ರಸ್ತೆ ಹೊಂಡ  

(Search results - 6)
 • Pothole

  Karnataka Districts20, Nov 2019, 8:36 AM IST

  ತಮ್ಮ ಮಕ್ಕಳೊಂದಿಗೆ ರಸ್ತೆ ಗುಂಡಿ ಮುಚ್ಚಿದ ಶಿಕ್ಷಕ ದಂಪತಿ

  ಮಧುಗಿರಿ ತಾಲೂಕಿನ ಶಿಕ್ಷಕರೊಬ್ಬರು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಿದ್ದಾರೆ. ಪತ್ನಿ ಹಾಗೂ ಮಕ್ಕಳೊಂದಿಗೆ ಜಲ್ಲಿ, ಮಣ್ಣು ತೆಗೆದುಕೊಂಡು ರಸ್ತೆಯಲ್ಲಿದ್ದ ಹೊಂಡಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ.

 • Pothole

  Dakshina Kannada3, Nov 2019, 11:22 AM IST

  ಗುದ್ದಲಿ, ಹಾರೆ ಹಿಡಿದು ರಸ್ತೆ ಹೊಂಡ ಮುಚ್ಚಿದ್ದ ಪೊಲೀಸ್ ಸಿಬ್ಬಂದಿ..!

  ಪಾಲಿಕೆಗೆ ಹಲವು ಸಲ ಮನವಿ ಮಾಡಿ ಪ್ರಯೋಜನವಾಗದೆ ಕೊನೆಗ ಪೊಲೀಸರೇ ಗುದ್ದಲಿ ಹಾರೆ ಹಿಡಿದು ಕಲ್ಲು, ಮಣ್ಣು ತಂದು ರಸ್ತೆ ಹೊಂಡ ಸರಿಪಡಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕದ್ರಿಯ ಸಂಚಾರಿ ಪೂರ್ವ ಠಾಣೆಯ ಸಿಬ್ಬಂದಿ ಪುಟ್ಟರಾಮ ಎಂಬವರು ತಾನೇ ಕಲ್ಲು, ಮಣ್ಣು ತಂದು ಹಾಕಿ ಹೊಂಡ ಮುಚ್ಚಿದ್ದಾರೆ.

 • mumbai man fills pothole

  News10, Oct 2019, 11:54 PM IST

  ದಾಂಪತ್ಯಕ್ಕೆ ಕಾಲಿಡಬೇಕಾಗಿದ್ದ ವೈದ್ಯೆ ರಸ್ತೆ ಹೊಂಡಕ್ಕೆ ಬಲಿ!

  ರಸ್ತೆ ಹೊಂಡಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಪಕ್ಕದ ಮಹಾರಾಷ್ಟ್ರದ ಥಾಣೆಯಲ್ಲಿ ರಸ್ತೆ ಹೊಂಡಕ್ಕೆ ವೈದ್ಯೆ ಬಲಿಯಾಗಿದ್ದಾರೆ.

 • Moon walk

  Karnataka Districts26, Sep 2019, 8:29 AM IST

  ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!

  ರಸ್ತೆ ಹೊಂಡಗಳನ್ನು ಮುಚ್ಚಿಸಿ, ದುರಸ್ತಿ ಮಾಡಿ ಅಂದ್ರೆ ಕಿವಿಗೇ ಹಾಕಿಕೊಳ್ಳದ ಅಧಿಕಾರಿಗಳ ವಿರುದ್ಧ ಬಾಲಕಿಯೊಬ್ಬಳು ವಿಶೇಷ ರೀತಿಯಲ್ಲಿ ಪ್ರತಿಭಟಿಸಿದ್ದಾಳೆ. ರಾತ್ರಿ ಹೊತ್ತಲ್ಲಿ ಹೊಂಡ ತುಂಬಿದ ರಸ್ತೆಯಲ್ಲಿ ಓಡಾಡಿದ ಬಾಲಕಿಯ ಫೋಟೋ, ಹಾಗೂ ವಿಡಿಯೋಗಳು ಸದ್ಯ ವೈರಲ್ ಆಗ್ತಾ ಇದೆ. ಅಷ್ಟಲಕ್ಕೂ ಈ ಬಾಲಕಿ ಮಾಡಿದ್ದೇನು ಅಂತ ತಿಳಿಯಲು ಈ ಸುದ್ದಿ ಓದಿ.

 • Potholes

  NEWS25, Sep 2019, 9:03 AM IST

  ರಸ್ತೆ ಹೊಂಡಗಳನ್ನು ಮುಚ್ಚೋಕೆ ಅಡ್ಡಿಯಾಗ್ತಿದೆ ವಾಹನ ದಟ್ಟಣೆ

  ಬೆಂಗಳೂರಿನಲ್ಲಿ ರಸ್ತೆ ಹೊಂಡಗಳನ್ನು ಮುಚ್ಚಲು ವಾಹನ ದಟ್ಟಣೆ ಅಡ್ಡಿಯಾಗ್ತಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ. ರಸ್ತೆ ಗುಂಡಿಗಳನ್ನು ಭರ್ತಿ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿದಂತೆ ನಾಲ್ವರು ಸಲ್ಲಿಸಿರುವ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ.

 • Road

  Karnataka Districts13, Sep 2019, 12:07 PM IST

  ಹುಬ್ಬಳ್ಳಿ: ಹೊಂಡ ಬಿದ್ದ ರಸ್ತೆಯಲ್ಲಿ ಓಡಾಡಿ ಬಸ್‌ಗಳೆಲ್ಲ ಗ್ಯಾರೇಜ್‌ಗೆ, ಜನ ಆಸ್ಪತ್ರೆಗೆ..!

  ಹುಬ್ಬಳ್ಳಿ-ಶಿರಸಿ ರಸ್ತೆ ಮಳೆಯಿಂದಾಗಿ ಸಂಪೂರ್ಣ ಹದೆಗೆಟ್ಟಿದೆ. ಡಾಂಬರು ಕಿತ್ತು ಬಂದು ರಸ್ತೆ ಹೊಂಡಗಳಿಂದಲೇ ತುಂಬಿಹೋಗಿದೆ. ತಡಸದಿಂದ ಮುಂದಿನ 40 ಕಿಮೀ ಸಂಚರಿಸುವುದೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಮಾರ್ಗ ಹದಗೆಟ್ಟಿದೆ. ಪ್ರತಿದಿನ ಸಾವಿರಾರು ಜನ ಸಂಚರಿಸುವ ಈ ಮಾರ್ಗದಲ್ಲಿ ಭಾರಿ ವಾಹನ ಬಿಟ್ಟು, ದ್ವಿಚಕ್ರವಾಹನದಲ್ಲಿ ಸಂಚರಿಸುವುದೂ ಕಷ್ಟ ಎಂಬಂತಾಗಿದೆ.