ಶಿವರಾಜ್‌ಕುಮಾರ್‌

(Search results - 15)

Shiva rajkumar Shivarajkumar

Sandalwood4, Sep 2020, 11:12 AM

ನಿರ್ದೇಶಕನಾಗುವ ನನ್ನ ಕನಸಿಗೆ ಉಪ್ಪಿ ಸ್ಫೂರ್ತಿ: ಶಿವರಾಜ್‌ಕುಮಾರ್‌

ಶಿವಣ್ಣ ಮಾತಿಗೆ ಕೂತರೆ ಹಳೆಯದು, ಹೊಸದು ಮತ್ತು ಭವಿಷ್ಯದ ಕನಸು ಎಲ್ಲವೂ ಬಂದು ಹೋಗುತ್ತವೆ. ‘ಕಬ್ಜ’ ಚಿತ್ರದ ವೆಬ್‌ಸೈಟ್‌ ಅನಾವರಣ ಕಾರ್ಯಕ್ರಮದಲ್ಲಿ ಮಾತಿಗೆ ಸಿಕ್ಕಾಗ ಹಲವು ಆಸಕ್ತಿ ವಿಷಯಗಳನ್ನು ಹಂಚಿಕೊಂಡರು. ಈ ಪೈಕಿ ತಾವು ನಿರ್ದೇಶಕನಾಗಬೇಕು ಎನ್ನುವ ಕನಸು ಹುಟ್ಟಿಕೊಂಡಿದ್ದು ಹೇಗೆ ಎನ್ನುವುದನ್ನೂ ತೆರೆದಿಟ್ಟಿದ್ದಾರೆ. ಓವರ್‌ ಟು ಸೆಂಚುರಿ ಸ್ಟಾರ್‌....

SHIVARAJKUMAR

Video Icon

Sandalwood31, Aug 2020, 5:32 PM

ಗಾಂಜಾ ಘಾಟು: ನಟ ಶಿವರಾಜ್‌ಕುಮಾರ್‌ ಹೇಳೋದಿಷ್ಟು?

ದಶಕಗಳಿಂದ ಚಿತ್ರರಂಗವನ್ನು ಆಳುತ್ತಿರುವ ಶಿವರಾಜ್‌ಕುಮಾರ್‌ ಅವರು ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ಗಾಂಜಾ ಘಾಟಿನ ಬಗ್ಗೆ ಮಾತನಾಡಿದ್ದಾರೆ. ಒಬ್ಬ ಮಗನಾಗಿ, ಗಂಡನಾಗಿ ಹಾಗೂ ತಂದೆಯಾಗಿ ಇಂಥ ಘಟನೆಗಳನ್ನು ನೋಡಲು ತುಂಬಾ ಬೇಸರವಾಗುತ್ತದೆ ಎಂದೂ ಹೇಳಿದ್ದಾರೆ. ಇದರ ಬಗ್ಗೆ ಸಂಬಂಧ ಪಟ್ಟ ತಂಡಗಳು ಕೆಲಸ ಮಾಡುತ್ತಿವೆ. ಅಧಿಕಾರಿಗಳು ಏನೇ ಇದ್ದರೂ ಎಲ್ಲವನ್ನು ನೋಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.

Shivarajkumar venkatesh prasad

Sandalwood8, Aug 2020, 1:22 PM

ನಟ ಶಿವರಾಜ್‌ಕುಮಾರ್‌ರನ್ನು ಭೇಟಿಯಾದ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್!

ಕನ್ನಡ ಚಿತ್ರರಂಗದ ಹೊಣೆ ಹೊತ್ತ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್‌ ಅವರ ನಿವಾಸಕ್ಕೆ ಗೆಳೆಯ ಮಾಜಿ ಕ್ರಿಕೆಟರ್‌ ವೆಂಕಟೇಶ್‌ ಪ್ರಸಾದ್ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿದ್ದಾರೆ...

SN shivarajkumar

Sandalwood24, Jul 2020, 8:52 AM

ನಟ ಶಿವರಾಜ್‌ ಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಸಭೆ!

ನಟ ಶಿವರಾಜ್‌ಕುಮಾರ್‌ ಸಾರಥ್ಯದಲ್ಲಿ ಶುಕ್ರವಾರ (ಜು.24) ಚಿತ್ರೋದ್ಯಮದ ಸಭೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಶಿವರಾಜ್‌ಕುಮಾರ್‌  ನಿವಾಸದಲ್ಲಿ ಈ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ನಿರ್ಮಾಪಕರ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಮುಖರು, ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಹಲವರು ಪಾಲ್ಗೊಳ್ಳುತ್ತಿದ್ದಾರೆ.

SN shivarajkumar

Interviews10, Jul 2020, 9:01 AM

ಥ್ಯಾಂಕ್ಸ್‌ ಟು ಸುದೀಪ್, ಹುಟ್ಟಹಬ್ಬಕ್ಕೆ ನಾನು ಮನೇಲಿ ಇರಲ್ಲ: ಶಿವರಾಜ್‌ಕುಮಾರ್‌

ನಟ ಶಿವರಾಜ್‌ಕುಮಾರ್‌ ಅವರಿಗೆ 58ನೇ ಹುಟ್ಟು ಹಬ್ಬದ ಸಂಭ್ರಮ. ಪ್ರತಿ ವರ್ಷ ಜು.12 ಬಂದರೆ ಸೆಂಚುರಿ ಸ್ಟಾರ್‌ ಅಭಿಮಾನಿಗಳು ತಮ್ಮ ಮನ ಮೆಚ್ಚಿದ ನಟನ ಹುಟ್ಟು ಹಬ್ಬವನ್ನು ‘ಆನಂದ’ದಿಂದ ಕೊಂಡಾಡುತ್ತಿದ್ದರು. ಆದರೆ, ಈ ಬಾರಿ ಕೊರೋನಾ ಸಂಕಷ್ಟ. ಇದರಿಂದ ಪಾರಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮತ್ತು ಅಗತ್ಯ ಕೂಡ. ಹೀಗಾಗಿ ಹಿಂದಿನಂತೆ ಈ ವರ್ಷ ಶಿವಣ್ಣ ಅವರ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಕೇಕ್‌ ಕತ್ತರಿಸಿ ಅದ್ದೂರಿಯಾಗಿ ಆಚರಿಸಲು ಆಗದು. ಹುಟ್ಟುಹಬ್ಬದ ಹೊತ್ತಿನಲ್ಲಿ ಶಿವಣ್ಣ ಅವರ ಈ ಸಂದರ್ಶನ.

• undefined
Video Icon

Sandalwood4, Jul 2020, 4:19 PM

ಶೂಟಿಂಗ್‌ ಸೆಟ್‌ನಲ್ಲಿ ತಪ್ಪು ಮಾಡೋರಿಗೆ ಶಿವರಾಜ್‌ಕುಮಾರ್‌ ಏನ್‌ ಮಾಡ್ತಾರೆ?

ಆ್ಯಕ್ಟಿಂಗ್‌ನಲ್ಲಿ ಶಿವಣ್ಣ ಫೀಲ್ಡ್‌ಗೆ ಇಳಿದರೆ ಸುತ್ತ ಇರೋರಿಗೂ ಫುಲ್ ಜೋಶ್‌ ಇರ್ಬೇಕು. ನಾನೊಬ್ಬ ಸ್ಟಾರ್ ಅನ್ನೊದನ್ನೂ ಮರೆತು ಸಹ ಕಲಾವಿರೊಟ್ಟಿಗೆ ಒಬ್ಬನಾಗಿ ಕೆಲಸ ಮಾಡುತ್ತಾರೆ. ತಪ್ಪು ಮಾಡಿದರೆ ತಿದ್ದುತ್ತಾ ಅವರಿಗೇ ಗುರುವಾಗುತ್ತಾರೆ.

• undefined
Video Icon

Sandalwood30, Jun 2020, 4:42 PM

ಕ್ರಿಕೆಟ್‌ ಆಡಿದ ಶಿವರಾಜ್‌ಕುಮಾರ್‌; ಗಾಯಕ ಎಸ್‌ಪಿಬಿ ಫುಲ್ ಗರಂ!

ಖ್ಯಾತ ಗಾಯಕ ಎಸ್‌ ಪಿ ಬಾಲಾಸುಬ್ರಹ್ಮಣ್ಯಂ ಅವರು ಎಸ್‌ ಜಾನಕಿ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗೆ ಕ್ಲಾರಿಟಿ ನೀಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಎಸ್‌ಪಿಬಿ ಸೋಷಿಯಲ್ ಮೀಡಿಯಾವನ್ನು ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.ಮನೆ ಮುಂದಿನ ಅಂಗಳದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಕ್ರಿಕೆಟ್, ಕೇರಂ ಹೀಗೆ ಆಟಗಳನ್ನು ಆಡುತ್ತಾ ಸಮಯ ಕಳೆಯುತ್ತಿದ್ದಾರೆ

• undefined
Video Icon

Sandalwood21, May 2020, 5:20 PM

ಶಿವರಾಜ್‌ಕುಮಾರ್- ಉಪೇಂದ್ರ ಲೈವ್‌ ಚಾಟ್‌; ಇದು 'ಓಂ' ಹವಾ!

ಸ್ಯಾಂಡಲ್‌ವುಡ್‌ನಲ್ಲಿ ಅಂದು ಕ್ರಿಯೇಟ್‌ ಆದ ಮ್ಯಾಜಿಕಲ್‌ ಕಾಂಬಿನೇಶ್‌ ಅಂದ್ರೆ ಶಿವಣ್ಣ- ಉಪೇಂದ್ರ. 25 ವರ್ಷಗಳನ್ನು ಪೂರೈಸಿದ 'ಓಂ' ಚಿತ್ರದ ಬಗ್ಗೆ ಇಬ್ಬರು ಫೇಸ್‌ಬುಕ್‌ ಲೈವ್‌ ಮೂಲಕ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

• Rukmini Vijayakumar

Sandalwood4, Apr 2020, 2:56 PM

ನಟ ಶಿವರಾಜ್‌ಕುಮಾರ್‌ 'ಭಜರಂಗಿ' ಆದರೆ ಇವರು ರುಕ್ಮಿಣಿ; ಹೇಗಿದ್ದಾರೆ ನೋಡಿ.....

ನಟ ಶಿವರಾಜ್‌ಕುಮಾರ್‌ ಅಭಿನಯದ ಭಜರಂಗಿ ಚಿತ್ರದಲ್ಲಿ ಕೃಷ್ಣನ ಹಾಡಿಕೆ ರುಕ್ಮಿಣಿಯಾಗಿ ಹೆಜ್ಜೆ ಹಾಕಿರುವ ಭರತನಾಟ್ಯ ಕಲಾವಿದೆ ಹಾಗೂ ನಟಿ ರುಕ್ಮಿಣಿ ವಿಜಯ್‌ಕುಮಾರ್‌ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳಿವು.....

• Shivarajkumar

Sandalwood18, Mar 2020, 2:26 PM

ಶಿವಣ್ಣ ಅಭಿಮಾನಿ ಅಗಲಿಕೆ; ಕುಟುಂಬಸ್ಥರಿಗೆ ಭಾವುಕ ಸಂದೇಶ!

ಶಿವರಾಜ್‌ಕುಮಾರ್ ಅಪ್ಪಟ ಅಭಿಮಾನಿ ರೋಷನ್‌ ಈಜಲು ಹೋಗಿ, ಮುಳುಗಿ ಅಸುನೀಗಿದ್ದಾರೆ. ಅಭಿಮಾನಿ ಕುಟುಂಬಕ್ಕೆ ಶಿವಣ್ಣ ಸಾಂತ್ವನ ಹೇಳಿದ್ದು ಹೀಗೆ....

• Sye raa

Entertainment1, Oct 2019, 9:10 AM

ಮೊದಲು ನಾವು ಭಾರತೀಯರು, ಆಮೇಲೆ ಮಾತೃಭಾಷೆ: ಶಿವರಾಜ್‌ಕುಮಾರ್‌

ಮೊದಲು ನಾವು ಭಾರತೀಯರು, ಆ ಮೇಲೆ ಮಾತೃಭಾಷೆ.

- ಇದು ನಟ ಶಿವರಾಜ್‌ಕುಮಾರ್‌ ಅವರ ಮಾತು. ಅವರ ಈ ಮಾತು ಸೋಷಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅನೇಕರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅವರು ಹಾಗೆ ಹೇಳಿದ್ದು ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಸಂದರ್ಭ.

• Shivanna

ENTERTAINMENT10, Jul 2019, 3:57 PM

ಲಂಡನ್‌ನಲ್ಲಿ ಶಿವರಾಜ್‌ಕುಮಾರ್‌ಗೆ ಶಸ್ತ್ರಚಿಕಿತ್ಸೆ

ನಟ‌ ಶಿವರಾಜ್ ಕುಮಾರ್  ಭುಜ ನೋವಿನಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಲಂಡನ್ ಗೆ ತೆರಳಿದ್ದಾರೆ. ಇಂದು ಶಸ್ತ್ರಚಿಕಿತ್ಸೆ ನಡೆದಿದೆ.

• Prajwal Devaraj

Sandalwood17, Apr 2019, 9:10 AM

ನಿರ್ಮಾಪಕರು ರೆಡಿ ಇದ್ರೂ ಈ ತಾರೆಯರಿಗೆ ಪುರುಸೊತ್ತಿಲ್ಲ!

ಕನ್ನಡ ಚಿತ್ರರಂಗದ ಮಟ್ಟಿಗೆ ಅವಕಾಶ ವಿಚಾರದಲ್ಲಿ ಶಿವರಾಜ್‌ಕುಮಾರ್‌ ಸೆಂಚುರಿ ಸ್ಟಾರ್‌ ಎಂದೇ ಹೇಳಬೇಕು. ಅವರನ್ನು ಮೀರಿಸುವ ಮತ್ತೊಬ್ಬರು ಸದ್ಯಕ್ಕೆ ಕಾಣುತ್ತಿಲ್ಲ. ಶಿವಣ್ಣ ಅವರ ಹುಟ್ಟುಹಬ್ಬ, ಯಾವುದುದಾದರು ಹಬ್ಬದ ದಿನದ ಸಿನಿಮಾ ಪುರವಣಿಗಳ ಜಾಹೀರಾತು ಪುಟಗಳನ್ನು ತೆಗೆದರೆ ಕನಿಷ್ಠ 10 ಚಿತ್ರಗಳಾದರೂ ಶಿವಣ್ಣ ಹೆಸರಿನಲ್ಲಿ ಪ್ರಕಟಣೆಯಾಗಿರುತ್ತವೆ.

• Bhavana shivrajkumar

ENTERTAINMENT26, Mar 2019, 9:15 AM

ಮೈ ನೇಮ್ ಈಸ್ ಆಂಜಿ ಎಂದ ಜಾಕಿ ಭಾವನ!

ಶಿವರಾಜ್‌ಕುಮಾರ್‌ ಅಭಿನಯದ ಹೊಸ ಸಿನಿಮಾ ‘ಮೈ ನೇಮ್‌ ಈಸ್‌ ಆಂಜಿ’ಗೆ ‘ಜಾಕಿ’ ಚಿತ್ರದ ಖ್ಯಾತಿಯ ಬಹುಭಾಷಾ ನಟಿ ಭಾವನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ನಟಿ ಭಾವನಾ ಜತೆಗೆ ಮಾತುಕತೆ ಫೈನಲ್‌ ಆಗಿದೆ. ‘ಟಗರು’ಚಿತ್ರದ ನಂತರ ಶಿವರಾಜ್‌ ಕುಮಾರ್‌ ಹಾಗೂ ಭಾವನಾ ಮತ್ತೆ ತೆರೆ ಮೇಲೆ ಒಂದಾಗುವುದು ಬಹುತೇಕ ಖಚಿತವಾಗಿದೆ.

• undefined

Sandalwood3, Jan 2019, 12:34 PM

ಲಾಂಗು, ಮಚ್ಚು ಬಿಟ್ಟು ಐತಿಹಾಸಿಕ ಸಿನಿಮಾ ಕಡೆ ಶಿವಣ್ಣ

ತುಂಬಾ ಹಿಂದೆಯೇ ಹುಬ್ಬಳ್ಳಿಯಲ್ಲಿ ಸೆಟ್ಟೇರಿದ್ದ ‘ಬಾದ್‌ಷಾ’ ಸಿನಿಮಾ ನಿಂತಿದೆ. ಈ ಮಾತು ಹೇಳಿದ್ದು ಸ್ವತಃ ಶಿವರಾಜ್‌ಕುಮಾರ್‌. ಜತೆಗೆ ಮತ್ತೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ. ಆರ್‌ ಚಂದ್ರು ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಸೆಟ್ಟೇರುತ್ತಿದೆ.