೆದಾರರು ಹೆಚ್ಚಾದ ಪರಿಣಾಮ, ಕಳೆದ ತ್ರೈಮಾಸಿಕದಲ್ಲಿ ಕಂಪನಿ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದ ಆದಾಯ ಗಳಿಸಿದೆ. ವಿಶ್ವಾದಾದ್ಯಂತ ಸುಮಾರು 7 ಮಿಲಿಯನ್ ನಷ್ಟು ಗ್ರಾಹಕರನ್ನು ಹೊಸದಾಗಿ ಪಡೆದಿರುವ ನೆಟ್ಫ್ಲಿಕ್ಸ್, ಕಳೆದ ತ್ರೈಮಾಸಿಕದಲ್ಲಿ ನೆಟ್ಫ್ಲಿಕ್ಸ್ ನ ಲಾಭ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
BUSINESS13, Oct 2018, 12:54 PM IST
ಷೇರು ಮಾರುಕಟ್ಟೆ ಅಯೋಮಯ: ಮ್ಯೂಚುವಲ್ ಫಂಡ್ಸ್ ಗತಿ ಏನಯ್ಯಾ?
ಸೆನ್ಸೆಕ್ಸ್ ನ ಅತಂತ್ರ ಸ್ಥಿತಿಯಲಲ್ಲಿ ಮ್ಯೂಚುವಲ್ ಫಂಡ್ಸ್ ಗಳಲ್ಲಿ ಹಣ ಹೂಡಿಕೆ ಮಾಡಿರುವವರ ಗತಿಯೇನು ಎಂಬುದು ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಸದ್ಯ ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಆಶಾಭಾವ ಪರಿಸ್ಥಿತಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
BUSINESS11, Oct 2018, 8:26 PM IST
5 ನಿಮಿಷದಲ್ಲಿ 4 ಲಕ್ಷ ಕೋಟಿ ರೂ ಲಾಸ್: ಷೇರು ಮಾರುಕಟ್ಟೆ ಬಾಗಿಲು ಬಂದ್!
ನಿನ್ನೆಯಷ್ಟೇ 3 ಲಕ್ಷ ಕೋಟಿ ಲಾಭ ಗಿಟ್ಟಿಸಿಕೊಂಡಿದ್ದ ಭಾರತದ ಷೇರು ಪೇಟೆ ಇಂದು ಸಾವಿರ ಅಂಕ ಸೆನ್ಸೆಕ್ಸ್ ಕುಸಿದು ಅಷ್ಟೇ ಮೊತ್ತದ ಬಂಡವಾಳ ಕಳೆದುಕೊಂಡಿದೆ. ಇಂದಿನ ಷೇರು ಮಾರುಕಟ್ಟೆ ಆರಂಭವಾದ ಬೆನ್ನಲ್ಲೇ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತವನ್ನು ಅನುಭವಿಸಿದೆ.
BUSINESS10, Oct 2018, 2:23 PM IST
ಇನ್ವೆಸ್ಟ್ ಮಾಡಿರೋರು, ಮಾಡೋರು ಇಬ್ಬರಿಗೂ ಸಿಹಿ ಸುದ್ದಿ: ವಸಿ ಓದಿ ಬುದ್ದಿ!
ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.
BUSINESS9, Oct 2018, 3:06 PM IST
ಇಂದೆನೋ ವಿಶೇಷ: ಸಿಹಿ ಸುದ್ದಿಗಳ 'ಮಹಾಮಳೆ'!
ಭಾರತದ ಆರ್ಥಿಕ ಕ್ಷೇತ್ರದಲ್ಲಿ ಇಂದು ಕೆಲವು ಸಿಹಿ ಸುದ್ದಿಗಳಿಗೆ ಪ್ರಾಶಸ್ತ್ಯ ದೊರೆತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ, ತೈಲದರ ಏರಿಕೆ, ಷೇರು ಮಾರುಕಟ್ಟೆ ಕುಸಿತ ಇವೇ ಮುಂತಾದ ಕಹಿ ಸುದ್ದಿಗಳನ್ನು ಕೇಳುತ್ತಿದ್ದ ಗ್ರಾಹಕ, ಇಂದು ಈ ಕ್ಷೇತ್ರಗಳಲ್ಲಿ ಸಿಹಿ ಸುದ್ದಿಗಳನ್ನು ಕೇಳುವಂತಾಗಿದೆ. ಬ್ಯಾಂಕ್ ಮತ್ತು ರಫ್ತುದಾರರು ಅಮೆರಿಕದ ಕರೆನ್ಸಿಯ ಮಾರಾಟದಿಂದಾಗಿ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯಾಗಿ ಡಾಲರ್ ವೊಂದಕ್ಕೆ ರೂಪಾಯಿ ಬೆಲೆ 73.88 ರೂ. ಆಗಿದೆ.
BUSINESS5, Oct 2018, 12:10 PM IST
ಎಲ್ಲಾ ಹೋಯ್ತು: ಷೇರು ಮಾರುಕಟ್ಟೆ ಬಿದ್ದೋಯ್ತು!
ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 806 ಅಂಕ ಕುಸಿತಕ್ಕೀಡಾಗಿದ್ದು, ಕಳೆದ ಮೂರು ತಿಂಗಳಿನಲ್ಲಿ ಗರಿಷ್ಠ ಇಳಿಕೆ ದಾಖಲಿಸಿದೆ. ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ ಕುಸಿತ ವ್ಯತಿರಿಕ್ತ ಪರಿಣಾಮ ಬೀರಿದ್ದು, ಸೆನ್ಸೆಕ್ಸ್ 35,200 ಅಂಕಗಳ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಇದೇ ರೀತಿ ನಿಫ್ಟಿ 10,600 ಅಂಕಗಳ ಮಟ್ಟಕ್ಕಿಂತ ಕೆಳಕ್ಕೆ ತಗ್ಗಿತು. ಏಷ್ಯಾ ಮತ್ತು ಯುರೋಪ್ನಲ್ಲೂ ಷೇರು ಮಾರುಕಟ್ಟೆಗಳು ಮುಗ್ಗರಿಸಿವೆ.
BUSINESS4, Oct 2018, 3:01 PM IST
ಸ್ಥಾನ ತ್ಯಜಿಸಿದ ಚಂದಾ ಕೊಚ್ಚಾರ್, ಐಸಿಐಸಿಯ ಷೇರು ದಿಢೀರ್ ಏರಿಕೆ
ಅಂತಿಮವಾಗಿ ಐಸಿಐಸಿಐ ಬ್ಯಾಂಕ್ ಸಿಇಒ ಮತ್ತು ಎಂಡಿ ಸ್ಥಾನದಿಂದ ಚಂದಾ ಕೊಚ್ಚಾರ್ ಕೆಳಕ್ಕೆ ಇಳಿದಿದ್ದಾರೆ.ಚಂದಾ ಕೊಚ್ಚಾರ್ ಜಾಗಕ್ಕೆ ಸಂದೀಪ್ ಬಕ್ಷಿ ಬಂದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಸದ್ಯದ ಮಟ್ಟಿಗೆ ಇದು ಹಾಟ್ ಟಾಪಿಕ್.
BUSINESS30, Sep 2018, 11:00 AM IST
ವಾಟ್ಸಪ್ ರಾಂಗ್ ಮೆಸೆಜ್: ಈ ಕಂಪನಿ ಎಲ್ಲಾ ಷೇರು ಮಟಾಷ್!
ವಾಟ್ಸಪ್ಪ್ನಲ್ಲಿ ವೈರಲ್ ಆಗುವ ಸಂದೇಶಗಳಿಂದ ಗುಂಪು ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಸಾಮಾಜಿಕ ಜಾಲತಾಣದ ದುರ್ಬಳಕೆ ತರಬಹುದಾದ ಅಪಾಯಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೇವಲ ಒಂದೇ ಒಂದು ತಪ್ಪು ಸಂದೇಶದಿಂದ ಇನ್ಫಿಬೀಮ್ ಅವೆನ್ಯೂಸ್ ಸಂಸ್ಥೆಯ ಷೇರುಗಳು ಪಾತಾಳಕ್ಕೆ ಕುಸಿದಿವೆ.