ಲಿಂಗನಮಕ್ಕಿ  

(Search results - 18)
 • Linganamakki

  Karnataka Districts5, Sep 2019, 9:22 AM IST

  ಹೊಸನಗರ ಸೇತುವೆ ಮೇಲೆ ಲಿಂಗನಮಕ್ಕಿ ಹಿನ್ನೀರು: 20 ಗ್ರಾಮಗಳ ಸಂಪರ್ಕ ಕಡಿತ

  ಶಿವಮೊಗ್ಗದ ಮೇಲಿನಬೆಸಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 125 ವರ್ಷದ, ಬ್ರಿಟಿಷ್‌ ಕಾಲದ ಸೇತುವೆ ಮೇಲೆ ಸುಮಾರು 2 ಅಡಿ ನೀರು ನಿಂತ ಪರಿಣಾಮ ಸುಮಾರು 20 ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತ ಆಗಿದೆ. ಲಿಂಗನಮಕ್ಕಿ ಹಿನ್ನೀರು ಸೇತುವೆ ಮೇಲೆ ನಿಂತು ಜನರ ಓಡಾಟ ಅಸಾಧ್ಯವಾಗಿದೆ.

 • Punjab district Ferozepur are facing a flood because Pakistan has released water

  Karnataka Districts4, Sep 2019, 3:04 PM IST

  ಲಿಂಗನಮಕ್ಕಿಯಿಂದ ನೀರು ಹೊರಕ್ಕೆ: ನದಿ ದಂಡೆ ನಿವಾಸಿಗಳೆದೆಯಲ್ಲಿ ಢವ ಢವ..!

  ಹೊನ್ನಾವರ ಲಿಂಗನಮಕ್ಕಿ ಅಣೆಕಟ್ಟು ಹಾಗೂ ಗೇರಸೊಪ್ಪಾ ಶರಾವತಿ ಟೇಲರೀಸ್ ಅಣೆಕಟ್ಟಿನಿಂದ ಮಂಗಳವಾರ ಒಟ್ಟು 30 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿದ್ದು ತಳಭಾಗದ ಶರಾವತಿ ನದಿ ಎಡಬಲ ದಂಡೆಗಳ ನಿವಾಸಿಗಳೆದೆಯಲ್ಲಿ ಪ್ರವಾಹ ಭೀತಿಯ ಶುರುವಾಗಿದೆ. ಪ್ರವಾಹ ಬಂದಲ್ಲಿ ಸುಮಾರು 400ಕ್ಕೂ ಹೆಚ್ಚು ಕುಟುಂಬಗಳಿಗೆ ತೊಂದರೆಯಾಗಲಿದೆ.

 • Linganamakki

  Karnataka Districts3, Sep 2019, 7:51 AM IST

  ಲಿಂಗನಮಕ್ಕಿ ಭರ್ತಿಗೆ ಅರ್ಧ ಅಡಿಯಷ್ಟೇ ಬಾಕಿ : 11 ಗೇಟ್ ಓಪನ್

  ಲಿಂಗನಮಕ್ಕಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಇದೀಗ 11 ಗೇಟ್ ಗಳನ್ನು ತೆರೆದು ನೀರನ್ನು ಹೊರಬಿಡಲಾಗಿದೆ. 

 • Linganamakki

  Karnataka Districts8, Aug 2019, 10:00 AM IST

  ಒಂದೇ ದಿನ ಐದೂವರೆ ಅಡಿ ತುಂಬಿದ ಲಿಂಗನಮಕ್ಕಿ

  ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಡ್ಯಾಂ ಒಂದೇ ದಿನದಲ್ಲಿ 5 ಅಡಿಗೂ ಹೆಚ್ಚು ಭರ್ತಿಯಾಗಿದೆ. 

 • NEWS2, Jul 2019, 9:11 AM IST

  ಲಿಂಗನಮಕ್ಕಿ ನೀರು ತರಲು ಬಿಡಲ್ಲ: ಯಡಿಯೂರಪ್ಪ

  ಲಿಂಗನಮಕ್ಕಿಯಿಂದ ಬೆಂಗಳೂರಿಗೆ ಹರಿಸಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಡಕ್ ಹೇಳಿಕೆ ನೀಡಿದ್ದಾರೆ. 

 • Linganamakki dam

  NEWS30, Jun 2019, 1:25 PM IST

  ಶರಾವತಿ ನೀರನ್ನು ಮುಟ್ಟುವ ಮೊದಲು ನೆನಪಿಡಬೇಕಾದ್ದು!

  ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ. ಪರಿಸರವಾದಿಗಳು, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ. ಈ ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ತಿಳಿದುಕೊಳ್ಳಬೇಕಾದ ವಿಚಾರಗಳಿವು. 

 • Linganamakki dam

  NEWS30, Jun 2019, 10:04 AM IST

  ಶರಾವತಿ ಬೆಂಗಳೂರಿಗೆ, ಮಲೆನಾಡಿಗೆ ಏನ್ ಗತಿ?

  ಸಾಂಸ್ಕೃತಿಕವಾಗಿ ನಗರಗಳು ಬೆಳೆಯುತ್ತಿದ್ದುದೇ ಜಲಮೂಲಗಳ ಸಮೀಪ.ಆದರೆ ಬೆಂಗಳೂರಿನ ದೌರ್ಭಾಗ್ಯ. ಹತ್ತಿರದಲ್ಲಿ ಬೃಹತ್ ನದಿಗಳೂ ಇಲ್ಲ. ಇರುವ ಸಣ್ಣ ಪುಟ್ಟ ನದಿಗಳನ್ನೂ ಕೊಂದಿದ್ದೇವೆ. ಅಂತರ್ಜಲವನ್ನೂ ಕುಡಿದು ಖಾಲಿ ಮಾಡಿದ್ದೇವೆ. ಬಿದ್ದ ಮಳೆ ನೀರು ಇಂಗದಂತೆ ನಗರವನ್ನು ಕಾಂಕ್ರೀಟ್ ಕಾಡಾಗಿಸಿದ್ದೇವೆ. ಈಗ ಇದಕ್ಕಿರುವ ಏಕೈಕ ಪರಿಹಾರವೆಂದರೆ ನಗರದ ಬೆಳವಣಿಗೆಗೆ ತಡೆಯೊಡ್ಡುವುದು.

 • Sharavathi

  NEWS27, Jun 2019, 11:24 PM IST

  ​​​​​​​ಶರಾವತಿ ಉಳಿಸಿ: ಮಲೆನಾಡ ಪ್ರತಿ ಮನೆ ಮುಂದೆ ಸ್ಟಿಕರ್

  ಶರಾವತಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಪ್ರಸ್ತಾವಿತ ಯೋಜನೆ ವಿರುದ್ಧ ಮಲೆನಾಡಿನಲ್ಲಿ ಎದ್ದಿರುವ ವಿರೋಧ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರತಿಭಟನೆ ಜಿಲ್ಲೆಯಾದ್ಯಂತ ಹಬ್ಬುತ್ತಿದೆ. ಇದೇ ಮೊದಲ ಬಾರಿಗೆ  ಒಕ್ಕೊರಲಿನ ಧ್ವನಿ ಮೂಡಿದ್ದು, ಸಾಮಾಜಿಕ ಜಾಲತಾಣಗಳ ಸಮರ್ಥ ಬಳಕೆ ಮಾಡಿಕೊಳ್ಳಲಾಗುತ್ತಿದೆ.

 • Linganamakki dam

  NEWS25, Jun 2019, 8:28 AM IST

  ಬೆಂಗಳೂರಿಗೆ ಶರಾವತಿ: ಶಿವಮೊಗ್ಗದಲ್ಲಿ ಕಿಚ್ಚು

  ಲಿಂಗನಮಕ್ಕಿ ಅಣೆಕಟ್ಟೆಯಿಂದ ಬೆಂಗಳೂರಿಗೆ ನೀರು ಒಯ್ಯುವ ಪ್ರಯತ್ನದ ವಿರುದ್ಧ ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ರೋಶ ತೀವ್ರಗೊಳ್ಳುತ್ತಿದ್ದು, ಸಾಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

 • Linganamakki dam

  NEWS24, Jun 2019, 12:07 PM IST

  ಲಿಂಗನಮಕ್ಕಿ ಟು ಬೆಂಗಳೂರು; ಶರಾವತಿ ನೀರು ತರೋದಕ್ಕೆ ವಿರೋಧ ಏಕೆ?

  ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ.  ಅಷ್ಟಕ್ಕೂ ಏನಿದು ಯೋಜನೆ? ಈ ಪ್ರಸ್ತಾಪ ಮುಂದಿಟ್ಟಿದ್ದು ಯಾರು? ಮಲೆನಾಡಿಗರೇಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಈ ಯೋಜನೆ ಜಾರಿಯಿಂದಾಗುವ ಸಮಸ್ಯೆ ಏನು? ಈ ಕುರಿತ ಮಾಹಿತಿ ಇಲ್ಲಿದೆ.

 • BSY new

  NEWS24, Jun 2019, 8:07 AM IST

  ಶರಾವತಿ ನೀರು ತರುವುದಕ್ಕೆ ಬಿಎಸ್‌ವೈ ವಿರೋಧ

  ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರೊದಗಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿರುವುದು ಸರಿಯಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

 • Lingamakki Dam

  NEWS22, Jun 2019, 8:22 AM IST

  ಲಿಂಗನಮಕ್ಕಿ ನೀರು ಬೆಂಗಳೂರಿಗೆ; ಉನ್ನತ ಮಟ್ಟದ ಸಮಿತಿ

  ಉದ್ಯಾನನಗರಿ ಬೆಂಗಳೂರಿಗೆ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ಪ್ರಸ್ತಾವನೆ ಮಂಡಿಸಿ ಸಾಧಕ-ಬಾಧಕಗಳ ಅಧ್ಯಯನಕ್ಕೆ ಉನ್ನತಮಟ್ಟದ ಸಮಿತಿ ನೇಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

 • Lingamakki Dam

  NEWS21, Jun 2019, 8:28 AM IST

  ಬೆಂಗಳೂರು ದಾಹ ಇಂಗಿಸಲು ಲಿಂಗನಮಕ್ಕಿ ಮೇಲೆ ಕಣ್ಣು

  ಉದ್ಯಾನ ನಗರಿ ಬೆಂಗಳೂರಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ವಿವಾದಿತ ಯೋಜನೆಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ.

 • Linganamakki

  state14, Aug 2018, 5:39 PM IST

  ರಾಜ್ಯದೆಲ್ಲೆಡೆ ವರ್ಷ ವೈಭವ, ತುಂಬಿದ ಜಲಾಶಯಗಳು

  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯದ್ದೇ ಕಾರುಬಾರು. ಇತ್ತ ಕಾವೇರ, ಅತ್ತ ತುಂಗೆ, ಶರವಾತಿ ನದಿಗಳು ತುಂಬಿ ಹರಿಯುತ್ತಿವೆ. ಕೆಆರ್‌ಎಸ್, ಲಿಂಗನಮಕ್ಕಿ ಜಲಾಶಯಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ರಾಜ್ಯದ ಮಳೆಯ ಸಂಭ್ರಮದ ಕೆಲವು ಫೋಟೋಗಳು ಇಲ್ಲಿವೆ.

 • Lingamakki Dam
  Video Icon

  state14, Aug 2018, 3:33 PM IST

  ಕರಾವಳಿ, ಮಲೆನಾಡಲ್ಲಿ ಕುಂಭ ದ್ರೋಣ ಮಳೆ, ಸಮಗ್ರ ವರದಿ

  ಇದು ನಿಸರ್ಗದ ಕರುಣೆಯೋ , ಮುನಿಸೋ ಗೊತ್ತಿಲ್ಲ. ಕಳೆದೊಂದು ವಾರದಿಂದ ನೆರೆ ರಾಜ್ಯ ಹಾಗೂ ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಮಲೆನಾಡಂತೂ ತನ್ನ ಗತಕಾಲದ ವೈಭವಕ್ಕೆ ಮರಳಿದೆ.  ಕಾನೂರು ಹೆಗ್ಗಡತಿ- ಮಲೆಗಳಲ್ಲಿ ಮದುಮಗಳು ಕಾದ೦ಬರಿಗಳಲ್ಲಿ ಕುವೆ೦ಪು ವರ್ಣಿಸುವ ಮಳೆಗಾಲದ ಚಿತ್ರಣ ಅಕ್ಷರಶಃ ಕಣ್ಣ ಮು೦ದಿದೆ. ತು೦ಗೆ ಕ್ಷಣ ಕ್ಷಣಕ್ಕೂ ತು೦ಬಿ ರುದ್ರ-ರಮಣೀಯವಾಗಿ ಹರಿಯುತ್ತಿದ್ದಾಳೆ. ಇಡೀ ಮಲೆನಾಡು ಧೋ ಎ೦ದು ಸುರಿಯುತ್ತಿರುವ ವರ್ಷಧಾರೆಯ ಶೃತಿಗೆ ಧ್ಯಾನಸ್ಥವಾದ೦ತಿದೆ! ಇತ್ತ ಶರಾವತಿಯೂ ಮೈದುಂಬಿ ಹರಿಯುತ್ತಿದ್ದಾಳೆ. ಭರ್ತಿಯಾದ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ರಾಜ್ಯದೆಲ್ಲೆಡೆಯಿಂದ ಓದುಗರು ಕಳುಹಿಸಿದ ವೀಡಿಯೋ, ಮಳೆಯ ಚಿತ್ರಣವಿದು.