ಯಾದಗಿರಿ  

(Search results - 112)
 • Nalin Kumar Kateel

  Yadgir18, Oct 2019, 11:55 AM IST

  ರಾಜ್ಯದಲ್ಲಿ 36 ಜಿಲ್ಲೆ ಎಂದ ಕಟೀಲ್: ಸಮರ್ಥಿಸಿಕೊಂಡ ಬಿಜೆಪಿ

  ರಾಜ್ಯದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ ಅನ್ನೋದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಗೊಂದಲ ಮೂಡಿದೆಯೇನೋ? ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಕಟೀಲ್‌ ಅವರು, ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡುವಾಗ 32 ಜಿಲ್ಲೆಗಳು ಎಂದಿದ್ದರು. ಇದು ಬೆಳಿಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
   

 • nalin
  Video Icon

  state17, Oct 2019, 3:31 PM IST

  32, 34: ರಾಜ್ಯದ ಜಿಲ್ಲೆಗಳೆಷ್ಟು ತಿಳಿಯದೆ ಒದ್ದಾಡಿದ ಬಿಜೆಪಿ ರಾಜ್ಯಾಧ್ಯಕ್ಷ!

  ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ವಾ?| ಒಮ್ಮೆ 32 ಜಿಲ್ಲೆ ಅಂತಾರೆ.. ಮತ್ತೊಮ್ಮೆ 34 ಜಿಲ್ಲೆ ಅಂತಾರೆ| ರಾಜ್ಯದ 32 ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದೇನೆ| ಯಾದಗಿರಿ ನಗರದ ಸರ್ಕಿಟ್ ಹೌಸ್ ನಲ್ಲಿ ಅಚ್ಚರಿ ಹೇಳಿಕೆ

 • crop loan

  Yadgir16, Oct 2019, 2:47 PM IST

  ಶಹಾಪುರದಲ್ಲಿ ಬಿತ್ತೋಕೆ ಬೀಜ, ರಸಗೊಬ್ಬರ ಸಿಗ್ತಿಲ್ಲ: ಆತಂಕದಲ್ಲಿ ರೈತಾಪಿ ವರ್ಗ

  ಬರ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ರೈತರಿಗೆ ಈ ಬಾರಿ ಮಳೆ ಚೆನ್ನಾಗಿ ಸುರಿದು ಒಂದಷ್ಟು ಸಮಾಧಾನ ಮೂಡಿಸಬಹುದು ಅನ್ನೋ ಹೊತ್ತಿನಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಜೊತೆಗೆ, ಬಿತ್ತನೆ ಮಾಡಿದ್ದ ಬೆಳೆಗಳಿಗೆ ರೋಗಗಳು ತಗುಲಿರುವುದು ತಾಲೂಕಿನ ರೈತಾಪಿ ವರ್ಗಕ್ಕೆಆತಂಕ ಮೂಡಿಸಿದೆ.
   

 • उत्तराखंड में भारी बारिश को लेकर 28 और 29 सितंबर को क्रमशः येलो और ऑरेंज अलर्ट जारी किया गया है। देहरादून, चमोली, पौड़ी, बागेश्वर और पिथौरागढ़ में ऑरेंज अलर्ज जारी किया गया है।

  Dharwad16, Oct 2019, 7:55 AM IST

  ಮಳೆ ನಿಲ್ತಿಲ್ಲ, ಬಿತ್ತನೆ ಆಗ್ತಿಲ್ಲ: ಸಂಕಷ್ಟದಲ್ಲಿ ಅನ್ನದಾತ

  ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಬೀಜಕ್ಕಾಗಿ ನೂಕು ನುಗ್ಗಲಾಗುತ್ತಿದ್ದು ಇದನ್ನು ನಿಯಂತ್ರಿಸಲು ಪೊಲೀಸರು ಕಪಾಳ ಮೋಕ್ಷ ಮಾಡಿದ್ದುಂಟು. ಅಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ಎಷ್ಟೊಂದು ಪರದಾಡುತ್ತಿದ್ದಾರೆ ಎಂಬುದು ಈ ಘಟನೆಯಿಂದಲೇ ಗೊತ್ತಾಗುತ್ತೆ. ಆದರೆ ಧಾರವಾಡ ಜಿಲ್ಲೆಯಲ್ಲಿ ಮಾತ್ರ ಬಿತ್ತನೆ ಬೀಜ ಕೇಳುವವರೇ ಇಲ್ಲದಂತಾಗಿದೆ.

 • Yadgir

  Yadgir11, Oct 2019, 5:32 PM IST

  ಕಾರ್ಯಕ್ರಮ ಕೇಳಿದ್ರೆ ಕೈ ಕಾಲು ಕಡಿಯುತ್ತೇನೆ ಎಂದು ಬಡ ಕಲಾವಿದನಿಗೆ ಅವಾಜ್

  ಸಾಂಸ್ಕೃತಿಕ ಕಾರ್ಯಕ್ರಮ ನೀಡುವಂತೆ ಕೋರಿದ್ದ ಬಡ ಕಲಾವಿದರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೈ ಕಾಲು ಕಡಿಯುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆನ್ನಲಾದ ಆರೋಪದಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಾದಗಿರಿ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಅವರಿಗೆ ಇಲಾಖೆಯ ನಿರ್ದೇಶಕರು ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದಾರೆ.

 • water scarcity chennai

  Yadgir10, Oct 2019, 11:49 AM IST

  ಸುರಪುರದಲ್ಲಿ ಹನಿ ನೀರಿಗೂ ತತ್ವಾರ: ಕಣ್ಮುಚ್ಚಿ ಕುಳಿತ ನಗರಸಭೆ

  ನಗರಸಭೆ ವ್ಯಾಪ್ತಿಗೆ ಒಳಪಡುವ ಹಸನಾಪುರ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಒಂದು ತಿಂಗಳಾದರೂ ಪೂರೈಸಬೇಕೆನ್ನುವ ಮನಸ್ಸು ಸಂಬಂಧಿತರಿಗೆ ಇಲ್ಲದಂತಾಗಿ ಜನರು ಅಧಿ​ಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
   

 • BSY

  Karnataka Districts7, Oct 2019, 12:06 PM IST

  ಸಿಎಂ ಕಾರು ಅಡ್ಡಗಟ್ಟಿ ಪ್ರತಿಭಟನೆ: ಜೆಡಿಎಸ್‌ ಶಾಸಕನ ಪುತ್ರನ ವಿರುದ್ಧ ಎಫ್‌ಐಆರ್‌

  ಯಾದಗಿರಿಗೆ ಶನಿವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಆಗಮಿಸಿದ್ದ ವೇಳೆ ಅವರ ಕಾರು ಅಡ್ಡಗಟ್ಟಿ ಕಪ್ಪುಬಟ್ಟೆ ಪ್ರದರ್ಶಿಸಿದ್ದ ಹಿನ್ನೆಲೆಯಲ್ಲಿ ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರು ಪುತ್ರ, ಜೆಡಿಎಸ್‌ ಯುವ ಮುಖಂಡ ಶರಣಗೌಡ ಕಂದಕೂರು ಸೇರಿ 15ಕ್ಕೂ ಹೆಚ್ಚು ಮಂದಿ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ. 

 • Yadgir

  Karnataka Districts6, Oct 2019, 1:02 PM IST

  'ಪರಿಹಾರ ಕೊಟ್ಟು ಪ್ರತಿಪಕ್ಷಗಳಿಗೆ ತಕ್ಕ ಉತ್ತರ ನೀಡಿದೆ ಕೇಂದ್ರ'

  ನೆರೆ ಪರಿಹಾರ ಕೊಟ್ಟಿಲ್ಲ ಅಂತ ಬೊಬ್ಬೆ ಹೊಡೆಯುತ್ತಿದ್ದ ಪ್ರತಿಪಕ್ಷಗಳಿಗೆ ಕೇಂದ್ರ ಸರ್ಕಾರ 1200 ಕೋಟಿ ರುಪಾಯಿ ತಾತ್ಕಾಲಿಕ ಪರಿಹಾರ ನೀಡುವ ಮೂಲಕ ತಕ್ಕ ಉತ್ತರ ನೀಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
   

 • BSY
  Video Icon

  Karnataka Districts5, Oct 2019, 7:12 PM IST

  ಜಿಲ್ಲಾಧ್ಯಕ್ಷನ ಮನೆಗೆ BSY ಹೋದ್ರೂ ಶಾಸಕರು ಕಾಲಿಡಲಿಲ್ಲ: ಸಿಎಂ ಮುಂದೆಯೇ ಭಿನ್ನಮತ ಸ್ಫೋಟ

  ಯಾದಗಿರಿ, [ಅ.05]: ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅದು ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಮುಂದೆ ಬಟಾಯಲಾಗಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಯಡಿಯೂಪ್ಪ ಹೋದ್ರು, ಆದ್ರೆ ಇಬ್ಬರು ಶಾಸಕರು ಮನೆಯೊಳಗೆ ಹೋಗದೇ ಕಾರಿನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ ಇಲ್ಲಿ ಏನು ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ

 • Karnataka Districts5, Oct 2019, 11:37 AM IST

  'ರಾಯಚೂರು-ಯಾದಗಿರಿ ಜಿಲ್ಲೆಗಳ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ'

  ಹಿಂದುಳಿದ ಜಿಲ್ಲೆಗಳಾದ ರಾಯಚೂರು ಮತ್ತು ಯಾದಗಿರಿಯಲ್ಲಿ ಆಯ್ದ ಐದಾರು ಕ್ಷೇತ್ರಗಳಲ್ಲಿ ಸಮಗ್ರ-ಸುಸ್ಥಿರ ಅಭಿವೃದ್ಧಿ ಕಾಣಲು ಅಗತ್ಯವಾದ ಹಾಗೂ ಬೇಡಿಕೆಗೆ ಅನುಗುಣವಾದ ಯೋಜನೆಗಳನ್ನು ಎಲ್ಲ ರೀತಿಯಿಂದ ಚರ್ಚಿಸಿ ವರದಿ ಸಿದ್ಧಪಡಿಸಿ ನೀಡಬೇಕೆಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ತಿಳಿಸಿದ್ದಾರೆ. 
   

 • Karnataka Districts4, Oct 2019, 2:27 PM IST

  ಅ.5ರಂದು ಯಾದಗಿರಿಯ ನೆರೆ ಪ್ರದೇಶಕ್ಕೆ ಸಿಎಂ ಭೇಟಿ

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅ.5ರಂದು ಮ.2.30ಕ್ಕೆ ಯಾದಗಿರಿ ಜಿಲ್ಲೆಗೆ ಆಗಮಿಸಿ, ಪ್ರವಾಹದಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ತಿಳಿಸಿದ್ದಾರೆ.
   

 • Leak Roof

  Karnataka Districts4, Oct 2019, 1:30 PM IST

  ಸೋರುತ್ತಿದೆ ಗುರುಮಠಕಲ್ ಉಪ ತಹಸೀಲ್ದಾರ್ ಕಚೇರಿ ಮಾಳಿಗೆ!

  ಇಕ್ಕಟ್ಟಿನಲ್ಲಿ ಕಾರ್ಯ, ಶಿಥಿಲಗೊಂಡಿರುವ ಗೋಡೆಗಳು, ಮಳೆ ನೀರಿನಿಂದ ಸೋರುವುದನ್ನು ತಡೆಯಲು ಪ್ಲಾಸ್ಟಿಕ್ ಚೀಲದ ಹೊದಿಕೆಯೊಂದಿಗೆ ಚಾವಣಿಯ ರಕ್ಷಣೆ, ಮುಂತಾದ ದೃಶ್ಯ ಗಳು ಗುರುಮಠಕಲ್ ಪಟ್ಟಣದಲ್ಲಿರುವ ಉಪತಹಸೀಲ್ದಾರ್ ಕಚೇರಿ ಕಟ್ಟಡದಲ್ಲಿ ಕಂಡುಬರುತ್ತವೆ.

 • Raju Gowda

  Karnataka Districts2, Oct 2019, 12:51 PM IST

  ವಿದ್ಯಾರ್ಥಿಗಳ ಸಾಧನೆಯೇ ನನಗೆ ಕಮಿಷನ್‌: ಶಾಸಕ ರಾಜೂಗೌಡ

  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸಿ ಕೊಡುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶೇ. 80 ಹೆಚ್ಚು ಅಂಕ ತೆಗೆದು ತಾಲೂಕು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ ಅದುವೇ ನನ್ನ ಕಮಿಷನ್‌ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು.
   

 • Karnataka Districts29, Sep 2019, 1:03 PM IST

  ಯಾದಗಿರಿಯಲ್ಲಿ ನಿರ್ಮಾಣವಾಗಲಿದೆಯಾ ಮೊಸಳೆ ಪಾರ್ಕ್?

  ಪ್ರತಿ ವರ್ಷ ಮೊಸಳೆಗಳ ದಾಳಿಯಿಂದಾಗಿ ಆತಂಕಕ್ಕೆ ಕಾರಣವಾಗುತ್ತಿದ್ದ ಜಿಲ್ಲೆಯ ಕೃಷ್ಣಾ ಹಾಗೂ ಭೀಮಾ ನದಿ ಪಾತ್ರದ ಜನರ ಜೀವ ರಕ್ಷಣೆಯ ಸಲುವಾಗಿ ಜಿಲ್ಲಾಡಳಿತ ಇದೀಗ ಹೊಸ ಚಿಂತನೆಗೆ ಕೈಹಾಕಿದೆ. ಜನರ ಜೀವಕ್ಕೂ ಕುತ್ತಾಗಬಾರದು, ವನ್ಯಜೀವಿಯ ಸಂತತಿಯೂ ಉಳಿಯಬೇಕು ಎಂಬ ಸದುದ್ದೇಶದಿಂದ ‘ಮೊಸಳೆ ಪಾರ್ಕ್’ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಚಿಂತನೆ ನಡೆಸಿದ್ದು, ಈ ಕುರಿತು ಹೊಸದೊಂದು ರೂಪುರೇಷೆ ತಯಾರಿಸುವಂತೆ ಪರಿಸರ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 

 • Karnataka Districts29, Sep 2019, 11:47 AM IST

  ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ: ಕಂಗಳೇಶ್ವರ ದೇವಾಲಯ ಮುಳುಗಡೆ

  ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಅಲ್ಲಿನ ಉಜನಿ,ವೀರ್ ಜಲಾಶಯಗಳಿಂದ ಭೀಮಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗಿದೆ. ಹೀಗಾಗಿ ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ.