ವಿಕ್ಟೋರಿಯಾ ಆಸ್ಪತ್ರೆ

(Search results - 40)

Victoria

Karnataka Districts30, Jul 2020, 8:10 AM

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದೇ ದಿನ 7 ಮಂದಿ ಕೊರೋನಾ ಸೋಂಕಿತರು ಸಾವು

ಕೊರೋನಾ ವಾರಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆ ಮಹಿಳಾ ಸಿಬ್ಬಂದಿ ಕೊರೋನಾಗೆ ಬಲಿಯಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಮಾಸ್ಟರ್‌ ಪ್ಲಾನ್‌ ಬಿಲ್ಡಿಂಗ್‌ ಕೋವಿಡ್‌ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ಮಂಗಳವಾರ ಒಂದೇ ದಿನ ವಿಕ್ಟೋರಿಯಾದಲ್ಲಿ ಏಳು ಮಂದಿ ಸೋಂಕಿನಿಂದ ಮರಣ ಹೊಂದಿದಂತೆ ಆಗಿದೆ.

fact Check

Fact Check22, Jul 2020, 10:21 AM

Fact Check: ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’

ಭಾರತದಲ್ಲಿ ಕೊರೋನಾ ವೈರಸ್‌ ರಣಕೇಕೆ ಮುಂದುವರೆಸಿದೆ. ಉದ್ಯಾನ ನಗರಿ ಬೆಂಗಳೂರು ಸಹ ಕೊರೋನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಯಾಗಿದೆ. ಈ ನಡುವೆ ಕಿರಿದಾದ ಜಾಗದಲ್ಲಿ ಕಿಕ್ಕಿರಿದು ಜನರು ನಿಂತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ, ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’ ಎಂದು ಹೇಳಲಾಗುತ್ತಿದೆ. ‘ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಸಿಗೆಯೂ ಇಲ್ಲದಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ನಿಜನಾ ಈ ಸುದ್ದಿ?

Victoria Hospital

Video Icon

state18, Jul 2020, 2:58 PM

ಅವ್ಯವಸ್ಥೆಗಳ ಆಗರ ವಿಕ್ಟೋರಿಯಾ; ಸೋಂಕಿತರ ಗೋಳು ಕೇಳೋರಿಲ್ಲ..!

ವಿಕ್ಟೋರಿಯಾ ಆಸ್ಪತ್ರೆಯ ಕರ್ಮಕಾಂಡ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಯಾವಾಗಲು ಅವ್ಯವಸ್ಥೆಯ ಗೂಡಾಗಿರುತ್ತದೆ. ಆಸ್ಪತ್ರೆಯ ಅವ್ಯವಸ್ಥೆಯಿಂದ ಸೋಂಕಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ವಾರ್ಡ್‌ ಕ್ಲೀನ್ ಮಾಡಿಲ್ಲ. ಬೆಡ್‌ ಕ್ಲೀನ್ ಮಾಡಿಲ್ಲ. ಕಸ ತೆಗೆಯಲ್ಲ. ಈ ರೀತಿಯಿದ್ದರೆ ಕೊರೊನಾ ಹೋಗೋದಿಲ್ಲ, ಬದಲಿಗೆ ಇನ್ನೊಂದು ರೋಗ ಶುರುವಾಗುತ್ತದಷ್ಟೇ ಎಂದು ಸೋಂಕಿತರೊಬ್ಬರು ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

victoria hospital

state17, Jul 2020, 6:10 PM

ವಿಶೇಷ ಮೈಲಿಗಲ್ಲು ಸಾಧಿಸಿದ 'ವಿಕ್ಟೋರಿಯಾ' ಆಸ್ಪತ್ರೆ: ವೈದ್ಯರಿಂದ ಸಂಭ್ರಮಾಚರಣೆ

ಕೊರೋನಾ ವೈರಸ್ ಭೀತಿಯಿಂದಾಗಿ ಇತರೆ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ದೂರುಗಳು ವರದಿಯಾಗಿವೆ. ಪ್ರಮುಖವಾಗಿ ಗರ್ಭಿಣಿ ಮಹಿಳೆಯರನ್ನು ಆಸ್ಪತ್ರೆಗಳಗೆ ಸೇರಿಸಿಕೊಳ್ಳುತ್ತಿಲ್ಲ ಎಂಬ ಆರೋಪವೂ ಇದೆ. ಇಂತಹ ಸಂಕಷ್ಟದ ಸನ್ನಿವೇಶದಲ್ಲೂ ಬೆಂಗಳೂರಿನ ವಾಣಿ ವಿಲಾಸ ಮತ್ತು ವಿಕ್ಟೋರಿಯಾ ಆಸ್ಪತ್ರೆ ವಿಶೇಷವಾದ ಮೈಲಿಗಲ್ಲು ಸಾಧಿಸಿದೆ.

• state15, Jul 2020, 12:50 PM

ವಿಕ್ಟೋರಿಯಾಗೆ ನೋ ಎಂಟ್ರಿ: ಹೊರಗಡೆಯೇ ವೈದ್ಯರ ಜೊತೆ ಡಿಕೆಶಿ ಸಮಾಲೋಚನೆ

ವಿಕ್ಟೋರಿಯಾ ಆಸ್ಪತ್ರೆಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಸ್ಪತ್ರೆ ಹೊರ ಆವರಣದಲ್ಲೇ ವೈದ್ಯರು ಹಾಗೂ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಇಲ್ಲಿವೆ ಫೋಟೋಸ್

ಜುನ್ 18  ರಿಂದ ಟ್ರಯಲ್ ಆರಂಭ ಮಾಡಲಾಗಿತ್ತು.

Karnataka Districts13, Jul 2020, 7:39 AM

ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು

ಕೊರೋನಾ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿರಾಕರಿಸಿದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲ ಎಂಬ ಕಾರಣಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ವಿಕ್ಟೋರಿಯಾ ಆಸ್ಪತ್ರೆ ಗೇಟ್‌ ಮುಂಭಾಗದಲ್ಲೇ ಪ್ರಾಣ ಬಿಟ್ಟದಾರುಣ ಘಟನೆ ಭಾನುವಾರ ನಡೆದಿದೆ.

• Karnataka Districts12, Jul 2020, 10:10 AM

ವಿಕ್ಟೋರಿಯಾ ಆಸ್ಪತ್ರೆ ICUನಲ್ಲಿದ್ದ 70 ವರ್ಷದ ಕೊರೋನಾ ಸೋಂಕಿತ ಆತ್ಮಹತ್ಯೆ

ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ಸೋಂಕಿತ ಕನಕಪುರ ಮೂಲದ 70 ವರ್ಷದ ವೃದ್ಧರೊಬ್ಬರು, ಕೊರೋನಾ ಭೀತಿಯಿಂದ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ

Victoria

Karnataka Districts11, Jul 2020, 9:07 AM

ವಿಕ್ಟೋರಿಯಾ ಆಸ್ಪತ್ರೆ ಸೌಲಭ್ಯದ ಬಗ್ಗೆ ಸಚಿವ ಸುಧಾಕರ್‌ಗೆ ಮೆಚ್ಚುಗೆ ಪತ್ರ

ಕೋವಿಡ್‌ ಕೇರ್‌ ಕೇಂದ್ರವಾದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಗೋಪಾಲಕೃಷ್ಣ ಎಂಬುವವರು ಸೌಲಭ್ಯಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿ ಸಚಿವ ಡಾ.ಕೆ.ಸುಧಾಕರ್‌ಗೆ ಪತ್ರ ಬರೆದಿದ್ದಾರೆ.

• Video Icon

state10, Jul 2020, 10:41 AM

ಬೆಂಗ್ಳೂರಲ್ಲಿ ಸಾವು ಹೆಚ್ಚಾಗಲು BBMP ನಿರ್ಲಕ್ಷ್ಯವೇ ಕಾರಣ..!

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಸಾವಿರ ಬೆಡ್ ವ್ಯವಸ್ಥೆ ಇದೆ ಎಂದಿತ್ತು ಆದರೆ ವಾಸ್ತವದಲ್ಲಿ ಅಷ್ಟು ಸಂಖ್ಯೆಯ ಬೆಡ್ ಇರಲಿಲ್ಲ. ಬಿಬಿಎಂಪಿ ಮಾಡಿರುವ ಯಡವಟ್ಟುಗಳೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

• Victoria Hospital
Video Icon

Karnataka Districts3, Jul 2020, 8:41 PM

'ನಾಲ್ಕು ದಿನವಾದ್ರೂ ಮಾತ್ರೆನೇ ಕೊಟ್ಟಿಲ್ಲ' ವಿಕ್ಟೋರಿಯಾ ನರಕ ದರ್ಶನ

ಡೆಡ್ಲಿ ಕೊರೋನಾದ ನಡುವೆ ಇತೆಂಥ ಅವ್ಯವಸ್ಥೆ. ವಿಕ್ಟೋರಿಯಾದಲ್ಲಿ ಪದೇ ಪದೇ ನರಕ ದರ್ಶನ. ಸೂಕ್ತ ಚಿಕಿತ್ಸೆ ಸಿಗದೆ ಸೋಂಕಿತರು ಪರದಾಡುತ್ತಲೇ ಇದ್ದಾರೆ.

• Video Icon

state1, Jul 2020, 1:18 PM

ವಿಕ್ಟೋರಿಯಾ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನರಳಿ ನರಳಿ ಪ್ರಾಣ ಬಿಟ್ಟ ವ್ಯಕ್ತಿ..!

ಕೊನೆಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಆಸ್ಪತ್ರೆ ಬಾಗಿಲಲ್ಲೇ ನರಳಿ ನರಳಿ ವ್ಯಕ್ತಿ ಪ್ರಾಣ ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ...

• Video Icon

state30, Jun 2020, 3:10 PM

ವಿಕ್ಟೋರಿಯಾದ 11 ಸ್ಟಾಫ್ ನರ್ಸ್‌ಗಳಿಗೆ ಸೋಂಕು; ಕ್ವಾರಂಟೈನ್‌ ಕೇಂದ್ರದಲ್ಲಿ ಅವ್ಯವಸ್ಥೆ

ಕೊರೊನಾ ವಾರಿಯರ್ಸ್‌ಗೂ ಕೊರೊನಾ ವಕ್ಕರಿಸಿದೆ. ವಿಕ್ಟೋರಿಯಾ ಆಸ್ಪತ್ರೆಯ 11 ಸ್ಟಾಫ್ ನರ್ಸ್‌ಗಳಿಗೆ ಸೋಂಕು ತಗುಲಿದೆ. ನಾಲ್ವರು ಪಿಜಿ ಡಾಕ್ಟರ್‌ಗಳಿಗೂ ಕೊರೊನಾ ಅಂಟಿದೆ. ವಿಕ್ಟೋರಿಯಾ ನರ್ಸ್‌ಗಳಿಗೆ ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಆದರೆ ಇಲ್ಲಿಯೂ ಅವ್ಯವಸ್ಥೆ ಆಗಿದೆ. ಒಂದು ರೂಮ್‌ನಲ್ಲಿ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿದೆ. ನರ್ಸ್‌ಗಳಿರುವ ರೂಮ್‌ನಲ್ಲಿ ಸ್ವಚ್ಛತೆಯೇ ಇಲ್ಲ. ಅಲ್ಲಿನ ಅವ್ಯವಸ್ಥೆ ಬಗ್ಗೆ ಇಲ್ಲಿದೆ ನೋಡಿ..!

Coronavirus

Video Icon

state28, Jun 2020, 2:18 PM

ಜೆಜೆ ನಗರ ಕಾರ್ಪೊರೇಟರ್‌ಗೆ ಕೊರೊನಾ ಪಾಸಿಟೀವ್; ವಿಕ್ಟೊರಿಯಾಗೆ ದಾಖಲು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣ ತಪ್ಪಿದೆ. ಪಾಸಿಟೀವ್ ಕೇಸ್‌ಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಬ್ಬ ಕಾರ್ಪೊರೇಟರ್‌ಗೆ ಪಾಸಿಟಿವ್ ಬಂದಿದೆ. ಜೆಜೆ ನಗರ ಕಾರ್ಪೊರೇಟರ್ ಸೀಮಾ ಅಲ್ತಾಫ್‌ಗೆ ಪಾಸಿಟಿವ್ ಬಂದಿದೆ. ಇವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

• Video Icon

state27, Jun 2020, 5:00 PM

ಬೆಂಗಳೂರು ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಅನಾವರಣ..!

ಜೂನ್ 25ರಂದು ಕೊರೋನಾ ಟೆಸ್ಟ್ ಮಾಡಲಾಗಿತ್ತು. ಜೂನ್ 26ರಂದು ಬಂದ ರಿಪೋರ್ಟ್‌ನಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಬಗ್ಗೆ ಯುವತಿಯರಿಬ್ಬರಿಗೆ ಕರೆ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳು ನಿಮ್ಮನ್ನು ಕರೆದೊಯ್ಯುತ್ತೇವೆ ಎಂದಿದ್ದರು. ಆದರೆ ಈವರೆಗೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಲ್ಲ. ಬೇಸತ್ತು ಯುವತಿಯರೇ ಆಸ್ಪತ್ರೆಗೆ ಬಂದಿದ್ದಾರೆ.

• Video Icon

state24, Jun 2020, 5:28 PM

ವಿಕ್ಟೋರಿಯಾದಿಂದ ಸೋಂಕಿತ ಎಸ್ಕೇಪ್: ವಾಣಿ ವಿಲಾಸದಲ್ಲಿ ಕೊರೊನಾತಂಕ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತನೊಬ್ಬ ಮಾರ್ಷಲ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದಾನೆ. ಹೊಟೇಲ್‌ಗೆ ಹೋಗುವ ನೆಪದಲ್ಲಿ ಪರಾರಿಯಾಗಿದ್ದಾನೆ. ವಿಕ್ಟೋರಿಯಾದಿಂದ ವಾಣಿ ವಿಲಾಸ ಮೂಲಕ ಪರಾರಿಯಾಗಿದ್ದು ವಾಣಿ ವಿಲಾಸದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಕೊರೊನಾ ಪೀಡಿತನ ತಲಾಶ್‌ಗೆ ಅಧಿಕಾರಿಗಳು ಮುಂದಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!