ಮೀನು  

(Search results - 104)
 • Fishes

  Karnataka Districts11, Sep 2019, 1:28 PM IST

  ಕೃಷಿ ಹೊಂಡಗಳ ಹೆಚ್ಚಳ: ಮೀನು ಮರಿಗಳಿಗೆ ಭಾರೀ ಬೇಡಿಕೆ

  ಕೊಡಗಿನಲ್ಲಿ ಕೃಷಿಹೊಂಡಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮೀನುಮರಿಗಳಿಗೂ ಬೇಡಿಕೆ ಹೆಚ್ಚಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೃಷಿ ಹೊಂಡಗಳು ನಿರ್ಮಾಣವಾಗಿದೆ. ಜಿಲ್ಲೆಯ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

 • fishing boat

  Karnataka Districts9, Sep 2019, 9:21 AM IST

  ಮಂಗಳೂರು: ಅಲೆಗಳ ರಭಸಕ್ಕೆ ಮೀನುಗಾರಿಕಾ ಬೋಟ್ ಮುಳುಗಡೆ

  ಮಂಗಳೂರು ಮೂಲದ ಮೀನುಗಾರಿಕಾ ಬೋಟ್‌ ಭಾನುವಾರ ಮುಂಜಾನೆ ಮುರುಡೇಶ್ವರ ಸಮೀಪದ ನೇತ್ರಾಣಿಗುಡ್ಡದಲ್ಲಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 10 ಆಂಧ್ರ ಮೂಲದ ಕಾರ್ಮಿಕರನ್ನು ರಕ್ಷಿಸಲಾಗಿದೆ. ಅಲೆಗಳ ರಭಸಕ್ಕೆ ಬೋಟ್ ಮುಳುಗಿರುವುದಾಗಿ ತಿಳಿದುಬಂದಿದೆ.

 • Fishing

  Karnataka Districts7, Sep 2019, 2:05 PM IST

  ಕರಾವಳಿಯಲ್ಲಿ ಮತ್ಸ್ಯಬರ; ಮೀನುಗಾರರಿಗೆ ಸಿಗುತ್ತಾ ಪರಿಹಾರ..?

  ಕಳೆದ ಕೆಲವು ತಿಂಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಕರಾವಳಿಯಲ್ಲಿ ಮೀನುಗಾರರ ವ್ಯಾಪಾರಕ್ಕೆ ಬರೆ ಬಿದ್ದಿದೆ. ಮೀನುಗಾರಿಕೆ ನಡೆಸಿ ಜೀವನ ಸಾಗಿಸುವ ಜನ ಕಡಲಿಗೆ ಇಳಿಯಲು ಸಾಧ್ಯವಾಗದೆ ನಷ್ಟದ ದಿನಗಳನ್ನು ಕಾಣುವಂತಾಗಿದೆ. ಮತ್ಸ್ಯ ಬರ ಉಂಟಾಗಿರುವುದಾಗಿ ಘೋಷಿಸಿ ಪರಿಹಾರ ನೀಡಬೇಕೆಂದು ಮೀನುಗಾರರು ಒತ್ತಾಯಿಸಿದ್ದಾರೆ.

 • Kota Srinivas Poojary DKS

  Karnataka Districts6, Sep 2019, 11:51 AM IST

  ಡಿಕೆಶಿ ಸ್ವಾತಂತ್ರ್ಯ ಹೋರಾಟಗಾರರಾ..? ಪ್ರತಿಭಟನೆ ಹೆಸರಲ್ಲಿ ದಬ್ಬಾಳಿಕೆ ಸಹಿಸಲ್ಲ: ಸಚಿವ ಕೋಟ ಎಚ್ಚರಿಕೆ

  ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಬಂಧನದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯೆಯೇ ವಿಚಿತ್ರವಾಗಿದೆ. ಅವರೇನೂ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾರೇನೂ ಅಥವಾ ತುರ್ತು ಪರಿಸ್ಥಿತಿಯನ್ನು ಎದುರಿಸಿ ಜೈಲಿಗೆ ಹೋಗಿದ್ದಾರೇನೂ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದ್ದಾರೆ.

 • Kota Srinivas Poojary

  Karnataka Districts6, Sep 2019, 10:42 AM IST

  ಸೀಫುಡ್ ಪ್ರಿಯರಿಗೆ ಸಚಿವ ಕೋಟ ಶ್ರೀನಿವಾಸ್‌ ಸಿಹಿ ಸುದ್ದಿ..!

  ಸೀಫುಡ್ ಪ್ರಿಯರಿಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಿಹಿ ಸುದ್ದಿ ನೀಡಿದ್ದಾರೆ. ಅತ್ಯಂತ ಸ್ವಾದವುಳ್ಳ ಸೀ ಫೂಡ್ ಲಭ್ಯವಿರುವ ಮತ್ಸ್ಯ ಉಪಹಾರ ಮಂದಿರಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಈ ಮೂಲಕ ಕರಾವಳಿಯ ಮೀನಿನ ಖಾದ್ಯಗಳು ರಾಜ್ಯಾದ್ಯಂತ ಎಲ್ಲ ಜನರಿಗೆ ಲಭ್ಯವಾಗಲಿದೆ.

 • Raft

  Karnataka Districts6, Sep 2019, 9:48 AM IST

  ಮಾನವೀಯತೆ ಮೆರೆದ ಮೀನುಗಾರರಿಗೆ ತೆಪ್ಪ ವಿತರಣೆ

  ಶಿವಮೊಗ್ಗದಲ್ಲಿ ಪ್ರವಾಹದ ಸಂದರ್ಭ ಜನರಿಗೆ ನೆರವಾದ ಮೀನುಗಾರರಿಗೆ ತೆಪ್ಪಗಳನ್ನು ವಿತರಿಸಲಾಗಿದೆ. ಭೀಕರ ಮಳೆ ಹಾಗೂ ಪ್ರವಾಹ ಸಂದರ್ಭ ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದು, ಆಹಾರ ಸಾಮಾಗ್ರಿ ಕೊಂಡೊಯ್ಯಲು ನೆರವಾದ ಮೀನುಗಾರರಿಗೆ ಸ್ಮಾರ್ಟ್‌ಸಿಟಿ ಸಮಿತಿಯ ಅಧಿಕಾರಿಗಳು ಹಾಗೂ ದಾನಿಗಳು ಸೇರಿ ನೂತನ ತೆಪ್ಪಗಳನ್ನು ನೀಡಿದರು.

 • Kota Srinivas

  Karnataka Districts5, Sep 2019, 8:55 AM IST

  'ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ'

  ಡಿ. ಕೆ. ಶಿವಕುಮಾರ್  ಬಂಧನಕ್ಕೂ ಬಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಮುಜರಾಯಿ, ಮೀನುಗಾರಿಕೆ, ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಅವರ ಮೇಲೆ ಯಾವುದೇ ಪ್ರತಿಕಾರದ ಪ್ರಶ್ನೆಯೇ ಇಲ್ಲ. ಇಡಿ ಕಾನೂನಿನ ಪ್ರಕಾರ ಅದರ ಕಾರ್ಯವನ್ನು ನಿರ್ವಹಿಸಿದೆ ಎಂದಿದ್ದಾರೆ.

 • kota srinivasa karnataka

  Karnataka Districts29, Aug 2019, 12:53 PM IST

  ಗುಲಾಬಿ ಬಯಸಿದ್ದೂ ಮೀನುಗಾರಿಕೆ, ಸಿಕ್ಕಿದ್ದೂ ಅದೇ ಖಾತೆ..! ಪೂಜಾರಿ ಮನೆಗೆ ಬಂತು ರಾಶಿ ಮೀನು..!

  ಉಡುಪಿಯ ಮೀನು ಮಾರುವ ಮಹಿಳೆ ಗುಲಾಬಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೀನುಗಾರಿಕೆ ಇಲಾಖೆ ಸಿಗ್ಲಿ ಅಂತ ಬಯಸಿದ್ರು. ಶ್ರೀನಿವಾಸ ಪೂಜಾರಿ ಸಚಿವರಾಗಿದ್ದು, ಮೀನುಗಾರಿಕೆ ಬಂದರು ಇಲಾಖೆಯ ಜವಾಬ್ದಾರಿ ಸಿಕ್ಕಿದ್ದು ಮೀನುಗಾರ ಮಹಿಳೆ ಗುಲಾಬಿಗೆ ಗೊತ್ತೇ ಇಲ್ಲ. ಆದರೂ ಆಕೆಯ ಮುಗ್ಧ ಆಸೆಯನ್ನು ವಿಧಿ ಈಡೇರಿಸಿದೆ.

 • Kota Srinivas Poojary

  Karnataka Districts27, Aug 2019, 10:31 AM IST

  ಸಚಿವ ಶ್ರೀನಿವಾಸ ಪೂಜಾರಿಗೆ ಬಂದರು, ಮೀನುಗಾರಿಕೆಯಲ್ಲಿವೆ ಸವಾಲು..!

  ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಖಾತೆಗಳು ಹೆಗಲೇರಿವೆ. ಜೊತೆಗೆ ಸಾಕಷ್ಟುಸವಾಲುಗಳು ಕೂಡ ಪರಿಹಾರಕ್ಕೆ ಕಾದು ಕುಳಿತಿವೆ. ಕೋಟ ಶ್ರೀನಿವಾಸ ಪೂಜಾರಿ ಅವರು ಉಡುಪಿ ಭಾಗದಲ್ಲಿ ಮೀನುಗಾರರ ಸಮಸ್ಯೆಗಳೂ, ನಿರೀಕ್ಷೆಗಳನ್ನು ಅರ್ಥೈಸಿಕೊಂಡು, ನಿಭಾಯಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.

 • Fish

  Karnataka Districts25, Aug 2019, 1:21 PM IST

  ಮಡಿಕೇರಿ: ಮೀನುಗಳನ್ನು ಕೊಳ್ಳಲು ಮುಗಿಬಿದ್ದ ಜನ

  ಭಾರೀ ಮಳೆಯಿಂದ ಗಗನಕ್ಕೇರಿದ ಮೀನಿನ ಬೆಲೆ ಕಡಿಮೆಯಾಗಿದ್ದು, ಮಡಿಕೇರಿಯಲ್ಲಿ ಜನ ಮೀನು ಕೊಳ್ಳಲು ಮುಗಿಬಿದ್ದರು. ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ಸಮುದ್ರದ ಮೀನುಗಳ ಮಾರಾಟದಲ್ಲಿ ಇಳಿಕೆಯಾಗಿತ್ತು. ಮೀನುಗಳ ದರ ಕೆ.ಜಿ.ಯೊಂದಕ್ಕೆ 80-100 ರುಪಾಯಿಗಳ ಒಳಗೆ ಇತ್ತು. ಇದರಿಂದಾಗಿ ಹಸಿ ಮೀನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.

 • fishermen

  Karnataka Districts23, Aug 2019, 1:19 PM IST

  ಮೀನುಗಾರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಂಪರ್ ಕೊಡುಗೆ

  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೀನುಗಾರರಿಗೆ ಬಂಪರ್ ಆಫರ್ ನೀಡಿದ್ದಾರೆ. ತೆರಿಗೆ ರಹಿತ ಡೀಸೆಲ್ ಪೂರೈಕೆಗೆ ಸೂಚಿಸಿದ್ದಾರೆ.

 • Tawi

  NEWS19, Aug 2019, 2:13 PM IST

  ನಮ್ಮ ಸೇನೆ ನಮ್ಮ ಹೆಮ್ಮೆ: ಪ್ರವಾಹದಲ್ಲಿ ಸಿಲುಕಿದ್ದ ಬೆಸ್ತರ ರಕ್ಷಿಸಿದ ವಾಯುಸೇನೆ!

  ತವೀ ನದಿಯಲ್ಲಿ ಹೆಚ್ಚಾದ ನೀರಿನ ಪ್ರಮಾಣ| ಪ್ರವಾಹಕ್ಕೆ ಸಿಲುಕಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಏರಿ ಕುಳಿತ ಮೀನುಗಾರರು| ಭಯಬೇಡ, ನಾವಿದ್ದೇವೆ... ಧುಮ್ಮಿಕ್ಕಿ ಹರಿಯುತ್ತಿದ್ದ ನದಿ ಮಧ್ಯೆಯೂ ಮೀನುಗಾರರ ರಕ್ಷಣೆಗೆ ಇಳಿದೇ ಬಿಡ್ತು ನಮ್ಮ ಹೆಮ್ಮೆಯ ಸೇನೆ| 

 • Bagalakote

  Karnataka Districts16, Aug 2019, 7:25 PM IST

  ಕೃಷ್ಣಾ ಪ್ರವಾಹಕ್ಕೆ ಕೊಚ್ಚಿ ಹೋಯ್ತು ಮನೆ,  ಆತ್ಮಹತ್ಯೆಗೆ ಶರಣಾದ ಬಾಗಲಕೋಟೆ ಮೀನುಗಾರ

  ಕೃಷ್ಣಾ ನದಿ ಪ್ರವಾಹದಿಂದ ಕಂಗೆಟ್ಟ  ಮೀನುಗಾರೊಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವಾಹದಿಂದ ಮನೆ ಕುಸಿತವಾಗಿದ್ದನ್ನು ಕಂಡು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

 • VG Siddhartha crime 1

  NEWS31, Jul 2019, 7:21 AM IST

  ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆ

  ಸತತ 36 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಅವರ ಮೃತದೇಹ ಪತ್ತೆಯಾಗಿದೆ. ಮೀನುಗಾರರಿಗೆ ಅವರ ಮೃತದೇಹ ಸಿಕ್ಕಿದ್ದು ಇದರಿಂದ ಆತ್ಮಹತ್ಯೆ ಖಚಿತವಾಗಿದೆ.

 • Video Icon

  NEWS30, Jul 2019, 4:02 PM IST

  ‘7 ಗಂಟೆಗೆ ವ್ಯಕ್ತಿಯೊಬ್ಬರು ನದಿಗೆ ಹಾರಿದ್ದನ್ನು ನೋಡಿದೆ!’

  ಉದ್ಯಮಿ ವಿ.ಜಿ. ಸಿದ್ಧಾರ್ಥ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಮಂಗಳೂರು ಹತ್ತಿರ ನೇತ್ರಾವತಿ ನದಿ ಬಳಿಯಿಂದ ಕಾಣೆಯಾಗಿರುವ ಸಿದ್ದಾರ್ಥರಿಗೆ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ಸುವರ್ಣನ್ಯೂಸ್ ಜೊತೆ ಮಾತನಾಡಿದ ಸ್ಥಳೀಯ ಮೀನುಗಾರರೊಬ್ಬರು, 7 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬ ನದಿಗೆ ಹಾರುವುದನ್ನು ನೋಡಿದ್ದೇನೆ ಎಂದಿದ್ದಾರೆ.