ಶಿವಕುಮಾರ ಶ್ರೀ  

(Search results - 14)
 • shivakumara swamiji

  Tumakuru11, Nov 2019, 1:16 PM

  ಶಿವಕುಮಾರ ಸ್ವಾಮಿಗಳ ಪವಿತ್ರ ಗದ್ದುಗೆ ಮೇಲೆ ವಿಶೇಷ ಶಿವಲಿಂಗ

  ಸಿದ್ದಂಗಗೆಯ ಶಿವೈಕ್ಯ ಶತಾಯುಷಿ ಶಿವಕುಮಾರ ಶ್ರೀಗಳ ಐಕ್ಯ ಸ್ಥಳದ ಮೇಲೆ ಇಂದು ಶಿವಲಿಂಗ ಪ್ರತಿಷ್ಠಾಪನೆಯಾಗಿದೆ. ಇಂದು ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಯ ಪೀಠದ ಮೇಲೆ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವು 27 ಇಂಚು ಉದ್ದವಿದೆ. ಶಿವಕುಮಾರ ಶ್ರೀಗಳ ಕೈಯಲ್ಲಿನ ಗೇಣು 9 ಇಂಚು ಇತ್ತು. ಆ ಗೇಣಿನ ಮೂರುಪಟ್ಟು ಲಿಂಗವನ್ನು ರೂಪಿಸಲಾಗಿದೆ. ಪಾನ ಬಟ್ಟಲು ಸೇರಿ ಸಂಪೂರ್ಣವಾಗಿ ಲಿಂಗ 38 ಇಂಚು ಇದೆ.

 • Video Icon

  POLITICS23, Jan 2019, 7:17 PM

  ಮಹಿಳಾ ಎಸ್‌ಪಿಗೆ ಅವಾಜ್ | ಕ್ಷಮೆ ಕೇಳೋ ಪ್ರಶ್ನೆನೇ ಇಲ್ಲ: ಸಾ.ರಾ. ಮಹೇಶ್

  ಸಿದ್ಧಗಂಗಾ ಶಿವಕುಮಾರ ಶ್ರೀಗಳ ಕ್ರಿಯಾವಿಧಿ ವೇಳೆ  ತುಮಕೂರು ಜಿಲ್ಲಾ ಎಸ್ಪಿ ದಿವ್ಯಾ ಗೋಪಿನಾಥ್ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಗರಂ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯ ಬಗ್ಗೆ  ಖುದ್ದು ಸುವರ್ಣನ್ಯೂಸ್ ಜೊತೆ ಮಾತನಾಡಿದ ಸಚಿವ ಸಾ.ರಾ. ಮಹೇಶ್, ಆ ರೀತಿ ಮಾತನಾಡಿರುವುದನ್ನು ಅಲ್ಲಗಳೆದಿದ್ದಾರೆ.

 • Video Icon

  state23, Jan 2019, 6:15 PM

  ಸಚಿವ ಸಾ.ರಾ. ಮಹೇಶ್‌ ಬೈಗುಳಕ್ಕೆ IPS ಹೆಣ್ಮಗಳು ದಿವ್ಯಾ ಕೊಟ್ರು ಉತ್ತರ!

  ತುಮಕೂರು ಸಿದ್ಧಗಂಗಾ ಶಿವಕುಮಾರ ಶ್ರೀ ಕ್ರಿಯಾವಿಧಿ ಶಾಂತವಾಗಿ ನಡೆಯಲು ಶ್ರಮಿಸಿದ  ತುಮಕೂರು ಜಿಲ್ಲಾ ಎಸ್ಪಿ ದಿವ್ಯಾ ಗೋಪಿನಾಥ್ ವಿರುದ್ಧ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಗರಂ ಆಗಿದ್ದಾರೆ. ಈ ಘಟನೆಯ ಬಗ್ಗೆ  ಐಪಿಎಸ್ ಅಧಿಕಾರಿ ದಿವ್ಯಾ ಪ್ರತಿಕ್ರಿಯಿಸಿದ್ದಾರೆ. ಮಹಿಳಾ ಐಪಿಎಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಶ್ರೀಗಳು ಶಿವೈಕ್ಯರಾದ ಹಿನ್ನೆಲೆ ಮಗುವಿನ ಆರೋಗ್ಯವನ್ನೂ ಲೆಕ್ಕಿಸದೇ, ರಜೆ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು. 

 • Modi

  INDIA23, Jan 2019, 8:56 AM

  ಕಾಶಿಯಲ್ಲಿ ಶ್ರೀಗಳ ನೆನೆದ ಪ್ರಧಾನಿ ನರೇಂದ್ರ ಮೋದಿ

  ಪ್ರಧಾನಿ ನರೇಂದ್ರ ಮೋದಿ ಅವರು ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಾದ ದಿ. ಶಿವಕುಮಾರ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನುಡಿನಮನ ಸಲ್ಲಿಸಿದರು. 

 • ಅನಾಥ ಬಂಧುವೇ ಬಾ.. ನಾವೆಲ್ಲಾ ನಿನ್ನೆಯ ಹೂವುಗಳು... ಶ್ರೀಗಳಿಗೆ ವಂದಿಸುತ್ತಿರುವ ವಿಷ್ಣುವರ್ಧನ್

  WEB SPECIAL22, Jan 2019, 3:44 PM

  ನಾಡು ನೆನಪಿಡುವ ನಿಷ್ಕಾಮ ಯೋಗಿ ಜೊತೆ ಗಣ್ಯರು

  ನಿಷ್ಕಾಮ ಯೋಗಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದಾರೆ. 111 ವರ್ಷಗಳ ಸಾರ್ಥಕ ಜೀವನ ನಡೆಸಿದ ಮಹಾತ್ಮ.  ಶಿವಕುಮಾರ ಶ್ರೀಗಳು ಗಣ್ಯರೊಂದಿಗಿರುವ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ. 

 • Siddaganga Sri

  News21, Jan 2019, 5:02 PM

  ಜಾತಿ, ಮತ ಹಾಗೂ ಧರ್ಮ ಭೇದವಿಲ್ಲದೆ ದುಡಿದ ಚೇತನ: ರವಿ ಚನ್ನಣ್ಣನವರ್

  ಶತಾಯುಷಿ, ನಡೆದಾಡುವ ದೇವರು, ಕರ್ನಾಟಕ ರತ್ನ ಸಿದ್ದಗಂಗಾ ಶಿವಕುಮಾರ ಶ್ರೀಗಳ ಅಗಲಿಕೆಯಿಂದ ನಾಡಿನೆಲ್ಲೆಡೆ ಶೋಕ ಮಡುಗಟ್ಟಿದೆ. ಎಲ್ಲ ಕ್ಷೇತ್ರಗಳ ಗಣ್ಯರೂ ಶ್ರೀಗಳು ಲಿಂಗೈಕ್ಯರಾಗಿರುವುದಕ್ಕೆ ಕಂಬನಿ ಮಿಡಿದಿದ್ದಾರೆ.

 • Video Icon

  state21, Jan 2019, 4:38 PM

  ತುಮಕೂರು: ಮಾರ್ಗ ಬದಲಾವಣೆ; ಯಾರು ಹೇಗೆ ಹೋಗ್ಬೇಕು? ಫುಲ್ ಡೀಟೆಲ್ಸ್...

  ಸಿದ್ಧಗಂಗಾ ಶ್ರೀ ನಿಧನಹೊಂದಿರುವ ಹಿನ್ನೆಲೆಯಲ್ಲಿ, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ಮಠಕ್ಕೆ ಬರುವ ಸಾಧ್ಯತೆ ಇದೆ. ಈ ಕಾರಣದಿಂದ ತುಮಕೂರು ನಗರಾದಾದ್ಯಂತ ಟ್ರಾಫಿಕ್ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ತುಮಕೂರು ಹಾದು ಹೋಗುವ ವಾಹನಗಳಿಗೆ ಮಾರ್ಗ ಬದಲಾವಣೆ, ದಾಸೋಹ ವ್ಯವಸ್ಥೆಗಳನ್ನು ಮಾಡಲಾಗಿದೆ. ಯಾರ್ಯಾರು ಹೇಗೆ ಬರ್ಬೇಕು? ಪಾರ್ಕಿಂಗ್ ಎಲ್ಲಿ ಮಾಡ್ಬೇಕು? ಪರ್ಯಾಯ ಮಾರ್ಗಗಳೇನು? ಇಲ್ಲಿದೆ ಫುಲ್ ಡೀಟೆಲ್ಸ್...  

 • Siddaganga

  Tumakuru17, Jan 2019, 10:18 PM

  ಶಿವಕುಮಾರ ಶ್ರೀಗಳಿಗೆ ಅಮೆರಿಕಾದಿಂದ ಬಂದ ಶಿಷ್ಯ ಡಾ.ನಾಗಣ್ಣರಿಂದ ಚಿಕಿತ್ಸೆ

  ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಚೇತರಿಕೆ ಕಾಣುತ್ತಿದೆ. ಅವರೇ ಉಸಿರಾಟವಾಡುತ್ತಿದ್ದು, ವಿಶೇಷ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. 

 • Shivakumar Seer

  state8, Dec 2018, 5:41 PM

  ರೇಲಾ ಆಸ್ಪತ್ರೆಯಿಂದ ಶಿವಕುಮಾರ್​ ಸ್ವಾಮೀಜಿಗಳ ಮತ್ತೊಂದು ಹೆಲ್ತ್​ ಬುಲೆಟಿನ್ ರಿಲೀಸ್

  ತಮಿಳುನಾಡಿನ ಚೆನ್ನೈನಲ್ಲಿರುವ ರೇಲಾ ಆಸ್ಪತ್ರೆ ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ್​ ಸ್ವಾಮೀಜಿಗಳ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಿದೆ.

 • Video Icon

  state8, Dec 2018, 12:43 PM

  ಸಿದ್ದಗಂಗಾ ಶ್ರೀಗಳ ಶಸ್ತ್ರಚಿಕಿತ್ಸೆ ಯಶಸ್ವಿ: ಭಕ್ತರಲ್ಲಿ ಸಂತಸ

  ಮೇದೋಜ್ಜೀರಕ ಗ್ರಂಥಿಯಿಂದ ಪಿತ್ತಕೋಶಕ್ಕೆ ಹೋಗಬೇಕಾದ ನೀರಿನ ಅಂಶ ಸರಾಗವಾಗಿ ಹೋಗದ ಕಾರಣ ಶ್ರೀಗಳಿಗೆ 11 ಸ್ಟೆಂಟ್ ಗಳನ್ನು ಅಳವಡಿಸಲಾಗಿತ್ತು. ಇಷ್ಟಾದರೂ ಮೇದೋಜ್ಜೀರಕ ಗ್ರಂಥಿಯಿಂದ ಹೋಗುತ್ತಿದ್ದ ನೀರಿನ ಅಂಶ ಗಟ್ಟಿಯಾಗಿ ನಿಲ್ಲುತ್ತಿತ್ತು. ಪರಿಣಾಮವಾಗಿ ಆ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ ಶಿವಕುಮಾರ ಸ್ವಾಮೀಜಿಯನ್ನು ಸರ್ಜರಿಗಾಗಿ ಶುಕ್ರವಾರದಂದು ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಿದ್ದಗಂಗಾ ಶ್ರೀಗಳಿಗೆ ಡಾ. ಮೊಹಮ್ಮದ್ ರೇಲಾ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಶ್ರೀಗಳು ಕ್ಷೇಮವಾಗಿದ್ದು, ಸುಮಾರು 8-10 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

 • Shivakumar seer

  state8, Dec 2018, 9:54 AM

  ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳಿಗೆ ಶಸ್ತ್ರಚಿಕಿತ್ಸೆ ಸಾಧ್ಯತೆ

  ಶನಿವಾರ ಬೆಳಗ್ಗೆ ಶ್ರೀಗಳನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯಲಾಗಿದ್ದು, ವೈದ್ಯರು ತಪಾಸಣೆ ನಡೆಸಿ ಆಪರೇಷನ್ ಮಾಡಬೇಕೋ ಇಲ್ಲವೋ ಎಂಬುದು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಸಾಧ್ಯತೆಗಳು ಹೆಚ್ಚು ಎನ್ನಲಾಗಿದೆ.

 • Dr. Mohammed Rela

  NEWS7, Dec 2018, 1:48 PM

  ಶ್ರೀಗಳ ಆರೋಗ್ಯ ಜವಾಬ್ದಾರಿ ಹೊತ್ತ ಮೊಹ್ಮದ್ ರೇಲಾ ಯಾರು?

  ಚೆನ್ನೈನ ಡಾ. ಮೊಹ್ಮದ್ ರೇಲಾ ಅವರೇ ಇದೀಗ ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಶ್ರೀಗಳ ಆರೋಗ್ಯದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಹೌದು, ಚೆನ್ನೈನ ಪ್ರಸಿದ್ಧ ರೇಲಾ ಇನ್ಸಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್‌ನ ಮುಖ್ಯಸ್ಥರಾಗಿರುವ ಡಾ. ಮೊಹ್ಮದ್ ರೇಲಾ ವಿಶ್ವ ಪ್ರಸಿದ್ಧ ವೈದ್ಯರು.

 • Shivakumar seer

  state6, Dec 2018, 11:43 PM

  ಹೆಚ್ಚಿನ ಚಿಕಿತ್ಸೆಗಾಗಿ ಸಿದ್ದಗಂಗಾ ಮಠದ ಶಿವಕುಮಾರ ಶ್ರೀ ಚೆನ್ನೈಗೆ

  ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.