ಮಾಜಿ ಪ್ರಧಾನಮಂತ್ರಿ  

(Search results - 42)
 • <p>Siddaramaiah<br />
&nbsp;</p>

  Politics12, Aug 2020, 11:50 AM

  ಮಾಜಿ ಸಿಎಂ ಸಿದ್ದರಾಮಯ್ಯಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಹೆಚ್. ಡಿ. ದೇವೇಗೌಡ

  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು(ಬುಧವಾರ) ಹುಟ್ಟುಹಬ್ಬದ ಸಂಭ್ರಮ. ಇಂದು 72 ನೇ ವಸಂತಕ್ಕೆ ಕಾಲಿಡುತ್ತಿರವ ಸಿದ್ದರಾಮಯ್ಯ ಅವರಿಗೆ ಮಾಜಿ ಪ್ರಧಾನಮಂತ್ರಿ ಹೆಚ್. ಡಿ. ದೇವೇಗೌಡ ಅವರು ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. 
   

 • undefined

  Karnataka Districts28, May 2020, 2:30 PM

  ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರ ಆರೋಗ್ಯ ವಿಚಾರಿಸಿದ ಸಿದ್ದಗಂಗಾ ಶ್ರೀಗಳು

  ಬೆಂಗಳೂರು(ಮೇ.28): ತುಮಕೂರಿನ ಸಿದ್ಧಗಂಗಾ ಮಠದ ಸಿದ್ದಗಂಗಾ ಶ್ರೀಗಳು ಮಾಜಿ ಪ್ರಧಾನಮಂತ್ರಿ, ಜೆಡಿಎಸ್‌ ವರಿಷ್ಠ ಹೆಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯವನ್ನ ವಿಚಾರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ದೊಡ್ಡಗೌಡರು ಫೋಟೋಗಳನ್ನ ಹಂಚಿಕೊಂಡಿದ್ದಾರೆ. 

 • Devegowda

  Karnataka Districts16, May 2020, 1:23 PM

  ಕೊರೋನಾದಿಂದ ಕಂಗೆಟ್ಟ ಜನತೆ: ನನ್ನ ಬರ್ತ್‌ಡೇಗೆ ಮನೆ ಬಳಿ ಬರಬೇಡಿ ಎಂದ ದೇವೇಗೌಡ

  ನನ್ನ ಹುಟ್ಟು ಹಬ್ಬದ ದಿನ ಮನೆ ಬಳಿ ಬರಬೇಡಿ, ನೀವು ಇದ್ದಲ್ಲಿಯೇ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ ಎಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಮನವಿ ಮಾಡಿಕೊಂಡಿದ್ದಾರೆ. 

 • undefined

  Karnataka Districts22, Sep 2019, 7:59 AM

  ಭಾರತದ ಭೂಪಟದಲ್ಲಿ ಆದರ್ಶವಾಗಿ ನಿಲ್ಲುವ ವ್ಯಕ್ತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ

  ಭಾರತ ದೇಶ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ಪಾತ್ರ ಮಹತ್ವದ್ದು ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ಹೇಳಿದರು. ಭಾರತ ದೇಶ ಆಧುನಿತ ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಬಹಳಷ್ಟು ಬೆಳೆದು ನಿಂತಿದೆ. ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆ ಉತ್ತಮ ವಾತವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು. 

 • undefined

  BUSINESS1, Sep 2019, 5:18 PM

  ಖಾಲಿ ಖಾಲಿ ಭಾನುವಾರ: ಮೋದಿ ವಿರುದ್ಧ ಸಿಂಗ್ ದಶಾವತಾರ!

  ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಕೆಟ್ಟ ನಿರ್ವಹಣೆಯೇ ಕಾರಣ ಎಂದು ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ. 

 • Modi

  NEWS24, Jul 2019, 9:53 PM

  ಮಾಜಿ ಪ್ರಧಾನಿಗಳಿಗಾಗಿ ಮ್ಯೂಸಿಯಂ: ಮೋದಿ ಘೋಷಣೆ|

  ಭಾರತದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಗೌರವ ಸೂಚಕವಾಗಿ, ಭವ್ಯವಾದ ವಸ್ತು ಸಂಗ್ರಹಾಲಯವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

 • undefined
  Video Icon

  Lok Sabha Election News19, Apr 2019, 8:28 PM

  ಮಾಜಿ ಪ್ರಧಾನಿಗೂ ತಟ್ಟಿದ ನೀತಿ ಸಂಹಿತೆ ಬಿಸಿ; ಹೆಲಿಕಾಪ್ಟರ್ ತಪಾಸಣೆ

  ಚುನಾವಣಾಧಿಕಾರಿಗಳು ಮಾಜಿ ಪ್ರಧಾನಮಂತ್ರಿ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಪಾಸಣೆ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ದೇವೇಗೌಡರು ರಾಯಚೂರಿಗೆ ತೆರಳುತ್ತಿದ್ದು, ಕೊಪ್ಪಳದ ಬಸಾಪೂರದ ಏರ್ಪೋರ್ಟಿನಲ್ಲಿ ತಾಂತ್ರಿಕ ಕಾರಣಕ್ಕೆ ನಿಲುಗಡೆ ಇತ್ತು. ಈ ವೇಳೆ ಅಧಿಕಾರಿಗಳು ವಿಮಾನ ಹಾಗೂ ಅದರಲ್ಲಿದ್ದ ಬ್ಯಾಗ್ ಗಳನ್ನು ತಪಾಸಣೆ ನಡೆಸಿದ್ದಾರೆ. ದೇವೇಗೌಡ ಹಾಗೂ ವಿಮಾನ ಸಿಬ್ಬಂದಿ ತಪಾಸಣೆಗೆ ಅಧಿಕಾರಿಗಳಿಗೆ ಸಹಕರಿಸಿದರು.

 • Bogibeel

  state25, Dec 2018, 6:35 PM

  ಬೋಗಿಬೀಲ್ ಸೇತುವೆ ಉದ್ಘಾಟನೆಗಿಲ್ಲ ಆಹ್ವಾನ: ದೊಡ್ಡ ಗೌಡರ ಅಪಸ್ವರ!

  ಇಂದು ಪ್ರಧಾನಿ ನರೇಂದ್ರ ಮೋದಿ ದೇಶದ ಅತಿ ಉದ್ದದ ರೖಲ್ ರೋಡ್ ಆದ ಬೋಗಿಬೀಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ ಮಧ್ಯೆ ಉದ್ಘಾಟನೆಗೆ ತಮ್ಮನ್ನು ಆಹ್ವಾನಿಸದ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅಪಸ್ವರ ಎತ್ತಿದ್ದಾರೆ.

 • Modi

  NEWS25, Dec 2018, 2:46 PM

  ಅಜಾತಶತ್ರು ನೆನೆದ ದೇಶ: ಅಟಲ್‌ಗೆ ಗಣ್ಯರ ಪುಷ್ಪ ನಮನ!

  ಅಜಾತ ಶತ್ರು, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ ಮೋದಿ ಸೇರಿದಂತೆ ಹಲವು ಗಣ್ಯರು ದೇಶ ಕಂಡ ಮಹಾನ್ ನಾಯಕನಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ. 

 • undefined

  BUSINESS7, Nov 2018, 10:50 AM

  ದಮ್ಮಯ್ಯ: ಮೋದಿ ಮಾತು ಕೇಳ್ದಿದ್ರೆ ಸಿಂಗ್ ಮಾತಾದ್ರೂ ಕೇಳ್ರಯ್ಯ!

  ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮಧ್ಯೆ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ನಡುವಿನ ಸಂಬಂಧದ ಮಹತ್ವದ ಕುರಿತು ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ತಮ್ಮ ಪುಸ್ತಕದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ ಮಹತ್ವ ಪಡೆದುಕೊಂಡಿದೆ.

 • Nehru-Modi

  BUSINESS3, Nov 2018, 2:41 PM

  ನೆಹರೂ ಅಂದೇ ಹೇಳಿದ್ರು: ಮೋದಿ ಒಬ್ರೇ ಸರಿಯಾಗಿ ಕೇಳಿದ್ರು!

  ಇಂದಿಗೆ ಸರಿಯಾಗಿ 70 ವರ್ಷಗಳ ಹಿಂದೆ ಅಂದರೆ ನವೆಂಬರ್ 3, 1948 ರಂದು ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐತಿಹಾಸಿಕ ಎನ್ನಬಹುದಾದ ಭಾಷಣ ಮಾಡಿದ್ದರು. ತಮ್ಮ ಭಾಷಣದಲ್ಲಿ ಆಗಿನ ವಿಶ್ವದ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಮತ್ತು ಭಾರತ ಅದಕ್ಕೆ ಸ್ಪಂದಿಸುತ್ತಿರುವ ಪರಿಯನ್ನು ಎಳೆ ಎಳೆಯಾಗಿ ವಿಶ್ವಸಂಸ್ಥೆ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದರು.

 • undefined

  NEWS20, Oct 2018, 11:15 AM

  ದಶಕದ ಬಳಿಕ ಒಂದಾಗಲಿದ್ದಾರೆ ಗುರು ಶಿಷ್ಯರು!

  ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವರಿಷ್ಠರು ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದು, ಶನಿವಾರ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಹಾಗೂ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.

 • Modi-Singh

  BUSINESS13, Sep 2018, 1:29 PM

  ಮೋದಿ ಮೌನಕ್ಕೆ ಸಿಕ್ತು ಪಕ್ಕಾ ರಿಸನ್: ಸಿಂಗ್ ಹೇಳಿದ್ದ 'ಮಕ್ಕಳ ಪ್ರಾಬ್ಲಂ'!

  ನಿರಂತರ ತೈಲದರ ಏರಿಕೆ ಪ್ರತಿಯೊಬ್ಬ ಭಾರತೀಯನನ್ನು ಕಂಗಾಲಾಗಿಸಿದೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಕಂಡು ಜನಸಾಮಾನ್ಯ ದಂಗಾಗಿ ಹೋಗಿದ್ದಾನೆ. ಕೇಂದ್ರ ಸರ್ಕಾರ ಕೂಡ ತೈಲದರ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದೆ.

 • Begum Kulsoom

  NEWS11, Sep 2018, 6:07 PM

  ನವಾಜ್ ಶರೀಫ್ ಪತ್ನಿ ಇನ್ನಿಲ್ಲ: ಜೈಲಿಂದ ಹೊರ ಬರ್ತಾರೋ ಗೊತ್ತಿಲ್ಲ!

  ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಶರೀಫ್ ಅವರ ಪತ್ನಿ ವಿಧಿವಶರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಬೇಗಂ ಖುಲ್ಸುಂ ಶರೀಫ್ ಲಂಡನ್ ನ ಹ್ಯಾರಿ ಸ್ಟ್ರೀಟ್ ಕ್ಲಿನಿಕ್ ನಲ್ಲಿ ನಿಧನ ಹೊಂದಿದರು ಎಂದು ಮೂಲಗಳು ತಿಳಿಸಿವೆ.

 • Kejriwal

  NEWS25, Aug 2018, 5:17 PM

  ರೀ ಬೇಕಾದ್ರೆ ಮೋದಿ ಹೆಸರು ಚೇಂಜ್ ಮಾಡಿ: ಕೇಜ್ರಿ!

  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನದ ಬಳಿಕ, ಅವರ ಹೆಸರಿಗೆ ಮಸಿ ಬಳಿಯುವಂತ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆಯೇ ಎಂಬ ಅನುಮಾನ ಕಾಡತೊಡಗಿದೆ. ವಾಜಪೇಯಿ ಅಸ್ಥಿ ದೇಶದ ಎಲ್ಲಾ ಪ್ರಮುಖ ನದಿಗಳಲ್ಲಿ ವಿಸರ್ಜಿಸುವ ಕುರಿತು ಈಗಾಗಲೇ ವಿವಾದ ಸೃಷ್ಟಿಯಾಗಿದೆ. ಅದರಂತೆ ದೆಹಲಿಯ ರಾಮಲೀಲಾ ಮೈದಾನಕ್ಕೆ ದಿವಂಗತ ವಾಜಪೇಯಿ ಹೆಸರಿಡಬೇಕು ಎಂಬ ಪ್ರಸ್ತಾವನೆ ಕೂಡ ರಾಜಕೀಯ ನಾಯಕರ ಾರೋಪ-ಪ್ರತ್ಯಾರೋಪಕ್ಕೆ ಗ್ರಾಸವಾಗಿದೆ.