ಮೊದಲ ಟೆಸ್ಟ್
(Search results - 124)CricketJan 26, 2021, 12:03 PM IST
ಇಂಡೋ-ಆಂಗ್ಲ ಮೊದಲ ಟೆಸ್ಟ್ ಮುನ್ನ ಇಂಗ್ಲೆಂಡ್ 3 ದಿನ ಅಭ್ಯಾಸ
ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಬುಧವಾರ ಚೆನ್ನೈಗೆ ಆಗಮಿಸಲಿದ್ದು, ಹೋಟೆಲ್ನಲ್ಲಿ ಕ್ವಾರಂಟೈನ್ಗೆ ಒಳಗಾಗಲಿದೆ. 6 ದಿನಗಳಲ್ಲಿ ಎಲ್ಲ ಆಟಗಾರರು, ಸಿಬ್ಬಂದಿಯನ್ನು 3 ಬಾರಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ.
CricketJan 18, 2021, 2:19 PM IST
ಮೊದಲ ಟೆಸ್ಟ್: ಲಂಕಾ ಎದುರು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್
ಎರಡನೇ ಇನಿಂಗ್ಸ್ನಲ್ಲಿ ಶ್ರೀಲಂಕಾ ತಂಡವು 359 ರನ್ ಬಾರಿಸುವ ಮೂಲಕ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಕೇವಲ 74 ರನ್ಗಳ ಗುರಿ ನೀಡಿತ್ತು. ಆರಂಭದಲ್ಲೇ ನಾಟಕೀಯವಾಗಿ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 38 ರನ್ ಬಾರಿಸಿತ್ತು. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್ಗೆ ಗೆಲ್ಲಲು ಕೇವಲ 36 ರನ್ಗಳ ಅಗತ್ಯವಿತ್ತು.
CricketDec 28, 2020, 3:50 PM IST
ಬಾಕ್ಸಿಂಗ್ ಡೇ ಟೆಸ್ಟ್; 3ನೇ ದಿನ ಭಾರತದ ಬಿಗಿ ಹಿಡಿತ, ಸಂಕಷ್ಟದಲ್ಲಿ ಆಸೀಸ್ ಪಡೆ!
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ 2ನೇ ಪಂದ್ಯದಲ್ಲಿ ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಟೀಂ ಇಂಡಿಯಾ ಪಂದ್ಯದ ಮೇಲಿನ ಹಿಡಿತ ಬಿಗಿಗೊಳಿಸಿದೆ. 3ನೇ ದಿನದಾಟದ ಹೈಲೈಟ್ಸ್ ಇಲ್ಲಿದೆ.
CricketDec 17, 2020, 5:36 PM IST
ಭಾರತಕ್ಕೆ ಮುಳುವಾಯ್ತು ಕೊಹ್ಲಿ ರನೌಟ್; ಆಡಿಲೇಡ್ ಟೆಸ್ಟ್ ಮೊದಲ ದಿನ ಆಸೀಸ್ ಪ್ರಾಬಲ್ಯ!
ಬಹುನಿರೀಕ್ಷಿತ ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ನ ಮೊದಲ ದಿನ ಉಭಯ ತಂಡಗಳು ಪ್ರಬಲ ಹೋರಾಟ ನಡೆಸಿದೆ. ದಿಟ್ಟ ಹೋರಾಟ ನೀಡಿದರೂ ಭಾರತ ವಿಕೆಟ್ ಉಳಿಸಿಕೊಳ್ಳವಲ್ಲಿ ಯಶಸ್ವಿಯಾಗಿಲ್ಲ. ಇತ್ತ ಆಸೀಸ್ ಅಂದಕೊಂಡಂತೆ ಆಗದಿದ್ದರೂ, ಪ್ರಾಬಲ್ಯ ಮೆರೆಯುವಲ್ಲಿ ಯಶಸ್ವಿಯಾಗಿದೆ.
CricketDec 16, 2020, 2:16 PM IST
ಭಾರತ-ಆಸ್ಟ್ರೇಲಿಯಾ 1ನೇ ಟೆಸ್ಟ್: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ನಾಯಕ ಕೊಹ್ಲಿ!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ(ಡಿ.17ರಿಂದ ಆರಂಭಗೊಳ್ಳುತ್ತಿದೆ. ಆಡಿಲೇಡ್ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಹೊಸ ಸಂಪ್ರದಾಯದಂತೆ ಒಂದು ದಿನ ಮೊದಲೇ ಆಡೋ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.
CricketDec 13, 2020, 3:55 PM IST
ಪಿಂಕ್ ಬಾಲ್ ಟೆಸ್ಟ್ಗೆ ಆಸೀಸ್ ತಂಡ ಕೂಡಿಕೊಂಡ ಮಾರಕ ವೇಗಿ..!
ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಗಾಯದ ಸಮಸ್ಯೆ ಹಾಗೂ ವೈಯುಕ್ತಿಕ ಕಾರಣಗಳಿಂದ ಭಾರತ ವಿರುದ್ದದ ಕೊನೆಯ ಏಕದಿನ ಹಾಗೂ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಪಿಂಕ್ ಬಾಲ್ ಟೆಸ್ಟ್ಗೆ ತಾವು ಲಭ್ಯವಿರುವುದಾಗಿ ಮಿಚೆಲ್ ಸ್ಟಾರ್ಕ್ ತಿಳಿಸಿದ್ದಾರೆಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
CricketDec 13, 2020, 9:46 AM IST
ಮೊದಲ ಟೆಸ್ಟ್: ಆಸೀಸ್ಗೆ ಆರಂಭಿಕರ ಕೊರತೆ..!
ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಡೇವಿಡ್ ವಾರ್ನರ್ ಹಾಗೂ ಪಿಂಕ್ ಬಾಲ್ ಅಭ್ಯಾಸ ಪಂದ್ಯದ ವೇಳೆ ತಲೆಗೆ ಪೆಟ್ಟು ತಿಂದ ವಿಲ್ ಪುಕೊವಿಸ್ಕಿ ಈಗಾಗಲೇ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ. ಇನ್ನು ಜೋ ಬರ್ನ್ಸ್ ಲಯದಲ್ಲಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ಅವರ ಆಟ ಸಮಾಧಾನಕರವಾಗಿಲ್ಲ.
CricketDec 9, 2020, 11:36 AM IST
ಇಂಡೋ-ಆಸೀಸ್ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಿಂದ ಸ್ಟಾರ್ ಬ್ಯಾಟ್ಸ್ಮನ್ ಔಟ್..!
ಎರಡನೇ ಏಕದಿನ ಪಂದ್ಯದ ವೇಳೆ ಕ್ಷೇತ್ರರಕ್ಷಣೆ ಮಾಡುವಾಗ ವಾರ್ನರ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ತಂಡ ಕೊನೆಯ ಏಕದಿನ ಪಂದ್ಯ ಹಾಗೂ 2 ಪಂದ್ಯಗಳಲ್ಲಿ ಸೋಲಿನ ಕಹಿಯುಂಡಿತ್ತು. ಆಸ್ಟ್ರೇಲಿಯಾ ಏಕದಿನ ಸರಣಿ ಗೆಲುವಿನಲ್ಲಿ ಡೇವಿಡ್ ವಾರ್ನರ್ ಮಹತ್ವದ ಪಾತ್ರ ನಿಭಾಯಿಸಿದ್ದರು.
CricketDec 8, 2020, 1:04 PM IST
ಟೆಸ್ಟ್ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಎದುರಾಯ್ತು ಮತ್ತೊಂದು ಸಂಕಷ್ಟ..!
ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಹಗಲು-ರಾತ್ರಿಯ ಟೆಸ್ಟ್ ಪಂದ್ಯ ಇದಾಗಿರಲಿದೆ. ಭಾರತದ ಸ್ಟಾರ್ ಆಲ್ರೌಂಡರ್ ಆಗಿರುವ ಸೌರಾಷ್ಟ್ರ ಮೂಲದ ರವೀಂದ್ರ ಜಡೇಜಾ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
CricketDec 8, 2020, 11:52 AM IST
ಟೆಸ್ಟ್ ರ್ಯಾಂಕಿಂಗ್: ವಿರಾಟ್ ಕೊಹ್ಲಿ ಜತೆ ಜಂಟಿ 2ನೇ ಸ್ಥಾನ ಹಂಚಿಕೊಂಡ ವಿಲಿಯಮ್ಸನ್
ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪ್ರಕಟಿಸಿದ್ದು, ವಿಂಡೀಸ್ ಎದುರು ಆಕರ್ಷಕ 251 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ 886 ರೇಟಿಂಗ್ ಅಂಕಗಳೊಂದಿಗೆ ಕೊಹ್ಲಿ ಜತೆ ಎರಡನೇ ಸ್ಥಾನಕ್ಕೇರಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಾ ತಮ್ಮ ಖಾತೆಯಲ್ಲಿ 886 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ.
CricketDec 7, 2020, 10:17 AM IST
ನ್ಯೂಜಿಲೆಂಡ್ಗೆ ಇನ್ನಿಂಗ್ಸ್ ಹಾಗೂ 134 ರನ್ಗಳ ಭರ್ಜರಿ ಜಯ
2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ ನ್ಯೂಜಿಲೆಂಡ್, ತವರಿನಲ್ಲಿ ವಿಂಡೀಸ್ ಹಾಗೂ ಪಾಕಿಸ್ತಾನ ವಿರುದ್ಧ ನಡೆಯಲಿರುವ ಒಟ್ಟು 4 ಪಂದ್ಯಗಳನ್ನು ಜಯಿಸಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಗುರಿ ಹೊಂದಿದೆ.
CricketAug 13, 2020, 4:09 PM IST
2ನೇ ಟೆಸ್ಟ್: ಟಾಸ್ ಗೆದ್ದ ಪಾಕಿಸ್ತಾನಕ್ಕೆ ಆ್ಯಂಡರ್ಸನ್ ಮೊದಲ ಶಾಕ್..!
ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಇಲ್ಲಿನ ದ ರೋಸ್ ಬೌಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಡುವಲ್ಲಿ ಆಂಗ್ಲರ ಪಡೆಯ ಅನುಭವಿ ವೇಗಿ ಆ್ಯಂಡರ್ಸನ್ ಯಶಸ್ವಿಯಾಗಿದ್ದಾರೆ.
CricketAug 7, 2020, 6:10 PM IST
ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕನೀಗ ಕೈಯಲ್ಲಿ ಶೂ ಹಿಡಿದು ವಾಟರ್ ಮ್ಯಾನ್..!
2017ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಲಿಷ್ಠ ಭಾರತ ತಂಡವನ್ನು ಮಣಿಸಿ ಪಾಕಿಸ್ತಾನ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮಿನಿ ವಿಶ್ವಕಪ್ ಎಂದೇ ಕರೆಯಲ್ಪಡುವ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಪಾಕ್ ನಾಯಕರಾಗಿದ್ದ ಸರ್ಫರಾಜ್ ಅಹಮ್ಮದ್ ಯಶಸ್ವಿಯಾಗಿದ್ದರು.
CricketAug 6, 2020, 8:41 AM IST
ಮೊದಲ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಪಾಕ್ಗೆ ಉತ್ತಮ ಆರಂಭ
ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ದಿನದ ಚಹಾ ವಿರಾಮಕ್ಕೆ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿತ್ತು. ಬಾಬರ್ ಅರ್ಧಶತಕ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಬಳಿಕ ಕೆಲಕಾಲ ವರುಣ ಪಂದ್ಯಕ್ಕೆ ಅಡ್ಡಿಪಡಿಸಿತು. ಅಂತಿಮವಾಗಿ 49 ಓವರ್ಗಳಷ್ಟೇ ಪಂದ್ಯ ನಡೆಯಲು ಸಾಧ್ಯವಾಯಿತು. ಮೊದಲ ದಿನದಾಟದಂತ್ಯದ ವೇಳೆಗೆ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 139 ರನ್ ಬಾರಿಸಿದೆ.
CricketJul 30, 2020, 8:27 AM IST
ಪಾಕ್ ವಿರುದ್ಧದ ಮೊದಲ ಟೆಸ್ಟ್ಗೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ
ವಿಂಡೀಸ್ ವಿರುದ್ಧ ಆಡಿದ ಎಲ್ಲಾ ಆರು ವೇಗದ ಬೌಲರ್ಗಳನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಇನ್ನು ತಂಡದಲ್ಲಿರುವ ಏಕೈಕ ಸ್ಪಿನ್ನರ್ ಡಾಮ್ ಬ್ಲಿಸ್ ಕೂಡಾ ತಮ್ಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ಜನ ಕಾಯ್ದಿರಿಸಿದ ಆಟಗಾರರ ಪೈಕಿ ಜಾಕ್ ಲೀಜ್ ಕೂಡಾ ಒಬ್ಬರೆನಿಸಿದ್ದಾರೆ.