Search results - 255 Results
 • NEWS17, Nov 2018, 4:11 PM IST

  ಸಿದ್ದರಾಮಯ್ಯ ರಣತಂತ್ರಕ್ಕೆ ಶಿರಬಾಗಿದ ದೇವೇಗೌಡ..!

  ಎಲ್ಲ ಹೈಕಮಾಂಡ್ ನಂತೆ ನಡೆಯುತ್ತದೆ, ಮೈಸೂರಲ್ಲಿ ನಮ್ಮದೇನೂ ನಡೆಯುವುದಿಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹಿರಿಯ ಮೈತ್ರಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

 • Siddaramaiah

  Mysore17, Nov 2018, 8:21 AM IST

  ಸಿದ್ದು ಕೃಪೆ: ಮೈಸೂರಿಗೆ ಕಾಂಗ್ರೆಸ್‌ ಮೇಯರ್‌?

  ನಿರೀಕ್ಷೆಯಂತೆ ಮೇಯರ್‌ ಸ್ಥಾನವನ್ನು ಜೆಡಿಎಸ್‌ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಯರ್‌ ಚುನಾವಣೆಗೆ ಸಂಬಂಧಿಸಿ ತಲೆ ಹಾಕುವುದಿಲ್ಲ ಎಂದು ಬಾಯ್ಮಾತಿನಲ್ಲಿ ಹೇಳಿದ್ದರೂ ಸ್ಥಳೀಯ ನಾಯಕರನ್ನು ಬದಿಗಿಟ್ಟು ನೇರವಾಗಿ ಜೆಡಿಎಸ್‌ ವರಿಷ್ಠರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸಿದ್ದಾರೆ.

 • NEWS16, Nov 2018, 5:35 PM IST

  ಮೈಸೂರಿನಲ್ಲಿ ಆಪರೇಷನ್ ಭೀತಿ; ಯಾರು ಯಾರ ‘ಟಾರ್ಗೆಟ್’?

  ಮೈಸೂರು ಪಾಲಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಪಾಲಿಕೆ ಮೇಯರ್ ಸ್ಥಾನಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಟ್ಟುಹಿಡಿದಿವೆ. ಈ ನಡುವೆ ಬಿಜೆಪಿಯು ಕೂಡಾ ಮೇಯರ್ ಸ್ಥಾನವನ್ನು ಬಾಚಿಕೊಳ್ಳಲು ಕಸರತ್ತು ನಡೆಸಿದೆ. ಆಪರೇಷನ್ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಜೆಡಿಸ್ ಸದಸ್ಯರು ರೆಸಾರ್ಟ್ ಮೊರೆ  ಹೋಗಿದ್ದಾರೆ. 

 • Mysore16, Nov 2018, 4:50 PM IST

  ಮೈತ್ರಿ ವಿಧಾನಸೌಧದಲ್ಲಿ, ಮೈಸೂರಿನಲ್ಲಿ ಕಮಲವೇ ಎಲ್ಲಾ? ಸಾ.ರಾ. ಮಹೇಶ್ ಹೇಳಿದ್ದೇನು?

  ಮೈಸೂರು ಮಹಾನಗರ ಪಾಲಿಕೆ ಇದೀಗ ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಪಾಲಿಕೆ ಚುಕ್ಕಾಣಿ ಹಿಡಿಯುವ ವಿಚಾರವಾಗಿ ಮೈತ್ರಿ ಪಕ್ಷಗಳೇ ತೊಡೆ ತಟ್ಟಲು ಆರಂಭಿಸಿವೆ. ಮೇಯರ್ ಕಾಂಗ್ರೆಸ್ ಪಾಲಾಗಬೇಕೆಂದು ಸಿದ್ದರಾಮಯ್ಯ ಲೆಕ್ಕಾಚಾರವಾದರೆ, ಸಾ.ರಾ. ಮಹೇಶ್ ರಾಜಕೀಯ ಸಮೀಕರಣವೇ ಬೇರೆ. ಸಿದ್ದರಾಮಯ್ಯಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸಾ.ರಾ. ಮಹೇಶ್ ಹೇಳಿಕೆ ನೀಡಿದ್ದಾರೆ.  

 • Mysore16, Nov 2018, 4:27 PM IST

  ಜೆಡಿಎಸ್‌ಗೆ ಸೆಡ್ಡು ಹೊಡೆದು ಮೈಸೂರು ಪಾಲಿಕೆ ಚುಕ್ಕಾಣಿ; ಸಿದ್ದು ಮಾಸ್ಟರ್ ಪ್ಲ್ಯಾನ್!

  ಮೈಸೂರು ಪಾಲಿಕೆಯ ಚುಕ್ಕಾಣಿ ಹಿಡಿಯಲು ಮೈತ್ರಿ ಪಕ್ಷಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆ.  ಮೈಸೂರು ಪಾಲಿಕೆ ಮೇಯರ್ ಹುದ್ದೆ ಹೇಗಾದರೂ ಮಾಡಿ ತಾವು ಉಳಿಸಿಕೊಳ್ಳಬೇಕೆಂದು ಜೆಡಿಎಸ್ ಲೆಕ್ಕಾಚಾರವಾದರೆ, ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಳ್ಳಬೇಕೆಂದು ಸಿದ್ದರಾಮಯ್ಯ ಆಲೋಚನೆ. ಪಾಲಿಕೆ ಅಧಿಕಾರ ಪಡೆಯಲು ಸಿದ್ದರಾಮಯ್ಯ ಹೆಣೆದಿರುವ ರಣತಂತ್ರ ಏನು? ಇಲ್ಲಿದೆ ಫುಲ್ ಡೀಟೆಲ್ಸ್...     

 • state16, Nov 2018, 8:08 AM IST

  ಮೆಜೆಸ್ಟಿಕ್‌ನಿಂದ ಮೈಸೂರು ಕಡೆಗೆ ಪ್ರಯಾಣಿಸುವವರಿಗೆ ಗುಡ್ ನ್ಯೂಸ್

  ಬೆಂಗಳೂರಿನ ಮೆಜೆಸ್ಟಿಕ್ ನಿಂದ ಮೈಸೂರಿಗೆ ಪ್ರಯಾಣಿಸುವವರಿಗೆ ಇದೀಗ ಗುಡ್ ನ್ಯೂಸ್ ಒಂದು ಇಲ್ಲಿದೆ. ಇನ್ನುಮುಂದೆ ಲಕ್ಷುರಿ ಬಸ್ ಗಳು ಮೆಜೆಸ್ಟಿಕ್ ನಿಂದಲೇ ಮೈಸೂರಿಗೆ ಪ್ರಯಾಣಿಸಲಿವೆ. 

 • Badukalu Kaliyiri

  NEWS15, Nov 2018, 10:41 PM IST

  'ಬದುಕಲು ಕಲಿಸಿದ' ಕನ್ನಡದ ದೇವದೂತ ಇನ್ನಿಲ್ಲ

  ಅದೊಂದು ಚಿಕ್ಕ ಪುಸ್ತಕ.. ಅಲ್ಲಿ ಯಾವ ಮಾಹಿತಿ ಇಲ್ಲ ಎನ್ನುವುದೇ ಇಲ್ಲ. ಅದು ಪಡೆದುಕೊಂಡ ಜನಪ್ರಿಯತೆ ಅಂತಿಂಥದ್ದಲ್ಲ.. ಅದು ಭಾಷಾಂತರಗೊಂಡ ಭಾಷೆಗಳೆ ಬರೋಬ್ಬರಿ 9. ಕನ್ನಡದ ಪುಸ್ತಕವೊಂದು ಈ ಮಟ್ಟಿನ ಜನಪ್ರಿಯತೆಗೆ ಗುರಿಯಾಗಿದೆ ಎಂದರೆ ನಿಜಕ್ಕೂ ನಾವೆಲ್ಲರೂ ಹೆಮ್ಮೆ ಪಡಲೇಬೇಕು.. ಅಂಥ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದ ಜಗದಾತ್ಮಾನಂದ ಸ್ವಾಮೀಜಿ ಜ್ಞಾನದ ಭಂಡಾರವನ್ನು ಬಿಟ್ಟು ನಮ್ಮನ್ನು ಅಗಲಿದ್ದಾರೆ.

 • Siddaramaiah

  NEWS15, Nov 2018, 6:52 PM IST

  ಮೈಸೂರಿನಲ್ಲಿ ಹೊಸ ದಾಳ ಉರುಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..!

  ಪಾಲಿಕೆಯಲ್ಲಿ ತಮ್ಮ ಸ್ಥಾನಗಳನ್ನ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೊಸ ದಾಳ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

 • NEWS14, Nov 2018, 7:21 PM IST

  ಟಿಪ್ಪುವಿನ ಮೇಲೆ ಮೈಸೂರು ರಾಜಮಾತೆ ಮಾಡಿದ ಗಂಭೀರ ಆರೋಪವೇನು?

  ಟಿಪ್ಪುವಿನಿಂದ ನಮ್ಮ ಕುಟುಂಬಕ್ಕೆ ದೊಡ್ಡ ಹಾನಿಯಾಗಿದೆ, ನಮ್ಮ ಕುಟುಂಬ, ಪರಿವಾರಕ್ಕೆ ಟಿಪ್ಪು ಸುಲ್ತಾನ್ ಸಾಕಷ್ಟು ತೊಂದರೆ ನೀಡಿದ್ದ ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹೇಳಿದ್ದು ಯಾವ ಆಧಾರದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ ಎಂದಿದ್ದಾರೆ. ಸರ್ಕಾರ ಏಕೆ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ, ಇದರ ಹಿಂದಿನ ಉದ್ದೇಶವೇನೆಂದು ನಮಗೆ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.

 • Pratap Simha

  NEWS12, Nov 2018, 9:59 AM IST

  ಹಿರಿಯಣ್ಣನಂತಿದ್ದ ಅನಂತ್ ನೆನೆದು ಗದ್ಗದಿತರಾದ ಪ್ರತಾಪ್ ಸಿಂಹ

  ಕೇಂದ್ರ ಸಚಿವ ಅನಂತಕುಮಾರ್​ ನಿಧನಕ್ಕೆ ಮೈಸುರು ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸಿದ್ದು, ಮಾತನಾಡುವ ವೇಳೆ ಗದ್ಗದಿತರಾಗಿ ಕಣ್ಣೀರಿಟ್ಟರು.

 • Prathap Simha and HD Kumaraswamy

  state12, Nov 2018, 9:23 AM IST

  ಸಿಎಂ ಕುಮಾರಸ್ವಾಮಿಗೆ ಪ್ರತಾಪ್‌ ಸಿಂಹ ಅಭಿನಂದಿಸಿದ್ದೇಕೆ..?

  ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಅಭಿನಂದಿಸಿದ್ದಾರೆ.

 • NEWS7, Nov 2018, 5:15 PM IST

  ಹೇ ಭಗವಾನ್! ‘ಮೈಸೂರು ಅರಸರಿಗಿಂತಲೂ ಮುನ್ನ ಕೆಆರ್‌ಎಸ್‌ ಕನಸು ಕಂಡಿದ್ದು ಟಿಪ್ಪು!’

  ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಸುದ್ದಿ ಮಾಡುತ್ತಿದೆ.ಈ ಮಧ್ಯೆ ಸಾಹಿತಿ ಭಗವಾನ್ ಸಹ ಟಿಪ್ಪು ಜಯಂತಿ ಕುರಿತು ಮಾತನಾಡಿದ್ದಲ್ಲದೇ ಕೆಆರ್ ಎಸ್ ಅಣೆಕಟ್ಟಿನ ವಿಚಾರವನ್ನು ಹೇಳಿದ್ದಾರೆ. ಹಾಗಾದರೆ ಭಗವಾನ್ ಏನು ಹೇಳಿದ್ದಾರೆ ಏನು ಎಂದು ನೋಡಿಕೊಂಡು ಬರೋಣ...

 • NEWS5, Nov 2018, 6:51 PM IST

  ಪ್ರತಿಭಟನೆ ಮಾಡ್ತೀವಿ, ಧಮ್ಮಿದ್ರೆ ಬಂಧಿಸಿ: ಸರ್ಕಾರಕ್ಕೆ ಮಾಜಿ ಡೆಪ್ಯೂಟಿ ಸಿಎಂ ಸವಾಲ್

  ರಾಜ್ಯ ಸರ್ಕಾರ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆ ಮಾಡಿಯೇ ತೀರುತ್ತೇವೆ ಎನ್ನುತ್ತಿದ್ದರೆ, ಮತ್ತೊಂದೆಡೆ ಇದರ ವಿರುದ್ಧವಾಗಿ ಬಿಜೆಪಿ ಪ್ರತಿಭಟನೆ ಮಾಡಲು ಮುಂದಾಗಿದೆ.

 • Darshan New

  NEWS3, Nov 2018, 11:00 AM IST

  ದರ್ಶನ್ ಕಾರು ಅಪಘಾತ ಪ್ರಕರಣ: ಆರೋಪಿ ಯಾರು?

  ನಟ ದರ್ಶನ್‌ ಕಾರು ಅಪಘಾತ ಪ್ರಕರಣ ಸಂಬಂಧ ಮೈಸೂರಿನ 4ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.  ಅಪಘಾತ ಪ್ರಕರಣದ ಇಂಚಿಂಚೂ ಮಾಹಿತಿ ಕಲೆ ಹಾಕಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.  ವಿವಿ ಪುರಂ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿಗಳು ತನಿಖೆ ಚುರುಕುಗೊಳಿಸಿದ್ದಾರೆ. 

 • Swamiji Mysuru

  CRIME29, Oct 2018, 5:07 PM IST

  ಅರೆಬೆತ್ತಲೆ ಸ್ಥಿತಿಯಲ್ಲಿ ಅಟ್ಟದ ಮೇಲೆ ಹೆಂಡತಿ ಕೈಗೆ ಸಿಕ್ಕ ‘ಕಾಮಿಸ್ವಾಮಿ’

  ಈತ ಹೆಸರಿಗೆ ಸ್ವಾಮೀಜಿ.. ಪತ್ನಿಯೂ ಇದ್ದಾಳೆ.. ಆದರೆ ಅದು ಸಾಲದು ಎಂಬಂತೆ ಬೇರೆ ಕಡೆಯೂ ತನ್ನ ರಂಗಿನಾಟ ತೋರಿಸಲು ಹೋಗುತ್ತಿದ್ದ.  ಆದರೆ ಸ್ವಾಮೀಜಿಯ ಹೆಂಡತಿಯೇ ಆತನ ಬೆನ್ನು ಬಿದ್ದಿದ್ದಾರೆ. ಕೈಗೆ ಸಿಕ್ಕ ಮೇಲೆ ಸರಿಯಾಗಿ ಗೂಸಾ ನೀಡಲಾಗಿದೆ.