ಮಹಿಳಾ ಹಾಕಿ

(Search results - 26)

Indian Women's Hockey

HockeyJun 5, 2021, 1:07 PM IST

ಜಪಾನ್ ಕಾಲಮಾನಕ್ಕೆ ತಕ್ಕಂತೆ ಭಾರತ ಮಹಿಳಾ ಹಾಕಿ ತಂಡದ ಅಭ್ಯಾಸ

ಟೋಕಿಯೋ ಒಲಿಂಪಿಕ್ಸ್‌ಗೆ ಭಾಗವಹಿಸುವ ಅಂತಿಮ 16 ಆಟಗಾರ್ತಿಯರನ್ನೊಳಗೊಂಡ ಭಾರತ ಮಹಿಳಾ ಹಾಕಿ ತಂಡವನ್ನು ಇನ್ನೂ ಆಯ್ಕೆ ಮಾಡಿಲ್ಲ. ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಆಟಗಾರ್ತಿಯರಿಗೇನು ಕೊರತೆಯಿಲ್ಲ ಎಂದು ನಮಿತಾ ಟೊಪ್ಪೋ ಹೇಳಿದ್ದಾರೆ.

Indian Women's Hockey

HockeyApr 28, 2021, 9:16 AM IST

ಭಾರತ ಮಹಿಳಾ ಹಾಕಿ ಟೀಂನ 7 ಮಂದಿಗೆ ಕೊರೋನಾ ಸೋಂಕು ದೃಢ!

ತಮ್ಮ ಊರುಗಳಿಂದ ಅಭ್ಯಾಸ ಶಿಬಿರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಆಟಗಾರ್ತಿಯರನ್ನು ಏಪ್ರಿಲ್ 24ರಂದು ಪರೀಕ್ಷಿಸಲಾಗಿತ್ತು. ರಾಣಿ ಜೊತೆಗೆ ಸವಿತಾ ಪೂನಿಯಾ, ಶರ್ಮಿಳಾ ದೇವಿ, ರಂಜನಿ, ನವ್ಜೋತ್‌ ಕೌರ್‌, ನವ್‌ನೀತ್‌ ಕೌರ್‌ ಹಾಗೂ ಸುಶೀಲಾ ಸೋಂಕಿತ ಆಟಗಾರ್ತಿಯರು. ಯಾರಿಗೂ ಸೋಂಕಿನ ಲಕ್ಷಣಗಳು ಇಲ್ಲದ ಕಾರಣ, ಸಾಯ್‌ ಕೇಂದ್ರದಲ್ಲೇ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.

top 10 News

NewsApr 18, 2021, 5:08 PM IST

ಹಾಕಿ ಅಂಪೈರ್ ಕೊರೋನಾಗೆ ಬಲಿ, ಪಿಂಕ್ ವ್ಯಾಟ್ಸ್‌ಆ್ಯಪ್ ಎಚ್ಚರ ಇರಲಿ; ಏ.18ರ ಟಾಪ್ 10 ಸುದ್ದಿ!

ಭಾರತದ ಮೊದಲ ಮಹಿಳಾ ಹಾಕಿ ಅಂಪೈರ್, ಕೊಡಗಿನ ಪುಚ್ಚಿಮಂಡ ಅನುಪಮಾ ಕೊರೋನಾಗೆ ಬಲಿಯಾಗಿದ್ದಾರೆ. ವ್ಯಾಪಕವಾಗಿ ವೈರಸ್ ಹರಡುತ್ತಿರುವ ಕಾರಣ ರಾಹುಲ್ ಗಾಂಧಿ ತಮ್ಮ ಚುನಾವಣಾ ರ್ಯಾಲಿ ರದ್ದುಗೊಳಿಸಿದ್ದಾರೆ. ವಾಟ್ಸಪ್‌ ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಖದೀಮರು ಹೊಸ ಸಂಚು ಮಾಡಿದ್ದಾರೆ. ರಶ್ಮಿಕಾ ಮೂಡ್ ಹೇಗೆಲ್ಲಾ ಚೇಂಜ್ ಆಗುತ್ತೆ ಗೊತ್ತಾ, ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್ ಸೇರಿದಂತೆ ಏಪ್ರಿಲ್ 18ರ ಟಾಪ್ 10 ಸುದ್ದಿ ವಿವರ ಇಲ್ಲಿವೆ

Anupama

stateApr 18, 2021, 11:52 AM IST

ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ ಕೊರೋನಾಗೆ ಬಲಿ

ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ (41) ಕೊರೋನಾಗೆ ಬಲಿಯಾಗಿದ್ದಾರೆ. ಹಾಕಿ ಅಂಪೈರ್‌ ಆಗಿದ್ದ ಅನುಪಮ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ನೂರು ಅಂತಾರಾಷ್ಟ್ರೀಯ ಪಂದ್ಯಾಟದ ತೀರ್ಪುಗಾರಿಕೆ ಮಾಡಿದ್ದರು. ಶಾಂತಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅನುಪಮಾ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.

Rani Rampal

HockeyFeb 23, 2021, 11:19 AM IST

ಭಾರತ ಮಹಿಳಾ ಹಾಕಿ ತಂಡವಿಂದು ಜರ್ಮನಿ ಪ್ರವಾಸ

ಆತಿಥೇಯ ಜರ್ಮನಿಯ ವಿರುದ್ಧ ನಾಲ್ಕು ಪಂದ್ಯಗಳನ್ನು ಆಡಲಿದೆ. ರಾಣಿ ರಾಂಪಾಲ್‌ ನೇತೃತ್ವದ 18 ಮಂದಿ ಆಟಗಾರ್ತಿಯರ ತಂಡ ಮಂಗಳವಾರ ಬೆಂಗಳೂರಿನಿಂದ ಜರ್ಮನಿಗೆ ಪ್ರಯಾಣ ಬೆಳೆಸಲಿದೆ.

Indian Hockey Team

HockeyFeb 2, 2021, 11:24 AM IST

ಹಾಕಿ: ಭಾರತ-ಅರ್ಜೆಂಟೀನಾ 1-1ರಲ್ಲಿ ರೋಚಕ ಡ್ರಾ

ಪಂದ್ಯದ 35ನೇ ನಿಮಿಷದಲ್ಲಿ ಭಾರತ ತಂಡದ ನಾಯಕಿ ರಾಣಿ ರಾಂಪಾಲ್‌ ಗೋಲು ದಾಖಲಿಸಿದರು. ಇನ್ನು ಅರ್ಜೆಂಟೀನಾ ಪರ ಎಮಿಲಾ ಪೋರ್ಚರಿಯೋ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು.

Indian Hockey Team

HockeyJan 26, 2021, 8:38 AM IST

ಹಾಕಿ: ಚಿಲಿ ಹಿರಿಯರ ತಂಡದ ಎದುರು ಭಾರತ ಕಿರಿಯರ ತಂಡ ದಿಗ್ವಿಜಯ

ಭಾರತ ಕಿರಿಯರ ಮಹಿಳಾ ತಂಡ ಈ ಹಿಂದಿನ ಪಂದ್ಯದಲ್ಲಿ ಚಿಲಿ ವಿರುದ್ದ 2-0 ಅಂತರದ ಗೆಲುವನ್ನು ದಾಖಲಿಸಿತ್ತು. ಇದೀಗ ಪ್ರವಾಸದ ಕೊನೆಯ ಪಂದ್ಯದಲ್ಲೂ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೋಲಿಲ್ಲದೇ ಜೂನಿಯರ್ ಮಹಿಳಾ ಹಾಕಿ ತಂಡ ಪ್ರವಾಸವನ್ನು ಸ್ಮರಣೀಯವಾಗಿಸಿಕೊಂಡಿದೆ.

Rohit Sharma Khel Ratna, Vinesh Phogat Khel Ratna, Rajiv Gandhi Khel Ratna Award

SportsAug 30, 2020, 9:17 AM IST

ಕ್ರೀಡಾ ಸಾಧಕರಿಗೆ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಪ್ರದಾನ

ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಹಾಗೂ ಪ್ಯಾರಾ ಅಥ್ಲೀಟ್‌ ಮರಿಯಪ್ಪನ್‌ ತಂಗವೇಲು ಅವರಿಗೆ ಶನಿವಾರ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರದಾನ ಮಾಡಲಾಯಿತು.

• undefined

HockeyJun 2, 2020, 5:05 PM IST

ಭಾರತ ಮಹಿಳಾ ಹಾಕಿ ನಾಯಕಿ ರಾಣಿ ರಾಂಪಾಲ್ ಖೇಲ್ ರತ್ನಕ್ಕೆ ಶಿಫಾರಸು

ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯಾದ ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಗೆ ಮಾಜಿ ಆಟಗಾರರಾದ ಆರ್.ಪಿ. ಸಿಂಗ್ ಹಾಗೂ ತುಷಾರ್ ಖಂಡೂರ್ ಹೆಸರನ್ನು ಶಿಫಾರಸು ಮಾಡಲಾಗಿದ್ದರೆ, ಕೋಚ್‌ಗಳಾದ ಬಿ.ಜೆ ಕರಿಯಪ್ಪ ಹಾಗೂ ರೊಮೇಶ್ ಪಠಾಣಿಯಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

• undefined

HockeyFeb 8, 2020, 8:11 AM IST

ಕೊರೋನಾ ಭೀತಿ: ಭಾರತ ಹಾಕಿ ತಂಡದ ಚೀನಾ ಪ್ರವಾಸ ರದ್ದು!

ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿದೆ. ವೈರಸ್ ನಿಯಂತ್ರಿಸಲು ಚೀನಾ ಹರಸಾಹಸ ಪಡುತ್ತಿದ್ದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ವೈರಸ್ ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಭಾರತ ಮಹಿಳಾ ಹಾಕಿ ತಂಡದ ಚೀನಾ ಪ್ರವಾಸ ರದ್ದುಗೊಂಡಿದೆ.

• Hockey

HockeyJan 26, 2020, 1:22 PM IST

ಹಾಕಿ: ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಜಯ

ಶನಿವಾರ ನಡೆದ ಪಂದ್ಯದಲ್ಲಿ ರಾಣಿ 2 ಆಕರ್ಷಕ ಗೋಲು ಬಾರಿಸಿ ಜಯದಲ್ಲಿ ಮಹತ್ವದ ಪಾತ್ರವಹಿಸಿದರು. ಶರ್ಮಿಳಾ ಮತ್ತು ನಮಿತಾ ಟೊಪ್ಪೊ ತಲಾ 1 ಗೋಲುಗಳಿಸಿ ಜಯದ ಅಂತರವನ್ನು ಹೆಚ್ಚಿಸಿದರು.

• Rani Rampal

HockeyJan 15, 2020, 1:29 PM IST

ಕಿವೀಸ್‌ ಪ್ರವಾಸ: ಭಾರತ ಮಹಿಳಾ ಹಾಕಿ ತಂಡ ಪ್ರಕಟ

ಜ.25, ಜ.27 ಮತ್ತು ಜ.29 ರಂದು ಆಕ್ಲೆಂಡ್‌ನಲ್ಲಿ ಪಂದ್ಯಗಳು ನಡೆಯಲಿವೆ. ಫೆ. 4ರಂದು ಭಾರತ, ಗ್ರೇಟ್‌ ಬ್ರಿಟನ್‌ ಎದುರು ಸೆಣಸಲಿದೆ.

• Women Hockey

HockeyNov 2, 2019, 10:01 PM IST

ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತ ಮಹಿಳಾ ಹಾಕಿ!

ಟೊಕಿಯೊ ಒಲಿಂಪಿಕ್ಸ್ ಟೂರ್ನಿಗೆ ಭಾರತೀಯ ಮಹಿಳಾ ಹಾಕಿ ತಂಡ ಅರ್ಹತೆ ಪಡೆದಿದೆ. ಯುಎಸ್ಎ ವಿರುದ್ದ ನಡೆದ ಮಹತ್ವದ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಮಹತ್ವಗ ಗೋಲು ಸಡಿಸಿ, ಅರ್ಹತೆ ಪಡೆದುಕೊಂಡಿತು.

• undefined

SportsOct 3, 2019, 6:19 PM IST

ಮಹಿಳಾ ಹಾಕಿ; ಬ್ರಿಟನ್ ವಿರುದ್ದ ಮುಗ್ಗರಿಸಿದ ಭಾರತ, ಸರಣಿ ಸಮಬಲ!

ಭಾರತ ಹಾಗೂ ಗ್ರೇಟ್ ಬ್ರಿಟನ್ ನಡುವಿನ ಮಹಿಳಾ ಹಾಕಿ ಟೂರ್ನಿ ಸಮಬಲಗೊಂಡಿದೆ. ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಅಂತಿಮ ಪಂದ್ಯದಲ್ಲಿ ಬ್ರಿಟನ್ ಶಾಕ್ ನೀಡಿದೆ.

• India Hockey

SPORTSFeb 3, 2019, 8:09 AM IST

ಭಾರತ-ಐರ್ಲೆಂಡ್‌ ಹಾಕಿ ಪಂದ್ಯ 1-1ರಲ್ಲಿ ಡ್ರಾ

ಸ್ಪೇನ್ ಪ್ರವಾಸದಲ್ಲಿರುವ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸಿದೆ.