NEWS21, Feb 2019, 8:32 AM IST
ವಾಯುಪಡೆ ಮೃತ ಪೈಲಟ್ಗೆ ಆಗಸದಲ್ಲೇ ವಿಶಿಷ್ಟ ಗೌರವ
ವೈಮಾನಿಕ ಕ್ಷೇತ್ರದಲ್ಲಿನ ಸಂಪ್ರದಾಯದಂತೆ ಅತ್ಯುನ್ನತ ಸಾಧನೆ ತೋರಿದ ಪೈಲಟ್ ವಿಮಾನ ದುರಂತದಲ್ಲಿ ಮೃತಪಟ್ಟರೆ ವೈಮಾನಿಕ ಪ್ರದರ್ಶನ ತಂಡಗಳಿಂದ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ಮೂಲಕ ಗೌರವ ಸಲ್ಲಿಸಲಾಗುತ್ತದೆ. ಇಂತಹ ಗೌರವಕ್ಕೆ ಸಾಹಿಲ್ಗಾಂಧಿ ಅವರು ಪಾತ್ರರಾಗಿದ್ದು, ತೇಜಸ್-ಎಲ್ಸಿಎ, ಜಾಗ್ವಾರ್ ಹಾಗೂ ಸುಖೋಯ್ -30 ವಿಮಾನಗಳ ತಂಡವು ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್ ನಡೆಸಿವು.
INDIA17, Feb 2019, 11:43 AM IST
ಪೋಖ್ರಾನ್ನಲ್ಲಿ ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ
ಪೋಖ್ರಾನ್ನಲ್ಲಿ ಭಾರತೀಯ ವಾಯುಪಡೆ ಶಕ್ತಿ ಪ್ರದರ್ಶನ| ಪುಲ್ವಾಮಾ ದಾಳಿ ಬೆನ್ನಲ್ಲೇ, ವಾಯುಪಡೆಯ ಸೇನಾ ತಾಲೀಮು| ದೇಶದ ಸಾರ್ವಭೌಮತ್ವ ರಕ್ಷಣೆಗೆ ವಾಯುಪಡೆ ಸದಾ ಸನ್ನದ್ಧ| ವಾಯು ಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಧನೋವಾ ಪ್ರತಿಪಾದನೆ
Bengaluru Rural5, Feb 2019, 5:30 PM IST
ಬೆಂಗಳೂರು: ವಾಯುಪಡೆ ವಿಮಾನ ಪತನದ ಬೆನ್ನಲ್ಲೇ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ
ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೇನಾ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಟ್ಟಗುಪ್ಪೆ ಬಳಿ ನಡೆದಿದೆ.
NEWS3, Feb 2019, 9:09 AM IST
ವಾಯುಪಡೆಗೆ ‘ಚಿನೂಕ್’ ಬಲ
ಯುದ್ಧದಂತಹ ಸನ್ನಿವೇಶ ಎದುರಾದಾಗ ಪರ್ವತ ಪ್ರದೇಶಗಳಿಗೆ ಯೋಧರು, ದೈತ್ಯ ಉಪಕರಣಗಳು, ಗನ್ಗಳಂತಹ ಸಲಕರಣೆಗಳನ್ನು ಹೊತ್ತೊಯ್ಯಬಲ್ಲ ದೈತ್ಯ ಸಾಮರ್ಥ್ಯದ, ಮೊದಲ ‘ಚಿನೂಕ್’ ಹೆಲಿಕಾಪ್ಟರ್ ಭಾರತಕ್ಕೆ ಹಸ್ತಾಂತರವಾಗಿದೆ.
state1, Feb 2019, 1:39 PM IST
ಪತನಗೊಂಡ HAL ವಿಮಾನ: ಪೈಲಟ್ ಸಾವು
ಬೆಂಗಳೂರಿನ HAL ನಲ್ಲಿ ವಾಯುಪಡೆಗೆ ಸೇರಿದ ತರಬೇತಿ ವಿಮಾನ ಪತನವಾಗಿದ್ದು, ಈ ವೇಳೆ ಓರ್ವ ಪೈಲಟ್ ಸಾವಿಗೀಡಾಗಿದ್ದಾರೆ.
INDIA6, Jan 2019, 8:37 AM IST
ಸಂಬಳ ಕೊಡಲು 1000 ಕೋಟಿ ರೂಪಾಯಿ ಸಾಲ ಮಾಡಿದ ಎಚ್ಎಎಲ್!
ಇದೇ ಸ್ಥಿತಿ ಮುಂದುವರಿದರೆ ಏಪ್ರಿಲ್ನಿಂದ ಪರದಾಟ| ವಾಯುಪಡೆಯಿಂದಲೇ 14500 ಕೋಟಿ ಬಾಕಿ ಬರಬೇಕು
SCIENCE19, Dec 2018, 5:55 PM IST
ಇಸ್ರೋ ಜಿಸ್ಯಾಟ್-7A ಉಪಗ್ರಹ ಉಡಾವಣೆ ಯಶಸ್ವಿ!
ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿರುವ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಸಂಜೆ 4.10ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ಮಾಡಲಾಗಿದ್ದು, ವಾಯುಪಡೆಯ ಸಂಪರ್ಕ ಹಾಗೂ ಸಂವಹನ ಸಾಮರ್ಥ್ಯಗಳನ್ನು ಈ ಉಪಗ್ರಹದ ಸಹಾಯದಿಂದ ಮತ್ತಷ್ಟು ಹೆಚ್ಚಿಸಬಹುದಾಗಿದೆ.
NEWS8, Oct 2018, 10:14 AM IST
ರಾಜೀವ್ ಚಂದ್ರಶೇಖರ್ ಪ್ರಯತ್ನದಿಂದ ವಾಯುಪಡೆ ಸೇರಿದ ’ಡಕೋಟಾ- 3'
1947 - 48 ರ ಪಾಕ್ ನೊಂದಿಗಿನ ಕದನದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಕೋಟಾ 3 ಯುದ್ಧ ವಿಮಾನ ಇಂದು ನಡೆಯುವ ವಾಯುಪಡೆ ಹಾರಾಟದಲ್ಲಿ ಮಿಂಚು ಹರಿಸಲಿದೆ. ಹಾರಾಟಕ್ಕೆ ಅಸರ್ಥವಾಗಿ ಗುಜರಿ ಸೇರಿದ್ದ ಈ ವಿಮಾನ ಬ್ರಿಟನ್ ನಲ್ಲಿ ಇರೋದನ್ನ 2011 ರಲ್ಲಿ ಪತ್ತೆ ಹಚ್ಚಿದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅದನ್ನು ದುರಸ್ತಿ ಮಾಡಿಸಿ ಭಾರತಕ್ಕೆ ತಂದಿದ್ದರು. ಇಂದು ಡಕೋಟಾ 3 ವಾಯುಪಡೆಯಲ್ಲಿ ಮಿಂಚು ಹರಿಸಲಿದೆ.
NEWS27, Sep 2018, 12:30 PM IST
ತೊಡೆಗೆ ಗುಂಡು ಹಾರಿಸಿಕೊಂಡ ವಾಯುಪಡೆ ಉಪ ಮುಖ್ಯಸ್ಥ!
ವಾಯುಪಡೆಯ ಉಪ ಮುಖ್ಯಸ್ಥ ಶಿರಿಶ್ ಬಾಬನ್ ಡಿಯೋ ತಮ್ಮ ಪಿಸ್ತೂಲ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಗಾಯಗೊಂಡಿದ್ದಾರೆ. ತೊಡೆಯ ಭಾಗಕ್ಕೆ ಗಂಭೀರ ಗಾಯವಾದ ಕಾರಣ ಡಿಯೋ ಅವರನ್ನುನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
NEWS12, Sep 2018, 4:45 PM IST
ನಮಗಿರುವಷ್ಟು ಶತ್ರುಗಳು ಯಾರಿಗಿದ್ದಾರೆ?: ರಫೆಲ್ ಬೇಕೆಂದ ವಾಯುಪಡೆ ಚೀಫ್!
ಕೆಲ ದಿನಗಳ ಹಿಂದಷ್ಟೇ ರಫೆಲ್ ಡೀಲ್ ಕುರಿತು ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದ ವಾಯುಪಡೆ ಮುಖ್ಯಸ್ಥ . ಏರ್ಚೀಫ್ ಮಾರ್ಷಲ್ ಬಿ.ಎಸ್ ಧನೋವಾ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ. ರಫೆಲ್ ಯುದ್ಧ ವಿಮಾನ ಖರೀದಿಯಿಂದ ವಾಯುಪಡೆಯ ಕೊರತೆ ನೀಗಲು ಸಾಧ್ಯ ಎಂದು ಧನೋವಾ ಹೇಳಿದ್ದಾರೆ.
NEWS25, Jul 2018, 7:07 PM IST
ಹಗರಣವೋ, ಉಳಿತಾಯವೋ?: ರಫೆಲ್ ಗಾಗಿ ಮೋದಿ ಪ್ಲ್ಯಾನ್ ಏನು?
ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂಬುದು ವಿಪಕ್ಷಗಳ ಆರೋಪ. ಈ ಹಗರಣದಲ್ಲಿ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಗಂಭೀರ ಆರೋಪ ಮಾಡಿದ್ದರು. ಆದರೆ ರಕ್ಷಣಾ ಇಲಾಖೆ ಮತ್ತು ಭಾರತೀಯ ವಾಯುಪಡೆಯ ವರದಿಗಳು ಇದಕ್ಕೆ ತದ್ವಿರುದ್ದವಾದ ಕತೆಯನ್ನು ಹೇಳುತ್ತಿವೆ.
NEWS21, Jul 2018, 6:53 PM IST
50 ವರ್ಷಗಳ ಹಿಂದೆ ಮೃತಪಟ್ಟಿದ್ದ ಯೋಧನ ಮೃತದೇಹ ಪತ್ತೆ!
ಒಂದು ಕಡೆ ಭಾರತದ ಅಬೇಧ್ಯ ರಕ್ಷಣಾ ಕೋಟೆ ಹಿಮಾಲಯವನ್ನು ಕಾಯುವ ಯೋಧ. ಮತ್ತೊಂದೆಡೆ ತನ್ನ ರಕ್ಷಣೆಯಲ್ಲಿ ಪ್ರಾಣತೆತ್ತ ಯೋಧನನ್ನು ಸಂರಕ್ಷಿಸುವ ಅದೇ ಹಿಮಾಲಯ. ಹೌದು 50 ವರ್ಷಗಳ ಹಿಂದೆ ಭಾರತೀಯ ವಾಯುಪಡೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಮೃತದೇಹ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
BUSINESS8, Jul 2018, 7:00 PM IST
ಹೊಸ ನೋಟು ರವಾನಿಸಿದ ವಾಯುಪಡೆ ಬಿಲ್ ಎಷ್ಟು?
ನೋಟು ನಿಷೇಧದ ಬಳಿಕ ತುರ್ತಾಗಿ ದೇಶಾದ್ಯಂತ ಹೊಸ ನಗದು ರವಾನೆ ಮಾಡಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗಿತ್ತು. ಇದೀಗ ಭಾರತೀಯ ವಾಯುಪಡೆ ತನ್ನ ಸೇವೆಗೆ ಬರೊಬ್ಬರಿ 29.41 ಕೋಟಿ ರೂಪಾಯಿ ಬಿಲ್ ನೀಡಿದೆ.
NEWS21, Jun 2018, 11:28 AM IST
ಆಕಾಶದಲ್ಲೂ ಯೋಗ, ವಾಯುಸೇನೆಯಿಂದ ವಿನೂತನ ಪ್ರಯತ್ನ!
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ವಾಯುಪಡೆ ಯೋಧರು ಆಗಸದಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ತರಬೇತುದಾರಿಂದ ಈ ಪ್ರದರ್ಶನ ನಡೆದಿದೆ.
NEWS20, Jun 2018, 10:06 AM IST
ಬಾಹ್ಯಾಕಾಶಕ್ಕೆಂದೇ ಪಡೆ: ಅಮೆರಿಕದ ಹೊಸ ನಡೆ!
ಅಂತರಿಕ್ಷ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಅಮೆರಿಕ ಸೇನೆಯಲ್ಲಿ ಪ್ರತ್ಯೇಕ ‘ಬಾಹ್ಯಾಕಾಶ ಪಡೆ’ಯೊಂದನ್ನು ಸ್ಥಾಪಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ್ದಾರೆ.
ಭೂಸೇನೆ, ವಾಯುಸೇನೆ, ನೌಕಾಸೇನೆ ಸಾಮಾನ್ಯವಾಗಿರುವ ವಿಶ್ವದಲ್ಲಿ ‘ಬಾಹ್ಯಾಕಾಶ ಸೇನೆ’ ಎಂಬ ಪರಿಕಲ್ಪನೆಯೇ ಹೊಸತು. ಈ ಪಡೆ ಹೇಗೆ ಇರಲಿದೆ, ಯಾವ ಕೆಲಸಗಳನ್ನು ಮಾಡಲಿದೆ ಎಂಬ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿಯನ್ನು ಟ್ರಂಪ್ ಅವರು ನೀಡಿಲ್ಲ. ವಾಯುಪಡೆಗೆ ಸರಿಸಮಾನವಾಗಿರಲಿರುವ ಈ ಪಡೆ, ಪ್ರತ್ಯೇಕ ಅಸ್ತಿತ್ವ ಹೊಂದಿರುತ್ತದೆ ಎಂದಷ್ಟೇ ಹೇಳಿದ್ದಾರೆ.