ಲಡಾಕ್‌  

(Search results - 26)
 • Video Icon

  International5, Jul 2020, 12:21 PM

  ಲಡಾಕ್‌ ಪ್ರದೇಶಕ್ಕೆ ಮೋದಿ ಅಚ್ಚರಿಯ ಭೇಟಿ; ಹಿಂದಿರುವ ಸೂತ್ರಧಾರ ಇವರೇ..!

  ಪ್ರಧಾನಿ ಮೋದಿ ಲಡಾಖ್‌ಗೆ ಖುದ್ದು ಭೇಟಿ ನೀಡುವುದರಿಂದ ವ್ಯೂಹಾತ್ಮಕವಾಗಿ ಭಾರತಕ್ಕೆ ಲಾಭವಾಗಲಿದೆ ಎಂಬುದನ್ನು ಅರಿತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು, ಇದಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಸದ್ದಿಲ್ಲದೆ ಪೂರ್ಣಗೊಳಿಸಿದರು. 

 • Video Icon

  India3, Jul 2020, 5:37 PM

  ಲಡಾಕ್‌ ಗಡಿಗೆ ಮೋದಿ ಭೇಟಿ; ಚಕ್ರವರ್ತಿ ಸೂಲಿಬೆಲೆ ವಿಶ್ಲೇಷಣೆ

  ಪ್ರಧಾನಿ ಮೋದಿ ಭಾರತ - ಚೀನಾ ಗಡಿಗೆ ಭೇಟಿ ನೀಡಿ ಸೈನಿಕರ ಜೊತೆ ಮಾತನಾಡಿದ್ದಾರೆ. ಅವರ ಶೌರ್ಯವನ್ನು ಶ್ಲಾಘಿಸಿದ್ದಾರೆ. 'ನಿಮ್ಮೊಂದಿಗೆ ನಾವಿದ್ದೇವೆ. ಭಾರತದ ತಾಕತ್ತನ್ನು ಜಗತ್ತಿಗೆ ತೋರಿಸಿದ್ದೀರಿ' ಎಂದು ಅವರಲ್ಲಿ ಆತ್ಮಬಲವನ್ನು ತುಂಬಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಡಿಗೆ ಪ್ರಧಾನಿ ಬೇಟಿ ನೀಡಿರುವುದು ಸೈನಿಕರಲ್ಲಿಯೂ ಕೂಡಾ ಆತ್ಮ ವಿಶ್ವಾಸವನ್ನು ತುಂಬಿದೆ. ನಮ್ಮ ಜೊತೆ ಇಡೀ ದೇಶವೇ ನಿಂತಿದೆ ಎನ್ನುವ ಬಲ ಬಂದಂತಾಗಿದೆ. 

 • BUSINESS28, Jun 2020, 3:55 PM

  ಚೀನಾದಂತೆ ಭಾರತ ಜಾಗತಿಕ ಉತ್ಪಾದನಾ ಕೇಂದ್ರ ಆಗೋದು ಹೇಗೆ?

  ಜಾಗತಿಕ ಉತ್ಪಾದನೆಗೆ ಅನುಕೂಲಕರ ವಾತಾವರಣ ನಿರ್ಮಿಸಲು ಭಾರತವು ಪೂರ್ವಭಾವಿ ಸಿದ್ಧತೆ ನಡೆಸಬೇಕಾದ ತುರ್ತು ಇದೆ. ಆಗ, ಕೊರೋನಾ ವೈರಸ್‌ ಬಿಕ್ಕಟ್ಟು ಕಡಿಮೆಯಾದಾಗ ಅಂತಾರಾಷ್ಟ್ರೀಯ ಸಂಸ್ಥೆಗಳು ತಮ್ಮ ಪೂರೈಕೆ ಸರಪಳಿಯ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವನ್ನಾಗಿ ಭಾರತವನ್ನು ಪರಿಗಣಿಸಬಹುದು. 

 • International26, Jun 2020, 3:54 PM

  ಹೆಚ್ಚುತ್ತಿದೆ ಇಂಡೋ- ಅಮೆರಿಕನ್ ಬಾಂಧವ್ಯ; ಚೀನಾಗೆ ಕಂಗಾಲು

  ಮೇಲ್ನೋಟಕ್ಕೆ ಭಾರತ-ಚೀನಾ ಸಂಬಂಧಗಳ ಸ್ಥಿತ್ಯಂತರಕ್ಕೆ ಗಡಿ ತಂಟೆ ಕಾರಣ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳುತ್ತಿದ್ದರೂ ಚೀನಾ ಏನು ಯೋಚಿಸುತ್ತದೆ ಎಂಬುದನ್ನು ತಿಳಿಯಪಡಿಸುವ ಗ್ಲೋಬಲ್‌ ಟೈಮ್ಸ್‌ ಪ್ರಕಾರ, ಹೆಚ್ಚುತ್ತಿರುವ ಇಂಡೋ-ಅಮೆರಿಕನ್‌ ಸಾಮೀಪ್ಯ ಚೀನಾದ ನಿದ್ದೆಗೆಡಿಸಿದೆ.

 • Video Icon

  International22, Jun 2020, 6:12 PM

  ಗಡಿ ಸಂಘರ್ಷ: ಪರೋಕ್ಷವಾಗಿ ಚೀನಾಗೆ ಸಪೋರ್ಟ್ ಮಾಡ್ತಿದೆಯಾ ಅಮೆರಿಕಾ?

  ವಿಶ್ವದ ದೊಡ್ಡಣ್ಣ ಅಮೆರಿಕಾ ನಮ್ಮ ಜೊತೆ ಇದ್ದ ಹಾಗೆ ಮಾಡಿ ಹಿಂದಿನಿಂದ ಚೀನಾಗೆ ಸಪೋರ್ಟ್ ಮಾಡುತ್ತಿದೆ. ಕೋವಿಡ್ 19 ವಿಚಾರದಲ್ಲಿ ಚೀನಾದ ಮೇಲೆ ಅಬ್ಬರಿಸಿ ಬೊಬ್ಬಿರಿದಿದ್ದ ಅಮೆರಿಕಾ ಇದೀಗ ನಿಶ್ಯಸ್ತ್ರೀಕರಣ ಒಪ್ಪಂದ ಮಾಡಿಕೊಳ್ಳಿ ಎಂದು ಕೋರಿಕೊಳ್ಳುತ್ತಿದೆ. ಒಂದು ವೇಳೆ ಇಂಡೋ- ಚೀನಾ ಯುದ್ಧವಾದರೆ ಅಮೆರಿಕಾ ಭಾರತ ಪರ ನಿಲ್ಲುವುದಿಲ್ಲವಾ ಎಂಬ ಅನುಮಾನ ಹುಟ್ಟುಹಾಕಿದೆ. 
   

 • International20, Jun 2020, 1:15 PM

  ಲಡಾಕ್ ಸಂಘರ್ಷ: ಅಕ್ಸಾಯ್‌ ಚಿನ್‌ ಕೈತಪ್ಪಿದ್ದು ಹೇಗೆ?

  1956ರಲ್ಲಿ ಸೇನಾ ಮುಖ್ಯಸ್ಥ ಜನರಲ್ ತಿಮ್ಮಯ್ಯ ಬ್ರಿಟಿಷ್‌ ಪರ್ವತಾರೋಹಿ ಸಿಡ್ನಿ ವಿಗ್ನಾಲ್‌ ಅವರನ್ನು ಅಕ್ಸಾಯ್‌ ಚಿನ್‌ನಲ್ಲಿ ಚೀನಾ ಟಿಬೆಟ್‌ವರೆಗೆ ರಸ್ತೆ ನಿರ್ಮಿಸುತ್ತಿದೆಯೇ ಎಂದು ನೋಡಿ ಬರಲು ಬೇಹುಗಾರಿಕೆಗೆ ಕಳುಹಿಸುತ್ತಾರೆ. ಆತ ನೀಡಿದ ವರದಿಯನ್ನು ಪ್ರಧಾನಿ ಮುಂದಿಟ್ಟಾಗ ಅಲ್ಲಿಯೇ ಇದ್ದ ವಿದೇಶಾಂಗ ಸಚಿವ ಕೃಷ್ಣ ಮೆನನ್‌ ‘ನೀವೆಲ್ಲ ಅಮೆರಿಕದ ಸಿಐಎಗೋಸ್ಕರ ಕೆಲಸ ಮಾಡುತ್ತಿದ್ದೀರಿ’ ಎಂದರಂತೆ. 

 • International20, Jun 2020, 12:32 PM

  ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್‌ನತ್ತ ನುಗ್ಗಿದ ಚೀನೀ ಸೈನಿಕರು

  ಲಡಾಖ್‌ನ ಹತ್ತಿರದವರೆಗೆ ಬಂದು ಕುಳಿತಿದ್ದ ಚೀನಾ ಭಾರತದ ಜೊತೆ ಗಡಿ ತಂಟೆ ಮಾಡಲಿಕ್ಕಿಲ್ಲ ಎಂಬ ಭ್ರಮೆಯಲ್ಲೇ 1949 ರಿಂದ 1954 ರ ವರೆಗೆ ನೆಹರು ಕಮ್ಯುನಿಸ್ಟ್‌ ಚೀನಾದ ಉದಯ ಶತಮಾನದ ಅದ್ಭುತ ಎಂದು ಭಾಷಣ ಮಾಡುತ್ತಿದ್ದರು. ಟಿಬೆಟ್‌ ಆಕ್ರಮಣದ ನಂತರ ರಾಯಭಾರಿ ಪಣಿಕ್ಕರ್‌ ಅವರನ್ನು ನೆಹರು ಅವರೇ ಚೌ ಎನ್‌ ಲಾಯ್ ಬಳಿ ಕಳುಹಿಸಿದರೂ ಕೂಡ ಚೀನಾ ಆ ಬಗ್ಗೆ ಮಾತನ್ನೇ ಆಡಲಿಲ್ಲ.

 • Video Icon

  state17, Jun 2020, 2:18 PM

  ಚೀನಾ ವಿರುದ್ಧ ಗಾಂಧಿ ಮಂತ್ರ ಪಠಿಸಿದ ಸಿ.ಟಿ.ರವಿ!

  'ನಮ್ಮ ನೆರೆಹೊರೆಯವರೊಂದಿಗೆ ನಾವು ಉತ್ತಮ ಬಾಂಧವ್ಯವನ್ನು ಹೊಂದಬೇಕೆಂದು ನಾವು ಎಷ್ಟೇ ಪ್ರಯತ್ನಿಸಿದರೂ ಚೀನಾ ವಿಶ್ವಾಸಕ್ಕೆ ಅರ್ಹ ಅಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಇದಕ್ಕೆ ನಾವು ಜನಸಾಮಾನ್ಯರು ಗಾಂಧಿಜಿಯವರ ಸ್ವದೇಶಿ ಮಂತ್ರವನ್ನು ಜಪಿಸಬೇಕು. ಚೀನಾ ವಸ್ತುಗಳನ್ನು ಬಹಿಷ್ಕರಿಸಬೇಕು' ಎಂದು ಪ್ರವಾಸೋದ್ಯಮ ಸಚಿವ ಸಿಟಿ ರವಿ ಹೇಳಿದ್ದಾರೆ. 

 • Video Icon

  state17, Jun 2020, 2:02 PM

  ಚೀನಾಕ್ಕೆ ಪಾಠ ಕಲಿಸುವ ಸಾಮರ್ಥ್ಯ ಭಾರತಕ್ಕಿದೆ, ಎಚ್ಚರ; ಸಿಎಂ

  ಭಾರತ - ಚೀನಾ ಘರ್ಷಣೆ ವಿಚಾರವಾಗಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 'ಚೀನಾಕ್ಕೆ ಪಾಠ ಕಲಿಸುವ ಸಾಮರ್ಥ್ಯ ಭಾರತಕ್ಕಿದೆ. ನಾವು ಶಾಂತಿ ಬಯಸಿದ್ರೆ ಚೀನಾ ಯುದ್ಧೋನ್ಮಾದ ತೋರಿಸುತ್ತಿದೆ. ಹದ್ದು ಮೀರಿ ಚೀನಾ ವರ್ತಿಸುತ್ತಿದೆ' ಎಂದು ಕಿಡಿ ಕಾರಿದ್ದಾರೆ. 

 • Video Icon

  International17, Jun 2020, 1:09 PM

  ಭಾರತ- ಚೀನಾ ಸಂಘರ್ಷ: ನಾಲ್ವರು ಭಾರತೀಯ ಯೋಧರ ಸ್ಥಿತಿ ಗಂಭೀರ

  ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ - ಚೀನಾ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಭೀಕರ ಕಾಳಗಕ್ಕೆ ಕಾರಣವಾಗಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಸಂಘರ್ಷದಲ್ಲಿ ನಾಲ್ವರು ಭಾರತೀಯ ಯೋಧರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಬಂದಿದೆ.  ಇಂತಹ ಸಂದರ್ಭದಲ್ಲಿ ಗಡಿಯಲ್ಲಿ ಪರಿಸ್ಥಿತಿ ಹೇಗಿರುತ್ತದೆ ಎಂಬುದರ ಬಗ್ಗೆ ನಿವೃತ್ತ ಆರ್ಮಿ ಸುಬೇದಾರ್‌ ಮ್ಯಾನೇಜರ್ ಎನ್‌ ಎಂ ಬಸಪ್ಪ ಮಾತನಾಡಿದ್ದಾರೆ. 

 • Video Icon

  International17, Jun 2020, 12:52 PM

  ಯುದ್ಧ ಸನ್ನದ್ಧವಾಗುವಂತೆ ಭಾರತೀಯ ಸೇನೆಗೆ ಕೇಂದ್ರದ ಸೂಚನೆ

  ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ - ಚೀನಾ ನಡುವೆ 5 ವಾರಗಳಿಂದ ಸೃಷ್ಟಿಯಾಗಿದ್ದ ಗಡಿ ಸಂಘರ್ಷ, ಭೀಕರ ಕಾಳಗಕ್ಕೆ ಕಾರಣವಾಗಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿ. ಅಗತ್ಯ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳಿ ಎಂದು ಮೂರು ಸೇನೆಗಳಿಗೆ ಸೂಚನೆ ಕೊಡಲಾಗಿದೆ. ಚೀನಾ ಸಂಘರ್ಷಕ್ಕಿಳಿದ ನಂತರ ತಿರುಗೇಟಿಗೆ ಭಾರತ ಸಿದ್ಧವಾಗಿದೆ. ಶಸ್ತ್ರಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ಗೆ ಪರಿಸ್ಥಿತಿ ನಿರ್ವಹಣೆ ಹೊಣೆ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

 • Video Icon

  International17, Jun 2020, 10:31 AM

  ಗಡಿಯಲ್ಲಿ ಚೀನಾ ಕಾಟ: ಮೋದಿ ಮುಂದಿರುವ 6 ಆಯ್ಕೆಗಳು

  ಬಿಕ್ಕಟ್ಟನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಉಭಯ ದೇಶಗಳು ನಿಶ್ಚಯಿಸಿದ್ದ ಸಂದರ್ಭದಲ್ಲಿ ಈ ಹೊಡೆದಾಟ ನಡೆದಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮಹಾದಂಡನಾಯಕ, ಮೂರೂ ಸೇನೆ ಮುಖ್ಯಸ್ಥರು ಸಭೆ ನಡೆಸಿದ್ದಾರೆ. 

 • <p>china</p>
  Video Icon

  International17, Jun 2020, 9:25 AM

  ಭಾರತ - ಚೀನಾ ಗಡಿಯಲ್ಲಿ ಯೋಧರ ಸಂಘರ್ಷ: ಗಡಿಯಲ್ಲಿ ನಡೆದಿದ್ದೇನು?

  ಪೂರ್ವ ಲಡಾಖ್‌ನ ಗಲ್ವಾನ್ ಗಡಿಯಲ್ಲಿ ಕಳೆದ ಐದು ವಾರಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಈ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದು ಸ್ಥಳದಿಂದ ಹಿಂದೆ ಸರಿಯುವ ಕುರಿತು ಒಮ್ಮತಕ್ಕೆ ಬರಲಾಗಿತ್ತು.. ಅದರಂತೆ ಚೀನಾ ಯೋಧರು ಸೋಮವಾರ ರಾತ್ರಿ ಕಾಲ್ತೆಗೆಯಲು ಆರಂಭಿಸಿದರು. ಈ ಸಂದರ್ಭದಲ್ಲಿ ಏಕಾಏಕಿ ಭಾರತೀಯ ಯೋಧರ ಮೇಲೆ ದೊಣ್ಣೆ, ಕಲ್ಲುಗಳಿಂದ ದಾಳಿ ನಡೆಸಿದರು.  ಗಡಿಯಲ್ಲಿ ನಡೆದಿದ್ದೇನು? ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಇಲ್ಲಿದೆ ನೋಡಿ...! 
   

 • <p>ladakh</p>

  India16, Jun 2020, 2:46 PM

  ಗಡಿಯಲ್ಲಿ ಗುಂಡಿನ ಚಕಮಕಿ ನಡುವೆ ಕಾಮಗಾರಿ ಆರಂಭ; 1600 ಕಾರ್ಮಿಕರು ಲಡಾಕ್‌ಗೆ!

  ರಸ್ತೆ ಕಾಮಗಾರಿಯಿಂದ ಆರಂಭಗೊಂಡ ಭಾರತ ಚೀನಾ ಗಡಿ ಬಿಕ್ಕಟ್ಟು ಇದೀಗ ಗುಂಡಿನ ಚಕಮಕಿ ಹಂತ ತಲುಪಿದೆ.  ಚೀನಾ ಸೇನೆ ದಾಳಿಯಲ್ಲಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದರ ನಡುವೆ  ರಸ್ತೆ ಕಾಮಗಾರಿ ಪುನರ್ ಆರಂಭಿಸಲು ಕೇಂದ್ರ ಗ್ರೀನ್ ಸಿಗ್ನಲ್ ನೀಡಿದ್ದು, ಜಾರ್ಖಂಡ್‌ನಿಂದ 1600 ಕಾರ್ಮಿಕರು ಲಡಾಖ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

 • <p>SN Modi New</p>
  Video Icon

  International15, Jun 2020, 1:05 PM

  ಎದೆಯೊಡ್ಡಿ ನಿಲ್ಲಲಾಗದ ಚೀನಾ ಕುತಂತ್ರಕ್ಕೆ ಮೋದಿ ಪ್ರತ್ಯುತ್ತರವಿದು..!

  ಪೂರ್ವ ಲಡಾಕ್‌ನಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಒಂದೆಡೆ ಹೇಳುತ್ತಿರುವ ಚೀನಾ ಮತ್ತೊಂದೆಡೆ ತನ್ನ ಕಪಟ ನಾಟಕವನ್ನು ತೋರಿಸಿದೆ. ಭಾರತ - ಚೀನಾ ನಡುವಿರುವ 4000 ಕಿಮೀ ಉದ್ದದ ಗಡಿ ವಾಸ್ತವಿಕ ರೇಖೆಯುದ್ದಕ್ಕೂ ಯೋಧರನನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ. ಇದಕ್ಕೆ ಭಾರತ ಕೂಡಾ ಪ್ರತ್ಯುತ್ತರ ನೀಡಿದ್ದು ಯೋಧರನ್ನು ಗಡಿಗೆ ರವಾನಿಸಿದೆ.