ಮೂರುಸಾವಿರ ಮಠ  

(Search results - 8)
 • Hubballi

  Karnataka Districts24, Feb 2020, 7:51 AM

  ಉತ್ತರಾಧಿಕಾರಿ ವಿವಾದ: 45 ದಿನ ಗಡುವು ಕೊಟ್ಟ ದಿಂಗಾಲೇಶ್ವರ ಶ್ರೀ

  ಮೂರುಸಾವಿರ ಮಠದ ಉತ್ತರಾಧಿಕಾರಿ ವಿವಾದ ಇಷ್ಟಕ್ಕೆ ನಿಲ್ಲುವುದಿಲ್ಲ ಎಂದು ತಿಳಿಸಿರುವ ದಿಂಗಾಲೇಶ್ವರ ಶ್ರೀಗಳು, ಮುಂದಿನ 45 ದಿನಗಳೊಳಗೆ ಈ ವಿವಾದವನ್ನು ಇತ್ಯರ್ಥಪಡಿಸಬೇಕು. ಇಲ್ಲದಿದ್ದಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ. ಅಲ್ಲದೇ, ನ್ಯಾಯಾಲಯದ ತೀರ್ಪಿಗೆ ಕಾದು ಕುಳಿತುಕೊಳ್ಳುವುದಿಲ್ಲ. ಇದಕ್ಕಾಗಿ ತಾವೇ ಭಕ್ತರ ಒಂದು ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.
   

 • undefined

  Karnataka Districts23, Feb 2020, 11:08 AM

  ಪ್ರಕರಣಗಳ ಸುಳಿಯಲ್ಲಿ ದಿಂಗಾಲೇಶ್ವರ ಶ್ರೀ: 'ಸ್ವಾಮೀಜಿಗೆ ಶಿಕ್ಷೆಯಾಗಲೇಬೇಕು'

  ಮೂರುಸಾವಿರ ಮಠದ ಉತ್ತರಾಧಿಕಾರಿ ನಾನೇ ಎಂದು ಹೇಳಿಕೊಂಡು ಸತ್ಯದರ್ಶನ ಸಭೆ ಕರೆದಿರುವ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳ ಮೇಲೆ ವಿವಿಧ ಪ್ರಕರಣಗಳ ದೊಡ್ಡ ಮಣಭಾರವೇ ಇದೆ. ಇವರ ಮೇಲೆ ಪ್ರಕರಣ ದಾಖಲಿಸಿದವರು ಮತ್ತು ಇವರಿಂದ ದೌರ್ಜನ್ಯ, ಹಲ್ಲೆ, ನೋವು, ನಿಂದನೆಗೆ ಒಳಗಾದವರು ಈಗಲೂ ಶ್ರೀಗಳಿಗೆ ಶಿಕ್ಷೆಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 • Hubballi

  Karnataka Districts23, Feb 2020, 7:52 AM

  ಮೂರುಸಾವಿರ ಮಠ ಉತ್ತರಾಧಿಕಾರಿ ವಿವಾದ: ಮೌನ ಮುರಿದ ಮೂಜಗು

  ಉತ್ತರ ಕರ್ನಾಟಕದ ಪ್ರತಿಷ್ಠಿತ ಮೂರಸಾವಿರ ಮಠದ ಉತ್ತರಾಧಿಕಾರಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. ಪೀಠಾಧೀಶ ಗುರುಸಿದ್ಧರಾಜ ಯೋಗೀಂದ್ರರು ಉತ್ತರಾಧಿಕಾರಿ ವಿವಾದ ಕೋರ್ಟ್‌ ಅಂಗಳದಲ್ಲಿದೆ ಎಂದಿದ್ದರೆ, ನಾನೇ ಉತ್ತರಾಧಿಕಾರಿ ಎಂದು ಹೇಳಿಕೊಂಡಿರುವ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಭಾನುವಾರ ಮಠದಲ್ಲಿ ‘ಸತ್ಯದರ್ಶನ ಸಭೆ’ ನಡೆಸಲು ಮುಂದಾಗಿದ್ದಾರೆ. ಆದರೆ, ಶನಿವಾರ ತಡ ರಾತ್ರಿಯವರೆಗೂ ಈ ಸಭೆ ನಡೆಸಲು ಪೊಲೀಸರ ಅನುಮತಿ ಲಭಿಸಿಲ್ಲ.

 • undefined

  Karnataka Districts22, Feb 2020, 7:47 AM

  ಹುಬ್ಬಳ್ಳಿ ಮೂರುಸಾವಿರ ಮಠ ವಿವಾದ ಮತ್ತಷ್ಟು ಗೊಂದಲ

  ಇಲ್ಲಿನ ಪ್ರತಿಷ್ಠಿತ ಮೂರು ಸಾವಿರ ಮಠದ ಉತ್ತರಾಧಿಕಾರ ವಿವಾದ ದಿನದಿಂದ ದಿನಕ್ಕೆ ಮತ್ತಷ್ಟು ಗೋಜಲಾಗುತ್ತಲೇ ಸಾಗಿದೆ. ಉತ್ತರಾಧಿಕಾರಿಯನ್ನು ನಿರ್ಣಯಿಸುವ ಸಲುವಾಗಿ ದಿಂಗಾಲೇಶ್ವರ ಶ್ರೀಗಳು ಫೆ.23ರಂದು ನಡೆಸಲು ಉದ್ದೇಶಿಸಿರುವ ಸತ್ಯದರ್ಶನ ಸಭೆಗೆ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಂಗೀಂದ್ರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದು ಸಭೆಗೆ ಅವಕಾಶ ನೀಡದಂತೆ ಗೃಹ ಸಚಿವರಿಗೂ ಪತ್ರ ಬರೆದಿದ್ದಾರೆ. 
   

 • dingaleshwar swamiji

  Karnataka Districts21, Feb 2020, 11:06 AM

  ನಾನು ಗೂಂಡಾ ಅಲ್ಲ: ಉತ್ತರಾಧಿಕಾರಿ ರೇಸ್‌ನಿಂದ ಹಿಂದೆ ಸರಿದ ದಿಂಗಾಲೇಶ್ವರ ಶ್ರೀ

  ಹುಬ್ಬಳ್ಳಿಯ ಮೂರುಸಾವಿರ ಮಠದ ಉತ್ತರಾಧಿಕಾರಿ ಆಗಲು ಕಳೆದ 6 ವರ್ಷಗಳಿಂದ ತೀವ್ರ ಪೈಪೋಟಿ ನಡೆಸಿದ್ದ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಇದೀಗ ‘ಉತ್ತರಾಧಿಕಾರಿ ಆಗುವ ಆಸೆ ನನಗಿಲ್ಲ. ನನ್ನನ್ನು ಅಯೋಗ್ಯ, ಗೂಂಡಾ ಎಂದು ಬಿಂಬಿಸಿದ್ದು, ಈ ಆರೋಪದಿಂದ ಮುಕ್ತವಾಗಬೇಕಿದೆ ಅಷ್ಟೇ’ ಎನ್ನುವ ಮೂಲಕ ಉತ್ತರಾಧಿಕಾರಿ ರೇಸ್‌ನಿಂದ ಹಿಂದೆ ಸರಿದಿದ್ದಾರೆ.
   

 • undefined

  Karnataka Districts19, Feb 2020, 12:08 PM

  'ಮೂರುಸಾವಿರ ಮಠದ ಉತ್ತರಾಧಿಕಾರಿ ದಿಂಗಾಲೇಶ್ವರ ಶ್ರೀಗಳೇ ಸೂಕ್ತ'

  ಹುಬ್ಬಳ್ಳಿಯ ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿಯಾಗಿ ಈಗಾಗಲೇ ಕೈಗೊಂಡ ನಿರ್ಣಯಕ್ಕೆ ಮಠದ ಮಠಾಧೀಶರು, ಕಮೀಟಿಯರು ಬದ್ಧರಾಗಿ ದಿಂಗಾಲೇಶ್ವರ ಶ್ರೀಗಳನ್ನೆ ಶ್ರೀಮಠದ ಉತ್ತರಾಧಿಕಾರಿಗಳು ಎಂಬ ಸತ್ಯವನ್ನು ನಾಡಿನ ಜನತೆಗೆ ಬಹಿರಂಗಪಡಿಸಬೇಕು ಎಂದು ಮಂಗಳವಾರ ಪಟ್ಟಣದಲ್ಲಿ ಸೇರಿದ್ದ ಭಕ್ತರು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು. 
   

 • undefined

  Karnataka Districts19, Feb 2020, 7:39 AM

  ಮೂರುಸಾವಿರ ಮಠದ ಉತ್ತರಾಧಿಕಾರಿ: 'ಮಲ್ಲಿಕಾರ್ಜುನ ಶ್ರೀ ನನ್ನ ಮುಂದೆ ಬೆಳೆದ ಕೂಸು'

  ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕದ ವಿಚಾರ ಬೆಳಗಾವಿಯಲ್ಲಿಯೂ ಕಾವು ಪಡೆದಿದೆ. ಮಾತ್ರವಲ್ಲ, ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳು ಉತ್ತರಾಧಿಕಾರಿ ಮತ್ತು ಸತ್ಯಾನ್ವೇಷಣೆಗಾಗಿ ಫೆ.23ರಂದು ಸಭೆ ನಡೆಸುತ್ತಿರುವ ಬೆನ್ನ ಹಿಂದೆಯೇ ಮತ್ತೊಂದು ಸ್ವರೂಪ ಪಡೆದುಕೊಂಡಿದೆ.
   

 • undefined
  Video Icon

  Karnataka Districts9, Aug 2019, 5:44 PM

  ಮೂರುಸಾವಿರ ಮಠಕ್ಕೂ ಪ್ರವಾಹ ಕಂಟಕ; ಗರ್ಭಗುಡಿ ಒಳಗೆ ನೀರು!

  ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠವೂ ಮಳೆಯಿಂದ ಭಾದಿತವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಮೂರು ಸಾವಿರ ಮಠದ ಗರ್ಭಗುಡಿಯೊಳಗೆ ನೀರಿನ ಸೆಲೆಗಳು ಚಿಮ್ಮಲಾರಂಭಿಸಿದೆ. ಗರ್ಭಗುಡಿಯಲ್ಲಿ ನೀರು ತುಂಬಿದ್ದು, ಅರ್ಚಕರು ಅದನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ.