ವಾಣಿಜ್ಯ ಯುದ್ಧ  

(Search results - 15)
 • Trump-Xi Jinping

  BUSINESS14, Dec 2019, 3:48 PM IST

  ಶತಮಾನದ ಮಿಲನ: ಜಗತ್ತಿಗೆ ಕೇಳಿಸಿದ ಅಮೆರಿಕ-ಚೀನಾ ಹೊಸ ಘೋಷಣೆ!

  ಅಮೆರಿಕದಿಂದ ಆಮದು ಹೆಚ್ಚಳಕ್ಕೆ ಸಮ್ಮತಿಸಿರುವ ಚೀನಾ, ಮುಂದಿನ ಎರಡು ವರ್ಷಗಳಲ್ಲಿ 200 ಶತಕೋಟಿ ಡಾಲರ್ ಮೌಲ್ಯದಷ್ಟು ವಸ್ತುಗಳನ್ನು ಖರೀದಿಸುವುದಾಗಿ ಘೋಷಿಸಿದೆ.

 • trump modi

  BUSINESS4, Dec 2019, 1:11 PM IST

  ಟ್ರಂಪ್ ಆಡಿದ ಅದೊಂದು ಮಾತು: ಚಿನ್ನದ ದರ ಕತೆಯೇ ಬೇರೆ ಆಯ್ತು!

  ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಚೀನಾದೊಂದಿಗಿನ ವಾಣಿಜ್ಯ ಯುದ್ಧದ ಕುರಿತು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯ ಪರಿಣಾಮವಾಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ.

 • Modi-Khan

  BUSINESS20, Feb 2019, 2:52 PM IST

  ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

  ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಅದರ ಮೊದಲ ಭಾಗವಾಗಿ ಪಾಕಿಸ್ತಾನದ ಮೇಲೆ ಬ್ಯುಸಿನೆಸ್ ಬಾಂಬ್ ಹಾಕಿದ್ದಾರೆ. ಪಾಕ್ ಮೇಲೆ ಆಮದು ಸುಂಕ ದ್ವಿಗುಣಗೊಳಿಸಿರುವ ಮೋದಿ ಸರ್ಕಾರ, ಪಾಕ್‌ನಿಂದ ಆಮದಾಗುವ ವಸ್ತುಗಳ ಮೇಲೆ ಶೇ.200 ರಷ್ಟು ತೆರಿಗೆ ವಿಧಿಸಿದೆ.

 • undefined

  BUSINESS24, Oct 2018, 6:25 PM IST

  ಚೀನಾದತ್ತ ಮೋದಿ ಚಿತ್ತ: ರಫ್ತು ನಮ್ದು ಕಾಂಚಾಣ ನಿಮ್ದು!

  ಅಮೆರಿಕದೊಂದಿಗೆ ವಾಣಿಜ್ಯ ಯುದ್ಧದಲ್ಲಿ ತೊಡಗಿರುವ ಚೀನಾ, ಅತ್ತ ಗೆಲ್ಲಲೂ ಆಗದೇ ಇತ್ತ ಸೋಲನ್ನು ಒಪ್ಪಿಕೊಳ್ಳಲೂ ಆಗದೇ ಪರದಾಡುತ್ತಿದೆ. ಅದರಂತೆ ಚೀನಾಕ್ಕೆ ಸುಮಾರು 200 ಉತ್ಪನ್ನಗಳನ್ನು ಸಾಗಿಸಲು ಮತ್ತು ಕೊರತೆಯನ್ನು ಕಡಿಮೆ ಮಾಡಲು ಭಾರತ ಯೋಜನೆಯನ್ನು ರೂಪಿಸುತ್ತಿದೆ. 

 • undefined

  BUSINESS20, Oct 2018, 2:17 PM IST

  ಅಯ್ಯಯ್ಯೋ ಚೀನಾ: ನಿನ್ನ ಎಕಾನಮಿ ಗತಿ ಇಷ್ಟೇನಾ?

  ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೀನಾ ಇದೀಗ ಮಂದಗತಿಯ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ.6.5ಕ್ಕೆ ಇಳಿಕೆಯಾಗಿದೆ. ಕಳೆದ 9 ವರ್ಷಗಳಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ.  

 • trade war

  BUSINESS14, Oct 2018, 1:22 PM IST

  ಚೀನಾಗೆ ವಾರದ ಹಿಂದೆ ಟ್ರಂಪ್ ಹೇಳಿದ್ರಂತೆ: ಕೇಳಿ ಭಾರತ ಹೇಳಿದಂತೆ!

  ಅಮೆರಿಕ-ಚೀನಾ ನಡುವಿನ ವಾಣಿಜ್ಯ ಯುದ್ಧ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಮೆರಿಕವನ್ನು ಹಣಿಯುವ ಉದ್ದೇಶದಿಂದ ಭಾರತದೊಂದಿಗೆ ವಾಣಿಜ್ಯ ಸಂಬಂಧ ಉತ್ತಮಗೊಳಿಸಲು ಚೀನಾ ಹವಣಿಸುತ್ತಿದೆ.  ಭಾರತ-ಚೀನಾ ಹತ್ತಿರವಾಗುವುದನ್ನು ತಪ್ಪಿಸಲು ಪರಿತಪಿಸುತ್ತಿರುವ ಟ್ರಂಪ್, ವಾರದ ಹಿಂದೆಯೇ ಚೀನಾ ಅಮೆರಿಕದೊಂದಿಗೆ ಹೊಂದಾಣಿಕೆ ಬಯಸಿ ಕರೆ ಮಾಡಿತ್ತು ಎಂದು ಹೇಳುವ ಮೂಲಕ ಚೀನಾ ನಡೆ ಕುರಿತು ಭಾರತ ಅನುಮಾನಪಡುವಂತೆ ಮಾಡಿದ್ದಾರೆ. 

 • Arun Jaitley

  BUSINESS28, Sep 2018, 4:42 PM IST

  ಚೀನಾ-ಯುಸ್ ಬಡಿದಾಡೋದು ನೋಡಿ ಮುಸಿ ಮುಸಿ ನಕ್ಕ ಜೇಟ್ಲಿ!

  ಚೀನಾ-ಅಮೆರಿಕ ನಡುವಿನ ಜಾಗತಿಕ ವಾಣಿಜ್ಯ ಸಮರಕ್ಕೆ ಇಡೀ ವಿಶ್ವವೇ ತಲೆ ಕೆಡಿಸಿಕೊಂಡು ಕೂತಿದೆ. ಈ ಎರಡೂ ದೈತ್ಯ ರಾಷ್ಟ್ರಗಳ ದರ ಸಮರದಿಂದ ಮುಂದೆ ಏನಾಗುವುದೋ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತಿದೆ. ಆದರೆ ಚೀನಾ-ಅಮೆರಿಕ ನಡುವಿನ ವಾಣಿಜ್ಯ ಯುದ್ಧ ಭಾರತಕ್ಕೆ ಅನುಕೂಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

 • Car

  BUSINESS12, Sep 2018, 10:47 AM IST

  ಕಾರೇ ಕೊಳ್ತಿಲ್ಲ ಜನ: ತೈಲದರದ ಎಫೆಕ್ಟಾ?

  ಜಾಗತಿಕ ವಾಣಿಜ್ಯ ಯುದ್ಧದ ಪರಿಣಾಮ ದೇಶದ ಆಟೊಮೊಬೈಲ್ ಕ್ಷೇತ್ರದ ಮೇಲೂ ಪರಿಣಾಮ ಬೀರಿದಂತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಪ್ರಯಾಣಿಕ ವಾಹನ ಮತ್ತು ಕಾರುಗಳ ಮಾರಾಟದಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಆಗಸ್ಟ್ ತಿಂಗಳಲ್ಲೇ ದೇಶಿ ಪ್ರಯಾಣಿಕ ವಾಹನಗಳ ಮಾರಾಟ ಶೇ.2.46ರಷ್ಟು ಹಾಗೂ ಕಾರು ಮಾರಾಟ ಶೇ.1ರಷ್ಟು ಕುಸಿತ ಕಂಡಿರುವುದು ವ್ಯಾಪಾರ ಮಂಕಾಗಿದೆ ಎಂಬುದನ್ನು ಸೂಚಿಸುತ್ತದೆ.

 • Natural Gas

  BUSINESS30, Aug 2018, 7:12 PM IST

  ಅಕ್ಟೋಬರ್‌ನಲ್ಲಿ ಹೆಚ್ಚಾಗಲಿದೆ ಗ್ಯಾಸ್ ಬೆಲೆ: ರೆಡಿಯಾಗಿ ಈಗಲೇ!

  ಜಾಗತಿಕ ವಾಣಿಜ್ಯ ಯುದ್ಧದ ಕರಿನೆರಳು ಎಲ್ಲಾ ದೇಶಗಳ ಆರ್ಥಿಕತೆ ಮೇಲೂ ದುಷ್ಪರಿಣಾಮ ಬೀರುತ್ತಿದ್ದು, ಭಾರತದಂತ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದರ ಬಿಸಿ ತುಸು ಹೆಚ್ಚೇ ತಟ್ಟಿದೆ.

 • Alibaba

  BUSINESS24, Aug 2018, 4:23 PM IST

  ಅಮೆರಿಕ ಜೊತೆ ಯುದ್ದಕ್ಕೆ ಸಜ್ಜಾಗಿದ್ದೇನೆ: ಅಲಿಬಾಬಾ ಹೊಸ ಬಾಂಬ್!

  ಅಮೆರಿಕ-ಚೀನಾ ವಾಣಿಜ್ಯ ಸಮರ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪರಸ್ಪರ ಟಕ್ಕರ್ ಕೊಡಲು ಮುಂದಾಗಿರುವ ಎರಡೂ ದೈತ್ಯ ಆರ್ಥಿಕ ರಾಷ್ಟ್ರಗಳು, ದಿನಕ್ಕೊಂದು ಹೇಳಿಕೆಗಳ ಮೂಲಕ ಪಂಥಾಹ್ವಾನ ನೀಡುತ್ತಿವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಅಮೆರಿಕದ ವಾಣಿಜ್ಯ ಸಮರಕ್ಕೆ ತಾನೂ ಸಜ್ಜಾಗಿರುವುದಾಗಿ ಚೀನಾದ ದೈತ್ಯ ಸಂಸ್ಥೆ ಅಲಿಬಾಬಾ ಘೋಷಿಸಿದೆ.

 • US-China

  BUSINESS28, Jul 2018, 3:56 PM IST

  ಕೋಲ್ಡ್ ವಾರ್ ಹೀಟ್ ಕಡಿಮೆ?: ಚೀನಾ ವಸ್ತುಗಳ ತೆರಿಗೆ ಕಡಿತ

  ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು ಎಂಬುದು ಹಮ್ಮುರಾಬಿ ಶಾಸನವಾದರೆ, ಕಣ್ಣಿಗೆ ಕಣ್ಣು ಇಡೀ ಜಗತ್ತನ್ನೇ ಕುರುಡಾಗಿಸುತ್ತದೆ ಎಂಬುದು ಮಹಾತ್ಮ ಗಾಂಧಿ ಅವರ ಎಚ್ಚರಿಕೆ. ಇವರಿಬ್ಬರಲ್ಲಿ ಯಾರ ಮಾತು ಕೇಳಬೇಕು ಎಂಬುದು ವಿವೇಚನೆಗೆ ಬಿಟ್ಟ ವಿಷಯ. ಹೀಗೆ ಕಣ್ಣಿಗೆ ಕಣ್ಣು ಎಂದು ಝೇಂಕರಿಸುತ್ತಾ ಜಾಗತಿಕ ವಾಣಿಜ್ಯ ಸಮರದಲ್ಲಿ ನಿರತವಾಗಿದ್ದ ಅಮೆರಿಕ-ಚೀನಾ, ಇದೀಗ ಮೆತ್ತಗಾದ ಲಕ್ಷಣ ಕಂಡು ಬರುತ್ತಿದೆ. ವಾಣಿಜ್ಯ ಸಮರದ ಶಾಖ ಕಡಿಮೆ ಮಾಡಲು ಮುಂದಡಿ ಇಟ್ಟಿರುವ ಅಮೆರಿಕ, ಚೀನಾ ಸೇರಿದಂತೆ ಒಟ್ಟು 1,660 ವಿದೇಶಿ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಮುಂದಾಗಿದೆ.

 • China

  NEWS26, Jul 2018, 2:45 PM IST

  ಬಾಂಬ್ ವಾರ್ ಆಗಿ ಬದಲಾದ ಕೋಲ್ಡ್ ವಾರ್!

  ಚೀನಾ ಜಾಗತಿಕ ವಾಣಿಜ್ಯ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕದೊಡನೆ ಶಿಥಲ ಸಮರಕ್ಕೆ ಸಜ್ಜಾಗಿದೆ ಎಂದು ಇತ್ತೀಚಿಗಷ್ಟೇ ಸಿಐಎ ಎಚ್ಚರಿಕೆ ನೀಡಿತ್ತು. ಆದರೆ ಇಷ್ಟು ಬೇಗ ಅದು ನೇರ ಯುದ್ಧವಾಗಿ ಮಾರ್ಪಡುತ್ತದೆ ಎಂಬುದನ್ನು ಸ್ವತಃ ಚೀನಾ ಕೂಡ ನಿರೀಕ್ಷೆ ಮಾಡಿರಲಿಕ್ಕಿಲ್ಲ.

 • undefined

  BUSINESS21, Jul 2018, 3:10 PM IST

  ಶೀತಲ ಸಮರಕ್ಕೆ ಸಜ್ಜಾಗಿದೆ ಚೀನಾ: ಸಿಐಎ ಎಚ್ಚರಿಕೆ!

  ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಯುದ್ಧ ಇಷ್ಟಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.  ಚೀನಾದ ಸರಕುಗಳ ಮೇಲೆ ಆಮದು ಸುಂಕ ಹೆಚ್ಚಳ ಮಾಡುವ ಟ್ರಂಪ್ ನಿರ್ಧಾರಕ್ಕೆ ಚೀನಾ ತುಂಬ ಗರಂ ಆಗಿದೆ.ಇತ್ತ ಅಮೆರಿಕ ಕೂಡ ಏಕಾಏಕಿ ಚೀನಾವನ್ನು ಅನುಮಾನದ ದೃಷ್ಟಿಯಿಂದ ನೊಡಲು ಪ್ರಾರಂಭಿಸಿದೆ.  ಅಮೆರಿಕ ವಿರುದ್ಧ ಚೀನಾ ಶೀತಲ ಸಮರ ನಡೆಸುತ್ತಿದೆ ಎಂದು ಅಮೆರಿಕದ ತನಿಖಾ ಸಂಸ್ಥೆ ಸಿಐಎ ಕಳವಳ ವ್ಯಕ್ತಪಡಿಸಿದೆ.

 • undefined

  BUSINESS20, Jul 2018, 6:28 PM IST

  ಚೀನಿ ಸರಕುಗಳ ವಿರುದ್ಧ ಟ್ರಂಪ್ ‘ಮನಿ’ ವಾರ್!

  ಎಲ್ಲಾ ಸರಿ ಇದೆ ಅನ್ನೋವಾಗಲೇ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸೋದು. ಇರಾನ್‌ ಮೇಲಿನ ತನ್ನ ನಿರ್ಬಂಧವನ್ನು ವಿಶ್ವ ಒಪ್ಪಿಕೊಳ್ಳಬೇಕು ಎಂದು ಹಠ ಹಿಡಿದಿದ್ದ ಟ್ರಂಪ್, ಜಾಗತಿಕ ವಾಣಿಜ್ಯ ಯುದ್ಧಕ್ಕೆ ಮುನ್ನುಡಿ ಬರೆದಿದ್ದರು. ಇದೀಗ ಅಮೆರಿಕಕ್ಕೆ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಆಮದು ಸುಂಕ ಹೆಚ್ಚಳ ಮಾಡಲು ಚಿಂತಿಸುತ್ತಿರುವುದಾಗಿ ಹೇಳುವ ಮೂಲಕ ಟ್ರಂಪ್ ಜಗತ್ತು ಎಂದೂ ಕಂಡು ಕೇಳರಿಯದ ವಾಣಿಜ್ಯ ಸಮರಕ್ಕೆ ಮುಂದಾಗಿದ್ದಾರೆ.

 • Modi and Trump

  BUSINESS10, Jul 2018, 8:56 PM IST

  ನಿಮ್ಮಂತೆ ನಾವು: ಉಕ್ಕಿನ ಮೇಲಿನ ಆಮದು ಸುಂಕ ಏರಿಸಿದ ಭಾರತ!

  ಜಾಗತಿಕ ವಾಣಿಜ್ಯ ಯುದ್ಧದಲ್ಲಿ ಅಮೆರಿಕಕ್ಕೆ ಬಿಸಿ ಮುಟ್ಟಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆಮದು ಸುಂಕ ಏರಿಕೆ ಮಾಡಿ ಇತರೆ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಮೆರಿಕಕ್ಕೆ, ಕೃಷಿ ಉತ್ಪನ್ನ ಮತ್ತು ಉಕ್ಕಿನ ಮೇಲಿನ ಆಮದು ಸುಂಕ ಏರಿಕೆ ಮಾಡಿ ಭಾರತ ಸೆಡ್ದೆಡು ಹೊಡೆದಿದೆ.