ರಾಣಿಬೆನ್ನೂರು  

(Search results - 27)
 • <p>Coronavirus </p>

  Karnataka Districts5, Jul 2020, 7:55 AM

  ರಾಣಿಬೆನ್ನೂರು: ಬಸ್‌ ತಂಗುದ್ದಾಣದಲ್ಲಿ ಕೊರೋನಾ ಶಂಕಿತನ ಶವ ಇಟ್ಟು ಹೋದರು!

  ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಾಲೂಕಾಸ್ಪತ್ರೆಯ ಸಿಬ್ಬಂದಿ ಬಸ್‌ ತಂಗುದಾಣದಲ್ಲಿಯೇ ಬಿಟ್ಟು ಹೋದ ಬೇಜವಾಬ್ದಾರಿ ಘಟನೆ ನಗರದ ತಾಲೂಕಾಸ್ಪತ್ರೆಯ ಮುಂಭಾಗದಲ್ಲಿ ಶನಿವಾರ ಸಂಭವಿಸಿದ್ದು ಸಾರ್ವಜನಿಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
   

 • <p>sand </p>

  Karnataka Districts12, Jun 2020, 1:42 PM

  ಬಳ್ಳಾರಿ: ರಾಣಿಬೆನ್ನೂರು ಶಾಸಕರಿಂದಲೇ ಮರಳು ಲೂಟಿ..!

  ಬಳ್ಳಾರಿ ಜಿಲ್ಲೆಯ ಹರವಿ, ಕುರುವತ್ತಿ, ಮೈಲಾರ ಸೇರಿದಂತೆ ಇತರೆ ಕಡೆಗಳಲ್ಲಿನ ಮರಳನ್ನು ರಾಣಿಬೆನ್ನೂರು ಶಾಸಕರು, ಹಾಡು ಹಗಲೇ ಲೂಟಿ ಮಾಡುತ್ತಿದ್ದಾರೆಂದು ತಾಪಂ ಅಧ್ಯಕ್ಷ ಅಂಬ್ಲಿ ಮಲ್ಲಿಕಾರ್ಜುನ ಆರೋಪಿಸಿದ್ದಾರೆ. 
   

 • <p>Coronavirus </p>

  Karnataka Districts31, May 2020, 8:10 AM

  ಹಾವೇರಿ: ನಾಲ್ವರಿಗೆ ಮಹಾಮಾರಿ ಕೊರೋನಾ ದೃಢ

  ಮಹಾರಾಷ್ಟ್ರದಿಂದ ಸೇವಾ ಸಿಂಧು ಪಾಸ್‌ ಮೂಲಕ ಜಿಲ್ಲೆಯ ರಾಣಿಬೆನ್ನೂರು ತಾಲೂಕಿಗೆ ಆಗಮಿಸಿ ಇಲ್ಲಿನ ಈಶ್ವರನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದ ತಾಲೂಕಿನ ತುಮ್ಮಿನಕಟ್ಟಿ ಗ್ರಾಮದ ವಲಸೆ ಕಾರ್ಮಿಕರ ಪೈಕಿ ಶನಿವಾರ ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.  
   

 • <p>Police </p>

  Karnataka Districts29, Apr 2020, 8:14 AM

  ಲಾಕ್‌ಡೌನ್‌ ಮಧ್ಯೆ ಸಿಪಿಐ ಬರ್ತಡೇ ಸಂಭ್ರಮ: 'ಇದೆಲ್ಲಾ ಬೇಕಿತ್ತಾ ಈ ಟೈಮ್‌ನಲ್ಲಿ..?'

  ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಒಬ್ಬರು ಬರ್ತಡೇ ಆಚರಿಸಿಕೊಂಡಿರುವ ಆರೋಪ ಕೇಳಿ ಬಂದಿದ್ದು, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಪೂರ್ವವಲಯ ಐಜಿಪಿ ಅವರಿಗೂ ದೂರು ಹೋಗಿದೆ.
   

 • arunkumar

  Karnataka Districts25, Apr 2020, 8:35 AM

  ಲಾಕ್‌ಡೌನ್‌ ಮಧ್ಯೆಯೂ ಕೊಟ್ಟೂರೇಶ್ವರನಿಗೆ ಪೂಜೆ ಸಲ್ಲಿಸಿದ ಶಾಸಕ ಪೂಜಾ​ರ್‌..!

  ಮಾರಕ ಕೊರೋನಾ ರೋಗ ಹರಡದೆ ಕೂಡಲೇ ನಿಯಂತ್ರಣಕ್ಕೆ ಬರಲೆಂದು ಪ್ರಾರ್ಥಿಸಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಅರುಣಕುಮಾರ ಪೂಜಾರ್‌ ಅವರು ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಪ್ರಸಿದ್ಧ ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.
   

 • Patil Puttappa

  Karnataka Districts18, Mar 2020, 7:31 AM

  ತವರಲ್ಲಿ ಮಣ್ಣಾದ ಪಾಪು: ಏಳು ದಶಕದ ಹುಬ್ಬಳ್ಳಿಯ ನಂಟು ಇನ್ನು ನೆನಪು ಮಾತ್ರ

  ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪ (ಪಾಪು) ಅವರು ತಮ್ಮ ಹುಟ್ಟೂರಿನ ಮಣ್ಣಿನಲ್ಲಿ ಲೀನವಾಗಿದ್ದಾರೆ. ಸೋಮವಾರ ನಿಧನರಾದ ಪಾಪು ಅವರ ಅಂತ್ಯಕ್ರಿಯೆ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕು ಹಲಗೇರಿ ಗ್ರಾಮದ ಸ್ವಂತ ತೋಟದಲ್ಲಿ ಮಂಗಳವಾರ ಸಂಜೆ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ನೆರವೇರಿತು.
   

 • Haveri

  Karnataka Districts10, Mar 2020, 11:29 AM

  62 ವರ್ಷದಿಂದ ನಕ್ಕೇ ಇಲ್ಲ ರತಿ-ಮನ್ಮಥರು: ನಗಿಸಿದವರಿಗೆ 1.50 ಲಕ್ಷ ಬಹುಮಾನ!

  ನಗರದಲ್ಲಿ ಹೋಳಿ ಹಬ್ಬದ ಮುನ್ನಾ ದಿನ ರತಿ-ಮನ್ಮಥರ ನಗಿಸುವ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿರುತ್ತದೆ. ಜೀವಂತ ರತಿ-ಮನ್ಮಥ (ಪಾತ್ರಧಾರಿಗಳು)ರನ್ನು ಕುಳ್ಳಿರಿಸಿ ಅವರನ್ನು ನಗಿಸುವ ಸ್ಪರ್ಧೆಯನ್ನು ಏರ್ಪಡಿಸಿರುತ್ತಾರೆ. ಇವರನ್ನು ನಗಿಸಿದವರಿಗೆ ಬರೋಬ್ಬರಿ 1.50 ಲಕ್ಷ ಬಹುಮಾನ. 
   

 • ಬೆಳ್ಳುಳಿ

  Karnataka Districts2, Mar 2020, 11:38 AM

  ದರ ಕುಸಿತ: ರಸ್ತೆಗೆ ಬೆಳ್ಳುಳ್ಳಿ ಚೆಲ್ಲಿ ರೈತರಿಂದ ಪ್ರತಿಭಟನೆ, ಸಂಕಷ್ಟದಲ್ಲಿ ಅನ್ನದಾತ

  ಬೇರೆಡೆಯಿಂದ ಬೆಳ್ಳುಳ್ಳಿ ತಂದು ಇಲ್ಲಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವರ್ತಕರು ಮುಂದಾಗಿದ್ದರಿಂದ ಬೆಳ್ಳುಳ್ಳಿ ದರ ತೀವ್ರ ಕುಸಿತಗೊಂಡಿದೆ ಎಂದು ಆಕ್ರೋಶಗೊಂಡ ರೈತರು ಖರೀದಿದಾರರು ತಂದಿದ್ದ ಬೆಳ್ಳುಳ್ಳಿ ಚೀಲಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರುವಿ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ನಡೆದಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
   

 • arunkumar

  Karnataka Districts3, Jan 2020, 8:49 AM

  'ರಾಣಿಬೆನ್ನೂರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ'

  ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವೆ. ಮತದಾರರ ಈ ನಿಮ್ಮ ಋಣವನ್ನು ಅಭಿವೃದ್ಧಿಯ ಕಾರ್ಯಗಳ ಮೂಲಕ ತೀರಿಸುತ್ತೇನೆ ಎಂದು ಶಾಸಕ ಅರುಣ ಕುಮಾರ ಪೂಜಾರ ಹೇಳಿದ್ದಾರೆ.

 • arunkumar

  Karnataka Districts19, Dec 2019, 11:23 AM

  ರಾಣಿಬೆನ್ನೂರಿನ ಸಮಸ್ಯೆಗಳಿಗೆ ಇತಿಶ್ರೀ ಹಾಡ್ತಾರಾ ನೂತನ ಶಾಸಕ ಅರುಣಕುಮಾರ್?

  ಅಪಾರ ನಿರೀಕ್ಷೆ ಇಟ್ಟುಕೊಂಡು ರಾಣಿಬೆನ್ನೂರು ಕ್ಷೇತ್ರದ ಜನತೆ ಅರುಣಕುಮಾರ್ ಪೂಜಾರ ಅವರನ್ನು ಗೆಲ್ಲಿಸಿ ಕಳಿಸಿದ್ದಾರೆ. ಯುವಜನರ ಆಶಾಕಿರಣ ಎಂದೇ ಬಿಂಬಿತವಾಗಿರುವ ನೂತನ ಶಾಸಕ ಅರುಣಕುಮಾರ್ ಮುಂದೆ ಸವಾಲುಗಳ ಸರಮಾಲೆಯೇ ಇದ್ದು, ಅದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಕ್ಷೇತ್ರಕ್ಕೆ ಅರುಣೋದಯವಾಗುವಂತೆ ಮಾಡುವ ಜವಾಬ್ದಾರಿ ಹೆಗಲೇರಿದೆ. 
   

 • ballot unit

  Karnataka Districts5, Dec 2019, 11:08 AM

  ರಾಣಿಬೆನ್ನೂರು: ಓಟ್ ಹಾಕಿದ ಫೋಟೋ ಬಹಿರಂಗ ಪಡಿಸಿದ ಮತದಾರ

  ಮತದಾನ ಯಾವತ್ತೂ ಗೌಪ್ಯವಾಗಿರಬೇಕು, ಯಾರಿಗೆ, ಯಾವ ಪಕ್ಷಕ್ಕೆ ಮತ ಹಾಕಿದೆ ಅಂತ ತೋರಿಸುವುದು ಕೂಡ ಕಾನೂನು ಉಲ್ಲಂಘನೆಯಾಗುತ್ತದೆ. ಆದರೆ, ಇಲ್ಲೊಬ್ಬ ಮಹಾಶಯ ಯಾರಿಗೆ ಮತ ಹಾಕಿದ್ದೇನೆ ಎಂದು ಮತ ಹಾಕಿರುವ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾನೆ. 
   

 • Monkey
  Video Icon

  Karnataka Districts5, Dec 2019, 10:01 AM

  ಮತದಾನಕ್ಕೆ ಅಡ್ಡಿ: ನಮಗೂ ಓಟ್ ಮಾಡಲು ಅವಕಾಶ ಕೊಡಿ ಎನ್ನುತ್ತಿರುವ ಕೋತಿಗಳು!

  ರಾಣಿಬೆನ್ನೂರು(ಡಿ.05): ಮಂಗಗಳ ಕಾಟದಿಂದ ಮತದಾರರು ಮತಗಟ್ಟೆಗೆ ಬರಲು ಭಯಪಡುವಂತ ಪರಿಸ್ಥಿತಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿರುವ ಮತಗಟ್ಟೆಯ ಬಳಿ ಇಂದು(ಗುರುವಾರ) ನಡೆದಿದೆ. ಮತಗಟ್ಟೆಯ ಬಳಿ ಸುಮಾರು 50 ಕ್ಕೂ ಹೆಚ್ಚು ಮಂಗಗಳು ಓಡಾಡುತ್ತಿವೆ. ಹೀಗಾಗಿ ಮಂಗಗಳ ಸೈನ್ಯದಿಂದ ಮತದಾರರು ಬೇಸತ್ತಿದ್ದಾರೆ. ಮತಗಟ್ಟೆ ಸಂಖ್ಯೆ 19, 20 ರಲ್ಲಿ ಮತಚಲಾವಣೆಗೆ ಬರುತ್ತಿರುವ ಮತದಾರರು ಮಂಗಗಳ ಕಾಟದಿಂದ ಭಯದಿಂದ ಮತಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. 

  ಮಂಗಗಳ ಕಾಟದಿಂದ ಆಗೊಬ್ಬ ಇಗೊಬ್ಬ ಮತದಾರರು ಮತ ಚಲಾವಣೆಗೆ ಬರುತ್ತಿದ್ದಾರೆ. ಮತದಾರರು ಮತ್ತು ಸಿಬ್ಬಂದಿಗಳಿಗೆ ಮಂಗಗಳು ವಿಪರೀತ ಕಾಟ ಕೊಡುತ್ತಿವೆ. 

 • arun kumar koli

  Karnataka Districts4, Dec 2019, 1:41 PM

  ‘ಸೋಲಿನ ಭಯದಿಂದ ಕೋಳಿವಾಡ ಏನೇನೋ ಹೇಳುತ್ತಿದ್ದಾರೆ’

  ಸೋಲಿನ ಭಯದಿಂದ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಅವರು ಏನೇನೋ ಹೇಳುತ್ತಿದ್ದಾರೆ. ಕೋಳಿವಾಡರು ಏನು ಅನ್ನೋದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ.ನಮ್ಮ ನಾಯಕರ ಎಲ್ಲ ವಾಹನಗಳನ್ನು ಚೆಕ್ ಮಾಡಲಾಗಿದೆ.ನಮಗೆ ಯಾವುದೇ ಭಯವಿಲ್ಲ. ಆದರೆ ಐಟಿ ರೇಡ್ ಆಗಿದ್ದಕ್ಕೆ ಬಿಜೆಪಿ ನಾಯಕರ ಮೇಲೆ ಇಲ್ಲ ಸಲ್ಲದ ಆರೋಪ ಮಾಡೋದು ಯಾಕೆ ಎಂದು ರಾಣಿಬೆನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ್ ಅವರು ಹೇಳಿದ್ದಾರೆ. 
   

 • Prakash koliwad

  Karnataka Districts4, Dec 2019, 1:00 PM

  ‘ಕೋಳಿವಾಡ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳಿಗೆ ಹಳೆ ಚಪ್ಪಲಿ ಸಿಕ್ಕಿವೆ’

  ಜಿಲ್ಲೆಯ ರಾಣಿಬೆನ್ನೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಅವರ ಮನೆಯ ಮೇಲೆ ದಾಳಿ ಮಾಡಿದ  ಅಬಕಾರಿ, ಐಟಿ ಅಧಿಕಾರಿಗಳಿಗೆ ಎರಡು ಹಳೆ ಚಪ್ಪಲಿ ಸಿಕ್ಕಿವೆ ಎಂದು ಕೆಪಿಸಿಸಿ ಕಾರ್ಯದರ್ಶಿ ಕೆ.ಬಿ.ಕೋಳಿವಾಡ ಪುತ್ರ ಪ್ರಕಾಶ್ ಕೋಳಿವಾಡ ಅವರು ಹೇಳಿದ್ದಾರೆ. 

 • MP Renukacharya

  Karnataka Districts2, Dec 2019, 11:58 AM

  'ಕಾಂಗ್ರೆಸ್ ಒಡೆದ ಮನೆ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ'

   ಉಪಚುನಾವಣೆಗೆ ಕೇವಲ ಮೂರು ದಿನ ಬಾಕಿಯಿದೆ. ನಾವು ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲುವ  ವಿಶ್ವಾಸವಿದೆ. ಇನ್ನು ಕಾಂಗ್ರೆಸ್ ಒಡೆದ ಮನೆಯಾಗಿದೆ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಹಾಗಿದೆ. ಜೆಡಿಎಸ್‌ನವರು ಒಮ್ಮೆ ಸರಕಾರ ಮುಂದುವರೆಯುತ್ತೆ ಅಂತ ಹೇಳುತ್ತಾರೆ. ಒಮ್ಮೆ ಸರಕಾರವನ್ನ ಯಾಕೆ ಕೆಡವಬೇಕು ಅಂದ ಹೇಳಿಕೆ ನೀಡುತ್ತಾರೆ. ಅವರಲ್ಲೇ ಗೊಂದಲವಿದೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.