ಯುವರಾಜ್‌ಕುಮಾರ್  

(Search results - 7)
 • <p>Yuva Rajkumar</p>
  Video Icon

  SandalwoodNov 2, 2020, 4:55 PM IST

  ಕನ್ನಡ ಸಿನಿಮಾರಂಗಕ್ಕೆ ಹೊಸ ಬ್ರ್ಯಾಂಡು- ನ್ಯೂ ಟ್ರೆಂಡು ಕ್ರಿಯೇಟ್ ಮಾಡಿದ ರಾಜ್ ಮೊಮ್ಮಗ!

  ಸ್ಯಾಂಡಲ್‌ವುಡ್ ದಿಗ್ಗಜ ನಟ ರಾಜ್‌ಕುಮಾರ್ ಅವರ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.  ಯುವ ರಣಧೀರ ಕಂಠೀರವ ಟೈಟಲ್‌ ಟೀಸರ್‌ನನ್ನು ನವೆಂಬರ್ 1ರಿಲೀಸ್ ಮಾಡಲಾಗಿತ್ತು. ಹೇಗಿದೆ ಟೀಸರ್ ನೋಡಿ..

 • <p>Yuva Ranadheera Kanteerava</p>

  InterviewsNov 2, 2020, 9:03 AM IST

  ರಾಜ್ಯೋತ್ಸವದಂದೇ ಯುವರಾಜನ ಭರ್ಜರಿ ಎಂಟ್ರಿ; ರಾಘಣ್ಣ ಪುತ್ರನ ಜೊತೆ ಸಂದರ್ಶನ!

  ‘ಯುವ ರಣಧೀರ ಕಂಠೀರವ’ ಇದು ಅಣ್ಣಾವ್ರ ಮೊಮ್ಮಗ, ರಾಘವೇಂದ್ರ ರಾಜಕುಮಾರ್‌ ಮಗ ಯುವ ರಾಜಕುಮಾರ್‌ ಮೊದಲ ಚಿತ್ರದ ಟೈಟಲ್‌. ನ.1ರಂದೇ ಲಾಂಚ್‌ ವಿಡಿಯೋ ಬಿಡುಗಡೆ ಮಾಡಿ ಕನ್ನಡದ ಬಾವುಟ ಹಾರಿಸುವುದರೊಂದಿಗೆ ದೊಡ್ಮನೆಯ ಮೂರನೇ ಕುಡಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದೆ. ಖಡಕ್‌ ಡೈಲಾಗ್‌, ಅದ್ದೂರಿ ಸೆಟ್‌, ಹಿಸ್ಟಾರಿಕಲ್‌ ಬ್ಯಾಗ್ರೌಂಡ್‌ನಲ್ಲಿ ಸಾಗುವ ಈ ಐತಿಹಾಸಿಕ ಚಿತ್ರದ ಬಗ್ಗೆ ಮತ್ತು ತಮ್ಮ ಬೆಳ್ಳಿತೆರೆ ಪ್ರವೇಶದ ಬಗ್ಗೆ ಯುವ ರಾಜಕುಮಾರ್‌ ಇಲ್ಲಿ ಮಾತನಾಡಿದ್ದಾರೆ.

 • YuvaRajkumar
  Video Icon

  SandalwoodDec 12, 2019, 3:33 PM IST

  2020ರಲ್ಲಿ ಬಣ್ಣದ ಲೋಕಕ್ಕೆ ರಾಜ್‌ ಕುಟುಂಬದ ಮತ್ತೊಂದು ಕುಡಿ ಎಂಟ್ರಿ!

  ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ಮಹಾನ್ ಕಲಾವಿದ ಡಾ.ರಾಜ್‌ಕುಮಾರ್. ಅವರು ನಮ್ಮೊಡನೆ ಇಲ್ಲವಾದರೂ ಅವರ ಸಿನಿಮಾಗಳು ಎವರ್ ಗ್ರೀನ್‌ ಆಗಿ ನಮ್ಮೊಂದಿಗಿವೆ. ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಂತರ ರಾಮ್‌ಕುಮಾರ್ ಪುತ್ರ ಧಿರೀನ್ ಮತ್ತು ಪುತ್ರಿ ಧನ್ಯಾ ರಾಮ್‌ ಸಹ ಎಂಟ್ರಿ ಕೊಟ್ಟಾಗಿದೆ. ವಿಭಿನ್ನ ಕಥೆಗಳನ್ನು ಆಯ್ದುಕೊಂಡು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಅದೇ ಸಾಲಿಗೆ ಯುವರಾಜ್‌ಕುಮಾರ್ ಸೇರಿಕೊಳ್ಳುತ್ತಿದ್ದಾರೆ.

  ಹೌದು 2020ರಲ್ಲಿ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಡ್ಯಾನ್ಸ್‌ ಹಾಗೂ ಫೈಟಿಂಗ್‌ ಕಲಿಯುತ್ತಿದ್ದಾರೆ. ಒಟ್ಟಾರೆ ರಾಜ್‌ ಕುಟುಂಬವೇ ಕನ್ನಡ ಚಿತ್ರರಂಗಕ್ಕೆ ಸೇವೆ ಸಲಿಸುತ್ತಿದೆ.

 • Yuvarajkumar

  ENTERTAINMENTAug 17, 2019, 2:58 PM IST

  ಹೊರಗಿನ ಸೆಲೆಬ್ರಿಟಿಗಳು ಎಲ್ಲಿದ್ದೀರಾ?: ರಾಜ್ ಮೊಮ್ಮಗನ ಪೋಸ್ಟ್ ವೈರಲ್

  ನೆರೆ, ಮಳೆಯಿಂದ ಜೀವ ಕಳೆದುಕೊಂಡ ಉತ್ತರ ಕರ್ನಾಟಕದ ಮಂದಿಗೆ ಹಲವರು ವಿಧ ವಿಧವಾಗಿ ಸಹಾಯ ಹಸ್ತ ಚಾಚುತ್ತಿದ್ದಾರೆ. ನಮ್ಮ ಸ್ಯಾಂಡಲ್‌ವುಡ್ ಮಂದಿಯೂ ತಮ್ಮ ಹೃದಯ ವೈಶಾಲ್ಯತೆ ತೋರಿದ್ದಾರೆ. ಈ ಬಗ್ಗೆ ಡಾ.ರಾಜ್ ಮೊಮ್ಮಗ ಮಾಡಿರುವ ಸೋಷಿಯಲ್ ಮೀಡಿಯಾ ಪೋಸ್ಟ್‌ವೊಂದು ವೈರಲ್ ಆಗಿದೆ. ಏನದು? 

 • Yuvaraj Kumar Marriage
  Video Icon

  ENTERTAINMENTMay 26, 2019, 11:28 AM IST

  ದೊಡ್ಮನೆಯಲ್ಲಿ ‘ಯುವರಾಜ’ನ ಮದುವೆ ಸಂಭ್ರಮ

  ಸ್ಯಾಂಡಲ್ ವುಡ್ ನ ದೊಡ್ಮನೆ ಎಂದೇ ಕರೆಯಲ್ಪಡುವ ರಾಜ್ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ರಾಘವೇಂದ್ರ ರಾಜ್ ಕುಮಾರ್ 2 ನೇ ಪುತ್ರ ಯುವರಾಜ್ ಕುಮಾರ್ ಮೈಸೂರು ಮೂಲದ ಶ್ರೀದೇವಿಯನ್ನು ಕೈ ಹಿಡಿಯಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಮದುವೆ ಸಮಾರಂಭ ನಡೆಯುತ್ತಿದೆ. 

 • Vinay Rajkumar

  ENTERTAINMENTMay 6, 2019, 11:08 AM IST

  ರಗಡ್‌ ಬಾಕ್ಸರ್‌ ಆದ ವಿನಯ್‌ ರಾಜ್‌ಕುಮಾರ್!

  ಬೆಂಗಳೂರಿನ ಸದಾಶಿವನಗರದಲ್ಲಿರುವ ಡಾ ರಾಜ್‌ಕುಮಾರ್ ಮನೆಯಲ್ಲಿ ಸಂಭ್ರಮಗಳು ರಂಗೇರಿವೆ. ಒಂದು ಕಡೆ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್‌ಕುಮಾರ್ ಮದುವೆ ಸಂಭ್ರಮ. ಇದೇ ತಿಂಗಳಲ್ಲಿ ಅವರ ಮದುವೆ. ಹೀಗಾಗಿ ಇಡೀ ಚಿತ್ರರಂಗಕ್ಕೆ ಮದುವೆ ಆಹ್ವಾನ ನೀಡಲಾಗುತ್ತಿದೆ.

 • Yuvaraj Kumar
  Video Icon

  SandalwoodJan 14, 2019, 5:04 PM IST

  ಗಂಡುಮೆಟ್ಟಿದ ನಾಡಲ್ಲಿ ಯುವರಾಜ್‌ಕುಮಾರ್ ಸಖತ್ ಸ್ಟೆಪ್: ಜನ ಫುಲ್ ಫಿದಾ!

  ಹುಬ್ಬಳ್ಳಿಯಲ್ಲಿ ನಟ ಸಾರ್ವಭೌಮ ಟೀಸರ್ ಕಾರ್ಯಕ್ರಮದಲ್ಲಿ ಯುವ ರಾಜ್ ಕುಮಾರ್ ಸಕತ್ತಾಗಿ ಸ್ಟೆಪ್ ಹಾಕಿದ್ದಾರೆ. ಪುನೀತ್ ರಾಜ್ ಕುಮಾರ್ ಸಿನಿಮಾ ಹಾಡಿಗೆ ಯುವರಾಜ್ ಕುಮಾರ್ ಹಾಕಿದ ಸ್ಟೆಪ್ಪಿಗೆ ಜನ ಫಿದಾ ಆಗಿ ಹೋಗಿದ್ದಾರೆ. ಇವರೂ ಕೂಡಾ ಸ್ಯಾಂಡಲ್ ವುಡ್ ಗೆ ಬರಲು ಸಿದ್ದರಾಗಿದ್ದಾರೆ. ಆದರೆ ಚಿತ್ರ ಯಾವುದೆಂದು ಇನ್ನೂ ಪಕ್ಕಾ ಆಗಿಲ್ಲ. ಯುವರಾಜ್ ಕುಮಾರ್ ಡ್ಯಾನ್ಸ್ ಇಲ್ಲಿದೆ ನೋಡಿ.