Search results - 15 Results
 • TECHNOLOGY18, Feb 2019, 7:29 PM IST

  ಎಲ್ಲರ ಬಳಿ ಇರುವ  ಈ ಮೊಬೈಲ್ ಆ್ಯಪ್ ಬಳಸಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ..!

  ಆಧುನಿಕ ಯುಗದಲ್ಲಿ ಹ್ಯಾಕರ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಬಹಳ ಸುಲಭವಾಗಿ ಕದ್ದು ಬಿಡಬಹುದು. ಈ ಬಗ್ಗೆ ಆಗಾಗ ಜಾಗೃತಿ ಮತ್ತು ಎಚ್ಚರಿಕೆ ನೀಡುತ್ತಲೆ ಇರುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಲೆ ಇವೆ. ಆದರೆ ಈಗ ಸ್ವತಃ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ಮಹತ್ವದ ಎಚ್ಚರಿಕೆ ನೀಡಿದೆ.

 • BUSINESS28, Dec 2018, 5:08 PM IST

  ಕೋ-ಆಪರೇಟಿವ್ ಬ್ಯಾಂಕ್ ವಿತ್ ಡ್ರಾ ಮಿತಿ ಹೆಚ್ಚಳ!

  ಮುಂಬೈನ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರ ವಿತ್​​​ ಡ್ರಾ ಮಾಡುವ ಹಣದ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ಸಾವಿರ ರೂ.ಗೆ ಹೆಚ್ಚಿಸಿದೆ.

 • RBI

  BUSINESS2, Nov 2018, 2:57 PM IST

  ಆರ್‌ಬಿಐ ಮಾತು ಕೇಳೋದು ಒಳಿತು: ಮೋದಿ ಸರ್ಕಾರಕ್ಕೆ ಕುತ್ತು?

  ಆರ್‌ಬಿಐ ಮತ್ತು ಸರ್ಕಾರದ ನಡುವಿನ ಆಂತರಿಕ ಸಂಘರ್ಷ ತಾರಕಕ್ಕೇರಿದೆ. ಈ ಬಗ್ಗೆ ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್ ಬ್ಲೂಮ್‌ಬರ್ಗ್‌ಕ್ವಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಸಾಕಷ್ಟು ಒಳನೋಟಗಳನ್ನು ನೀಡಿದ್ದಾರೆ. ಆಯ್ದ ಭಾಗ ಇಲ್ಲಿದೆ.

 • BUSINESS19, Sep 2018, 2:12 PM IST

  ಆರ್‌ಬಿಐಗೆ ಎಸ್‌ಬಿಐ ಸಲಹೆ: ಈಗ್ಲಾದ್ರೂ ಕೇಳು ಪ್ರಭುವೇ!

  ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ನಿರಂತರವಾಗಿ ಕುಸಿಯುತ್ತಿದ್ದು, ಇದು ಆರ್ಥಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ರೂಪಾಯಿ ಮೌಲ್ಯ ಸ್ಥಿತ್ಯಂತರಕ್ಕೆ ಕೇಂದ್ರ ಸರ್ಕಾರ ಕೂಡ ಇನ್ನಿಲ್ಲದ ಕಸರತ್ತು ನಡೆಸಿದೆ. ಈ ಮಧ್ಯೆ ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್‌ಬಿಐ ಮಧ್ಯಪ್ರವೇಶ ಮಾಡಬೇಕೆಂದು ಎಸ್‌ಬಿಐ ತನ್ನ ವರದಿಯಲ್ಲಿ ಸಲಹೆ ನೀಡಿದೆ.

 • Raghuram suggetion to Judiciary

  BUSINESS12, Sep 2018, 2:37 PM IST

  ನಾ ಕೊಟ್ಟ ಖದೀಮರ ಪಟ್ಟಿ ಎಲ್ಲಿ ಮೋದಿಜೀ?: ರಾಜನ್ ಬಾಂಬ್!

  ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲಗಳ ಕುರಿತು ಸಂಸದೀಯ ಸಮಿತಿ ಮುಂದೆ ಉತ್ತರ ನೀಡಿರುವ ಆರ್ ಬಿಐ ಮಾಹಿ ಗರ್ವನರ್ ರಘುರಾಮ್ ರಾಜನ್, ತಮ್ಮ ವರದಿ ಜೊತೆಗೆ ಹೊಸ ಬಾಂಬ್ ವೊಂದನ್ನು ಸಿಡಿಸಿದ್ದಾರೆ. ತಾವು ಗರ್ವನರ್ ಆಗಿದ್ಆಗ ಹೈಪ್ರೊಫೈಲ್ ಸುಸ್ತಿದಾರರ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಪ್ರಧಾನಿ ಮೋದಿ ಕಚೇರಿ ಈ ಪಟ್ಟಿಯನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದೆ ಎಂದು ರಾಜನ್ ಹೇಳಿಕೆ ನೀಡಿದ್ದಾರೆ.

 • Urjit Patel

  BUSINESS5, Sep 2018, 11:23 AM IST

  ಮೋದಿ ಮಾತು ಕೇಳ್ತಿಲ್ಲಾ ಆರ್‌ಬಿಐ ಗವರ್ನರ್: ದಾರಿ ಬದಲಿಸಿದ ಪಟೇಲ್?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್‌ಬಿಐ ಗರ್ವನರ್ ಆಗಿದ್ದ ರಘುರಾಮ್ ರಾಜನ್ ಅವರನ್ನು ಬದಲಿಸಿ ಊರ್ಜಿತ್ ಪಟೇಲ್ ಅವರನ್ನು ಆ ಸ್ಥಾನದಲ್ಲಿ ಕೂರಿಸಿದ್ದೇಕೆ ಎಂಬ ಪ್ರಶ್ನೆ ಈಗಲೂ ಚಾಲ್ತಿಯಲ್ಲಿದೆ. ಮೋದಿ ಮಾತು ಕೇಳದ ರಾಜನ್ ಅವರನ್ನು ಬದಲಿಸಿ ಮೋದಿ ಮಾತು ಕೇಳುವ ಊರ್ಜಿತ್ ಅವರನ್ನು ಕರೆತರಲಾಗಿತ್ತು ಎಂಬುದು ಸಾಮಾನ್ಯ ನಂಬಿಕೆ. ಆದರೆ ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ಇದೀಗ ರಾಜನ್ ಅವರ ಹಾದಿಯನ್ನೇ ತುಳಿಯುವ ಸೂಚನೆ ನೀಡಿದ್ದು, ಮೋದಿ ಸರ್ಕಾರದ ಕೆಲವು ನೀತಿಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 • Raghuram Rajan

  BUSINESS4, Sep 2018, 11:18 AM IST

  ‘ಎಲ್ಲಾ ಹದಗೆಡಸಿದ್ದು ರಾಜನ್, ಮೋದಿ ಅಲ್ವೇ ಅಲ್ಲ’!

  ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ದೇಶದ ಅರ್ಥ ವ್ಯವಸ್ಥೆಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದರು ಎಂಬುದು ಹಲವರ ಆರೋಪ. ಇವರ ಸಾಲಿಗೆ ಇದೀಗ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಕೂಡ ಸೇರಿದ್ದಾರೆ. ದೇಶದ ಅರ್ಥ ವ್ಯವಸ್ಥೆ ಹಿನ್ನಡೆಗೆ ರಘುರಾಮ್ ರಾಜನ್ ಆರ್‌ಬಿಐ ಗರ್ವನರ್ ಆಗಿದ್ದಾಗ ತೆಗೆದುಕೊಂಡಿದ್ದ ನಿರ್ಣಯಗಳೇ ಹೊರತು ನೋಟು ಅಮಾನ್ಯೀಕರಣ ಅಲ್ಲ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ.

 • BUSINESS3, Sep 2018, 3:38 PM IST

  ಸದ್ದಿಲ್ಲದೇ ಚಿನ್ನ ಖರೀದಿಸುತ್ತಿದೆ ಆರ್‌ಬಿಐ: ಮೋದಿ ಹೇಳಿದ್ರಾ?

  ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಚಿನ್ನದ ಬಳಕೆ ದ್ವಿಗುಣಗೊಂಡಿರುವ ಪರಿಣಾಮ, ಆರ್‌ಬಿಐ ಚಿನ್ನದ ಖರೀದಿ ಪ್ರಕ್ರಿಯೆಯನ್ನು ಹೆಚ್ಚುಗೊಳಿಸಿದೆ. ಸದ್ಯ ಆರ್‌ಬಿಐ ನಲ್ಲಿ ಒಟ್ಟು 566.23 ಮೆಟ್ರಿಕ್ ಟನ್ ಚಿನ್ನದ ಶೇಖರಣೆ ಇದ್ದು, 2017-18 ರ ಆರ್ಥಿಕ ವರ್ಷದಲ್ಲಿ ಒಟ್ಟು 8.4 ಮೆಟ್ರಿಕ್ ಟನ್ ಚಿನ್ನ ಶೇಖರಣೆ ಮಾಡಿದೆ.

 • Modi

  BUSINESS30, Aug 2018, 1:31 PM IST

  ನೋಟ್ ಬ್ಯಾನ್: ಉತ್ತರಿಸಬೇಕಾಗಿರುವುದೂ ಒನ್ ಮ್ಯಾನ್!

  ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ಮೇಲೆ ಹಿಡಿತ, ನಕಲಿ ನೋಟುಗಳ ಹಾವಳಿ ತಡೆಗಟ್ಟುವಿಕೆ, ಆರ್ಥಿಕತೆ ಬಲವರ್ಧನೆ, ಇವು ನವೆಂಬರ್ ೮, ೨೦೧೬ ರಂದು ನಾಣ್ಯ ಅಮಾನ್ಯೀಕರಣದ ಘೋಷಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಿದ್ದ ಮಾತುಗಳು. ಆದರೆ ಬರೋಬ್ಬರಿ 2 ವರ್ಷಗಳ ಬಳಿಕ ಆರ್‌ಬಿಐ ನಾಣ್ಯ ಅಮಾನ್ಯೀಕರಣದ ಕುರಿತು ಪ್ರಕಟಿಸಿರುವ ವರದಿ, ಸರ್ಕಾರ ಈ ಮೇಲಿನ ಭರವಸೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆ ಕೇಳುವಂತೆ ಮಾಡಿದೆ. ಆರ್‌ಬಿಐ ನೂತನ ವರದಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. 

 • BUSINESS29, Aug 2018, 1:58 PM IST

  ನೀವ್ ಕೊಟ್ರಲ್ಲಾ ಹಳೇ ನೋಟು, ಕ್ರಾಸ್ ಆಗಿದೆ ಆರ್‌ಬಿಐ ಗೇಟು!

  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ 2017-18 ರ ವಾರ್ಷಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ನಾಣ್ಯ ಅಮಾನ್ಯೀಕರಣದ ಕುರಿತು ಉಲ್ಲೇಖ ಮಾಡಿರುವ ಆರ್‌ಬಿಐ, ರದ್ದಾದ 500, 1000 ರೂ. ನೋಟುಗಳ ಪೈಕಿ ಶೇ.99.3 ರಷ್ಟು ನೋಟುಗಳು ವಾಪಸ್ ಬಂದಿವೆ ಎಂದು ಹೇಳಿದೆ. 

 • RBI

  BUSINESS8, Aug 2018, 1:34 PM IST

  ಆರ್‌ಬಿಐ ಕೇಂದ್ರೀಯ ಸಮಿತಿ ನಿರ್ದೇಶಕ ಸ್ಥಾನಕ್ಕೆ ಇಬ್ಬರ ನೇಮಕ

  ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ನೇಮಕಗೊಂಡಿದ್ದಾರೆ. ಆರ್‌ಬಿಐ ಕೇಂದ್ರೀಯ ಮಂಡಳಿ ಅರೆಕಾಲಿಕ ನಿರ್ದೇಶಕರಾಗಿ ಎಸ್. ಗುರುಮೂರ್ತಿ ಹಾಗೂ ಸತೀಶ್ ಮರಾಠೆ ನೇಮಕಕ್ಕೆ ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ.

 • BUSINESS1, Aug 2018, 5:03 PM IST

  ರೆಪೋ ದರ ಹೆಚ್ಚಿಸಿದ ಆರ್ ಬಿಐ: ಗೃಹ ಸಾಲ ಹೆಚ್ಚಳ?

  ಬ್ಯಾಂಕ್ ಗಳಿಂದ ಸಾಲ ತೆಗೆದುಕೊಳ್ಳಲು ಬಯಸುವವರಿಗೆ ಆರ್‌ಬಿಐ ಇದೀಗ ಕೆಟ್ಟ ಸುದ್ದಿಯೊಂದನ್ನು ನೀಡಿದೆ ಆರ್ ಬಿಐ ರೆಪೋ ದರ ಹೆಚ್ಚಳ ಮಾಡಿರುವ ಕಾರಣ ಮನೆ ಸಾಲ, ವಾಹನ ಹಾಗೂ ವೈಯುಕ್ತಿಕ ಸಾಲ ದ ಮೇಲಿನ ಬಡ್ಡಿಯಲ್ಲಿ ಹೆಚ್ಚಳವಾಗಲಿದೆ. ಬಹಳ ದಿನಗಳ ನಂತರ ಆರ್‌ಬಿಐ ಜನರಿಗೆ ಬ್ಯಾಡ್ ನ್ಯೂಸ್‌ವೊಂದನ್ನು ನೀಡಿದೆ. ಬಹಳ ದಿನಗಳ ಬಳಿಕ ಆರ್‌ಬಿಐ ರೆಪೋ ದರ ಏರಿಸುವ ನಿರ್ಧಾರಕ್ಕೆ ಬಂದಿದೆ.

 • BUSINESS19, Jun 2018, 9:47 PM IST

  ಸಿಹಿ ಸುದ್ದಿ: ಗೃಹ ಸಾಲದ ಮೇಲಿನ ಬಡ್ಡಿ ಅಗ್ಗ

  • ಗೃಹ ಸಾಲದ ಮೇಲಿನ ಬಡ್ಡಿ ಇಳಿಕಗೆ ಆರ್‌ಬಿಐ ಚಿಂತನೆ
  • ನಿರ್ದಿಷ್ಟ ಮೊತ್ತದ ಗೃಹ ಸಾಲಕ್ಕೆ ನಿಯಮ ಅನ್ವಯ
  • ಕುಟುಂಬದ ವಾರ್ಷಿಕ ಆದಾಯದ ಆಧಾರದಲ್ಲಿ ಸಾಲ
 • CA Mohan

  10, Jun 2018, 11:15 AM IST

  ಆರ್‌ಬಿಐ ಸಮೀಕ್ಷೆ ಸಂಪೂರ್ಣ ಸತ್ಯಾಸತ್ಯತೆ ಇಲ್ಲಿದೆ..!

  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕುರಿತು ನಡೆಸಿದ ಸಮೀಕ್ಷೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈ ಸಮೀಕ್ಷೆ ಸಂಪೂರ್ಣ ಜನರ ಅಭಿವ್ಯಕ್ತಿಯೇ ಎಂಬ ಪ್ರಶ್ನೆಯೂ ಇದೇ ವೇಳೆ ಕೇಳಿ ಬಂದಿದ್ದು ಸುಳ್ಳಲ್ಲ. ಆರ್‌ಬಿಐ ಸವೆರ್ವೆ ನಡೆಸಿದ ಪರಿ, ಸರ್ವೆಗಾಗಿ ಅದು ಆಯ್ಕೆ ಮಾಡಿಕೊಂಡ ನಗರಗಳು ಹೀಗೆ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದೇ ಹೋಗಿದ್ದು ಈ ಸಮೀಕ್ಷೆಯ ವಿಪರ್ಯಾಸ.

 • 2, Jun 2018, 1:12 PM IST

  ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಬ್ಯಾಂಕ್‌ಗಳು..!

  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿತ್ತೀಯ ನೀತಿ ಸಮಿತಿ(ಎಂಪಿಸಿ) ನಿರ್ಧಾರದ ಹಿನ್ನೆಲೆಯಲ್ಲಿ, ಹಲವು ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಹೆಚ್ಚಳ ಮಾಡಿವೆ. 10 ಆಧಾರದ ಅಂಕಗಳನ್ನು (100 ಬಿಪಿಎಸ್ = 1 ಶೇಕಡಾವಾರು ಪಾಯಿಂಟ್)ಗೆ ಈ ಬ್ಯಾಂಕ್‌ಗಳು ಹೆಚ್ಚಿಸಿವೆ.