ರಾಯಲ್ ಚಾಲೆಂಜರ್ಸ್‌ ಬೆಂಗಳೂರು

(Search results - 21)

Navdeep Saini

CricketMay 31, 2021, 3:32 PM IST

ಆಸೀಸ್‌ ಸರಣಿಯಲ್ಲಿ ಫೇಲಾದ ವೇಗಿ ನವದೀಪ್‌ ಸೈನಿ ಕಮ್‌ ಬ್ಯಾಕ್‌ ಮಾಡ್ತಾರಾ?

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ದದ ಪಂದ್ಯದಲ್ಲಿ ಸೈನಿ 2 ಓವರ್ ಬೌಲಿಂಗ್‌ ಮಾಡಿ 27 ರನ್‌ ನೀಡಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ 69 ರನ್‌ಗಳ ಅಂತರದ ಹೀನಾಯ ಸೋಲು ಕಂಡಿತ್ತು.

Yuzvendra Chahal

CricketMay 22, 2021, 4:14 PM IST

ಟೂರ್ನಿ ಸ್ಥಗಿತವಾಗದಿದ್ದರೂ ನಾನು ಐಪಿಎಲ್‌ನಿಂದ ಹಿಂದೆ ಸರಿಯುತ್ತಿದ್ದೆ ಎಂದ ಚಹಲ್

ಐಪಿಎಲ್ ಟೂರ್ನಿ ಮುಂದೂಡುವ ಮುನ್ನವೇ ನಾನು ಟಿ20 ಟೂರ್ನಿಯಿಂದ ಕೆಲವು ಕಾಲ ಬಿಡುವು ಪಡೆಯುವ ಬಗ್ಗೆ ಚಿಂತನೆ ನಡೆಸಿದ್ದೆ. ಯಾಕೆಂದರೆ ಮನೆಯ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಒಂದು ಕಡೆ ಟೂರ್ನಿ ನಡೆಯುತ್ತಿರುವಾಗಲೇ ಮನೆಯಲ್ಲಿ ಪೋಷಕರಿಗೆ ಕೋವಿಡ್ ದೃಢಪಟ್ಟಿತ್ತು ಎಂದು 30 ವರ್ಷದ ಚಹಲ್ ಹೇಳಿದ್ದಾರೆ.

Virat Kohli

CricketMay 6, 2021, 6:44 PM IST

ಕೊರೋನಾ ವಿರುದ್ದ ಹೋರಾಟಕ್ಕಿಳಿದ ವಿರಾಟ್ ಕೊಹ್ಲಿ..!

ನವದೆಹಲಿ: ಕೊರೋನಾ ಕಾರಣದಿಂದಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ಅನಿರ್ದಿಷ್ಟಾವಧಿಗೆ ಮುಂದೂಡಿದೆ. ಹೀಗಿರುವಾಗಲೇ ಸಮಯ ವ್ಯರ್ಥಮಾಡದ ಟೀಂ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಕೋವಿಡ್ ವಿರುದ್ದದ ಹೋರಾಟಕ್ಕೆ ಅಖಾಡಕ್ಕಿಳಿದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಿಟ್ಟ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

RCB Fans

CricketApr 28, 2021, 12:25 PM IST

ಐಪಿಎಲ್ 2021: ರಿಚರ್ಡ್‌ಸನ್‌ ಬದಲಿಗೆ ಆರ್‌ಸಿಬಿ ಕೂಡಿಕೊಂಡ ಸ್ಕಾಟ್‌ ಕುಗ್ಗಲಯನ್‌

ಆಸ್ಟ್ರೇಲಿಯಾ ಬೌಲರ್‌ಗಳಾದ ಕೇನ್ ರಿಚರ್ಡ್‌ಸನ್ ಹಾಗೂ ಆಡಂ ಜಂಪಾ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಬಯೋಬಬಲ್ ತೊರೆದು ಕಾಂಗರೂ ನಾಡಿನತ್ತ ಮುಖ ಮಾಡಿದ್ದರು.

Virat Kohli Rishabh Pant

CricketApr 27, 2021, 5:25 PM IST

IPL 2021: ಆರ್‌ಸಿಬಿ vs ಡೆಲ್ಲಿ ಪಂದ್ಯಕ್ಕೂ ಮುನ್ನ ನೀವು ತಿಳಿದಿರಲೇಬೇಕಾದ ಅಂಕಿ-ಅಂಶಗಳಿವು

ಸದ್ಯ ಆಡಿದ 5 ಪಂದ್ಯಗಳ ಪೈಕಿ ಉಭಯ ತಂಡಗಳು ತಲಾ 4 ಗೆಲುವು ಹಾಗೂ ಒಂದು ಸೋಲಿನೊಂದಿಗೆ 8 ಅಂಕಗಳನ್ನು ಗಳಿಸಿದ್ದು, ನೆಟ್‌ ರನ್‌ರೇಟ್‌ ಆಧಾರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2ನೇ ಸ್ಥಾನದಲ್ಲಿದ್ದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 3ನೇ ಸ್ಥಾನದಲ್ಲಿದೆ. ಇಂದು ಗೆಲುವು ಸಾಧಿಸುವ ತಂಡವು ಮತ್ತೊಮ್ಮೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿವೆ.

Devdutt Padikkal Sunil Gavaskar

CricketApr 23, 2021, 5:49 PM IST

ಪಡಿಕ್ಕಲ್‌ ಸದ್ಯದಲ್ಲೇ ಟೀಂ ಇಂಡಿಯಾ ಪ್ರತಿನಿಧಿಸಿದರೆ ಆಚ್ಚರಿಪಡುವಂತದ್ದೇನಿಲ್ಲ: ಗವಾಸ್ಕರ್

ಕೆಲವು ತಿಂಗಳ ಹಿಂದಷ್ಟೇ ಮುಕ್ತಾಯವಾದ ವಿಜಯ್ ಹಜಾರೆ ಟೂರ್ನಿಯಲ್ಲಿ 700ಕ್ಕೂ ಅಧಿಕ ರನ್‌ ಬಾರಿಸಿ ಗಮನ ಸೆಳೆದಿದ್ದ ಪಡಿಕ್ಕಲ್‌, ಇದೀಗ ಐಪಿಎಲ್‌ನಲ್ಲೂ ತಮ್ಮ ಜಾದೂ ತೋರಿಸಿದ್ದಾರೆ. ರಾಜಸ್ಥಾನ ರಾಯಲ್ಸ್‌ ವಿರುದ್ದದ ಪಂದ್ಯದಲ್ಲಿ ಕೇವಲ 52 ಎಸೆತಗಳಲ್ಲಿ ಅಜೇಯ 101 ರನ್ ಬಾರಿಸುವ ಮೂಲಕ ತಾವೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಎನ್ನುವುದನ್ನು ಮತ್ತೊಮ್ಮೆ ಜಗತ್ತಿನ ಮುಂದೆ ಅನಾವರಣ ಮಾಡಿದ್ದಾರೆ.

Devdutt Padikkal

CricketApr 23, 2021, 4:08 PM IST

IPL 2021: ಒಂದು ಶತಕ: ಅಪರೂಪದ ದಾಖಲೆಗಳು ಕನ್ನಡಿಗ ಪಡಿಕ್ಕಲ್‌ ಪಾಲು..!

ಬೆಂಗಳೂರು: ಕರ್ನಾಟಕದ ಯುವ ಪ್ರತಿಭೆ ದೇವದತ್‌ ಪಡಿಕ್ಕಲ್‌ ರಾಜಸ್ಥಾನ ರಾಯಲ್ಸ್‌ ವಿರುದ್ದ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸುವ ಮೂಲಕ ಐಪಿಎಲ್ ವೃತ್ತಿಜೀವನದ ಮೊದಲ ಶತಕ ಬಾರಿಸಿ ಅಬ್ಬರಿಸಿದ್ದಾರೆ.
ರಾಜಸ್ಥಾನ ರಾಯಲ್ಸ್‌ ನೀಡಿದ್ದ 178 ರನ್‌ಗಳ ಗುರಿ ಆರ್‌ಸಿಬಿ ಆರಂಭಿಕರಾದ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್‌ಗೆ ಸವಾಲೆನಿಸಲೇ ಇಲ್ಲ. ದೇವದತ್ ಪಡಿಕ್ಕಲ್ ಕೇವಲ 51 ಎಸೆತಗಳನ್ನು ಎದುರಿಸಿ ಅಜೇಯ ಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಡಿಕ್ಕಲ್‌ ಶತಕ ಬಾರಿಸಿದ ಬಳಿಕ ನಿರ್ಮಾಣವಾದ ಅಪರೂಪದ ದಾಖಲೆಗಳು ಇಲ್ಲಿವೆ ನೋಡಿ

RCB vs RR

CricketApr 22, 2021, 7:05 PM IST

ಐಪಿಎಲ್ 2021: ರಾಯಲ್ಸ್ ಎದುರು ಟಾಸ್ ಗೆದ್ದ ಅರ್‌ಸಿಬಿ ಬೌಲಿಂಗ್ ಅಯ್ಕೆ

ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು, ಮತ್ತೊಂದು ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಲೆಕ್ಕಾಚಾರದಲ್ಲಿದೆ.

RCB IPL Trophy

CricketApr 22, 2021, 9:13 AM IST

IPL 2021: ಸತತ 4ನೇ ಜಯದ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಚೆನ್ನೈ ಚರಣದಲ್ಲಿ ಅಸಾಧಾರಣ ಯಶಸ್ಸು ಕಂಡ ಕೊಹ್ಲಿ ಪಡೆ, ಮುಂದಿನ 2 ಪಂದ್ಯಗಳನ್ನು ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಆಡಲಿದ್ದು, ಇಲ್ಲಿಯೂ ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತಿದೆ.

• undefined

CricketApr 18, 2021, 7:24 PM IST

IPL 2021: ಕೆಕೆಆರ್‌ ವಿರುದ್ದದ ಅರ್‌ಸಿಬಿಗೆ ಹ್ಯಾಟ್ರಿಕ್ ಜಯ

ಕಳೆದ ಆವೃತ್ತಿಯಲ್ಲೂ ಕೆಕೆಆರ್‌ ವಿರುದ್ದದ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಆರ್‌ಸಿಬಿ ಇದೀಗ ಮತ್ತೊಮ್ಮೆ ಕೆಕೆಆರ್ ಎದುರು ಪ್ರಾಬಲ್ಯ ಮೆರೆದಿದೆ. ಇದರ ಜತೆಗೆ 6 ಅಂಕಗಳೊಂದಿಗೆ ಆರ್‌ಸಿಬಿ ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Ab De Villiers

CricketApr 18, 2021, 5:22 PM IST

ಐಪಿಎಲ್ 2021: ಮ್ಯಾಕ್ಸ್‌ವೆಲ್, ಎಬಿಡಿ ‌ಅಬ್ಬರ, ಕೆಕೆಆರ್‌ಗೆ ಕಠಿಣ ಗುರಿ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಆರ್‌ಸಿಬಿ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರ್‌ಸಿಬಿ ಎರಡಂಕಿ ಮೊತ್ತ ದಾಖಲಿಸುವಷ್ಟರಲ್ಲಿ ವಿರಾಟ್ ಕೊಹ್ಲಿ ಹಾಗೂ ರಜತ್‌ ಪಾಟೀದಾರ್‌ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಯಿತು.

RCB

CricketApr 14, 2021, 11:39 AM IST

IPL 2021: ಸನ್‌ರೈಸರ್ಸ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ 2 ಬದಲಾವಣೆ.?

ಚೆನ್ನೈ: ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್‌ ಮಣಿಸಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಇದೀಗ ಸನ್‌ರೈಸರ್ಸ್‌ ಹೈದರಾಬಾದ್‌ ಸವಾಲನ್ನು ಸ್ವೀಕರಿಸಲು ಸಜ್ಜಾಗಿದೆ. ಕಳೆದ ಆವೃತ್ತಿಯ ಎಲಿಮಿನೇಟರ್‌ ಪಂದ್ಯದಲ್ಲಿ ಹೈದರಾಬಾದ್ ಎದುರು ಮುಗ್ಗರಿಸಿದ್ದ ಆರ್‌ಸಿಬಿ ಇದೀಗ ಆ ಸೋಲಿಗೆ ತಿರುಗೇಟು ನೀಡಲು ಎದುರು ನೋಡುತ್ತಿದೆ. ಹೀಗಾಗಿ ಈ ಪಂದ್ಯದಲ್ಲಿ ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಆರ್‌ಸಿಬಿ ಸಜ್ಜಾಗಿದ್ದು, ತಂಡದಲ್ಲಿ 2 ಬದಲಾವಣೆ ನಿರೀಕ್ಷಿಸಲಾಗಿದೆ

Devdutt Padikkal RCB

CricketApr 13, 2021, 1:17 PM IST

IPL 2021 ಯುಗಾದಿ ಹಬ್ಬಕ್ಕೆ ಶುಭಕೋರಿದ ಆರ್‌ಸಿಬಿ

ಯುಗಾದಿ ಹಬ್ಬಕ್ಕೆ ಟ್ವೀಟ್‌ ಮೂಲಕ ಶುಭಕೋರಿರುವ ಆರ್‌ಸಿಬಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರುಷದ ಹೊಸ ಚೈತನ್ಯದಿಂದ ನಿಮ್ಮ ಬಾಳು ಹಸನಾಗಲಿ ಎಂದು ಟ್ವೀಟ್‌ ಮೂಡಿದೆ. ಇದರ ಜತೆಗೆ ಆರ್‌ಸಿಬಿ ಕ್ರಿಕೆಟಿಗರಾದ ಕೆ.ಎಸ್‌. ಭರತ್, ದೇವದತ್ ಪಡಿಕ್ಕಲ್‌, ಡೇನಿಯಲ್ ಕ್ರಿಶ್ಚಿಯನ್‌, ಎಬಿ ಡಿವಿಲಿಯರ್ಸ್‌, ನವದೀಪ್ ಸೈನಿ ಹಾಗೂ ವಾಷಿಂಗ್ಟನ್‌ ಸುಂದರ್ ವಿಡಿಯೋ ಮೂಲಕ ಯುಗಾದಿ ಹಬ್ಬಕ್ಕೆ ಶುಭ ಕೋರಿದ್ದಾರೆ.

RCB Virat Kohli

CricketApr 13, 2021, 11:55 AM IST

IPL 2021: ಸನ್‌ರೈಸರ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಸಿಕ್ತು ಗುಡ್‌ ನ್ಯೂಸ್‌..!

13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದ ಮುಗ್ಗರಿಸಿ ಆರ್‌ಸಿಬಿ ಟೂರ್ನಿಯಿಂದ ಹೊರಬಿದ್ದಿತ್ತು. ಇದೀಗ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದು, ಎಲಿಮಿನೇಟರ್‌ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ವಿರಾಟ್ ಕೊಹ್ಲಿ ಪಡೆ ತುದಿಗಾಲಿನಲ್ಲಿ ನಿಂತಿದೆ.

RCB

CricketApr 12, 2021, 12:25 PM IST

IPL 2021 ಆರ್‌ಸಿಬಿ ಮ್ಯೂಸಿಕ್‌ ಬ್ಯಾಂಡ್‌ ಫೋಟೋ ವೈರಲ್‌

ತಮ್ಮ ತಂಡದಿಂದ ಕಾರ್ಯಕ್ರಮ ಕೊಡಿಸಲು ಇಚ್ಛಿಸಿದರೆ ಯಜುವೇಂದ್ರ ಚಹಲ್‌ಗೆ ಕರೆ ಮಾಡಿ ಎಂದು ಪಡಿಕ್ಕಲ್‌, ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಫೋಟೋ ವೈರಲ್‌ ಆಗಿದೆ.