ಯಲ್ಲಾಪುರ  

(Search results - 13)
 • village

  Karnataka Districts5, Sep 2019, 11:02 AM IST

  ತಿಥಿಗೆ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು !

  ರಾಜ್ಯದ ಹಲವು ಜಿಲ್ಲೆಗಳಲ್ಲಿ ಇದೀಗ ಮತ್ತೆ ಭಾರೀ ಮಳೆ ಆರಂಭವಾಗಿದೆ. ಮತ್ತೆ ಅವಾಂತರ ಸೃಷ್ಟಿ ಮಾಡಿದೆ.  ಉತ್ತರ ಕನ್ನಡದ ಯಲ್ಲಾಪುರದಲ್ಲಿಯೂ ಹಳ್ಳ ದಾಟಲಾಗದ ಪುರೋಹಿತರನ್ನು ಬುಟ್ಟಿಯಲ್ಲೇ ಹೊತ್ತು ತಂದರು. 

 • dam

  Karnataka Districts12, Aug 2019, 12:43 PM IST

  ಭಾರೀ ಮಳೆಗೆ ಒಡೆಯಿತು ಡ್ಯಾಂ : ಸಾವಿರಾರು ಎಕರೆ ಜಲಾವೃತ

  ರಾಜ್ಯ ಹಲವು ಜಿಲ್ಲೆಗಳಲ್ಲಿ ಭೀಕರ ಮಳೆ ಭಾರೀ ಅನಾಹುತ ಸೃಷ್ಟಿ ಮಾಡುತ್ತಿದೆ. ಇತ್ತ ಉತ್ತರ ಕನ್ನಡದ ಡ್ಯಾಂ ಒಂದು ಒಡೆದು ಅನಾಹುತ ಸೃಷ್ಟಿಸಿದೆ.

 • Hebbar
  Video Icon

  Karnataka Districts11, Aug 2019, 11:33 PM IST

  ಸರ್ವೀಸ್‌ನಲ್ಲಿ ಎಂತೆಂಥವುಗಳನ್ನು ನೋಡಿದ್ದೇನೆ....ಬೇಡ್ತಿ ಸೇತುವೆ ಮೇಲೆ ಶಿವರಾಮ ಹೆಬ್ಬಾರ್ ಸಾಹಸ

  ಉತ್ತರ ಕ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಮಳೆ ಅಚ್ಚರ ಕಡಿಮೆಯಾಗಿದೆ. ಮಳೆ ಅಬ್ಬರಕ್ಕೆ  ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಯಲ್ಲಾಪುರ ಮತ್ತು ಶಿರಸಿ ಸಂಪರ್ಕ ರಸ್ತೆಯ ಬೇಡ್ತಿ ನದಿಯ ಸೇತುವೆ ಕೊಚ್ಚಿ ಹೋಗಿತ್ತು. ಇದೀಗ ಯಲ್ಲಾಪುರದ ಅನರ್ಹ ಶಾಸಕ ಶಿವರಾಮ ಹೆಬ್ಬಾರ್ ಅದೇ ಸೇತುವೆಯ ಮೇಲೆ ಮಾಡಿರುವ ಪ್ರಯೋಗ ನೊಡಲೇಬೇಕು. ಬಸ್ ಹೋಗುತ್ತದೆಯೋ ಇಲ್ಲವೋ ಎಂಬುದನ್ನು ಸ್ವತಃ ಹೆಬ್ಬಾರ್ ಅವರೇ ಬಸ್ ಮೇಲೆ ಕುಳಿತು ಚಾಲಕನ ಬಳಿ ಹೇಳಿಸಿ ಬಸ್ ಓಡಿಸುವಂತೆ ಮಾಡಿದ್ದಾರೆ.

 • Uttara Kannada
  Video Icon

  Karnataka Districts9, Aug 2019, 10:33 PM IST

  ಮಳೆ ಅಬ್ಬರಕ್ಕೆ ಕೊಚ್ಚಿ ಹೋದ ಬೇಡ್ತಿ ಸೇತುವೆ, ಶಿರಸಿ-ಯಲ್ಲಾಪುರ ಸಂಪರ್ಕ ಬಂದ್

  ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಯಲ್ಲಾಪುರ ಮತ್ತು ಶಿರಸಿ ಸಂಪರ್ಕ ರಸ್ತೆಯ ಬೇಡ್ತಿ ನದಿಯ ಸೇತುವೆ ಕೊಚ್ಚಿ ಹೋಗಿದೆ. ಸೇತುವೆಯ ಮೇಲೆ ನೀರು ಹರಿಯುತ್ತಿದ್ದು ಸಂಚಾರ ಬಂದ್ ಆಗಿದೆ.

 • Siddaramaiah and Yeddyurappa
  Video Icon

  NEWS25, Jul 2019, 12:13 PM IST

  ನಿಮ್ಮ ಲೀಡರ್ ಸಿದ್ದುನಾ? BSYನಾ?: ಸುವರ್ಣ ನ್ಯೂಸ್ ಪ್ರಶ್ನೆ ಕೇಳಿ ಶಾಸಕ ಹೆಬ್ಬಾರ್ ತಬ್ಬಿಬ್ಬು!

  ಮೂರು ವಾರಗಳಿಂದ ಮುಂಬೈನಲ್ಲಿ ಬೀಡು ಬಿಟ್ಟಿದ್ದ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಊರಿಗೆ ಮರಳಿದ್ದಾರೆ. ಹೀಗಿರುವಾಗ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಅವರು ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ನಾವು ಅತೃಪ್ತರಲ್ಲ, ಅಸಹಾಯಕ ಶಾಸಕರು' ಎಂದಿರುವ ಹೆಬ್ಬಾರ್ ಈ ವೇಳೆ ತನ್ನ ನೋವನ್ನೂ ಹಂಚಿಕೊಂಡಿದ್ದಾರೆ. ಇದೇ ನಿಮ್ಮ ನಾಯಕರು ಸಿದ್ದರಾಮಯ್ಯನಾ? ಯಡಿಯೂರಪ್ಪನಾ ಎಂದಾಗ ಮಾತ್ರ ಕೊಂಚ ಗಲಿಬಿಲಿಗೊಂಡ ಶಾಸಕರು ಇಂಟರೆಸ್ಟಿಂಗ್ ಉತ್ತರವನ್ನೇ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ನೀವೇ ನೋಡಿ

 • NEWS25, Jul 2019, 11:42 AM IST

  ಅತೃಪ್ತರ ಗುಂಪು ಬಿಟ್ಟು ಬಂದ ಶಾಸಕನಿಗೆ ಮುಂಬೈನಿಂದ ಬಂತು ಕರೆ

  ಅತೃಪ್ತರ ಗುಂಪು ಬಿಟ್ಟು ವಾಪಸ್ ಆಗಿದ್ದ ಮುಖಂಡಗೆ ಮುಂಬೈನಲ್ಲಿ ಸದ್ಯ ವಾಸ್ತವ್ಯ  ಹೂಡಿರುವ ನಾಯಕರಿಂದ ಕರೆ ಬಂದಿದೆ. ವಾಪಸಾಗುವ ಬಗ್ಗೆ ಸೂಚನೆ ನೀಡಲಾಗಿದೆ.

 • Rain

  Karnataka Districts11, Jul 2019, 10:16 AM IST

  ಉತ್ತರ ಕನ್ನಡದಲ್ಲಿ ಭಾರೀ ಮಳೆ : ಯಲ್ಲಾಪುರ-ಅಂಕೋಲ ಸಂಪರ್ಕ ಕಡಿತ

  ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಉತ್ತರ ಕನ್ನಡದಲ್ಲಿಯೂ ಕೂಡ ವರುಣವ ಅಬ್ಬರ ಜೋರಾಗಿದ್ದು, ಗುಡ್ಡವೊಂದು ಕುಸಿತು ಸಂಚಾರ ಸ್ಥಗಿತವಾಗಿದೆ. 

 • death

  NEWS21, May 2019, 9:46 AM IST

  ರಂಜಾನ್ ಉಪವಾಸ: ಅಪಘಾತವಾದರೂ ನೀರು ಸೇವಿಸದೇ ಸಾವು

  ರೋಜಾ: ಅಪಘಾತವಾದರೂ ನೀರು ಸೇವಿಸದೇ ಸಾವು| ಹಾವೇರಿ ತಾಲೂಕಿನ ತೋಟದ ಯಲ್ಲಾಪುರದ ಬಳಿ ಘಟನೆ

 • marriage

  state28, Jan 2019, 10:55 AM IST

  ರೈತರನ್ನು ಮದುವೆಯಾದರೆ ವಧುವಿಗೆ ಸಿಗುತ್ತೆ 1 ಲಕ್ಷ ರು.!

  ಉತ್ತರ ಕನ್ನಡದ ಯಲ್ಲಾಪುರ ತಾಲೂಕಿನ ಆನಗೋಡ ಸೇವಾ ಸಹಕಾರಿ ಸಂಘ ಕೃಷಿಕರನ್ನು ಕೈ ಹಿಡಿಯುವ ಯುವತಿಯ ಹೆಸರಿನಲ್ಲಿ .1 ಲಕ್ಷ ಠೇವಣಿ ಇಡುವ ವಿನೂತನ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. 

 • Driver

  state29, Dec 2018, 8:47 PM IST

  ಲಾರಿ ಡ್ರೈವರ್ ರೂಪದ ದೇವರನ್ನೊಮ್ಮೆ ನೋಡಿ: ಪ್ರಯಾಣಿಕರ ಜೀವ ಉಳಿಸಿದ್ಹೇಗೆ?

  ಬಸ್ ಚಾಲಕನ ಸಮಯ ಪ್ರಜ್ಞೆ ಹಾಗೂ ಲಾರಿ ಚಾಲಕನ ಚಾಣಾಕ್ಷತೆಯಿಂದ 70 ಕ್ಕೂ ಅಧಿಕ ಪ್ರಯಾಣಿಕರ ಜೀವ ಉಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ  ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟ ಪ್ರದೇಶದ ಇಳಿಜಾರಿನಲ್ಲಿ ನಡೆದಿದೆ.

 • Uttara Kannada28, Sep 2018, 10:01 PM IST

  ದೇಶಪಾಂಡೆಯೇ ದೇವರು, ಆಶೀರ್ವಾದವೇ ಮಂತ್ರಿಗಿರಿ!

  ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎಂಬ ಮಾತು ಕೇಳಿಬಂದಿದ್ದ ಶಾಸಕರೊಬ್ಬರು ಈಗ ಕಾಂಗ್ರೆಸ್ ನ ಹಿರಿಯ ಸಚಿವರೊಬ್ಬರ ಆಶೀರ್ವಾದ ಬೇಕು ಎಂದಿದ್ದಾರೆ. ಇವರ ಮಾತಿನ ಹಿಂದಿನ ಮರ್ಮ ಮಾತ್ರಬಲ್ಲವರು ಯಾರೂ ಇಲ್ಲ.

 • Video Icon

  NEWS17, Sep 2018, 5:08 PM IST

  ಕೈಬಿಡಲ್ಲ, ಕಮಲ ಹಿಡಿಯಲ್ಲ: ಶಾಸಕ ಹೆಬ್ಬಾರ್ ಖಡಕ್ ನುಡಿ

  ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರುತ್ತಾರೆ ಎಂದು ಹೇಳಲಾಗುತ್ತಿದ್ದ ಯಲ್ಲಾಪುರ ಕಾಂಗ್ರೆಸ್ ಶಾಸಕ ಆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಹೆಬ್ಬಾರ್,  ಕಾಂಗ್ರೆಸ್ ತೊರೆಯುವ ಪ್ರಶ್ನೆಯಿಲ್ಲ, ಆಪರೇಷನ್‌ಗೊಳಗಾಗಲ್ಲವೆಂದು ಹೇಳಿದ್ದಾರೆ.  

 • Uttara Kannada8, Aug 2018, 6:07 PM IST

  ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು

  ಮದುವೆಯಾದರೂ ಹೆಂಡತಿ ಜತೆಗೆ ಇರುತ್ತಾಳೆ ಎಂಬ ಭರವಸೆ ಇಲ್ಲದ ಕಾಲ ನಿರ್ಮಾಣವಾಗಿದೆ. ಅದು ನೋಂದಣಿ ಮಾಡಿಸಿಕೊಂಡಿದ್ದರೂ ಹೆಂಡತಿ ಇನ್ನೊಬ್ಬನ ಜತೆ ಹೋಗಬಹುದು ಎಂಬುದಕ್ಕೆ ಕಾರವಾರದ ಈ ಘಟನೆ ಸಾಕ್ಷಿಯಾಗಿದೆ.

   

  ಕಾರವಾರ[ಆ.8]  ಪ್ರೇಮ ವಿವಾಹವಾಗಿ ನೋಂದಣಿಯಾಗಿದ್ದ ಹುಡುಗಿಗೆ ಮತ್ತೊಮ್ಮೆ ವಿವಾಹ ಮಾಡಿ ನೋಂದಣಿ ಮಾಡಿದ ಘಟನೆ ಬೆಳಕಿಗೆ ಬಂದಿದೆ.

  ವಧು ಒಬ್ಬಳೇ ಆಗಿದ್ದು, ವರ ಬೇರೆ ಬೇರೆಯಾಗಿದ್ದಾರೆ. ನ್ಯಾಯ ಒದಗಿಸುವಂತೆ ಮೊದಲ ಪತಿ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರ ತಾಲೂಕಿನ ದೇಹಳ್ಳಿಯ ಗಣಪತಿ ಭಟ್ ಅದೇ ತಾಲೂಕಿನ ಕಂಪ್ಲಿಯ ಆಶಾ ಹೆಗಡೆ ಅವರನ್ನು 2014ರ ಫೆ. 7ರಂದು ಕಾರವಾರದ ಉಪನೋಂದಣಾಧಿಕಾರಿ ಕಾರ್ಯಾಲಯದಲ್ಲಿ ವಿವಾಹ ಆಗಿದ್ದರು. ನಂತರ ಆಶಾ ಅವರ ಪಾಲಕರ ಒಪ್ಪಿಗೆ
  ಪಡೆದು ವಿವಾಹವಾಗುವ ಉದ್ದೇಶದಿಂದ ಅವರನ್ನು ತಾಯಿ ಮನೆಗೆ ಬಿಟ್ಟು ಬಂದಿದ್ದರು.

  ಆಶಾ ಮನೆಯಲ್ಲಿ ಮಳೆಗಾಲದ ನಂತರ ವಿವಾಹ ಮಾಡಿಕೊಡುವುದಾಗಿ ತಿಳಿಸಿದ್ದರು. ಗಣಪತಿ ಭಟ್ ಬೆಂಗಳೂರಿನಲ್ಲಿ  ವೈದಿಕರಾಗಿದ್ದು, ಆಗಾಗ ಕರೆ ಮಾಡಿ ಆಶಾ ಅವರ ಬಳಿ ಮಾತನಾಡುತ್ತಿದ್ದರು. ಆಶಾ ಅವರ ತಾಯಿ ಮಮತಾ ಹೆಗಡೆ ದಿನ
  ಕಳೆದಂತೆ ಅವರ ಕರೆ ಬಂದರೆ ಮಗಳಿಗೆ ನೀಡುತ್ತಿರಲಿಲ್ಲ. ಹೊರಗಡೆ ತೆರಳಿದ್ದಾಳೆ ಎಂದು ಸಬೂಬು ಹೇಳುತ್ತಿದ್ದರು.

  ಬೆಂಗಳೂರಿನಿಂದ ಯಲ್ಲಾಪುರಕ್ಕೆ ವಾಪಸ್ ಬಂದು ಆಶಾಳ ತವರು ಮನೆಗೆ ಹೋದರೆ ನೀನು ಬರಬೇಡ. ಅವಳನ್ನು ಮರೆತು ಬಿಡು.
  ಪದೇ ಪದೇ ಬಂದರೆ ಪೊಲೀಸ್ ದೂರು ನೀಡುತ್ತೇವೆ ಎಂದು ಮಮತಾ ಗಣಪತಿಯವರಿಗೆ ಬೆದರಿಕೆ ಹಾಕಿದ್ದರು.

  ಎರಡು ಕಡೆ ನೋಂದಣಿ: ಆಶಾ ಹಾಗೂ ಗಣಪತಿ ಅವರದ್ದು ಪ್ರೇಮವಿವಾಹ ಆದ್ದರಿಂದ 2014ರ ಫೆ.7ರಂದು ಕಾರವಾರದಲ್ಲಿ ನೋಂದಣಿ ಮಾಡಿಸಿದ್ದರು. ಇದಾದ ಬಳಿಕ ಆಶಾ ತಾಯಿ ಮಮತಾ ರಾಜೇಶ ಎಂಬವರ ಜತೆ ಆಶಾರನ್ನು ಮತ್ತೆ ವಿವಾಹ ಮಾಡಿಸಿದ್ದಾರೆ. ಅಲ್ಲದೇ ಯಲ್ಲಾಪುರ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ 2018ರ ಜು. 31 ರಂದು ಮತ್ತೆ ನೋಂದಣಿ ಮಾಡಿದ್ದರು.

  ಗಣಪತಿಯವರಿಗೆ ಆಶಾ ದೂರದ ಸಂಬಂಧಿ. ಸಮಾರಂಭಗಳಲ್ಲಿ ಭೇಟಿಯಾಗಿ ಮಾತನಾಡಿದ್ದು, ಪ್ರೇಮಾಂಕುರವಾಗಿತ್ತು.
  ಪರಸ್ಪರ ಪ್ರೇಮ ನಿವೇದನೆ ಬಳಿಕ ವಿವಾಹ ಮಾಡಿಕೊಂಡಿದ್ದರು. ಪಾಲಕರನ್ನು ಒಪ್ಪಿಸಿ ವಿವಾಹವಾಗಲು ಸಿದಟಛಿತೆ ನಡೆದಿತ್ತು.
  ಆದರೆ ಆಶಾ ತಾಯಿ ಬೇರೊಬ್ಬರ ಜತೆ ವಿವಾಹ ಮಾಡಿಸಿದ್ದಾರೆ.

   

   

  ಅಚ್ಚರಿಯ ಸಂಗತಿ
  ಒಂದು ಹುಡುಗಿಗೆ 2ಕಡೆ ನೋಂದಣಿಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ. ಎರಡೂ ಕಡೆಗಳಲ್ಲೂ ಹುಡುಗಿಯ ಹೆಸರನ್ನು ಆಶಾ ಧನಂಜಯ ಹೆಗಡೆ ಎಂದೇ ನಮೂದಿಸಲಾಗಿದೆ. ಹೀಗಿದ್ದಾಗ್ಯೂ ನೋಂದಣಾಧಿಕಾರಿ ಕಾರ್ಯಾಲಯದಲ್ಲಿ ಈ ಬಗ್ಗೆ
  ಪರಿಶೀಲಿಸದಿರುವುದು ಅಥವಾ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಆಶ್ಚರ್ಯದ ಸಂಗತಿ.

  ಪೊಲೀಸರ ಮೊರೆ
  ಮೊದಲು ವಿವಾಹವಾಗಿದ್ದ ಗಣಪತಿ ಭಟ್ ಅವರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠ ವಿನಾಯಕ ಪಾಟೀಲ್ ಅವರಿಗೆ ದೂರು ನೀಡಿ ತಮ್ಮ ವಿವಾಹದ ನೋಂದಣಿ ಪತ್ರಗಳನ್ನು ನೀಡಿ ನ್ಯಾಯ ದೊರಕಿಸುವಂತೆ ಕೇಳಿಕೊಂಡರು.

   

   

  ಮದುವೆಯಾದರೂ ಹೆಂಡತಿ ಜತೆಗೆ ಇರುತ್ತಾಳೆ ಎಂಬ ಭರವಸೆ ಇಲ್ಲದ ಕಾಲ ನಿರ್ಮಾಣವಾಗಿದೆ. ಅದು ನೋಂದಣಿ ಮಾಡಿಸಿಕೊಂಡಿದ್ದರೂ ಹೆಂಡತಿ ಇನ್ನೊಬ್ಬನ ಜತೆ ಹೋಗಬಹುದು ಎಂಬುದಕ್ಕೆ ಕಾರವಾರದ ಈ ಘಟನೆ ಸಾಕ್ಷಿಯಾಗಿದೆ.

  ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು

  Woman marries two men in Karwar

  ತವರು ಮನೆಯಲ್ಲಿ ಜಾಸ್ತಿ ದಿನ ಹೆಂಡತಿ ಬಿಟ್ರೆ ವಿವಾಹವೇ ರದ್ದು