ವೆಂಕಯ್ಯ ನಾಯ್ಡು  

(Search results - 35)
 • Naidu

  Karnataka Districts3, Feb 2020, 7:38 AM

  ಹುಬ್ಬಳ್ಳಿ-ಧಾರವಾಡದ ಚಿಗರಿ ಬಸ್‌ನಲ್ಲಿ ಸಂಚರಿಸಿದ ಉಪರಾಷ್ಟ್ರಪತಿ!

  ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಬಿಆರ್‌ಟಿಎಸ್‌ ಬಸ್‌ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ನವನಗರದ ವರೆಗೂ ಬಸ್‌ನಲ್ಲೇ ಸಂಚರಿಸಿದ್ದು ವಿಶೇಷವಾಗಿತ್ತು

 • BRTS

  Karnataka Districts3, Feb 2020, 7:13 AM

  'ಹುಬ್ಬಳ್ಳಿ- ಧಾರವಾಡ ಸುಂದರವಾಗಲು BRTS ವರದಾನ'

  ಒಂದೂವರೆ ವರ್ಷದಿಂದ ಹುಬ್ಬಳ್ಳಿ- ಧಾರವಾಡ ಮಹಾನಗರ ನಡುವೆ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದ ಬಿಆರ್‌ಟಿಎಸ್‌ನ ಚಿಗರಿ ಬಸ್ಸಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಭಾನುವಾರ ಅಧಿಕೃತ ಹಸಿರು ನಿಶಾನೆ ತೋರಿಸಿದ್ದಾರೆ.

 • Naidu

  Karnataka Districts2, Feb 2020, 12:36 PM

  ಇಂಗ್ಲಿಷ್ ಕಲಿಯಿರಿ ಆದರೆ ಇಂಗ್ಲಿಷರಂತೆ ವರ್ತಿಸಬೇಡಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

  ಯುವಕರು ದೇಶದ ಭವಿಷ್ಯರಾಗಿದ್ದಾರೆ. ಶಿಕ್ಷಣ ಕೇವಲ ಪದವಿ ಪಡೆಯಲು, ಉದ್ಯೋಗ ಮಾಡಲು ಅಲ್ಲ,  ಶಿಕ್ಷಣ ಎನ್ನುವುದು ಜ್ಞಾನಾಭಿವೃದ್ಧಿಯಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ವಿಷಯಗಳನ್ನು ಅಳವಡಿಸಬೇಕು. ಬ್ರಿಟಿಷ್ ಪ್ರಭಾವಿತ ಇತಿಹಾಸವನ್ನು ನಾವು ಕಲಿಯುತ್ತಿದ್ದೇವೆ. ಬ್ರಿಟಿಷರು ನಮ್ಮನ್ನು ಆಳಿ, ಮೋಸ ಮಾಡಿದ್ದಾರೆ. ಇಂಗ್ಲಿಷ್ ಕಲಿಯಿರಿ ಇಂಗ್ಲಿಷರಂತೆ ವರ್ತಿಸಬೇಡಿ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ. 
   

 • BRTS

  Karnataka Districts2, Feb 2020, 7:30 AM

  ಹುಬ್ಬಳ್ಳಿ: BRTSಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ

  ರಾಜ್ಯದಲ್ಲಿ ಮೊದಲ ಬಾರಿಗೆ ಕೈಗೆತ್ತಿಕೊಳ್ಳಲಾದ ಬಿಆರ್‌ಟಿಎಸ್‌ (ಹುಬ್ಬಳ್ಳಿ- ಧಾರವಾಡ ತ್ವರಿತ ಬಸ್‌ ಸಂಚಾರ ವ್ಯವಸ್ಥೆ) ಕಾರಿಡಾರ್‌ ಇಂದು(ಫೆ.02) ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಲೋಕಾರ್ಪಣೆಗೊಳಿಸಲಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ.
   

 • BRTS

  Karnataka Districts11, Jan 2020, 8:25 AM

  ಫೆ. 2 ರಂದು ಬಿಆರ್‌ಟಿಎಸ್ ಲೋಕಾರ್ಪಣೆ: ಉಪ ರಾಷ್ಟ್ರಪತಿ ನಾಯ್ಡುರಿಂದ ಚಾಲನೆ

  ಹುಬ್ಬಳ್ಳಿ-ಧಾರವಾಡ ಮಹಾನಗರದ ಮಧ್ಯೆ 2018 ರ ಅ. 2ರಿಂದ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಬಿಆರ್‌ಟಿಎಸ್ ಬಸ್‌ಗಳಿಗೆ ಫೆ. 2ರಂದು ಅಧಿಕೃತವಾಗಿ ಚಾಲನೆ ನೀಡಲಾಗುತ್ತಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಆರ್‌ಟಿಎಸ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ. 
   

 • Pejawar

  Karnataka Districts8, Jan 2020, 11:09 AM

  ಜಾತಿ- ಧರ್ಮ ಮೀರಿ ಸಮಾಜಕ್ಕೆ ಶ್ರಮಿಸಿದ ಪೇಜಾವರ ಶ್ರೀ: ವೆಂಕಯ್ಯ ನಾಯ್ಡು

  ಕೃಷ್ಣನ ಅನನ್ಯ ಭಕ್ತರಾಗಿದ್ದ ಪೇಜಾವರ ಸ್ವಾಮೀಜಿ ಅವರೊಂದಿಗೆ ನನ್ನದು 30 ವರ್ಷಗಳ ಒಡನಾಟವಿತ್ತು. ಅವರ ನಿಗರ್ಮನ ನನಗೆ ಅತೀವ ನೋವು ತಂದಿದೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸ್ಮರಿಸಿದ್ದಾರೆ.

 • Venkaiah Naidu

  Karnataka Districts8, Jan 2020, 8:15 AM

  ಕೃಷಿಗೆ ಒತ್ತು ನೀಡುವ ಜವಾಬ್ದಾರಿ ವಿಜ್ಞಾನಿಗಳ ಮೇಲಿದೆ: ಉಪರಾಷ್ಟ್ರಪತಿ

  ಹಲವು ಸಮಸ್ಯೆಗಳಿಂದ ನರಳುತ್ತಿರುವ ಕೃಷಿ ಕ್ಷೇತ್ರ ಮತ್ತು ರೈತರ ಜೀವನ ಸುಧಾರಣೆಗೆ ಸಾಲಮನ್ನಾ, ಉಚಿತ ವಿದ್ಯುತ್‌ ನೀಡುವುದೊಂದೇ ಮಾರ್ಗವಲ್ಲ, ರೈತರ ಬದುಕು ಹಸನಾಗಿಸಲು ವಿಜ್ಞಾನಿಗಳು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಸಂಶೋಧನೆಗಳತ್ತ ಹೆಚ್ಚು ಗಮಹರಿಸಬೇಕು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.
   

 • India22, Nov 2019, 3:45 PM

  ರೀ ನೀವೇನ್ ಮಿನಿಸ್ಟರಾ?: ತಾಳ್ಮೆ ಕಳೆದುಕೊಂಡ ನಾಯ್ಡು!

  ಸಾಮಾನ್ಯವಾಗಿ ಶಾಂತ ಸ್ವಭಾವದ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು, ಕಲಾಪದ ವೇಳೆ ತಾಳ್ಮೆ ಕಳೆದುಕೊಂಡ ಪ್ರಸಂಗ ನಡೆದಿದೆ.

 • venkaiah naidu

  Dakshina Kannada3, Nov 2019, 12:04 PM

  ಮಂಗಳೂರು ಮೀನು ಸಾರಿಗೆ ಉಪರಾಷ್ಟ್ರಪತಿ ಫಿದಾ..!

  ಶನಿವಾರ ಸುರತ್ಕಲ್‌ನ ರಾಷ್ಟ್ರೀಯ ತಂತ್ರಸ್ಥಾನ ಸಂಸ್ಥೆ(ಎನ್‌ಐಟಿಕೆ)ಯಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಲು ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರಾವಳಿಯ ಸೀಫುಡ್‌ಗೆ ಫಿದಾ ಆಗಿದ್ದಾರೆ. ವಿಮಾನದಲ್ಲೇ ಮಂಗಳೂರಿನ ವಿಶೇಷ ಮೀನು, ಸಿಗಡಿ ಖಾದ್ಯವನ್ನು ಸವಿದಿದ್ದಾರೆ.

 • Venkaiah Naidu

  NEWS6, Sep 2019, 6:53 PM

  ನಾವು ಶಾಂತಿಪ್ರಿಯರು, ಆದರೆ ದಾಳಿಗೆ ಬಂದರೆ ಸುಮ್ಮನೆ ಬಿಡಲ್ಲ: ನಾಯ್ಡು!

  ಭಾರತ ಶಾಂತಿ ಬಯಸುವ ರಾಷ್ಟ್ರವಾಗಿದ್ದು, ಶಾಂತಿಗಾಗಿ ಅದರ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಆದರೆ ಭಾರತದ ಮೇಲೆ ಯಾರಾದರೂ ದಾಳಿಗೆ ಮುಂದಾದರೆ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವುದು ನಮ್ಮ ಜವಾಬ್ದಾರಿ ಕೂಡ ಹೌದು ಎಂದು ವೆಂಕಯ್ಯ ನಾಯ್ಡು ಎಚ್ಚರಿಕೆ ನೀಡಿದ್ದಾರೆ.

 • naidu

  NEWS30, Jul 2019, 8:27 AM

  ಜೈಪಾಲ್‌ ರೆಡ್ಡಿ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು!

  ಅಧಿವೇಶನದ ಸಮಯದಲ್ಲಿ ನಿತ್ಯವೂ ನಾವು ಮುಂಜಾನೆ 7 ಗಂಟೆಗೆ ಒಟ್ಟಾಗಿ ಉಪಾಹಾರ ಸೇವಿಸಿ ವಿವಿಧ ವಿಷಯಗಳನ್ನು ಚರ್ಚಿಸುತ್ತಿದ್ದೆವು| ಜೈಪಾಲ್‌ ರೆಡ್ಡಿ ಒಡನಾಟ ನೆನೆದು ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ವೆಂಕಯ್ಯನಾಯ್ಡು| 

 • naidu

  NEWS14, Jul 2019, 10:18 AM

  ಭಾಷಾ ಹೇರಿಕೆ, ವಿರೋಧಗಳೆರಡೂ ಸರಿಯಲ್ಲ: ಎಂ.ವೆಂಕಯ್ಯ ನಾಯ್ಡು

  ಭಾಷಾ ಹೇರಿಕೆ, ವಿರೋಧಗಳೆರಡೂ ತರವಲ್ಲ: ಎಂ.ವೆಂಕಯ್ಯ ನಾಯ್ಡು| ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಸೂಕ್ತ: ಉಪರಾಷ್ಟ್ರಪತಿ

 • Venkaiah Naidu Doctorate

  NEWS10, Mar 2019, 10:45 AM

  ವಿಶ್ವಸಂಸ್ಥೆ ಸ್ಥಾಪಿತ ಪೀಸ್ ವಿವಿಯಿಂದ ವೆಂಕಯ್ಯ ನಾಯ್ಡುಗೆ ಡಾಕ್ಟರೆಟ್‌

  ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರಿಗೆ ಕೋಸ್ಟಾರಿಕಾ ದೇಶದ ರಾಜಧಾನಿ ಸ್ಯಾನ್‌ ಓಸೆಯಲ್ಲಿರುವ ಪೀಸ್‌ ವಿಶ್ವವಿದ್ಯಾಲಯವು ಗೌರವ ಡಾಕ್ಟರೆಟ್‌ ಪ್ರದಾನ ಮಾಡಿದೆ. ಕೋಸ್ಟಾರಿಕಾದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಡಾಕ್ಟರೆಟ್‌ ನೀಡಿ ಗೌರವಿಸಲಾಯಿತು. ‘ಭಾರತದಲ್ಲಿ ಪ್ರಜಾಪ್ರಭುತ್ವ , ಕಾನೂನು ಮತ್ತು ಸುಸ್ಥಿರ ಅಭಿವೃದ್ಧಿ’ಗಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಗಿದೆ.

 • Venkaiah Naidu

  Cine World30, Jan 2019, 12:53 PM

  ’ಉರಿ’ ಸಿನಿಮಾ ನೋಡಿ ’ಇನ್ಸ್‌ಪೈರಿಂಗ್’ ಎಂದ ವೆಂಕಯ್ಯನಾಯ್ಡು!

  ಸರ್ಜಿಕಲ್ ಸ್ಟ್ರೈಕ್ ಆಧಾರಿತ ಉರಿ ಸಿನಿಮಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರಧಾನಿ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉರಿ ಸಿನಿಮಾ ನೋಡಿ ಇನ್ಸ್ ಪೈರಿಂಗ್ ಆಗಿದೆ ಎಂದಿದ್ದಾರೆ

   

 • Venkaiah Naidu

  BUSINESS31, Aug 2018, 11:33 AM

  ಬಾತ್ ರೂಂ, ಬೆಡ್ ರೂಂ 'ರಹಸ್ಯ' ಹೊರ ಬಿತ್ತು: ವೆಂಕಯ್ಯ ನಾಯ್ಡು!

  ನೋಟು ಅಮಾನ್ಯೀಕರಣದಿಂದ ಸರ್ಕಾರ ಸಾಧಿಸಿದ್ದಾದರೂ ಏನು ಎಂಬುದಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮರ್ಪಕ ಉತ್ತರ ನೀಡಿದ್ದಾರೆ. ನೋಟು ಅಮಾನ್ಯೀಕರಣದಿಂದಾಗಿ ಬಾತ್ ರೂಂ, ಬೆಡ್ ರೂಂ ನಲ್ಲಿ ಅಡಗಿಸಿಟ್ಟಿದ್ದ ಕಪ್ಪುಹಣವೆಲ್ಲಾ ಇದೀಗ ಬ್ಯಾಂಕಿಂಗ್ ವ್ಯವಸ್ಥೆಗೆ ಬಂದಿದೆ ಎಂದು ನಾಯ್ಡು ಸಮರ್ಥಿಸಿಕೊಂಡಿದ್ದಾರೆ.