Search results - 90 Results
 • Narendra Modi

  NEWS19, Nov 2018, 11:18 AM IST

  ಮೋದಿ ರೂಪದಲ್ಲಿ ಸಿಂಗಾಪುರ ಸಂಸ್ಥಾಪಕ ಲೀ ಭಾರತದಲ್ಲಿ ಮರುಜನ್ಮ?

  ಪ್ರಧಾನಿ ಮೋದಿ ರೂಪದಲ್ಲಿ ಸಿಂಗಾಪುರ ಸಂಸ್ಥಾಪಕ ಲೀ ಕ್ವಾನ್ ಜನ್ಮ ತಾಳಿದ್ದಾರೆ ಎಂದು ಸಿಂಗಾಪುರದ ದಿನಪತ್ರಿಕೆಯೊಂದು ವರದಿ ಮಾಡಿದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರೊಂದಿಗೆ ಮೋದಿ ಅವರ ಅರ್ಧ ಫೋಟೋ ಮತ್ತು ಲೀ ಅವರ ಅರ್ಧ ಫೋಟೋವನ್ನು ಜೋಡಿಸಲಾಗಿದೆ.

 • amazon

  NEWS16, Nov 2018, 9:56 AM IST

  ಅಮೆಜಾನ್‌ನಲ್ಲಿ ಏನೇ ಖರೀದಿಸಿದರೂ ಶೇ. 99 ರಷ್ಟು ರಿಯಾಯಿತಿ!

  ಅಮೆಜಾನ್ ಬಿಗ್ ಬಿಲಿಯನ್ ಡೇ ಸೇಲ್ ಹೆಸರಿನ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಸಂದೇಶದಲ್ಲಿ ಯಾವುದೇ ಉತ್ಪನ್ನಗಳನ್ನು ಖರೀದಿಸಿದರೂ ಶೇ.99 ರಷ್ಟು ರಿಯಾಯಿತಿ ಎಂದು ಹೇಳಲಾಗಿದೆ. ಅದರಲ್ಲಿ 4461 ರು. ಬೆಲೆಯ ಮಿಕ್ಸರ್ ಗ್ರೈಂಡರ್ ಕೇವಲ 10 ರು. ಹೀಗೆ ಇತ್ಯಾದಿ ವಸ್ತುಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿವೆ ಎಂದು ಹೇಳಲಾಗಿದೆ.

 • Avni

  INDIA15, Nov 2018, 10:08 AM IST

  ಮೃತ ಹುಲಿ ’ಅವನಿ’ಗೆ ಅಮೆರಿಕದ ನ್ಯೂಯಾರ್ಕ್’ನಲ್ಲಿ ಗೌರವ ಸಮರ್ಪಣೆ

  ಭಾರತ ಏಕೆ ಹುಲಿಗಳನ್ನು ಸಂರಕ್ಷಿಸದೆ ಸಾಯಿಸುತ್ತಿದೆ? ವಿಶ್ವದಲ್ಲೇ ಅತಿ ಹೆಚ್ಚು ಬೆಂಗಾಲ್ ಟೈಗರ್ಸ್‌ ಭಾರತದಲ್ಲಿವೆ. ಆದರೆ ಅವನತಿಯ ಹಾದಿಯಲ್ಲಿರುವ ಅವನಿಯಂತಹ ಪ್ರಾಣಿಯನ್ನು ಅಕ್ರಮವಾಗಿ ಕೊಲ್ಲಲಾಗುತ್ತಿದೆ. ಈಗ ಅವನಿಯ ಎರಡು ಮರಿಗಳ ಕತೆ ಏನು?’ ಎಂದು ಒಕ್ಕಣೆ ಬರೆಯಲಾಗಿದೆ.

 • Raichuru

  NEWS14, Nov 2018, 9:37 AM IST

  ರಾಯಚೂರಲ್ಲಿ ಮಸೀದಿ ಒಳಗೆ ದೇವಸ್ಥಾನ?

  ಕರ್ನಾಟಕದಲ್ಲಿ ಮಸೀದಿಯನ್ನು ಒಡೆದಾಗ ಅಲ್ಲಿ ದೇವಾಲಯವಿರುವುದು ಪತ್ತೆಯಾಗಿದೆ ಎಂಬ ಒಕ್ಕಣೆಯೊಂದಿಗೆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? 

 • Mangaluru

  NEWS12, Nov 2018, 7:47 PM IST

  ದಿಢೀರ್ ರಜೆ, ಬೆಂಗಳೂರಿಗೆ ಬಂದ ಮಂಗಳೂರಿಗನ ಆಕ್ರೋಶದ ಪರಿ ವೈರಲ್

  ನಾಯಕರು, ರಾಜಕಾರಣಿಗಳು ಅಥವಾ ಸಚಿವ ಸ್ಥಾನದಲ್ಲಿ ಇರುವವರು ನಿಧನರಾದಾಗ ಸಾರ್ವತ್ರಿಕ ರಜೆ ನೀಡಬೇಕೆ? ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಸರಕಾರ ಒಂದಿಷ್ಟು ರಜೆಗಳನ್ನು ಕಾಯ್ದಿರಿಸಿಯೂ ಇರುತ್ತದೆ. ಆದರೆ ಜನರು ಈ ದಿಢೀರ್ ರಜೆಗಳಿಂದ ತೊಂದರೆಗೆ ಗುರಿಯಾಗುತ್ತಾರೆ. ಅದೆ ರೀತಿ ತೊಂದರೆಗೆ ಗುರಿಯಾದವರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿರುವ ಪರಿ ನೋಡಿಕೊಂಡು ಬನ್ನಿ....

 • ahmadabad

  NEWS10, Nov 2018, 10:01 AM IST

  ಹೀಗೆ ಕಂಗೊಳಿಸುತ್ತಿರುವ ನಗರ ಸಿಂಗಾಪುರ್ ಅಲ್ಲ, ಅಹಮದಾಬಾದ್!

   ಅಹಮದಾಬಾದ್ ನಗರದ ನದಿ ತೀರದ ಫೋಟೋ ಎಂಬ ಒಕ್ಕಣೆಯೊಂದಿಗೆ ರಾತ್ರಿ ಹೊತ್ತು ದೀಪಗಳಿಂದ ಕಂಗೊಳಿಸುತ್ತಿರುವ ನದಿತೀರದ ರಸ್ತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

 • Viral Check

  NEWS9, Nov 2018, 9:18 AM IST

  ಬಿಎಸ್‌ಪಿ ಮುಖಂಡನಿಂದ ದಲಿತ ಮಹಿಳೆ ಮೇಲೆ ಹಲ್ಲೆ?

  ಮಹಿಳೆಯೊಬ್ಬರ ಸೀರೆ ಹಿಡಿದು ಎಳೆದಾಡಿ, ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವಂತೆ ಭಾಸವಾಗುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರೊಂದಿಗೆ ‘ಇದು ಸಿನಿಮಾ ತುಣುಕಲ್ಲ ದಲಿತ ಬಾಂಧವರೇ.. ಬಿಎಸ್‌ಬಿ ಮುಖಂಡರೊಬ್ಬರು ಅವರ ಗೂಂಡಾಗಳೊಡಗೂಡಿ ದಲಿತ ಮಹಿಳೆಯ ಸೀರೆ ಹಿಡಿದು ಎಳೆದಾಡಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.

 • INDIA6, Nov 2018, 8:30 AM IST

  12ನೇ ವಾರ್ಷಿಕೋತ್ಸವ: ಇಂಡಿಗೋದಿಂದ ಫ್ರೀ ವಿಮಾನ ಟಿಕೆಟ್‌!

  ಪ್ರಶ್ನೆಗೆ ಉತ್ತರಿಸಿದ ಬಳಿಕ ಟಿಕೆಟ್‌ ಪಡೆಯುವ ವಿಧಾನ ವಿವರಿಸಲಾಗಿದೆ. ಅದರಲ್ಲಿ ಮೊದಲನೆಯನೆಯದು; ಈ ಸಂದೇಶವನ್ನು ವಾಟ್ಸ್‌ಆ್ಯಪ್‌ನ 5 ಗ್ರೂಪ್‌ಗೆ ಕಳಿಸುವುದು. ಎರಡನೆಯದು; ವಿಳಾಸ ಭರ್ತಿ, ಕೊನೆಯಲ್ಲಿ 24-48ಗಂಟೆಯೊಳಗಾಗಿ ನಿಮ್ಮ ಟಿಕೆಟ್‌ ಇ-ಮೇಲ್‌ ಮಾಡಲಾಗುತ್ತದೆ ಎನ್ನಲಾಗಿದೆ.

 • modi

  NEWS3, Nov 2018, 9:23 AM IST

  ಪೆಟ್ರೋಲ್ ದರ ಏರಿಸಿ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಿದರಾ ಮೋದಿ?

  ಭಾರತದ ಗಡಿಯಲ್ಲಿ ಸ್ಮಾರ್ಟ್ ಬೇಲಿ ನಿರ್ಮಿಸಲಾಗಿದೆ ಎಂಬ ಸಂದೇಶದೊಂದಿಗಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ಅದರೊಂದಿಗೆ, ‘ಮೋದಿ ಜಿ.. ನೀವು ದೇಶದ ಪ್ರಜೆಗಳು ಹೆಮ್ಮೆಪಡುವ ಕೆಲಸ ಮಾಡಿದ್ದೀರಿ. ಇವತ್ತು ಇಸ್ರೇಲ್‌ನಂತೆಯೇ ನಮ್ಮ ದೇಶದ ಗಡಿಯಲ್ಲೂ ಸ್ಮಾರ್ಟ್ ಬೇಲಿ ತಲೆ ಎತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಳಿಕ ಆತಂಕಗೊಂಡಿದ್ದೆವು. ಆದರೆ ಆ ದುಡ್ಡು ನಮ್ಮ ದೇಶದ ರಕ್ಷಣೆಗೆ ಬಳಕೆಯಾಗಿದೆ ಎಂಬುದು ಈಗ ಮನವರಿಕೆಯಾಗುತ್ತಿದೆ’ ಎಂದು ಒಕ್ಕಣೆಯನ್ನು ಬರೆಯಲಾಗಿದೆ.

 • Viral Check

  NEWS2, Nov 2018, 11:02 AM IST

  ಸರ್ದಾರರ ಏಕತಾ ಪ್ರತಿಮೆಯಲ್ಲಿ ಕನ್ನಡಕ್ಕಿಲ್ಲ ಮಣೆ?

  ಪಟೇಲರ ಪ್ರತಿಮೆ ಬಳಿ ಹಾಕಲಾಗಿದ್ದ 10 ಭಾಷೆಯಲ್ಲಿ ‘ Statue of Unity' ಎಂದು ಬರೆದ ನಾಮಫಲಕದಲ್ಲಿ ಕನ್ನಡವೇ ಇರಲಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮೊದಲು ‘Statue of Unity' ಎಂದು ತಮಿಳು ಲಿಪಿಯಲ್ಲಿ ತಪ್ಪಾಗಿ ಬರೆಯಲಾಗಿದೆ ಎಂಬ ವರದಿ ವೈರಲ್ ಆಗಿತ್ತು. ಇದು ಕನ್ನಡಿಗರ ಮತ್ತು ತಮಿಳಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

 • Ox Acid attack

  NEWS31, Oct 2018, 10:19 AM IST

  ಗೂಳಿ ಮೇಲೆ ಆ್ಯಸಿಡ್ ದಾಳಿ?

  ಅರಳೇಪೇಟೆಯಲ್ಲಿ ಗೂಳಿಯೊಂದರ ಮೇಲೆ ಆ್ಯಸಿಡ್ ದಾಳಿಯಾಗಿದೆ ಎಂಬ ಫೋಟೋ ಸಮೇತ ಇರುವ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಈಗ ವೈರಲ್ ಆಗಿವೆ. ಒಂದು ನಿರ್ದಿಷ್ಟ ಸಮುದಾಯವು ಈ ದಾಳಿ ನಡೆಸಿದೆ ಎಂಬ ಪ್ರಚೋದನಕಾರಿ ಬರಹಗಳು ಕೂಡ ಇದರ ಜತೆಗೇ ಹರಿದಾಡುತ್ತಿವೆ.

 • Tej Pratap Yadav

  INDIA30, Oct 2018, 9:01 AM IST

  10ನೇ ಕ್ಲಾಸ್ ಫೇಲ್ ಲಾಲು ಪುತ್ರನಿಗೆ ಡಾಕ್ಟರೇಟ್ ಗೌರವ..!

  ವಾಸ್ತವವಾಗಿ 2017ರಲ್ಲಿ ತೇಜ್ ಪ್ರತಾಪ್ ಸಿಂಗ್ ಐಜಿಐಎಂಎಸ್‌ಗೆ ಕಾರ್ಯಕ್ರವೊಂದಕ್ಕೆ ಭೇಟಿ ನೀಡಿದ್ದರು. ಆ ಕಾರ್ಯಕ್ರಮದ ಫೋಟೋಗಳನ್ನು ಸ್ವತಃ ತೇಜ್ ಪ್ರತಾಪ್ ತಮ್ಮ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿ, ಐಜಿಐಎಂಎಸ್‌ನಲ್ಲಿ ಡಿಗ್ರಿ ಸರ್ಟಿಫೀಕೇಟ್ ಮತ್ತು ಚಿನ್ನದ ಪದಕಗಳನ್ನು ವಿತರಿಸಿದ್ದಾಗಿ ಬರೆದುಕೊಂಡಿದ್ದರು. ಅದೇ ಫೋಟೋವನ್ನು ಬಳಸಿಕೊಂಡು ತಕ್ಷಶಿಲಾ ವಿಶ್ವವಿದ್ಯಾಲಯ ಡಾಕ್ಟರೇಟ್ ಗೌರವ ನೀಡಿದೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದೆ.

 • Viral Check Sabarimala

  INDIA29, Oct 2018, 11:08 AM IST

  ಪೊಲೀಸ್ ವೇಷದ ಸಿಪಿಎಂ ಗೂಂಡಾನಿಂದ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ..!

  ಜನಜಂಗುಳಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ನಿಂತಿರುವ ವ್ಯಕ್ತಿಯೊಬ್ಬರ ಫೋಟೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈತ ಸಿಪಿಎಂ ಕಾರ್ಯಕರ್ತನಾಗಿದ್ದು, ಅಕ್ರಮವಾಗಿ ಪೊಲೀಸ್ ಸಮವಸ್ತ್ರ ಧರಿಸಿ ಶಬರಿಮಲೆಗೆ ಬರುವ ಅಯ್ಯಪ್ಪ ಭಕ್ತರ ಮೇಲೆ ಹಲ್ಲೆ ನಡೆಸುತ್ತಿದ್ದಾನೆ.

 • pm modi

  NEWS27, Oct 2018, 11:29 AM IST

  ಮೋದಿ ಮೇಕಪ್‌ಗೆ ಪ್ರತಿ ತಿಂಗಳು ಖರ್ಚು ಮಾಡೋದೆಷ್ಟು ಗೊತ್ತಾ?

  ಪ್ರಧಾನಿ ನರೇಂದ್ರ ಮೋದಿ ಅವರು ಮೇಕಪ್ ಕಲಾವಿದರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಮೇಕಪ್‌ಗಾಗಿಯೇ ಪ್ರತಿ ತಿಂಗಳು ಮೋದಿ 15  ಲಕ್ಷರು. ವ್ಯಯ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  

 • kidney stone

  NEWS26, Oct 2018, 9:47 AM IST

  ಕೈಯಿಂದಲೇ ಕಿಡ್ನಿ ಸ್ಟೋನ್ ತೆಗೆಯುತ್ತಾನಂತೆ ಈ ಬಾಬಾ!

  ನಿಮಗೆ ಮೂತ್ರಪಿಂಡದಲ್ಲಿ ಕಲ್ಲು ಬೆಳೆದಿದೆಯೇ? ಅದಕ್ಕಾಗಿ ದುಬಾರಿ ಔಷಧಗಳ ಮೊರೆ ಹೋಗಿದ್ದೀರಾ? ಹಾಗಿದ್ದರೆ, ಈ ಬಾಬಾನ ಬಳಿ ಬನ್ನಿ, ಕೇವಲ ಕೈ ಬೆರಳಿನಲ್ಲಿಯೇ ನಿಮ್ಮ ಮೂತ್ರ ಪಿಂಡದ ಕಲ್ಲನ್ನು ಹೊರತೆಗೆಯುತ್ತಾನೆ. ಏನಿದರ ಅಸಲಿಯತ್ತು?