ಮೋದಿ ಸರ್ಕಾರ  

(Search results - 296)
 • Kashmiri Apple

  NEWS17, Sep 2019, 9:45 AM IST

  Fact Check: ಕಾಶ್ಮೀರಿಗಳಿಗೆ ಸೇರಿದ ಆ್ಯಪಲ್‌ ಮರಗಳನ್ನು ಕಡಿದು ಹಾಕಿತಾ ಕೇಂದ್ರ ಸರ್ಕಾರ?

  ಆ್ಯಪಲ್‌ ಮರಗಳನ್ನು ಕಡಿದು ಹಾಕುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿ, ‘ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್‌ 370ಯನ್ನು ಭಾರತ ಸರ್ಕಾರ ರದ್ದು ಮಾಡಿದ ಬಳಿಕ ಮೋದಿ ಸರ್ಕಾರ ದೌರ್ಜನ್ಯ ಮಾಡಲು ಆರಂಭಿಸಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • modi new

  NEWS14, Sep 2019, 12:46 PM IST

  ಹೊಸ ಸಂಸತ್ತು, ಹೊಸ ರಾಜಪಥ: ಮೋದಿ ಸರ್ಕಾರದ ಪ್ಲಾನ್‌ ಏನು? ಈಗ ಹೇಗಿದೆ?

  ದೇಶದ ರಾಜಕೀಯ ಶಕ್ತಿಕೇಂದ್ರವಾಗಿರುವ ಸಂಸತ್‌ ಕಟ್ಟಡವನ್ನು ನವೀಕರಣಗೊಳಿಸುವ ಅಥವಾ ಹೊಸದೊಂದು ಸಂಸತ್‌ ಭವನ ನಿರ್ಮಿಸುವ ಬೃಹತ್‌ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಕೇವಲ ಸಂಸತ್‌ ಭವನ ಮಾತ್ರವಲ್ಲದೆ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಸುಮಾರು 3 ಕಿ.ಮೀ ಮಾರ್ಗವನ್ನು ಸುಂದರವಾಗಿ ಅಭಿವೃದ್ಧಿಪಡಿಸಲು ಕೇಂದ್ರ ನಿರ್ಧರಿಸಿದೆ. ಆದರೆ ಈಗಿರುವ ಸಂಸತ್‌ ಕಟ್ಟಡ ಜಗತ್ತಿನ ಸುಂದರ ಸಂಸತ್ತುಗಳಲ್ಲಿ ಒಂದು. ಹಾಗಿದ್ದೂ ಹೊಸತು ಏಕೆ, ಹೊಸ ರಾಜಕೀಯ ಶಕ್ತಿಕೇಂದ್ರ ಹೇಗಿರಲಿದೆ, ಇವುಗಳ ವಿನ್ಯಾಸಕಾರರು ಯಾರು? ಎಂಬ ವಿವರ ಇಲ್ಲಿದೆ.

 • NEWS7, Sep 2019, 1:09 PM IST

  ಮೋದಿ ಸರ್ಕಾರಕ್ಕೆ 100 ದಿನಗಳು; ಸಾಧನೆಯನ್ನು ನುಂಗುತ್ತಾ ಆರ್ಥಿಕ ಹಿಂಜರಿಕೆ ಮಸಿ?

  ಎರಡನೇ ಬಾರಿಗೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸರ್ಕಾರವೊಂದು ಮೊದಲ ನೂರು ದಿನಗಳಲ್ಲಿ ಏನು ಮಾಡಿದೆ ಮತ್ತು ಈ ಅವಧಿಯಲ್ಲಿ ಸರ್ಕಾರದ ಮಟ್ಟದಲ್ಲಿ ಏನೇನು ಬೆಳವಣಿಗೆಗಳಾಗಿವೆ ಎಂಬುದು ಭವಿಷ್ಯದ ನಾಲ್ಕೂಮುಕ್ಕಾಲು ವರ್ಷದ ಆಡಳಿತದ ದಿಕ್ಸೂಚಿಯಾಗುತ್ತದೆ. ಮೋದಿ ಸರ್ಕಾರದ ನೂರು ದಿನಗಳ ಮುಖ್ಯ ಬೆಳವಣಿಗೆಗಳು ಇಲ್ಲಿವೆ.

 • 2018tcs

  BUSINESS4, Sep 2019, 5:24 PM IST

  ಆರ್ಥಿಕತೆ ನಿಜಕ್ಕೂ ಕುಸಿಯುತ್ತಿದೆಯಾ?: ಭರವಸೆಯ ಬೆಳಕೊಂದು ಕಾಣುತ್ತಿದೆಯಾ?

  ಬೇಡಿಕೆ ಕುಸಿತ, ಉತ್ಪಾದನೆ ಕುಂಠಿತ, ಉದ್ಯೋಗ ಕಡಿತ, ಜಿಡಿಪಿ ಪ್ರಪಾತ ಎಂಬ ಸುದ್ದಿಗಳು ಪ್ರತಿನಿತ್ಯ ಕೇಳಿ ಬರುತ್ತಿವೆ. ಭಾರತದ ಆರ್ಥಿಕತೆ ಹಿಂಜರಿತದ ಹಾದಿಯಲ್ಲಿದೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ ಎಂಬ ವಿಶ್ಲೇಷಣೆಗಳು ಇವೆ.

 • shiv sena manmohan singh

  BUSINESS4, Sep 2019, 3:53 PM IST

  ಸಿಂಗ್ ಮಾತು ಕೇಳಿ: ಮೋದಿಗೆ ಅಡ್ವೈಸ್ ಮಾಡೋದು ಶಿವಸೇನೆ ಚಾಳಿ!

  ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದ್ದು, ಈ ಕುರಿತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೀಡಿರುವ ಸಲಹೆಗಳನ್ನು ಸ್ವೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮಿತ್ರಪಕ್ಷ ಶಿವಸೇನೆ ಸಲಹೆ ನೀಡಿದೆ. ಅರ್ಥ ವ್ಯವಸ್ಥೆ ಸುಧಾರಣೆಗೆ ಸಿಂಗ್ ಸಲಹೆಗಳು ಅಮೂಲ್ಯಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

 • NEWS3, Sep 2019, 5:11 PM IST

  100ರ ಹೊಸ್ತಿಲಲ್ಲಿ ಮೋದಿ ಸರ್ಕಾರ: ಯಾರು, ಯಾವ ಸಾಧನೆಗೆ ಸರದಾರ?

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರ್ಕಾರ ಇದೀಗ 100 ದಿನಗಳ ಹೊಸ್ತಿಲಲ್ಲಿದೆ. ಈ ನೂರು ದಿನಗಳಲ್ಲಿ ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಳಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಜನತೆಗೆ ತನ್ನ ನೂರು ದಿನಗಳ ಸಾಧನೆಯನ್ನು ತಿಳಿಸಲು ಮೋದಿ ಸರ್ಕಾರ ಸಜ್ಜಾಗಿದೆ.

 • modi down

  BUSINESS3, Sep 2019, 2:34 PM IST

  ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!

  ಆರ್ಥಿಕ ಕುಸಿತದಿಂದಾಗಿ ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ 8 ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ಕೇಂದ್ರದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ.

 • 7- भारी हथियारों के साथ भी 20 हजार फीट की ऊंचाई तक उड़ान भर सकता है।

  NEWS3, Sep 2019, 1:03 PM IST

  ವಾಯುಸೇನೆಗೆ ಹೆಲಿಕಾಪ್ಟರ್ ಅಪಾಚೆ: ಕೆಣಕಿದರೆ ಆಕಾಶದಲ್ಲೇ ಅಪ್ಪಚ್ಚಿ!

  ಭಾರತದ ಸೇನಾ ಶಕ್ತಿಯನ್ನು ವೃದ್ಧಿಸುವ ಮೋದಿ ಸರ್ಕಾರದ ಬದ್ಧತೆಗೆ ಮತ್ತಷ್ಟು ಮೆರುಗು ಬಂದಿದ್ದು, ಅಮೆರಿಕದ 8 ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳು ಇಂದು ಭಾರತೀಯ ವಾಯುಸೇನೆಯ ಬತ್ತಳಿಕೆ ಸೇರಿವೆ. ಪಂಜಾಬ್‌ನ ಪಠಾಣ್'ಕೋಟ್ ವಾಯುನೆಲೆಯಲ್ಲಿ ಅಪಾಚೆ ಯುದ್ಧ ಹೆಲಿಕಾಪ್ಟರ್'ಗಳನ್ನು ಅಧಿಕೃತವಾಗಿ ವಾಯುಸೇನೆಗೆ ಹಸ್ತಾಂತರಿಸಲಾಯಿತು.

 • BUSINESS1, Sep 2019, 5:18 PM IST

  ಖಾಲಿ ಖಾಲಿ ಭಾನುವಾರ: ಮೋದಿ ವಿರುದ್ಧ ಸಿಂಗ್ ದಶಾವತಾರ!

  ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಕೆಟ್ಟ ನಿರ್ವಹಣೆಯೇ ಕಾರಣ ಎಂದು ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. 

 • 31 top 10 stories

  NEWS31, Aug 2019, 5:14 PM IST

  ಕರ್ನಾಟಕಕ್ಕೆ ಹೊಸ ಸಿಎಂ, ಮೋದಿಗೆ ಸ್ವಾಮಿ ಶಾಕ್; ಇಲ್ಲಿವೆ ಆ.31ರ ಟಾಪ್ 10 ಸುದ್ದಿ!

  ಕರ್ನಾಟಕದಲ್ಲಿ ಮೂವರು ಡಿಸಿಎಂ ಮಾಡಿರುವುದೇ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ಬೆನ್ನಲ್ಲೇ ಹೊಸ ಮುಖ್ಯಮಂತ್ರಿ ಕೂಗು ಕೂಡ ಕೇಳಿ ಬರುತ್ತಿದೆ. ಕೇಂದ್ರದಲ್ಲಿ ಮೋದಿ ಸರ್ಕಾರದ ಆರ್ಥಿಕ ಹಿನ್ನಡೆಯನ್ನು ತಮ್ಮದೇ ಪಕ್ಷದ ಸುಬ್ರಮಣಿಯನ್ ಸ್ವಾಮಿ ಕಾಲೆಳೆದಿದ್ದಾರೆ. ರಾಜಕೀಯ ಬದಗಿಟ್ಟರೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ತೆರೆಗೆ ಅಪ್ಪಳಿಸೋ ಮೊದಲೇ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 31 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • jobs

  Central Govt Jobs28, Aug 2019, 8:16 PM IST

  50 ಸಾವಿರ ಉದ್ಯೋಗ ಸೃಷ್ಟಿ: ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

  ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಮಹತ್ವದ ಹೆಜ್ಜೆಯನ್ನಟ್ಟಿರುವ ಕೇಂದ್ರ ಸರ್ಕಾರ ಇದೀಗ ಕಣಿವೆ ರಾಜ್ಯದ ಯುವಕರಿಗೆ 50 ಸಾವಿರ ಉದ್ಯೋಗ ಕಲ್ಪಿಸುವ ಘೋಷಣೆ ಮಾಡಿದೆ. 

 • SPG

  NEWS27, Aug 2019, 9:58 AM IST

  ಮಾಜಿ ಪ್ರಧಾನಿ ಡಾ. ಸಿಂಗ್‌ ಎಸ್‌ಪಿಜಿ ಭದ್ರತೆ ವಾಪಸ್‌!

  ಮಾಜಿ ಪ್ರಧಾನಿ ಡಾ. ಸಿಂಗ್‌ ಎಸ್‌ಪಿಜಿ ಭದ್ರತೆ ವಾಪಸ್‌| ಕೇಂದ್ರ ಗೃಹ ಸಚಿವಾಲಯದಿಂದ ಈ ಆದೇಶ ಪ್ರಕಟ| ಮೋದಿ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್‌ ಆಕ್ರೋಶ

 • NEWS25, Aug 2019, 6:22 PM IST

  ಹಕ್ಕು ಕಸಿಯುವುದು ದೇಶದ್ರೋಹಿ ಕೃತ್ಯಕ್ಕಿಂತ ಹೀನ: ಪ್ರಿಯಾಂಕಾ!

  ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಶ್ಮೀರಿಗಳ ಪ್ರಜಾಪ್ರಭುತ್ವ ಹಕ್ಕು ಕಿತ್ತುಕೊಳ್ಳುವುದು ದೇಶ ವಿರೋಧಿ ಕೃತ್ಯಕ್ಕಿಂತ ಹೀನ ಕೃತ್ಯ ಎಂದು ಕಿಡಿಕಾರಿದ್ದಾರೆ.

 • Rahul Gandhi

  NEWS25, Aug 2019, 2:16 PM IST

  ಎಲ್ಲಾ ಸರಿ ಇದ್ಮೇಲೆ ಒಳಗೆ ಬಿಡ್ಲಿಲ್ಲ ಏಕೆ?: ರಾಹುಲ್ ಗಾಂಧಿ ಪ್ರಶ್ನೆ!

  ನಿನ್ನೆ(ಆ.24) ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ತೆರಳಿದ್ದ ಪ್ರತಿಪಕ್ಷದ ನಿಯೋಗವನ್ನು ತಡೆದ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ರಾಹುಲ್ ಗಾಂಧಿ, ಕಣಿವೆಯಲ್ಲಿ ಎಲ್ಲವೂ ಸರಿ ಇದೆ ಎಂದು ಪ್ರತಿಪಾದಿಸುತ್ತಿರುವ ಸರ್ಕಾರ, ಪ್ರತಿಪಕ್ಷದ ನಿಯೋಗವನ್ನು ತಡೆದಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. 

 • Arun Jaitley

  NEWS24, Aug 2019, 1:19 PM IST

  ಟ್ರಬಲ್ ಶೂಟರ್‌ನ್ನು ಕಳೆದುಕೊಂಡ ಮೋದಿ ಸರ್ಕಾರ!

  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದಿಂದ ಬದುಕಿನ ಪಯಣ ಅಂತ್ಯಗೊಳಿಸಿದ್ದಾರೆ. ಜೇಟ್ಲಿ ನಿಧನ ಇದೀಗ ಬಿಜೆಪಿ ಪಾಳಯಕ್ಕೆ ಆಘಾತ ನೀಡಿದೆ. ಸಮಸ್ಯೆಗೆ ಪರಿಹಾರ, ಹಾಗೂ ದೂರದೃಷ್ಟಿ ಆಲೋಚನೆ ಹೊಂದಿದ್ದ ಜೇಟ್ಲಿ, ಮೋದಿ ಸರ್ಕಾರದ ಬೆನ್ನೆಲುಬಾಗಿದ್ದರು. ಇದೀಗ ಸುಷ್ಮಾ ಸ್ವರಾಜ್ ಬೆನ್ನಲ್ಲೇ ಬೇಟ್ಲಿ ನಿಧನ ವಾರ್ತೆ ಬಿಜೆಪಿಯನ್ನು ಶೋಕಸಾಗರದಲ್ಲಿ ಮುಳುಗಿಸಿದೆ.