ರಾಘವೇಂದ್ರ ಮಠ

(Search results - 10)

Mantralaya

Karnataka Districts28, Nov 2020, 11:27 AM

ಮಂತ್ರಾಲಯದ ಮಠದ ಆಸ್ತಿ ಮಾರಾಟಕ್ಕೆ ಆಂಧ್ರ ಸರ್ಕಾರ ನಿರ್ಧಾರ..!

ಮಂತ್ರಾಲಯದ ಮಠದ ಆಸ್ತಿ ಮಾರಾಟಕ್ಕೆ ಆಂಧ್ರಪ್ರದೇಶ ಸರ್ಕಾರ ಪ್ರಕಟಣೆಯೊಂದನ್ನ ಹೊರಡಿಸಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠದ ಇನಾಮು ಭೂಮಿ ಮಾರಾಟ ಮಾರಾಟಕ್ಕಾಗಿ ಪತ್ರಿಕೆಯೊಂದರಲ್ಲಿ ಆಂಧ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ.

Pushkara Mahotsava

Karnataka Districts20, Nov 2020, 12:52 PM

ಮಂತ್ರಾಲಯ: ಪುಷ್ಕರ ಮಹೋತ್ಸವಕ್ಕೆ ಚಾಲನೆ ನೀಡಿದ ಸುಬುಧೇಂದ್ರ ತೀರ್ಥರು

ಮಂತ್ರಾಲಯದಲ್ಲಿ ತುಂಗಭದ್ರಾ ಪುಷ್ಕರ ಮಹೋತ್ಸವಕ್ಕೆ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಇಂದು(ಶುಕ್ರವಾರ) ಚಾಲನೆ ನೀಡಿದ್ದಾರೆ. ಪುಷ್ಕರ ಹಿನ್ನೆಲೆಯಲ್ಲಿ ಮಠದಲ್ಲಿ ಪ್ರಹ್ಲಾದ ರಾಜರ ಉತ್ಸವ, ಕಳಸದ ಮೆರವಣಿಗೆಯನ್ನ ಅದ್ಧೂರಿಯಾಗಿ ನೆರವೇರಿಸಲಾಗಿದೆ ಎಂದು ತಿಳಿದು ಬಂದಿದೆ.

Raghavendra Mutt

Karnataka Districts2, Oct 2020, 3:59 PM

ಮಂತ್ರಾಲಯ: ಬರೋಬ್ಬರಿ 6 ತಿಂಗಳ ಬಳಿಕ ಭಕ್ತರಿಗೆ ರಾಯರ ದರ್ಶನ ಭಾಗ್ಯ..!

ಮಹಾಮಾರಿ ಕೊರೋನಾ ವೈರಸ್‌ ಹಾವಳಿ ಹಿನ್ನೆಲೆಯಲ್ಲಿ ಬರೋಬ್ಬರಿ ಆರು ತಿಂಗಳ ಬಳಿಕ ಸಾರ್ವಜನಿಕರಿಗೆ ರಾಯರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಸಂಬಂಧ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜನರ ಪ್ರವೇಶಕ್ಕೆ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಇಂದು(ಶುಕ್ರವಾರ) ಚಾಲನೆ ನೀಡಿದ್ದಾರೆ.

SP Balasubrahmanyam, Sri Raghavendra Swamy Matha

Karnataka Districts26, Sep 2020, 11:06 AM

ಮಂತ್ರಾಲಯ ಮಠದಿಂದ ಎಸ್‌ಪಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಸಿಕ್ಕಿತ್ತು

ರಾಷ್ಟ್ರ ಪ್ರಶಸ್ತಿ, ರಾಜೋತ್ಸವ ಪ್ರಶಸ್ತಿ ಪಡೆದಿದ್ದ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರು ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪಡೆದಿರುವುದು ಈ ಭಾಗದ ಅಭಿಮಾನಿಗಳ ನೆನ​ಪಿ​ನಂಗ​ಳ​ದಲ್ಲಿ ಉಳಿದಿದೆ.

Udupi

Karnataka Districts3, Sep 2020, 4:39 PM

ಹೊಸಬೆಟ್ಟು ಶ್ರೀ ರಾಘವೇಂದ್ರ ಮಠ ಶ್ರೀ ಪುತ್ತಿಗೆ ಮಠಕ್ಕೆ ಹಸ್ತಾಂತರ

ದಕ್ಷಿಣ ಕನ್ನಡ ಜಿಲ್ಲೆಯ ಹೊಸಬೆಟ್ಟುವಿನ ನವವೃಂದಾವನ ಸೇವಾ ಪ್ರತಿಷ್ಠಾನವು ಆಯೋಜಿಸಿದ ಗುರು ಸಮರ್ಪಣಾ ಸಮಾರಂಭದಲ್ಲಿ, ದಿವಂಗತ ಹರಿದಾಸರತ್ನ ಹೊಸಬೆಟ್ಟು ವಾದೀಶ ಆಚಾರ್ಯರು ಹೊಸಬೆಟ್ಟುನಲ್ಲಿ ಸ್ಥಾಪಿಸಿದ ಶ್ರೀ ರಾಘವೇಂದ್ರ ಮಠವನ್ನು, ಅದರ ಪೂಜಾ ಕೈಂಕರ್ಯಗಳ ಅಧಿಕಾರವನ್ನು ಅವರ ಇಚ್ಛೆಯಂತೆ, ಮಗ ರಾಘವೇಂದ್ರ ಆಚಾರ್ಯ ಅವರು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.

ಮಂತ್ರಾಲಯದಲ್ಲಿ ರಾಯರ 349ನೇ ಆರಾಧನಾ ಮಹೋತ್ಸವದ ಮದ್ಯಾರಾಧನೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ ಬಂದಿದ್ದ ಶೇಷವಸ್ತ್ರವನ್ನು ಪೀಠಾಧಿಪತಿ ಸುಬುಧೇಂದ್ರ ತೀರ್ಥರು ತಲೆಮೇಲೆ ಹೊತ್ತುಕೊಂಡು ರಾಯರಿಗೆ ಸಮರ್ಪಿಸಿದರು.

Karnataka Districts6, Aug 2020, 1:31 PM

ರಾಯ​ಚೂ​ರು: ಮಂತ್ರಾಲಯದಲ್ಲಿ ಗುರುರಾಯರ ಮದ್ಯಾರಾಧನೆಯ ಫೋಟೋಸ್‌

ರಾಯ​ಚೂ​ರು(ಆ.06): ಮಂತ್ರಾ​ಲ​ಯದ ಶ್ರೀರಾ​ಘ​ವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 349ನೇ ಆರಾ​ಧನಾ ಮಹೋ​ತ್ಸ​ವ ಸಪ್ತರಾತ್ರೋತ್ಸವದ ಮದ್ಯಾರಾಧನೆ ದಿನ ತಿರುಮಲ ತಿಮ್ಮಪ್ಪನ ಶೇಷವಸ್ತ್ರ ಸಮರ್ಪಣೆ, ಪ್ರಹ್ಲಾದ ರಾಯರ ಸುವರ್ಣ ರಥೋತ್ಸವ ಸೇರಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಬುಧವಾರ ಜರುಗಿದವು.

• Mantralaya

Karnataka Districts2, Mar 2020, 2:36 PM

ಮಂತ್ರಾಲಯದಲ್ಲಿ ಶ್ರೀಗುರುವೈಭವೋತ್ಸವದ ಕೆಲ ಫೋಟೋಸ್

ರಾಯಚೂರು[ಮಾ.02]: ಮಂತ್ರಾಲಯದಲ್ಲಿ ಶ್ರೀಮಠದ ಪ್ರಾಕಾರದಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆದಿದೆ. ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 425 ನೇ ವರ್ಧಂತೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆದಿದೆ.

• Raichur

Karnataka Districts2, Mar 2020, 2:14 PM

ರಾಯಚೂರು: ಮಂತ್ರಾಲಯದಲ್ಲಿ ರಾಯರ ವರ್ಧಂತೋತ್ಸವದ ಸಂಭ್ರಮ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಗುರುಸಾರ್ವಭೌಮರ 425 ನೇ ವರ್ಧಂತೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ನಡೆದಿದೆ. ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಶ್ರೀಗುರುವೈಭವೋತ್ಸವಕ್ಕೆ ಇಂದು[ಸೋಮವಾರ] ಕೊನೆಯ ದಿನವಾಗಿದೆ.

• Ravi Hegde
Video Icon

NEWS28, Aug 2018, 9:44 AM

ರಾಯರಾಧನೆ ಸಮಾರಂಭದಲ್ಲಿ ರವಿ ಹೆಗಡೆಗೆ ಮಾಧ್ಯಮ ಬಾನು ಪ್ರಶಸ್ತಿ

ಮಂತ್ರಾಲಯದ ರಾಘವೇಂದ್ರ ಮಠದಲ್ಲಿ ಮಧ್ವಾರಾಧನೆ ವೈಭವದಿಂದ ನಡೆಯುತ್ತಿದೆ. ಗುರು ಸಾರ್ವಭೌಮ ರಾಘವೇಂದ್ರ ರಾಯರ ಆರಾಧನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆಯವರಿಗೆ ಮಾಧ್ಯಮ ಬಾನು ಪ್ರಶಸ್ತಿ ನೀಡಿ ಗೌರವಿಸಲಾಯ್ತು.

• undefined
Video Icon

2, Jun 2018, 1:34 PM

ಮಂತ್ರಾಲಯದ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ

ಮಂತ್ರಾಲಯದ ಶ್ರೀ ರಾಘವೇಂದ್ರ ಮಠದಲ್ಲಿ ತಾತ್ಪರ್ಯ ಚಂದ್ರಿಕಾ ಮಹಾಮಂಗಳೋತ್ಸವ ಕಾರ್ಯಕ್ರಮ ನಡೆಯಿತು.  ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇನ್ನೂ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು , ಸೋಸಲೆ ಮಠದ ಶ್ರೀವಿದ್ದಾಧೀಶ ತೀರ್ಥ ಸ್ವಾಮಿಗಳು, ಉಡುಪಿಯ ಶ್ರೀವಿದ್ಯಾಸಾಗರ ಸ್ವಾಮೀಗಳು ಭಾಗಿಯಾಗಿದ್ದಾರೆ.