ಮೈಸೂರು ದಸರಾ 2019  

(Search results - 11)
 • v somanna

  Karnataka Districts8, Oct 2019, 8:43 PM IST

  ದಸರಾದಲ್ಲಿ ಈ ಸ್ತಬ್ಧಚಿತ್ರ ಸಾಗುವಾಗ ಸೋಮಣ್ಣ ನಿಂತು ನಮಿಸುತ್ತಲೇ ಇದ್ದರು

  ದಸರಾ ಸಂದರ್ಭದಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನ ಸಾಮಾನ್ಯ. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರ ಹೊತ್ತ ಯಾತ್ರೆ ಸಾಗುವಾಗ ವಸತಿ ಸಚಿವ ವಿ. ಸೋಮಣ್ಣ ಕೈ ಮುಗಿದು ನಮಿಸುತ್ತಾ ನಿಂತಿದ್ದರು.

 • Mysuru Dasara 2019
  Video Icon

  Karnataka Districts8, Oct 2019, 6:53 PM IST

  ಜಂಬೂ ಸವಾರಿ ಪಾಸ್ ಬೇಕಾ? ದಸರಾ ಸಂಭ್ರಮದ ಮಧ್ಯೆ ಕಿರಾತಕರ ದಂಧೆ

  ಜಂಬೂ ಸವಾರಿಗೆ ಪಾಸ್ ಬೇಕಾ?  ಪಾಸ್? .. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಜಯದಶಮಿ ಜಂಬೂಸವಾರಿ ಸಂಭ್ರಮ. ಆದರೆ ಇದೇ ಸಂಭ್ರಮವನ್ನು ಕೆಲ ಕಿಡಿಗೇಡಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳಲು ಮುಂದಾದ ವಿಚಾರ ಇವತ್ತು ಬಹಿರಂಗವಾಯ್ತು.

  ಪಾಸ್ ಬೇಕಾ.. ಜಂಬೂ ಸವಾರಿ ಪಾಸ್ ಬೇಕಾ? ಎಂದು ಕೆಲವರು ದಂಧೆಗೆ ಇಳಿದಿದ್ದರು. ಪೊಲೀಸರಿಗೆ ಇದರ ಬಗ್ಗೆ ಮಾಹಿತಿ ಇತ್ತೋ ಇಲ್ಲವೋ ಎನ್ನುವುದು ಗೊತ್ತಿಲ್ಲ.

 • Nivedita Chandan
  Video Icon

  News5, Oct 2019, 1:01 PM IST

  ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ಮನರಂಜಿಸುವ ಉದ್ದೇಶಕ್ಕಾಗಿ?

  ಯುವ ದಸರಾ ವೇದಿಕೆ ಮೇಲೆ ಗೆಳತಿ ನಿವೇದಿತಾಗೆ ಪ್ರಪೋಸ್ ಮಾಡಿ, ವಿವಾದ ಮೈಮೇಲೆ ಎಳೆದುಕೊಂಡಿರುವ ಚಂದನ್ ಶೆಟ್ಟಿ ಕೊನೆಗೂ ಕ್ಷಮೆ ಯಾಚಿಸಿದರು. ಸುವರ್ಣನ್ಯೂಸ್ ಜೊತೆ ಮಾತನಾಡಿದ ಚಂದನ್-ನಿವೇದಿತಾ ಜೋಡಿ, ಸರ್ಕಾರಿ ವೇದಿಕೆಯಲ್ಲಿ ಪ್ರಪೋಸ್ ಮಾಡಬಾರದು ಎಂದು ಗೊತ್ತಿರಲಿಲ್ಲ, ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದರು.

  ಶುಕ್ರವಾರ ರಾತ್ರಿ ನಡೆದ ಯುವ ದಸರಾ ಕಾರ್ಯಕ್ರಮದಲ್ಲಿ, ಬಿಗ್‌ಬಾಸ್ ಗೆಳತಿ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ಅವರಿಬ್ಬರ ಈ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.  

 • undefined
  Video Icon

  Karnataka Districts1, Oct 2019, 8:56 PM IST

  ಯುವ ದಸರಾದಲ್ಲಿ ಸಿಂಧು ಮಾತಿನ ಮೋಡಿ; ಕನ್ನಡದಲ್ಲಿ ಬ್ಯಾಡ್ಮಿಂಟನ್ ತಾರೆ ಏನಂದ್ರು ನೋಡಿ

  ಮೈಸೂರಿನಲ್ಲಿ ಯುವ ದಸರಾ ಇಂದಿನಿಂದ ಆರಂಭವಾಗಿದ್ದು, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರರು ಭಾಗವಹಿಸಿದರು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನ್ನು ಆರಂಭಿಸಿದ ಸಿಂಧು, ಮೈಸೂರು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬನ್ನಿ ಅವರು ಏನಂದ್ರು ನೋಡೋಣ...

 • Yaduveer Wadiyar
  Video Icon

  Karnataka Districts29, Sep 2019, 7:18 PM IST

  Video:ಮೈಸೂರು ದಸರಾದಲ್ಲಿ ಖಾಸಗಿ ದರ್ಬಾರ್ ಹೇಗೆ ನಡೆಯುತ್ತೆ? ಸುವರ್ಣ ನ್ಯೂಸ್‌ನಲ್ಲಿ ಕಣ್ತುಂಬಿಕೊಳ್ಳಿ

  ಸಾಂಸ್ಕೃತಿ ನಗರಿ ಮೈಸೂರಿನಲ್ಲಿ ದಸರಾ ವಿಶ್ವ ವಿಖ್ಯಾತ ದಸರಾ ಮಹೋತ್ಸವ ಕಳೆಗಟ್ಟಿದ್ದು, ಇಂದು [ಭಾನುವಾರ] ಸಾಹಿತಿ ಎಸ್.ಎಲ್. ಭೈರಪ್ಪ ಚಾಲನೆ ನೀಡಿದರು. ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ನಾಡಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಇದರೊಂದಿಗೆ ವಿವಿಧ ಕಾರ್ಯಕ್ರಮಗಳು ಆರಂಭವಾಗಿವೆ. ಇನ್ನು ಇಂದಿನಿಂದ ಖಾಸಗಿ ದರ್ಬಾರ್ ಆರಂಭವಾಗಿದೆ. ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್  ಸಾಂಪ್ರದಾಯ ಬದ್ಧವಾಗಿ ನೆರವೇರಿದೆ. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ಆರಂಭಿಸಿದ್ದು, ಸಿಂಹಾಸನಾರೋಹಣ ಮಾಡಿದ್ದಾರೆ. ಖಾಸಗಿ ದರ್ಬಾರ್ ಹೇಗೆ ನಡೆಯುತ್ತೆ ಎನ್ನುವುದು ನೇರವಾಗಿ ನೋಡ್ಲಿಲ್ಲ ಅಂದ್ರೆ ಏನಂತೆ ಸುವರ್ಣನ್ಯೂಸ್ ನಲ್ಲಿ ಕಣ್ತುಂಬಿಕೊಳ್ಳಿ....

 • mysore dasara
  Video Icon

  NEWS19, Sep 2019, 6:55 PM IST

  ದಸರಾಗೆ ರೆಡಿ ಅರ್ಜುನ & ಟೀಂ; ಗಜಪಡೆ ನಡೆಸಿತು ಭರ್ಜರಿ ತಾಲೀಮ್

  ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆ ಹಿನ್ನೆಲೆಯಲ್ಲಿ ಗಜ ಪಡೆ ಅಂತಿಮ ಹಂತದ ತಾಲೀಮು ನಡೆಸುತ್ತಿದೆ. ಅರಮನೆ ಆವರಣದಿಂದ ಹೊರಟ ಕ್ಯಾಪ್ಟನ್ ಅರ್ಜುನ ಬನ್ನಿ ಮಂಟಪದವರಗೆ ಗಜ ಗಾಂಭೀರ್ಯದ ಹೆಜ್ಜೆ ಹಾಕಿದ್ದಾನೆ. 

 • Mysuru

  NEWS22, Aug 2019, 5:45 PM IST

  ದಸರಾ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನ ನೇಮಿಸಿದ ಸರ್ಕಾರ

  ನೂತನ ಸಚಿವ ವಿ. ಸೋಮಣ್ಣ ಅವರನ್ನು  ಮೖಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

 • ashok
  Video Icon

  NEWS22, Aug 2019, 4:18 PM IST

  ದಸರಾ ಗಜಪಯಣದಲ್ಲಿ ಬಿಜೆಪಿ ಭಿನ್ನಮತ ಸ್ಫೋಟ; ಎರೆಡೆರಡು ಬಾರಿ ಪೂಜೆ!

  ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲಿ ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತದ ಬೆಂಕಿ ಹೊಗೆಯಾಡುತ್ತಿದೆ. ಅದಕ್ಕೆ ಪೂರಕವೆಂಬಂತೆ, ಮೈಸೂರಿನಲ್ಲಿ ನಡೆದ ದಸರಾ ಗಜಪಯಣ ಸಂದರ್ಭದಲ್ಲಿ ಬೇರೆ ಬೇರೆ ನಾಯಕರಿಂದ ಎರಡೆರಡು ಬಾರಿ ಪೂಜೆ ಸಲ್ಲಿಸಲಾಗಿದೆ.

 • mysore dasara

  Karnataka Districts16, Aug 2019, 8:16 PM IST

  ದ್ರೋಣನಿಲ್ಲದ ಕೊರಗು, ಮೈಸೂರು ದಸರಾದಲ್ಲಿ ಹೆಜ್ಜೆ ಹಾಕಲಿವೆ ಈ 14 ಆನೆಗಳು

  ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ  ಗಜಪಡೆ ಲಿಸ್ಟ್ ಫೈನಲ್ ಆಗಿದೆ.  ಈ ಬಾರಿ ದಸರಾದಲ್ಲಿ 14 ಆನೆಗಳು ಭಾಗಿಯಾಗಲಿವೆ, ಸುವರ್ಣ ನ್ಯೂಸ್‌ ಬಳಿ ದಸರಾ ಗಜಪಡೆಯ ಲಿಸ್ಟ್ ಇದೆ.  ಹಾಗಾದರೆ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುವ ಆನೆಗಳು ಯಾವವು?

 • Dasara
  Video Icon

  NEWS14, Aug 2019, 9:58 PM IST

  ಸಂತೋಷ ಮತ್ತು ಧನ್ಯವಾದ, ದಸರಾ ಉದ್ಘಾಟನೆಗೆ ಎಸ್.ಎಲ್.ಭೈರಪ್ಪ ಸಮ್ಮತಿ

  ಸೆಪ್ಟೆಂಬರ್ 28 ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲಿದೆ. ಈ ಬಾರಿಯ ನಾಡಹಬ್ಬಕ್ಕೆ ಖ್ಯಾತ ಸಾಹಿತಿ, ಲೇಖಕ, ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್‌.ಎಲ್. ಭೈರಪ್ಪ ಚಾಲನೆ ನೀಡಲಿದ್ದಾರೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಭೆ ಉದ್ಘಾಟಕರಾಗಿ ಭೈರಪ್ಪ ಅವರಿಗೆ ಆಹ್ವಾನ ನೀಡಲು ತೀರ್ಮಾನ ಮಾಡಿದೆ. ಆಹ್ವಾನದ ಬಗ್ಗೆ ಭೈರಪ್ಪ ಪ್ರತಿಕ್ರಿಯೆ ನೀಡಿದ್ದು ಧನ್ಯವಾದ ಹೇಳಿದ್ದಾರೆ.

 • mysore dasara s l bhyrappa

  NEWS14, Aug 2019, 6:32 PM IST

  ಅಧಿಕೃತ ಆಹ್ವಾನ, ದಸರಾಕ್ಕೆ ಚಾಲನೆ ನೀಡಲಿದ್ದಾರೆ ಎಸ್‌.ಎಲ್. ಭೈರಪ್ಪ

  ಈ ಬಾರಿಯ ನಾಡಹಬ್ಬ ದಸರಾ ಉದ್ಘಾಟನೆಗೆ ಖ್ಯಾತ ಸಾಹಿತಿ, ಲೇಖಕ, ಕಾದಂಬರಿಕಾರ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್‌.ಎಲ್. ಭೈರಪ್ಪ ಅವರಿಗೆ ಆಹ್ವಾನ ನೀಡಲು ಸರ್ಕಾರ ತೀರ್ಮಾನ ಮಾಡಿದೆ.