ರಿಲಯನ್ಸ್ ಇಂಡಸ್ಟ್ರಿ  

(Search results - 11)
 • Jio

  BUSINESS12, Aug 2019, 3:47 PM IST

  ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

  ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಮುಖೇಶ್ ಸಂಸ್ಥೆಯ ಗ್ರಾಹಕರಿಗೆ ಭರ್ಜರಿ ಕೊಡುಗೆ  ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್, 100 ಎಂಬಿಪಿಎಸ್ ಸ್ಪೀಡ್’ನ ಆರಂಭಿಕ ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ಐತಿಹಾಸಿಕ ಜಿಯೋ ಫೈಬರ್ ಯೋಜನೆಯನ್ನು ಮುಖೇಶ್ ಘೋಷಿಸಿದ್ದಾರೆ.

 • BUSINESS21, May 2019, 6:55 PM IST

  ಐಒಸಿ ಹಿಂದಿಕ್ಕಿದ ರಿಲಯನ್ಸ್ ಇಂಡಸ್ಟ್ರಿಸ್: ದೇಶದ ನಂ.1 ಕಂಪನಿ!

  ಮಹತ್ವದ ಬೆಳವಣಿಗೆಯೊಂದರಲ್ಲಿ ವಾರ್ಷಿಕ ವಹಿವಾಟು ಲೆಕ್ಕಾಚಾರದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ್ನು ಹಿಂದಿಕ್ಕಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್
  ದೇಶದ ನಂ.1 ಕಂಪನಿಯಾಗಿ ಹೊರಹೊಮ್ಮಿದೆ.

 • Hamleys

  BUSINESS10, May 2019, 9:40 PM IST

  250 ವರ್ಷಗಳ ಇತಿಹಾಸವುಳ್ಳ ಕಂಪನಿ ರಿಲಯನ್ಸ್ ತಕ್ಕೆಗೆ!

  ರಿಲಯನ್ಸ್ ಇಂಡಸ್ಟ್ರಿಸ್ ಅಂಗಸಂಸ್ಥೆಯಾದ ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್,  ಹಾಂಗ್ ಕಾಂಗ್'ನಲ್ಲಿರುವ ಸಿ ಬ್ಯಾನರ್ ಇಂಟರ್ನ್ಯಾಷನಲ್ ಹೋಲ್ಡಿಂಗ್ಸ್ ಒಡೆತನದ ಹ್ಯಾಮ್ಲೀಸ್ ಬ್ರ್ಯಾಂಡ್‌ನ ಹ್ಯಾಮ್ಲೀಸ್ ಗ್ಲೋಬಲ್ ಹೋಲ್ಡಿಂಗ್ಸ್ ಲಿಮಿಟೆಡ್‌ನ 100% ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ.

 • Ambani

  BUSINESS6, Feb 2019, 1:30 PM IST

  ಅಣ್ಣನ ಅದೊಂದು ಮಾತು ಕೇಳಿದ್ದರೆ: ಅನಿಲ್ ಬರ್ತಿಲಿಲ್ಲ ಬೀದಿಗೆ!

  ಇದು ಮುಖೇಶ್ ಮತ್ತು ಅನಿಲ್ ಅಂಬಾನಿ ಪರಸ್ಪರ ದೂರವಾದ ಕತೆ. ರಿಲಯನ್ಸ್ ಸಾಮ್ರಾಜ್ಯ ಕಟ್ಟಿ ಬೆಳೆಸಿದ್ದ ಧೀರೂಭಾಯಿ ಅಂಬಾನಿ ನಿಧನದ ಬಳಿಕ, ಸಹೋದರರ ನಡುವಿನ ವೈಮನಸ್ಸು ಎಷ್ಟು ಗಾಢವಾಗಿತ್ತೆಂದರೆ ಧೀರೂಭಾಯಿ ಅಂಬಾನಿ ವಾಣಿಜ್ಯ ಸಾಮ್ರಾಜ್ಯ ಒಡೆದು ಚೂರು ಚೂರಾಯಿತು. ಆದರೆ ಹಿರಿಯಣ್ಣ ಮುಖೇಶ್ ಅಂಬಾನಿ ಯಶಸ್ವಿ ಉದ್ಯಮಿ ಎನಿಸಿದರೆ, ಕಿರಿಯ ಸಹೋದರ ಅನಿಲ್ ಅಂಬಾನಿ ಸಾಲ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಅನಿಲ್ ಅವರ ದಿವಾಳಿತನದ ವ್ಯಥೆ ಇಲ್ಲಿದೆ.

 • Mukesh Ambani

  BUSINESS23, Jan 2019, 12:07 PM IST

  ಮುಖೇಶ್ ಅಂಬಾನಿ ಟೋಟಲ್ ಆಸ್ತಿ: ಗಳಿಸಲಾಗಲ್ಲ ನಾವು ಹಿಡಿದ್ರೂ ಕುಸ್ತಿ!

  ಏಷ್ಯಾದ ಮೊದಲ ಮತ್ತು ವಿಶ್ವದ 14ನೇ ಆಗರ್ಭ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 45.3 ಬಿಲಿಯನ್ ಯುಎಸ್ ಡಾಲರ್. ಮುಖೇಶ್ ಕೇವಲ 2018ರಲ್ಲೇ 3.1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 21,754 ಕೋಟಿ ರೂ. ಆಸ್ತಿ ಗಳಿಸಿದ್ದಾರೆ.

 • Mukesh Ambani

  BUSINESS18, Jan 2019, 7:42 PM IST

  ಮುಖೇಶ್ ಒಂದು ಮಾತಿಂದ ಅಮೆಜಾನ್ ಎದೆ ಢವಢವ!

  ರಿಲಯನ್ಸ್ ಜಿಯೋ ಮೂಲಕ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಧಿಪತ್ಯ ಸಾಧಿಸಿರುವ ಮುಖೇಶ್ ಅಂಬಾನಿ, ಇದೀಗ ಇ-ಕಾಮರ್ಸ್ ಮಾರುಕಟ್ಟೆಯಲ್ಲೂ ಅಧಿಪತ್ಯ ಸಾಧಿಸಲು ಮುಂದಾಗಿದ್ದಾರೆ.

 • Jio

  BUSINESS18, Jan 2019, 4:32 PM IST

  ಫಾರಿನ್ ಡಾಟಾಗೆ ಟಾಟಾ, ಇನ್ಮೇಲೆ ಓನ್ಲಿ ಇಂಡಿಯನ್ ಡಾಟಾ: ಅಂಬಾನಿ!

  ಭಾರತೀಯರೆಲ್ಲರೂ ಭಾರತೀಯ ಮೂಲದ ಇಂಟರ್ನೆಟ್ ಡಾಟಾ ಬಳಸಬೇಕೆಂದು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕರೆ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮಾವೇಶ ಉದ್ದೇಶಿಸಿ ಅಂಬಾನಿ ಮಾತನಾಡಿದರು.

 • Rizwan

  NEWS25, Dec 2018, 5:31 PM IST

  ಈತನ ಅದ್ಧೂರಿ ಮದ್ವೆಗೆ 20 ಸಾವಿರ ಖರ್ಚು: ಹೆಂಗೆ ಅಂತಾ ಅವನನ್ನೇ ಕೇಳಿ!

  ಇತ್ತೀಚಿಗಷ್ಟೇ ರಿಲಯನ್ಸ್ ಇಂಡಸ್ಟ್ರಿ ಅಧಿಪತಿ ಮುಕೇಶ್ ಅಂಬಾನಿ, ಸುಮಾರು 700 ಕೋಟಿ(ತಮ್ಮ ಒಟ್ಟು ಆದಾಯದ ಶೇ.1ರಷ್ಟು ಮಾತ್ರ) ರೂ. ಖರ್ಚು ಮಾಡಿ ತಮ್ಮ ಮಗಳ ಮದುವೆ ಮಾಡಿ ಸುದ್ದಿಯಾಗಿದ್ದರು. ಪಾಕಿಸ್ತಾನದಲ್ಲೋರ್ವ ಆಸಾಮಿ ತನ್ನ ಮದುವೆಗೆ ಕೇವಲ 20 ಸಾವಿರ (ಭಾರತೀಯ ಕರೆನ್ಸಿ ಪ್ರಕಾರ 10 ಸಾವಿರ)ರೂ. ಖರ್ಚು ಮಾಡಿದ್ದಾನೆ. ಅಲ್ಲದೇ ಹೇಗೆ ಅತ್ಯಂತ ಕಡಿಮೆ ಬಜೆಟ್ ನಲ್ಲಿ ತನ್ನ ಮದುವೆಯಾಯ್ತು ಎಂಬುದನ್ನು ಆತ ವಿವರಿಸಿದ್ದಾನೆ.

 • Nita Ambani

  BUSINESS22, Dec 2018, 12:28 PM IST

  ತುಟ್ಟಿಯಾದ ಮಗಳ ಮದ್ವೆ?: ಒಂದೇ ಬಟ್ಟೆಯಲ್ಲಿ ತಿರುಗಾಡ್ತಿದ್ದಾರೆ ನೀತಾ!

  ಮುಕೇಶ್ ಅಂಬಾನಿ ಅಂದ್ಮೇಲೆ ಹಣಕ್ಕೇನು ಕೊರತೆ ಅಲ್ಲವೇ?. ಲಕ್ಷಾಂತರ ಕೋಟಿ ರೂ. ಒಡೆಯರಾಗಿರುವ ಮುಕೇಶ್ ತಮ್ಮ ಪತ್ನಿ ಇಚ್ಛಿಸಿದರೆ ಇಂದ್ರ ಲೋಕವನ್ನೇ ಭೂಮಿಗೆ ತರಬಲ್ಲರು. ಆದರೆ ಆಗರ್ಭ ಶ್ರೀಮಂತರಾಗಿದ್ದೂ ತಮ್ಮ ಶ್ರೀಮಂತಿಕೆಯನ್ನು ಮುಕೇಶ್ ಆಗಲಿ ಪತ್ನಿ ನೀತಾ ಅಂಬಾನಿ ಆಗಲಿ ಎಂದೂ ಪ್ರದರ್ಶಿಸಿದವರಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವುದು ಅವರ ಮೂಲ ಗುಣ.

   

 • muklesh ambani

  BUSINESS30, Oct 2018, 6:10 PM IST

  ನಮ್ಮನ್ ಮುಟ್ಟೋರ್ ಯಾರು?: ಅಂಬಾನಿ ಧ್ವನಿ ಜೋರು!

  ಭಾರತ ವಿಶ್ವದ ಮೂರನೇ ಶ್ರೀಮಂತ ರಾಷ್ಟ್ರವಾಗುವತ್ತ ದಾಪುಗಾಲು ಇಡುತ್ತಿದ್ದು, ಈಗಾಗಲೇ ಕೈಗಾರಿಕಾ ಕ್ರಾಂತಿ ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ 24ನೇ ಮೊಬಿಕಾಂ ಸಮಾವೇಶದಲ್ಲಿ ಮಾತನಾಡಿದ ಅಂಬಾನಿ, ಭಾರತದ ಡಿಜಿಟಲ್ ಕ್ರಾಂತಿಗೆ ಪರ್ಯಾಯ ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

 • Mukesh Ambani

  BUSINESS27, Oct 2018, 7:09 PM IST

  OMG! ಗುಜರಾತ್‌ನ ಎಲ್ಲಾ ಕುಬೇರರಿಗಿಂತ ಮುಖೇಶ್ ಅಂಬಾನಿ ರಿಚ್

  ವ್ಯಾಪಾರಸ್ಥರ ಸ್ವರ್ಗ ಗುಜರಾತ್ ರಾಜ್ಯದಲ್ಲಿ ಬರೋಬ್ಬರಿ 58 ಜನ ಕುಬೇರರಿದ್ದಾರೆ. ಇವರ ಬಳಿ ಸಾವಿರ ಕೋಟಿಗೂ ಅಧಿಕ ನಿವ್ವಳ ಆಸ್ತಿ ಇದೆ. ಆದರೆ ಗುಜರಾತ್‌ನ ಎಲ್ಲಾ ಶ್ರೀಮಂತರ ಬಳಿ ಇರುವ ಆಸ್ತಿಗಿಂತ ಹೆಚ್ಚಿನ ಆಸ್ತಿಯನ್ನು ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಖೇಶ್ ಅಂಬಾನಿ ಒಬ್ಬರೇ ಹೊಂದಿದ್ದಾರೆ.