ಮುದ್ದೇಬಿಹಾಳ  

(Search results - 11)
 • Karnataka Districts11, May 2020, 12:32 PM

  ಕಾರ್ಮಿಕರನ್ನ ಕರೆತರಲು ಗೋವಾಗೆ ಹೋದ ಶಾಸಕ: ರಸ್ತೆ ಬದಿ ಖಾಲಿ ಜಾಗದಲ್ಲಿ ನಿದ್ರಿಸಿದ ನಡಹಳ್ಳಿ..!

  ಲಾಕ್‌ಡೌನ್‌ ಆಗಿದ್ದರಿಂದ ಗೋವಾದಲ್ಲಿ ಸಿಲುಕಿಕೊಂಡಿದ್ದ ಕ್ಷೇತ್ರದ ಜನರನ್ನ  ಸರ್ಕಾರದ ನಿಯಮಗಳ ಅನುಸಾರವೇ ಕಾರ್ಮಿಕರನ್ನು ಕರೆದುಕೊಂಡು ಹೋಗಲೇಬೇಕು ಎಂದು ತಿರ್ಮಾನಿಸಿದ ಶಾಸಕ ಎ. ಎಸ್.ಪಾಟೀಲ್‌ ನಡಹಳ್ಳಿ ಅವರು ಶುಕ್ರುವಾರ ರಾತ್ರಿ ಇಡಿ ಚೋರ್ಲಾ ಚೇಕ್‌ಪೋಸ್ಟ್‌ ಬಳಿಯೇ ಅಲ್ಲಿನ ಕಾರ್ಮಿಕರೊಂದಿಗೆ ಕಾಲ ಕಳೆದಿದ್ದಾರೆ. ಅಲ್ಲದೆ ಅಲ್ಲಿಯೇ ಹತ್ತಿರ ಇರುವ ಮಳಿಗೆಯೊಂದರ ಮುಂದಿನ ಖುಲ್ಲಾ ಜಾಗದಲ್ಲಿ ನಿದ್ದೆ ಮಾಡಿದ್ದಾರೆ. 
   

 • Karnataka Districts11, May 2020, 12:01 PM

  ಕೊರೋನಾ ಭೀತಿ: ಮುದ್ದೇಬಿಹಾಳಕ್ಕೆ 495 ವಲಸೆ ಕಾರ್ಮಿಕರ ಆಗಮನ

  ಗೋವಾಕ್ಕೆ ಉದ್ಯೋಗ ಅರಸಿ ತೆರಳಿದ್ದ ತಾಲೂಕಿನ ಕಾರ್ಮಿಕರು ಲಾಕ್‌ಡೌನ್‌ ಆದೇಶದಿಂದಾಗಿ ತಾಲೂಕಿಗೆ ಮರಳಲು ಆಗದೇ ಗೋವಾದಲ್ಲಿಯೇ ಸಂಕಷ್ಟ ಅನುಭವಿಸುತ್ತಿದ್ದವರನ್ನು ಮತಕ್ಷೇತ್ರದ ಸುಮಾರು 14 ಬಸ್‌ಗಳ ಮೂಲಕ 495 ಜನ ಕೂಲಿ ಕಾರ್ಮಿಕರನ್ನು ಸ್ವಗ್ರಾಮಕ್ಕೆ ಮರಳಿ ಕರೆ ತರುವಲ್ಲಿ ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಯಶಸ್ವಿಯಾದರು.
   

 • <p>nadahalli </p>

  Karnataka Districts10, May 2020, 7:48 AM

  ರೈತರ ಕನಸು ನನಸು ಮಾಡಿದ ಶಾಸಕ ನಡಹಳ್ಳಿ ಫೋಟೋಗೆ ಕ್ಷೀರಾಭಿಷೇಕ..!

  ಪ್ರಸಕ್ತ ವರ್ಷದ ಬಿರು ಬೇಸಿಗೆಯಲ್ಲಿಯೇ ಜಿಲ್ಲೆಯ ಮುದ್ದೇಬಿಹಾಳದ ಶಾಸಕ ಎ.ಎಸ್‌. ಪಾಟೀಲ(ನಡಹಳ್ಳಿ) ಅವರು ವಿಶೇಷ ಕಾಳಜಿ ವಹಿಸಿ ಕೆರೆಗೆ ನೀರು ಹರಿಸುವ ಮೂಲಕ ರೈತರ ಮೊಗದಲ್ಲಿ ಸಂತಸದ ಜಲಧಾರೆಯ ಹರಿಸಿದ್ದಾರೆ.
   

 • Karnataka Districts25, Apr 2020, 11:44 AM

  20 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್‌ ವಿತರಿಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ

  ಲಾಕ್‌ಡೌನ್‌ದಿಂದ ಜನರ ಊಟಕ್ಕೆ ತೊಂದರೆಯಾಗುತ್ತಿರುವುದನ್ನು ಗಮ​ನಿ​ಸಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮುದ್ದೇಬಿಹಾಳ ಮತಕ್ಷೇತ್ರದ ಸುಮಾರು 20 ಸಾವಿರ ಕುಟುಂಬಗಳಿಗೆ ವೈಯಕ್ತಿಕವಾಗಿ ಸುಮಾರು 1 ಕೋಟಿ ವೆಚ್ಚ​ದಲ್ಲಿ ಸಿದ್ಧಪಡಿಸಲಾದ ದವಸ ಧಾನ್ಯಗಳ ಕಿಟ್‌ಗಳನ್ನು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಪತ್ನಿ ಮಹಾದೇವಿ ನಡಹಳ್ಳಿ ಶುಕ್ರವಾರ ಪಟ್ಟಣದ ಹರಳಯ್ಯ ಬಡಾವಣೆಯ ಬಡವರ ಮನೆಮನೆಗೆ ವಿತರಿಸಿ ಚಾಲನೆ ನೀಡಿದ್ದಾರೆ.
   

 • <p>bgk</p>

  Karnataka Districts18, Apr 2020, 1:37 PM

  ಮಾನವೀಯತೆಗೆ ಸಾಕ್ಷಿಯಾದ ಸುವರ್ಣ ನ್ಯೂಸ್-ಕನ್ನಡಪ್ರಭ: ವೃದ್ಧೆಗೆ ತಲುಪಿದ ಅಗತ್ಯ ವಸ್ತುಗಳು

  96ರ ವೃದ್ಧೆಗೆ ಲಾಕ್‌ಡೌನ್‌ ಕಾರಣದಿಂದ ಅಗತ್ಯ ದಿನಸಿ ವಸ್ತುಗಳು ಸಿಗದೆ ತತ್ತರಿಸಿ ಹೋಗಿದ್ದಳು. ದಿನಸಿ ವಸ್ತುಗಳು ಸಿಗುತ್ತಿಲ್ಲ. ಜೀವನ ನಡೆಸುವುದ ಕಷ್ಟವಾಗಿದೆ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿರುವ ಅಜ್ಜಿಯ ಮೊಮ್ಮಗ ಪುಟ್ಟರಾಜು ಎಂಬುವನಿಗೆ ತಿಳಿಸಿದ್ದಳು. ಮೊಮ್ಮಗ ಪುಟ್ಟರಾಜು ಅಜ್ಜಿ ಎದುರಿಸುತ್ತಿರುವ ಸಮಸ್ಯೆಯನ್ನು ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ ಬಳಿ ಹೇಳಿಕೊಂಡಿದ್ದ, ಅಜ್ಜಿ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕಿ ಮಾನವೀಯತೆಗೆ ಸಾಕ್ಷಿಯಾದ ಸಂಭ್ರಮ ನಮ್ಮದಾಗಿದೆ.
   

 • Coronavirus Karnataka27, Mar 2020, 11:50 AM

  ಕೊರೋನಾ ಬರೋದಿಲ್ಲವೆಂದು ರಾತ್ರಿಯಿಡಿ ಚಹಾ ಕುಡಿದಿದ್ದೇ ಕುಡಿದಿದ್ದು!

  ಕೊರೋನಾ ವೈರಸ್‌ ಬರು​ವು​ದಿ​ಲ್ಲ ಎಂದು ಇಡೀ ರಾತ್ರಿ​ ಎಚ್ಚ​ರ​ವಿದ್ದು ಶುಂಠಿ, ಅರಿಷಿಣ ಚಹಾ ಕುಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆ​ದಿದೆ.

 • Narayanapura Dam

  Vijayapura25, Oct 2019, 11:32 AM

  ಮುದ್ದೇಬಿಹಾಳ: ಬಸ​ವ​ಸಾ​ಗ​ರ​ ಡ್ಯಾಂನಿಂದ 3.70 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ

  ತಾಲೂಕಿನ ಗಡಿಭಾಗದಲ್ಲಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯ ಲಾಲಬಹದ್ದೂರ ಶಾಸ್ತ್ರೀ ಮತ್ತು ಕೂಡಲ ಸಂಗಮ ಬಳಿ ಮಲಪ್ರಭಾ ನದಿಯ ನೀರು ಕೃಷ್ಣಾ ನದಿ ಮೂಲಕ ಅಪಾರ ಪ್ರಮಾಣದಲ್ಲಿ ಹರಿದು ಬರತೊಡಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಭರ್ತಿಯಾಗಿದ್ದ ಜಲಾಶಯವನ್ನು ಸ್ವಲ್ಪ ಮಟ್ಟಿಗೆ ಖಾಲಿ ಮಾಡಲಾಗುತ್ತಿದೆ.

 • Vijayapura20, Oct 2019, 12:47 PM

  ಮುದ್ದೇಬಿಹಾಳ: ಅಗ್ನಿಶಾಮಕ ಜಲವಾಹನಕ್ಕಿಲ್ಲ ಸುಗಮ ರಸ್ತೆ

  ಇಲ್ಲಿನ ಮಿನಿ ವಿಧಾನಸೌಧ ಪಕ್ಕದಲ್ಲಿ 2012-13ನೇ ಸಾಲಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಲಾಗಿರುವ ಅಗ್ನಿಶಾಮಕ ಠಾಣೆಗೆ ಸೂಕ್ತ ಮೂಲ ಸೌಕರ್ಯ, ಜಲವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲದೆ ಸಿಬ್ಬಂದಿ ಪರದಾಡುವಂತಾ​ಗಿದೆ. ಅಗ್ನಿ ಅವಘಡದಂತಹ ತುರ್ತು ಪರಿಸ್ಥಿತಿಯ ಸಂದರ್ಭ ಎದುರಿಸಲು ಹರಸಾಹಸ ಪಡುವಂತಾ​ಗಿದೆ. ಪೂರ್ವಯೋಜನೆ ಇಲ್ಲದೆ ತರಾತುರಿಯಲ್ಲಿ ಠಾಣೆ ನಿರ್ಮಿಸಿದ್ದೇ ಸಿಬ್ಬಂದಿಗೆ ಶಾಪವಾಗಿ ಪರಿ​ಣ​ಮಿ​ಸಿದೆ.
   

 • bridge collapsed in alappuzha

  Vijayapura11, Oct 2019, 10:23 AM

  ಮುದ್ದೇಬಿಹಾಳದಲ್ಲಿ ವರುಣನ ಆರ್ಭಟ: ಕೊಚ್ಚಿಹೋದ ಸೇತುವೆ

  ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಬಳಿ ಇರುವ ಸಂಪರ್ಕ ರಸ್ತೆಯ ಕಿರು ಸೇತುವೆ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದಾಗಿ ಅಡವಿ ಹುಲಗಬಾಳ ತಾಂಡಾ ಸಂಪರ್ಕಿಸುವ ರಸ್ತೆ ಸಂಚಾರ ಬಂದ್‌ ಆಗಿ ತಾಂಡಾದ ಜನರು ಪರದಾಡುವಂತಾಗಿದೆ. ಪರಿಣಾಮ ತಾಂಡಾದ ಜನರು ಸಮೀಪದ ಗ್ರಾಮ ಅಡವಿ ಹುಲಗಬಾಳ ಮತ್ತು ಮುದ್ದೇಬಿಹಾಳದ ಸಂಪರ್ಕದಿಂದ ವಂಚಿತರಾಗಿದ್ದಾರೆ.
   

 • Vijayapura9, Oct 2019, 11:07 AM

  'ಕಾಂಗ್ರೆಸ್ಸಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ'

  ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 2009ರಲ್ಲಿ ನೆರೆ ಪ್ರವಾಹಕ್ಕೆ ತುತ್ತಾದಾಗ ಯಡಿಯೂರಪ್ಪನವರು ಹಡಗಿನಾಳ, ಬೋಳವಾಡ, ಬೂದಿಹಾಳ, ಸಾತಿಹಾಳ, ನಾಗರಾಳ ಡೋಣ, ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸ ಮಾಡಿದ್ದಾರೆ. ಏಳು ದಶಕಗಳವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಶಾಸಕ ಎ.ಎಸ್‌.ಪಾಟೀಲ(ನಡಹಳ್ಳಿ) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.
   

 • temple

  Districts20, Sep 2019, 12:10 PM

  ಕಳ್ಳನೊಂದಿಗೆ ಸೆಣಸಿ ದೇವರ ಕಿರೀಟ ರಕ್ಷಿಸಿದ ಗೂರ್ಖಾ

  ದೇವಸ್ಥಾನದಿಂದ ಬೆಳ್ಳಿ ಕಿರೀಟ ಕದ್ದುಕೊಂಡು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಳ್ಳನೊಂದಿಗೆ ಗೂರ್ಖಾವೊಬ್ಬ ಸೆಣಸಾಡಿ ಕಿರೀಟ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.