ಮುಂಡರಗಿ

(Search results - 26)

Gadag

Karnataka Districts24, Jul 2020, 12:05 PM

ಕೊರೋನಾ ಅಟ್ಟಹಾಸ: ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ಜಾತ್ರೆ ರದ್ದು

ಗದಗ(ಜು.24): ಮಹಾಮಾರಿ ಕೊರೋನಾ ವೈರಸ್‌ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಸಭೆ, ಸಮಾರಂಭ, ಮದುವೆ, ಜಾತ್ರೆಗಳು ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನ ನಡೆಸದಂತೆ ಸರ್ಕಾರ ನಿಷೇಧ ಹೇರಿದೆ. ಹೀಗಾಗಿ ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಕಪ್ಪತ್ತಗುಡ್ಡದ ಕಪ್ಪತ್ತಮಲ್ಲೇಶ್ವರ ದೇವಸ್ಥಾನದ ಜಾತ್ರೆ ಕೂಡ ರದ್ದು ಪಡಿಸಲಾಗಿದೆ.

Annadaneshwara Mutt

Karnataka Districts18, Jul 2020, 9:43 AM

ಮುಂಡರಗಿ: ಶ್ರಾವಣ ಮಾಸದ ಪ್ರವಚನ ಈ ಬಾರಿ ಯುಟ್ಯೂಬ್‌ನಲ್ಲಿ

ಪ್ರತಿವರ್ಷ ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ 1 ತಿಂಗಳ ಕಾಲ ಜರುಗುತ್ತಿದ್ದ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಆನ್‌ಲೈನ್‌ ತಂತ್ರಾಂಶ ಉಪಯೋಗಿಸಿಕೊಂಡು ಯುಟ್ಯೂಬ್‌ ಮೂಲಕ ನಿತ್ಯ ಪ್ರಸಾರ ಮಾಡಲು ಶ್ರೀಮಠದಲ್ಲಿ ಗುರುವಾರ ಜರುಗಿದ ಪ್ರವಚನದ ಪೂರ್ವಭಾವಿ ಸಭೆಯಲ್ಲಿ ಭಕ್ತರೆಲ್ಲರೂ ಸೇರಿ ನಿರ್ಧಾರ ತೆಗೆದುಕೊಳ್ಳಲಾಯಿತು.

• Karnataka Districts13, Jul 2020, 1:07 PM

ಕ್ವಾರಂಟೈನ್‌ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಟ: 2 ವರ್ಷದ ಮಗುವಿಗೆ ನೋಟಿಸ್‌!

ಕೊರೋನಾ ಪಾಜಿಟಿವ್‌ ಆಗಿರುವ ವ್ಯಕ್ತಿಗಳು ಚಿಕಿತ್ಸೆ ಮುಗಿಸಿಕೊಂಡು ಮನೆಗೆ ಬಂದ ನಂತರ 14 ದಿನಗಳ ಕಾಲ ಎಲ್ಲರೂ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕೆಂದು ಸರ್ಕಾರದ ನಿಯಮವಿದೆ. ಆ ನಿಯಮವನ್ನು ಮೀರಿದ ಮುಂಡರಗಿ ಪಟ್ಟಣದ ಹುಡ್ಕೋ ಕಾಲೋನಿಯ 2 ವರ್ಷದ ಮಗುವಿಗೆ ಮುಂಡರಗಿ ತಹಸೀಲ್ದಾರ್‌ ಇತ್ತೀಚೆಗೆ ನೋಟಿಸ್‌ ಜಾರಿ ಮಾಡಿದ್ದಾರೆ.

Gadag

Karnataka Districts1, Jul 2020, 8:44 AM

ಮುಂಡರಗಿ: ಹಣ ಕೊಡುವ ವಿಚಾರ, ಟೋಲ್‌ನಾಕಾ ಸಿಬ್ಬಂದಿ ಜೊತೆ ವಾಹನ ಸವಾರರ ಮಾರಾಮಾರಿ

ಭಾನುವಾರ ಸಂಜೆ ತಾಲೂಕಿನ ಕೊರ್ಲಹಳ್ಳಿ ಬಳಿ ಇರುವ ಟೋಲ್‌ನಾಕಾ ಹತ್ತಿರ ಟೋಲ್‌ಗೆ ಹಣ ಕೊಡುವ ವಿಚಾರವಾಗಿ ಟೋಲ್‌ನಾಕಾ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಎರಡು ಪ್ರತ್ಯೇಕ ಮಾರಾಮಾರಿ ನಡೆದಿದ್ದು, ಈ ಕುರಿತು ಪ್ರಕರಣಗಳು ದಾಖಲಾಗಿವೆ.

• Karnataka Districts27, Jun 2020, 9:12 AM

ಮಳೆಗಾಲದಲ್ಲೂ ಸುಡು ಸುಡು ಬಿಸಿಲು: ಕೈ ಕೊಟ್ಟ ಮುಂಗಾರು, ಕಂಗಾಲಾದ ರೈತರು!

ನಿಮ್ಮೂರಾಗ ಮಳಿಯಾಗೈತೇನ್ರಿ, ಇಲ್‌ಬಿಡ್ರಿ. ನಿಮ್‌ ಊರಾಗರ ಆಗೈತೇನ್ರಿ? ನಮ್ಮೂರಾಗೂ ಆಗಿಲ್ಲ ಬಿಡ್ರಿ. ಕೆಟ್‌ ಗಾಳಿ ಹಚ್ಚಿ ಹೊಡಿಯಾಕತೈತಿ. ನೆತ್ತಿ ಸುಡುವಾಂಗ ಉರಿ ಬಿಸಲ್‌ ಐತಿ, ಆದ್ರ ಮಳೆ ಮಾತ್ರ ಇಲ್ಲ. ನಾವ್‌ ನೋಡಿದ್ರ ಕೈಯಾಗಿದ್ದ ರೊಕ್ಕಾ ಖರ್ಚು ಮಾಡಿ ಮಣ್ಣಾಗ ಹಾಕಿ ಕುಂತೀವಿ. ಕಲ್ಲೂ ಹೋತು ಕಲ್ಲಿಗೆ ಹತ್ತಿದ ಬೆಲ್ಲಾನೂ ಹೋತು ಅನ್ನುವಂಗಾಗೈತಿ ನಮ್‌ ಬಾಳ್ವೆ..... ತಾಲೂಕಿನ ಬಹುತೇಕ ಗ್ರಾಮಗಳಲ್ಲಿನ ರೈತರು ಮಾತನಾಡಿಕೊಳ್ಳುತ್ತಿರುವ ರೀತಿ ಇದು.

Coronavirus

Karnataka Districts24, Jun 2020, 7:59 AM

ಕೊರೋನಾ ಕಾಟ: ಮುಂಡರಗಿ ಪೊಲೀಸರಿಗೆ ತಲೆನೋವಾದ ಕೊಡಗಿನ ವ್ಯಕ್ತಿ..!

ಗದಗ ಜಿಲ್ಲೆಯಲ್ಲಿ 79 ಕೊರೋನಾ ಕೇಸ್‌ಗಳಾಗಿದ್ದರೂ ಮುಂಡರಗಿ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಇದೇ ತಿಂಗಳು 17ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ವ್ಯಕ್ತಿಯೋರ್ವನು ಖಾಸಗಿ ಕಾರ್ಯನಿಮಿತ್ಯ ಮುಂಡರಗಿ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದರು. ಆ ವ್ಯಕ್ತಿ ಮುಂಡರಗಿಯಿಂದ ಮರಳಿ ಶನಿವಾರಸಂತೆಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಆಶಾ ಕಾರ್ಯಕರ್ತೆಯರು ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವನಿಗೆ ಕೊರೋನಾ ಧೃಢ ಪಟ್ಟಿರುವುದು ಬೆಳಕಿಗೆ ಬಂದಿದ್ದರಿಂದಾಗಿ ಮುಂಡರಗಿ ಪೊಲೀಸರಿಗೆ ಕೊಡಗಿನ ವ್ಯಕ್ತಿ ತಲೆನೋವಾಗಿ ಪರಿಣಮಿಸಿ, ಆತಂಕ ಹೆಚ್ಚಿಸಿದ್ದಾನೆ.

Gadag

Karnataka Districts6, Jun 2020, 9:14 AM

ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್‌ ಭದ್ರತೆ

ಇತ್ತೀಚಿನ ದಿನಗಳಲ್ಲಿ ತಮಗೆ ಕೊಲೆ ಬೆದರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ನಿಂದನೆಗಳು ಯಥೇಚ್ಚವಾಗಿ ಬರುತ್ತಿವೆ. ಅದರ ಬಗ್ಗೆ ಬೆಳಗಾವಿ, ಮುಂಡರಗಿ ಸೇರಿದಂತೆ  ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳಲ್ಲ ಭಕ್ತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಸರ್ಕಾರವೂ ಸಹ ಜವಾಬ್ದಾರಿ ತೆಗೆದುಕೊಂಡಿದೆ. ನನ್ನ ಪರವಾಗಿ ಭಕ್ತರು ಮನವಿ ಮಾಡಿಕೊಂಡಿದ್ದಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದ್ದಾರೆ.

• Karnataka Districts9, May 2020, 8:54 AM

ಮಹಾಮಾರಿ ಕೊರೋನಾ ಸಂಕಷ್ಟದಲ್ಲೂ ಸಾಲ ವಸೂಲಿಗಿಳಿದ ಬ್ಯಾಂಕುಗಳು!

ಕೊರೋನಾ ವೈರಸ್‌ ತಡೆಗಟ್ಟಲು ಲಾಕ್‌ಡೌನ್‌ ಜಾರಿಯಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು 3 ತಿಂಗಳ ಕಾಲ ಯಾವುದೇ ರೀತಿಯ ಸಾಲ ವಸೂಲಾತಿ ಮಾಡಬಾರದು ಎಂದು ಸರ್ಕಾರ ಆದೇಶಿಸಿದ್ದರೂ ಎಕ್ಸಿಸ್‌, ಇಂಡಸ್‌ ಬ್ಯಾಂಕ್‌ ಮತ್ತು ಮುತ್ತೂಟ್‌ ಫೈನ್ಸಾನ್‌ ಪ್ರತಿನಿಧಿಗಳು ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಸಾಲ ವಸೂಲಿಗಿಳಿದ ಘಟನೆ ಶುಕ್ರವಾರ ನಡೆದಿದೆ.

• petrol

Karnataka Districts4, May 2020, 9:28 AM

ಕೊರೋನಾ ಫೈಟರ್‌: ಕೋವಿಡ್‌ ತಡೆಯಲು ವಾಹನಗಳಿಗೆ ಪೆಟ್ರೋಲ್‌ ಹಾಕದ ಬಂಕ್‌ ಮಾಲೀಕ..!

ಲಾಕ್‌ಡೌನ್‌ ಸಂದರ್ಭದಲ್ಲಿ ಇಲ್ಲಿನ ಇಂಡಿಯನ್‌ ಆಯಿಲ್‌ ಡೀಲರ್‌ ಹೇಮಂತಗೌಡ ಪಾಟೀಲ ಖಾಸಗಿ ವಾಹನಗಳಿಗೆ ಪೆಟ್ರೋಲ್‌ ಹಾಕದಂತೆ ನೋಡಿಕೊಳ್ಳುವ ಮೂಲಕ ಕೊರೋನಾ ಹರಡದಂತೆ ಜಾಗ್ರತಿ ಮೂಡಿಸಿದ್ದಾರೆ.

• Karnataka Districts22, Apr 2020, 9:10 AM

ಲಾಕ್‌ಡೌನ್‌: ಇನ್ಮುಂದೆ ವಾರದಲ್ಲಿ 2 ದಿನ ಕಿರಾಣಿ, ಮೂರು ದಿನ ತರಕಾರಿ

ಗದಗ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 4 ಕೊರೋನಾ ಪ್ರಕರಣಗಳು ದೃಢ ಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಮುಂಡರಗಿ ತಾಲೂಕಿನಲ್ಲಿಯೂ ಸಹ ಬುಧವಾರದಿಂದ ದಿನಸಿ ಹಾಗೂ ಕಿರಾಣಿ ಅಂಗಡಿಗಳನ್ನು ವಾರದಲ್ಲಿ 2 ದಿನ, ತರಕಾರಿ ವ್ಯಾಪಾರವನ್ನು ವಾರದಲ್ಲಿ ಮೂರು ದಿನ ಮಾಡಲು ತಾಲೂಕು ಆಡಳಿತ ನಿರ್ಧರಿಸಿದೆ.

• missing
Video Icon

Karnataka Districts20, Apr 2020, 10:11 PM

ಬೆಂಗ್ಳೂರಿನಿಂದ ನಾಪತ್ತೆಯಾದವ ಗದಗದಲ್ಲಿ ಪತ್ತೆ; ನಡೆದೇ ಊರು ಸೇರಿದ ಯುವಕ!

• ಬೆಂಗಳೂರಿನಲ್ಲಿ ಕಾಣೆಯಾಗಿದ್ದ ವ್ಯಕ್ತಿ ಮುಂಡರಗಿಯಲ್ಲಿ ಪತ್ತೆ
• ಪಾದಯಾತ್ರೆ ಮೂಲಕ ಗದಗ ಜಿಲ್ಲೆಗೆ ಆಗಮಿಸಿದ ಖಾಸಗಿ ಕಂಪನಿ‌ ನೌಕರ
• ವಿಜಯಪುರ ಮೂಲದ ಮಲ್ಲಿಕಾರ್ಜುನ ಗುರುಮಠ ಅನ್ನೋ ವ್ಯಕ್ತಿ
• Tontadarya nijagunananda swamiji

Karnataka Districts31, Jan 2020, 10:29 AM

ಜೀವಬೆದರಿಕೆ ಪತ್ರ: ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ?

ಶರಣರ ತತ್ವ ಸಿದ್ಧಾಂತದ ಮೇಲೆ ಬದುಕುತ್ತಿರುವ ನಾವು ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ತಮಗೆ ಬಂದಿರುವ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯಿಸಿದ್ದಾರೆ.

• সাবধান, শুধু মশার কামড়ে নয় যৌন সংসর্গেও ছড়ায় ডেঙ্গি
Video Icon

Karnataka Districts29, Jan 2020, 3:39 PM

Big 3 Impact: ಗದಗದ ಡೋಣಿ ಗ್ರಾಮದಲ್ಲಿ ರೋಗಿಗಳ ತಪಾಸಣೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಚಿಕೂನ್‌ ಗುನ್ಯಾ ರೋಗ ಕಾಣಿಸಿಕೊಂಡು ಗ್ರಾಮಸ್ಥರ ತಲೆನೋವಿಗೆ ಕಾರಣವಾಗಿತ್ತು. ಗ್ರಾಮದ ಬಹುತೇಕ ಎಲ್ಲ ಮನೆಗಳಲ್ಲೂ ಒಬ್ಬರಿಂದ ಇಬ್ಬರಿಗೆ ಚಿಕೂನ್‌ ಗುನ್ಯಾ ಕಾಣಿಸಿಕೊಂಡಿತ್ತು. ಆದರೆ, ಇಷ್ಟಲ್ಲಾ ಆದರೂ ಯಾವೊಬ್ಬ ಆರೋಗ್ಯಾಧಿಕಾರಿಗಳು ಬಂದು ಚಿಕಿತ್ಸೆ ನೀಡಿರಲಿಲ್ಲ.

• Siddu
Video Icon

state28, Jan 2020, 1:30 PM

ಭರ್ಜರಿ ಬಾಡೂಟ ಮಾಡಿ ದೇಗುಲ ಉದ್ಘಾಟಿಸಿದ ಸಿದ್ದು; ವ್ಯಕ್ತವಾಯ್ತು ಸಾರ್ವಜನಿಕ ಗುದ್ದು!

ಮಾಂಸ ತಿಂದು ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ ಸಿದ್ದರಾಮಯ್ಯ.  ನಿನ್ನೆ ಮುಂಡರಗಿಯ ಸಿಂಗಟಾಲೂರಿಗೆ ತೆರಳಿದ್ದರು ಸಿದ್ದರಾಮಯ್ಯ. ಅಲ್ಲಿನ ಸ್ಥಳೀಯ ಮುಖಂಡ ಮಂಜುನಾಥ್ ಅವರ ಮನೆಯಲ್ಲಿ ಭರ್ಜರಿ ಬಾಡೂಟ ಮಾಡಿದ್ದರು. ನಂತರ  ಬೀರಲಿಂಗೇಶ್ವರ ದೇಗುಲವ ಉದ್ಘಾಟನೆ ಮಾಡಿದ್ದಾರೆ. ಈ ನಡೆ ವಿವಾದಕ್ಕೆ ಕಾರಣವಾಗಿದೆ. ಬೀರಲಿಂಗೇಶ್ವರನಿಗೆ ಅಪಚಾರವಾಗಿದೆ ಎಂಬ ಮಾತು ಕೇಳಿ ಬಂದಿದೆ.

• Karnataka Districts4, Jan 2020, 8:20 AM

ಬೆಳಗಾವಿ ಗಡಿ ವಿವಾದ: ಉದ್ಧವ್‌ ಠಾಕ್ರೆ ಸಿಎಂ ಆದ ಮೇಲೆ ಗಡಿ ಕ್ಯಾತೆ ಶುರು

ವಿನಾಕಾರಣ ಗಡಿ ಸಮಸ್ಯೆ ಮುಂದಿಟ್ಟುಕೊಂಡು ಕ್ಯಾತೆ ತೆಗೆಯದಂತೆ ಮಹಾರಾಷ್ಟ್ರ ಸರ್ಕಾರಕ್ಕೆ ರಾಷ್ಟ್ರಪತಿಗಳು ತಾಕೀತು ಮಾಡಬೇಕು ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್‌. ಗೌಡರ ಒತ್ತಾಯಿಸಿದ್ದಾರೆ.